French Open 2021: 24 ಗಂಟೆಯೊಳಗೆ ಎರಡು ಗ್ರ್ಯಾಂಡ್‌ಸ್ಲಾಮ್ ಪ್ರಶಸ್ತಿ ಗೆದ್ದ ಬಾರ್ಬೊರಾ ಕ್ರೆಜ್‌ಕೋವಾ

|

Updated on: Jun 13, 2021 | 6:25 PM

French Open 2021: ಮಹಿಳಾ ಡಬಲ್ಸ್ ಫೈನಲ್‌ನಲ್ಲಿ, ಪೋಲೆಂಡ್‌ನ ಇಗಾ ಸ್ವಿಯೆಟೆಕ್ ಮತ್ತು ಅಮೆರಿಕದ ಬೆಥನಿ ಮ್ಯಾಟೆಕ್ ಸ್ಯಾಂಡ್ಸ್‌ರನ್ನು ಸೋಲಿಸಿ ತನ್ನ ಸಹಚರೆ ಕ್ಯಾಟರೀನಾ ಸಿನಿಯಕೋವಾ ಅವರೊಂದಿಗೆ ಪ್ರಶಸ್ತಿಯನ್ನು ಎತ್ತಿಹಿಡಿದಿದ್ದಾರೆ.

French Open 2021: 24 ಗಂಟೆಯೊಳಗೆ ಎರಡು ಗ್ರ್ಯಾಂಡ್‌ಸ್ಲಾಮ್ ಪ್ರಶಸ್ತಿ ಗೆದ್ದ ಬಾರ್ಬೊರಾ ಕ್ರೆಜ್‌ಕೋವಾ
ಬಾರ್ಬೊರಾ ಕ್ರೆಜ್ಕೋವಾ ಮತ್ತು ಕಟಾರಿನಾ ಸಿನಿಯಕೋವಾ
Follow us on

ಜೆಕ್ ಗಣರಾಜ್ಯದ ಬಾರ್ಬೊರಾ ಕ್ರೆಜ್‌ಕೋವಾ ಶನಿವಾರ ರಾತ್ರಿ ನಡೆದಿದ್ದ ಎರಡನೇ ಗ್ರ್ಯಾಂಡ್‌ಸ್ಲಾಮ್ ಫ್ರೆಂಚ್ ಓಪನ್‌ನ ಮಹಿಳಾ ಸಿಂಗಲ್ಸ್ ಪ್ರಶಸ್ತಿಯನ್ನು ಗೆದಿದ್ದರು. ಈಗ 24 ಗಂಟೆಗಳಲ್ಲಿ ಅವರು ಮಹಿಳಾ ಡಬಲ್ಸ್ ಪ್ರಶಸ್ತಿಯನ್ನೂ ಗೆದ್ದಿದ್ದಾರೆ. ಮಹಿಳಾ ಡಬಲ್ಸ್ ಫೈನಲ್‌ನಲ್ಲಿ, ಪೋಲೆಂಡ್‌ನ ಇಗಾ ಸ್ವಿಯೆಟೆಕ್ ಮತ್ತು ಅಮೆರಿಕದ ಬೆಥನಿ ಮ್ಯಾಟೆಕ್ ಸ್ಯಾಂಡ್ಸ್‌ರನ್ನು ಸೋಲಿಸಿ ತನ್ನ ಸಹಚರೆ ಕ್ಯಾಟರೀನಾ ಸಿನಿಯಕೋವಾ ಅವರೊಂದಿಗೆ ಪ್ರಶಸ್ತಿಯನ್ನು ಎತ್ತಿಹಿಡಿದಿದ್ದಾರೆ. ಒಂದು ಗಂಟೆ 14 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಬಾರ್ಬೊರಾ ಮತ್ತು ಸಿನಿಯಕೋವಾ 6-4, 6-2 ಸೆಟ್‌ಗಳಿಂದ ಎದುರಾಳಿಯನ್ನು ಸೋಲಿಸಿ ಪ್ರಶಸ್ತಿಯನ್ನು ಗೆದ್ದರು.

ಇದಕ್ಕೂ ಮೊದಲು ಬಾರ್ಬೊರಾ 2018 ರಲ್ಲಿಯೇ ಫ್ರೆಂಚ್ ಓಪನ್‌ನಲ್ಲಿ ಡಬಲ್ಸ್ ಪ್ರಶಸ್ತಿಯನ್ನು ಗೆದ್ದಿದ್ದರು ಮತ್ತು ಆಗಲೂ ಅವರ ಜೊತೆಗಾರ್ತಿ ಸಿನಿಯಕೋವಾ ಆಗಿದ್ದರು. ಅದೇ ವರ್ಷದಲ್ಲಿ, ಅವರು ವಿಂಬಲ್ಡನ್ ಪ್ರಶಸ್ತಿಯನ್ನು ಗೆದ್ದರು. ಇದೇ ಜೋಡಿ ವಿಂಬಲ್ಡನ್ 2018 ರಲ್ಲಿ ಮಹಿಳಾ ಡಬಲ್ಸ್ ಪ್ರಶಸ್ತಿಯನ್ನು ಗೆದ್ದುಕೊಂಡಿತು.

ಸಿಂಗಲ್ಸ್ ವಿಭಾಗದ ಪ್ರಶಸ್ತಿಯನ್ನೂ ಗೆದ್ದರು
ಶನಿವಾರ ನಡೆದ ಮಹಿಳಾ ಸಿಂಗಲ್ಸ್ ಫೈನಲ್‌ನಲ್ಲಿ ಮೂರು ಸೆಟ್‌ಗಳ ಪಂದ್ಯದಲ್ಲಿ ಬಾರ್ಬೊರಾ ರಷ್ಯಾದ ಅನಸ್ತಾಸಿಯಾ ಪಾವ್ಲಿಚೆಂಕೋವಾ ಅವರನ್ನು 6-1, 2-6, 6-4 ಸೆಟ್‌ಗಳಿಂದ ಸೋಲಿಸಿದರು. ಸಿಂಗಲ್ಸ್ ವಿಭಾಗದಲ್ಲಿ ಬಾರ್ಬೊರಾ ಅವರ ಮೊದಲ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿ ಇದಾಗಿದೆ. ಇದಕ್ಕೂ ಮೊದಲು, ಸಿಂಗಲ್ಸ್ ವಿಭಾಗದಲ್ಲಿ ಯಾವುದೇ ಗ್ರ್ಯಾಂಡ್ ಸ್ಲ್ಯಾಮ್‌ನ ನಾಲ್ಕನೇ ಸುತ್ತನ್ನು ಮೀರಿ ಹೋಗಲು ಆಕೆಗೆ ಸಾಧ್ಯವಾಗಿರಲಿಲ್ಲ. ಅವರು ಈಗ 2000 ರ ನಂತರ ಡಬಲ್ ಪ್ರಶಸ್ತಿಯನ್ನು ಗೆದ್ದ ಮೊದಲ ಮಹಿಳಾ ಆಟಗಾರ್ತಿಯಾಗಿದ್ದಾರೆ.