Christian Eriksen: ಪಂದ್ಯದ ವೇಳೆ ಕುಸಿದು ಬಿದ್ದ ಡೆನ್ಮಾರ್ಕ್ ಫುಟ್ಬಾಲ್ ತಾರೆ ಕ್ರಿಶ್ಚಿಯನ್ ಎರಿಕ್ಸೆನ್ ಚೇತರಿಕೆ; ಅಭಿಮಾನಿಗಳು ನಿರಾಳ
UEFA Euro 2020: ಪಂದ್ಯ ನಡೆಯುತ್ತಿದ್ದಂತೆ ಕ್ರಿಶ್ಚಿಯನ್ ಎರಿಕ್ಸೆನ್ ಕುಸಿದು ಬಿದ್ದಿದ್ದು ತಕ್ಷಣವೇ ಸಹ ಆಟಗಾರರು ರಕ್ಷಣೆಗೆ ಧಾವಿಸಿದ್ದಾರೆ. ವೈದ್ಯಕೀಯ ಸಹಾಯ ತಂಡ ಮೈದಾನಕ್ಕೆ ಓಡಿ ಬರುತ್ತಿದ್ದಂತೆ ಡೆನ್ಮಾರ್ಕ್ ತಂಡದ ಆಟಗಾರರು ಕುಸಿದು ಬಿದ್ದಿರುವ ಎರಿಕ್ಸೆನ್ಗೆ ಅಡ್ಡವಾಗಿ ನಿಂತು ಅಲ್ಲಿನ ಯಾವುದೇ ದೃಶ್ಯ ಫೋಟೊದಲ್ಲಿ ಸೆರೆಯಾಗದಂತೆ ತಡೆದಿದ್ದರು.
ಕೊಪನ್ ಹೇಗನ್: ಕೊಪನ್ ಹ್ಯಾಗನ್ನ ಟೆಲಿಯಾ ಪಾರ್ಕೆನ್ ಸ್ಟೇಡಿಯಂನಲ್ಲಿ ಶನಿವಾರ ಯುಇಎಫ್ಎ ಯುರೋ 2020 ಫುಟ್ಬಾಲ್ ಪಂದ್ಯಾಟದಲ್ಲಿ ಫಿನ್ಲೆಂಡ್ ವಿರುದ್ಧ ಡೆನ್ಮಾರ್ಕ್ ತಂಡ ಪಂದ್ಯದ ವೇಳೆ ಕುಸಿದು ಬಿದ್ದ ಡೆನ್ಮಾರ್ಕ್ ತಂಡದ ಆಟಗಾರ ಕ್ರಿಶ್ಚಿಯನ್ ಎರಿಕ್ಸೆನ್ ಚೇತರಿಸಿಕೊಂಡಿದ್ದಾರೆ. ಅವರ ಆರೋಗ್ಯ ಸ್ಥಿರವಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುವ ಎರಿಕ್ಸೆನ್ ತಂಡದ ಆಟಗಾರರಿಗೆ ಶುಭಕಾಮನೆ ಕಳಿಸಿದ್ದಾರೆ ಎಂದು ಬಿಬಿಸಿ ವರದಿ ಮಾಡಿದೆ.
ಪಂದ್ಯ ನಡೆಯುತ್ತಿದ್ದಂತೆ ಕ್ರಿಶ್ಚಿಯನ್ ಎರಿಕ್ಸೆನ್ ಕುಸಿದು ಬಿದ್ದಿದ್ದು ತಕ್ಷಣವೇ ಸಹ ಆಟಗಾರರು ರಕ್ಷಣೆಗೆ ಧಾವಿಸಿದ್ದಾರೆ. ವೈದ್ಯಕೀಯ ಸಹಾಯ ತಂಡ ಮೈದಾನಕ್ಕೆ ಓಡಿ ಬರುತ್ತಿದ್ದಂತೆ ಡೆನ್ಮಾರ್ಕ್ ತಂಡದ ಆಟಗಾರರು ಕುಸಿದು ಬಿದ್ದಿರುವ ಎರಿಕ್ಸೆನ್ಗೆ ಅಡ್ಡವಾಗಿ ನಿಂತು ಅಲ್ಲಿನ ಯಾವುದೇ ದೃಶ್ಯ ಫೋಟೊದಲ್ಲಿ ಸೆರೆಯಾಗದಂತೆ ತಡೆದಿದ್ದರು. ಕ್ರೀಡಾಂಗಣದಲ್ಲಿ ಏನು ನಡೆಯುತ್ತಿದೆ ಎಂಬುದು ಗೊತ್ತಾಗದ ಪರಿಸ್ಥಿತಿ. ಸಹ ಆಟಗಾರರು ಕಣ್ಣಲ್ಲಿ ನೀರು ತುಂಬಿ ನಿಂತಿದ್ದರೆ ಇಡೀ ಕ್ರೀಡಾಂಗಣ ಸ್ತಬ್ಧವಾಗಿತ್ತು. ಡೆನ್ಮಾರ್ಕ್ ಅಭಿಮಾನಿಗಳು ಪ್ರಾರ್ಥಿಸುತ್ತಿರುವ ದೃಶ್ಯ ಒಂದೆಡೆಯಾದರೆ ಇಡೀ ಫುಟ್ಬಾಲ್ ಜಗತ್ತು ಎರಿಕ್ಸೆನ್ಗಾಗಿ ಪ್ರಾರ್ಥಿಸುತ್ತಿತ್ತು. ಸಾಮಾಜಿಕ ಮಾಧ್ಯಮಗಳಲ್ಲಿ #prayforerikson ಹ್ಯಾಶ್ ಟ್ಯಾಗ್ ಟ್ರೆಂಡ್ಆಗಿತ್ತು.
ಕ್ರೀಡಾಂಗಣದಲ್ಲಿ ಎರಿಕ್ಸೆನ್ ಅವರಿಗೆ ವೈದ್ಯಕೀಯ ಸಿಬ್ಬಂದಿ ಪ್ರಥಮ ಚಿಕಿತ್ಸೆ ನೀಡಿದರೂ ಸ್ಪಂದನೆ ಕಂಡು ಬರದ ಕಾರಣ ಪಂದ್ಯವನ್ನು ಸ್ಥಗಿತಗೊಳಿಸಲಾಯಿತು.
ಛಾಯಾಗ್ರಾಹಕರೊಬ್ಬರು ಎರಿಕ್ಸೆನ್ ಅವರನ್ನು ಮೈದಾನದಿಂದ ಸ್ಟ್ರೆಚರ್‌ನಲ್ಲಿ ಕೊಂಡೊಯ್ಯುತ್ತಿದ್ದಂತೆ ಕೈ ಎತ್ತುವುದನ್ನು ನೋಡಿದ್ದಾರೆ ಎಂದು ರಾಯಿಟರ್ಸ್ ವರದಿ ಮಾಡಿದಾಗ ಫುಟ್ಬಾಲ್ ಅಭಿಮಾನಿಗಳಿಗೆ ನಿಟ್ಟುಸಿರು.
ಪತ್ರಕರ್ತ ಫ್ಯಾಬ್ರಿಜಿಯೊ ರೊಮಾನೊ ಅವರು ಎರಿಕ್ಸೆನ್ ಅವರು ಸ್ಪಂದಿಸುತ್ತಿದ್ದಾರೆ ಮತ್ತು ಅವರಗಿ ಪ್ರಜ್ಞೆ ಮರಳಿದೆ ಎಂಬ ಸುದ್ದಿಯನ್ನು ಹಂಚಿಕೊಂಡರು.
Getty Images official picture. Christian Eriksen seems conscious. All prayers and thoughts with Chris and his family ❤️???? pic.twitter.com/93PUM59ruZ
— Fabrizio Romano (@FabrizioRomano) June 12, 2021
ಪಂದ್ಯದ ಸಮಯದಲ್ಲಿ ಎಡ ಟಚ್‌ಲೈನ್ ಬಳಿ ಓಡುತ್ತಿರುವಾಗ ಎರಿಕ್ಸೆನ್ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದರು. ಗ್ರೂಪ್ ಬಿ ನಡುವಿನ ಪಂದ್ಯಾಟದ ಹಾಫ್ ಟೈಮ್ ಮೊದಲು ಎರಿಕ್ಸೆನ್ ಬಿದ್ದು ಪ್ರಜ್ಞೆ ಕಳೆದುಕೊಂಡಿದ್ದರು. ‘ಆರೋಗ್ಯ ತುರ್ತುಸ್ಥಿತಿ’ ಯಿಂದಾಗಿ ಪಂದ್ಯವನ್ನು ಸ್ಥಗಿತಗೊಳಿಸಲಾಗಿದೆ ಎಂದು ಯುಇಎಫ್‌ಎ ಪ್ರಕಟಣೆಯಲ್ಲಿ ತಿಳಿಸಿದೆ.
ಆಟಗಾರರು ಕಣ್ಣೀರು ಸುರಿಸುತ್ತಾ ಮೈದಾನದಿಂದ ಹೊರನಡೆದಾಗ ಕ್ರೀಡಾಂಗಣದಲ್ಲಿದ್ದ ಫಿನ್ನಿಷ್ ಅಭಿಮಾನಿಗಳು “ಕ್ರಿಶ್ಚಿಯನ್” ಎಂದು ಕೂಗಿದರೆ, ಡ್ಯಾನಿಶ್ ಅಭಿಮಾನಿಗಳು “ಎರಿಕ್ಸೆನ್” ಎಂದು ಕೂಗಿದರು.
ಎರಿಕ್ಸೆನ್ ಕುಸಿದು ಬಿದ್ದ ಸಂಭವದ ಒಂದು ಗಂಟೆಯ ನಂತರ, ಡೆನ್ಮಾರ್ಕ್ ಎಫ್‌ಎಯಿಂದ ತಮ್ಮ ಆಟಗಾರನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿದ್ದು ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂಬ ಮಾಹಿತಿ ನೀಡಿದಾಗ ಫುಟ್ಬಾಲ್ ಜಗತ್ತು ನಿಟ್ಟುಸಿರು ಬಿಟ್ಟಿತು.
“ಕ್ರಿಶ್ಚಿಯನ್ ಎರಿಕ್ಸೆನ್ ಅವರಿಗೆ ಪ್ರಜ್ಞೆ ಮರಳಿದೆ. ರಿಗ್ಶೋಸ್ಪಿಟಲೆಟ್ನಲ್ಲಿ ಹೆಚ್ಚಿನ ಪರೀಕ್ಷೆಗಳಿಗೆ ಒಳಗಾಗುತ್ತಿದ್ದಾರೆ” ಎಂದು ಡೆನ್ಮಾರ್ಕ್ ಎಫ್ಎ ಪ್ರಕಟಣೆಯಲ್ಲಿ ತಿಳಿಸಿದೆ.
Finland ?? fans: “CHRISTIAN”
Denmark ?? fans: “ERIKSEN”
This is why they call it the beautiful game ❤️
(via @MicGWagner ) pic.twitter.com/wXAlCPEXbJ
— International Champions Cup (@IntChampionsCup) June 12, 2021
ಡೆನ್ಮಾರ್ಕ್ ತಂಡದ 29 ವರ್ಷದ ಸೃಜನಾತ್ಮಕ ಮಿಡ್‌ಫೀಲ್ಡರ್ ಎರಿಕ್ಸೆನ್, ಅಜಾಕ್ಸ್, ಟೊಟೆನ್‌ಹ್ಯಾಮ್ ಹಾಟ್ಸ್‌ಪುರ್ ಮತ್ತು ಇಂಟರ್ ಮಿಲನ್‌ನಾದ್ಯಂತ ಶ್ರೇಷ್ಠ ವೃತ್ತಿಜೀವನವನ್ನು ಹೊಂದಿದ್ದಾರೆ. ಅವರು ಸ್ಪರ್ಸ್ ಜೊತೆ ಪ್ರೀಮಿಯರ್ ಲೀಗ್ನಲ್ಲಿ ಎರಡನೇ ಸ್ಥಾನ ಪಡೆದರು ಮತ್ತು ಚಾಂಪಿಯನ್ಸ್ ಲೀಗ್ ಫೈನಲ್ ನಲ್ಲಿ ಆಡಿದ್ದಾರೆ.
ಕ್ರಾಸ್ ಗಳನ್ನು ಡೆಲಿವರಿ ಮಾಡುವಲ್ಲಿ ನಿಖರತೆಗೆ ಹೆಸರುವಾಸಿಯಾದ ಫ್ರೀ-ಕಿಕ್ ತಜ್ಞ ಎರಿಕ್ಸೆನ್ ಅವರು ಜಾನ್ ಡಹ್ಲ್ ಟಾಮಾಸ್ಸನ್‌ರ ನಂತರ ಡೆನ್ಮಾರ್ಕ್‌ನಿಂದ ಹೆಚ್ಚು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾದ ಫುಟ್ಬಾಲ್ ಆಟಗಾರರಾಗಿದ್ದಾರೆ.
ಇದನ್ನೂ ಓದಿ: UEFA Euro 2020: ಯೂರೋ 2020 ಫುಟ್ಬಾಲ್ ಸರಣಿಯನ್ನು ವಿಶೇಷ ಡೂಡಲ್ನೊಂದಿಗೆ ಸಂಭ್ರಮಿಸಿದ ಗೂಗಲ್
Published On - 5:01 pm, Sun, 13 June 21