ಫ್ರೆಂಚ್ ಓಪನ್‌ ಫೈನಲ್; ಸ್ಟೆಫಾನೊಸ್ ಸಿಟ್ಸಿಪಾಸ್ ಮಣಿಸಿ 19ನೇ ಗ್ರ್ಯಾಂಡ್‌ಸ್ಲಾಮ್ ಪ್ರಶಸ್ತಿ ಗೆದ್ದ ನೊವಾಕ್ ಜೊಕೊವಿಕ್

French Open 2021: ಫ್ರೆಂಚ್ ಓಪನ್‌ನ ಪುರುಷರ ಸಿಂಗಲ್ಸ್ ವಿಭಾಗದ ಫೈನಲ್‌ನಲ್ಲಿ ವಿಶ್ವ ನಂಬರ್ -1 ಆಟಗಾರ ನೊವಾಕ್ ಜೊಕೊವಿಕ್ ಗ್ರೀಸ್‌ನ ಯುವ ಆಟಗಾರ ಸ್ಟೆಫಾನೊಸ್ ಸಿಟ್ಸಿಪಾಸ್ ಅವರನ್ನು ಸೋಲಿಸಿ ಗ್ರ್ಯಾಂಡ್‌ಸ್ಲಾಮ್ ಗೆದ್ದುಕೊಂಡರು.

ಫ್ರೆಂಚ್ ಓಪನ್‌ ಫೈನಲ್; ಸ್ಟೆಫಾನೊಸ್ ಸಿಟ್ಸಿಪಾಸ್ ಮಣಿಸಿ 19ನೇ ಗ್ರ್ಯಾಂಡ್‌ಸ್ಲಾಮ್ ಪ್ರಶಸ್ತಿ ಗೆದ್ದ ನೊವಾಕ್ ಜೊಕೊವಿಕ್
ಪ್ರೆಂಚ್ ಒಪನ್ ಗೆದ್ದ ನೊವಾಕ್ ಜೊಕೊವಿಕ್
Follow us
ಪೃಥ್ವಿಶಂಕರ
| Updated By: Digi Tech Desk

Updated on:Jun 14, 2021 | 12:09 AM

ಭಾನುವಾರ ನಡೆದ ಎರಡನೇ ಗ್ರ್ಯಾಂಡ್‌ಸ್ಲಾಮ್ ಫ್ರೆಂಚ್ ಓಪನ್‌ನ ಪುರುಷರ ಸಿಂಗಲ್ಸ್ ವಿಭಾಗದ ಫೈನಲ್‌ನಲ್ಲಿ ವಿಶ್ವದ ನಂಬರ್ -1 ಆಟಗಾರ ಸೆರ್ಬಿಯಾದ ನೊವಾಕ್ ಜೊಕೊವಿಕ್, ಗ್ರೀಸ್‌ನ ಯುವ ಆಟಗಾರ ಸ್ಟೆಫಾನೊಸ್ ಸಿಟ್ಸಿಪಾಸ್ ಅವರನ್ನು ಮಣಿಸಿ ಗ್ರ್ಯಾಂಡ್‌ಸ್ಲಾಮ್ ಪ್ರಶಸ್ತಿಯನ್ನು ಗೆದ್ದುಕೊಂಡರು . ಪಂದ್ಯವನ್ನು ಜೊಕೊವಿಕ್ 6-7 (6-8), 2-6, 6-3, 6-2, 6-4 ಸೆಟ್​ಗಳಿಂದ ಗೆದ್ದರು. ಸೆಮಿಫೈನಲ್‌ನಲ್ಲಿ ಸ್ಪ್ಯಾನಿಷ್ ದಂತಕಥೆ ಮತ್ತು ಕ್ಲೇ ಕೋರ್ಟ್ ರಾಜ ರಾಫೆಲ್ ನಡಾಲ್ ಅವರನ್ನು ಸೋಲಿಸಿ ಜೊಕೊವಿಕ್ ಫೈನಲ್‌ಗೆ ಪ್ರವೇಶಿಸಿದ್ದರು. ಅದೇ ಸಮಯದಲ್ಲಿ ಸಿಟ್ಸಿಪಾಸ್, ಜರ್ಮನಿಯ ಅಲೆಕ್ಸಾಂಡರ್ ಜ್ವೆರೆವ್ ಅವರನ್ನು ಸೋಲಿಸಿ ಮೊದಲ ಬಾರಿಗೆ ಗ್ರ್ಯಾಂಡ್ ಸ್ಲ್ಯಾಮ್ ಅಂತಿಮ ಪಂದ್ಯಕ್ಕೆ ಪ್ರವೇಶ ಪಡೆದಿದ್ದರು. ಇದು ಜೊಕೊವಿಕ್ ಅವರ ವೃತ್ತಿಜೀವನದ ಎರಡನೇ ಫ್ರೆಂಚ್ ಓಪನ್ ಮತ್ತು ಅವರ ವೃತ್ತಿಜೀವನದ 19 ನೇ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿ ಆಗಿದೆ.

ಜೊಕೊವಿಕ್ ಸಿಟ್ಸಿಪಾಸ್ ಅವರನ್ನು ಸೋಲಿಸುವುದರ ಮೂಲಕ 52 ವರ್ಷಗಳಲ್ಲಿ ಸತತವಾಗಿ ಗ್ರ್ಯಾಂಡ್ ಸ್ಲ್ಯಾಮ್ ಸಿಂಗಲ್ಸ್ ಪ್ರಶಸ್ತಿಯನ್ನು ಎರಡು ಬಾರಿ ಗೆದ್ದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ರಾಯ್ ಎಮರ್ಸನ್ ಮತ್ತು ರಾಡ್ ಲಾವರ್ ಹೊರತುಪಡಿಸಿ, ನಾಲ್ಕು ಗ್ರ್ಯಾಂಡ್ ಸ್ಲ್ಯಾಮ್‌ಗಳನ್ನು ಎರಡು ಬಾರಿ ಗೆದ್ದ ಮೂರನೇ ಆಟಗಾರ ಜೊಕೊವಿಕ್ ಅಗಿದ್ದಾರೆ. 20 ಗ್ರ್ಯಾಂಡ್ ಸ್ಲ್ಯಾಮ್‌ಗಳನ್ನು ಗೆದ್ದಿರುವ ನಡಾಲ್ ಮತ್ತು ಫೆಡರರ್‌ಗೆ ಇದು ಸಾಧ್ಯವಾಗಿಲ್ಲ. 1969 ರಲ್ಲಿ, ಎಲ್ಲಾ ನಾಲ್ಕು ಗ್ರ್ಯಾಂಡ್ ಸ್ಲ್ಯಾಮ್‌ಗಳನ್ನು ಒಂದಕ್ಕಿಂತ ಹೆಚ್ಚು ಬಾರಿ ಗೆದ್ದ ಸಾಧನೆಯನ್ನು ಲಾವರ್ ಮಾಡಿದ್ದಾರೆ.

ಎರಡು ಸೆಟ್‌ಗಳನ್ನು ಕಳೆದುಕೊಂಡ ನಂತರ ಪಂದ್ಯಕ್ಕೆ ವಾಪಾಸ್ ಸಿಟ್ಸಿಪಾಸ್ ಮೊದಲ ಎರಡು ಸೆಟ್‌ಗಳನ್ನು ಗೆದ್ದರು. ಜೊಕೊವಿಕ್ ಮೊದಲ ಸೆಟ್‌ನಲ್ಲಿ ಗ್ರೀಕ್ ಆಟಗಾರನಿಗೆ ಉತ್ತಮ ಹೋರಾಟವನ್ನು ನೀಡಿದರು ಆದರೆ 6-7 (6-8) ರಿಂದ ಮೊದಲ ಸೆಟ್ ಕಳೆದುಕೊಂಡರು. ಈ ಗೆಲುವು ಸಿಟ್ಸಿಪಾಸ್ಗೆ ಆತ್ಮವಿಶ್ವಾಸವನ್ನು ನೀಡಿತು ಮತ್ತು ಅವರು ಎರಡನೇ ಸೆಟ್ ಅನ್ನು 6-2ರಿಂದ ಗೆಲ್ಲುವಲ್ಲಿ ಯಶಸ್ವಿಯಾದರು. ಶ್ರೇಷ್ಠ ಆಟಗಾರರಲ್ಲಿ ಎಣಿಸಲ್ಪಟ್ಟ ಜೊಕೊವಿಕ್ ಅವರು ಪಂದ್ಯವನ್ನು ಬಿಟ್ಟುಕೊಡಲಿಲ್ಲ ಮತ್ತು ಪುನರಾಗಮನ ಮಾಡಿದರು. ಮೂರನೇ ಸೆಟ್‌ನ ಆರಂಭದಲ್ಲಿ ಸ್ಕೋರ್ 1-1 ಆಗಿತ್ತು ಆದರೆ ನಂತರ ಜೊಕೊವಿಕ್ ಅದನ್ನು 4-1ರನ್ನಾಗಿ ಮಾಡಿ ನಂತರ 6-3 ಸೆಟ್‌ಗಳಿಂದ ಗೆದ್ದು ನಾಲ್ಕನೇ ಸೆಟ್‌ನಲ್ಲಿ ಪಂದ್ಯಕ್ಕೆ ವಾಪಸ್ಸಾದರು.

ಸಿಟ್ಸಿಪಾಸ್ಗೆ ಮತ್ತೆ ಸಮಸ್ಯೆ ಮೂರನೇ ಸೆಟ್‌ನ ನಂತರ, ಸಿಟ್ಸಿಪಾಸ್ ಬೆನ್ನು ನೋವಿನ ಸಮಸ್ಯೆಗೆ ಗುರಿಯಾಗಬೇಕಾಯಿತು, ಇದರಿಂದಾಗಿ ಸ್ವಲ್ಪ ಸಮಯದವರೆಗೆ ಆಟವನ್ನು ನಿಲ್ಲಿಸಲಾಯಿತು. ನಾಲ್ಕನೇ ಸೆಟ್‌ನಲ್ಲಿ ಜೊಕೊವಿಕ್ ಪ್ರಾಬಲ್ಯ ಮೆರೆದರು. ಮೊದಲ ಸೆಟ್ ಗೆದ್ದ ನಂತರ, ಅವರು 3-0 ಮುನ್ನಡೆ ಸಾಧಿಸಿದರು. ಈ ಸೆಟ್‌ನಲ್ಲಿ ಸಿಟ್ಸಿಪಾಸ್ ಎರಡು ಸೆಟ್​ಗಳನ್ನು ತಮ್ಮ ಹೆಸರಿಗೆ ತೆಗೆದುಕೊಂಡರು. ಆದರೆ ಜೊಕೊವಿಕ್ ಅವರನ್ನು 6-2 ಸೆಟ್‌ಗಳಿಂದ ಸೋಲಿಸಿದರು. ನಾಲ್ಕನೇ ಸೆಟ್‌ನಲ್ಲಿ 1-1ರಲ್ಲಿ ಸಮಗೊಂಡಿತ್ತು. ನಂತರ ಜೊಕೊವಿಕ್ 4-2 ಮುನ್ನಡೆ ಸಾಧಿಸಿದರು. ಐದನೇ ಸೆಟ್ ಅನ್ನು 6-4ರಿಂದ ಗೆದ್ದು ಇತಿಹಾಸವನ್ನು ಸೃಷ್ಟಿಸಿದರು.

ಆರನೇ ಬಾರಿಗೆ ಎರಡು ಸೆಟ್‌ಗಳನ್ನು ಕಳೆದುಕೊಂಡ ನಂತರ ಗೆಲುವು ಎರಡು ಸೆಟ್‌ಗಳನ್ನು ಕಳೆದುಕೊಂಡ ನಂತರ ಜೊಕೊವಿಕ್ ಪುನರಾಗಮನ ಮಾಡುವುದು ಇದೇ ಮೊದಲಲ್ಲ. ಅವರು ಇದನ್ನು ಮೊದಲು ಐದು ಬಾರಿ ಮಾಡಿದ್ದಾರೆ. ವಿಂಬಲ್ಡನ್ -2005 ರ ಎರಡನೇ ಸುತ್ತಿನಲ್ಲಿ, ಲೋಪೆಜ್ ವಿರುದ್ಧದ ಆರಂಭಿಕ ಎರಡು ಸೆಟ್‌ಗಳನ್ನು ಕಳೆದುಕೊಂಡ ನಂತರ ಅವರು ಪಂದ್ಯವನ್ನು 3–6, 3–6, 7–6, 7–6, 6–4ರಲ್ಲಿ ಗೆದ್ದರು. ನಂತರ ಯುಎಸ್ ಓಪನ್ -2011 ರಲ್ಲಿ, ರೋಜರ್ ಫೆಡರರ್ ವಿರುದ್ಧದ ಸೆಮಿಫೈನಲ್‌ನಲ್ಲಿ ಮೊದಲ ಎರಡು ಸೆಟ್‌ಗಳನ್ನು ಕಳೆದುಕೊಂಡ ನಂತರ ಜೊಕೊವಿಕ್ 6-7, 4-6, 6-3, 6-2, 7-5 ಸೆಟ್‌ಗಳಿಂದ ಜಯಗಳಿಸಿದರು. ಇದಲ್ಲದೆ, ಫ್ರೆಂಚ್ ಓಪನ್‌ನಲ್ಲಿಯೇ, 2012 ರಲ್ಲಿ ನಡೆದ ನಾಲ್ಕನೇ ಸುತ್ತಿನಲ್ಲಿ, ಆಂಡ್ರೆ ಸೆಪ್ಪಿ ಎರಡು ಸೆಟ್‌ಗಳ ಅಂತರದಿಂದ 4-6, 6-7, 6-3, 7-5, 6-3 ಸೆಟ್‌ಗಳಿಂದ ಸೋಲನುಭವಿಸಿದರು. 2015 ರಲ್ಲಿ, ವಿಂಬಲ್ಡನ್‌ನಲ್ಲಿ ನಡೆದ ದಕ್ಷಿಣ ಆಫ್ರಿಕಾದ ಕೆವಿನ್ ಆಂಡರ್ಸನ್ ವಿರುದ್ಧ, ನಾಲ್ಕನೇ ಸುತ್ತಿನಲ್ಲಿ ಎರಡು ಸೆಟ್‌ಗಳನ್ನು ಕಳೆದುಕೊಂಡ ನಂತರ 6-7, 6-7, 6-1, 6-4, 7-5ರಲ್ಲಿ ಪಂದ್ಯವನ್ನು ಗೆಲ್ಲುವಲ್ಲಿ ಯಶಸ್ವಿಯಾದರು. ಈ ವರ್ಷದ ಫ್ರೆಂಚ್ ಓಪನ್‌ನ ನಾಲ್ಕನೇ ಸುತ್ತಿನಲ್ಲಿ ಮುಸೆಟ್ಟಿ ವಿರುದ್ಧ ಆರಂಭಿಕ ಎರಡು ಸೆಟ್‌ಗಳನ್ನು ಕಳೆದುಕೊಂಡ ನಂತರ 6-7, 6-7, 6-1, 6-0, 4-0 ಗೋಲುಗಳಿಂದ ಸೋಲನುಭವಿಸಿದರು.

ಕಠಿಣ ಮೂರು ದಿನಗಳು ಪ್ರಶಸ್ತಿಯನ್ನು ಗೆದ್ದ ನಂತರ ಮಾತನಾಡಿದ ಜೊಕೊವಿಕ್, ಮೂರು ದಿನಗಳು ತಂಬಾ ಕಷ್ಟಕರವಾಗಿದ್ದವು ಎಂದರು. ಇದು ಅದ್ಭುತ ವಾತಾವರಣ. ನನ್ನ ತರಬೇತುದಾರ, ಪಿಸಿಶಿಯನ್ ಮತ್ತು ಈ ಪ್ರಯಾಣದಲ್ಲಿ ನನ್ನನ್ನು ಬೆಂಬಲಿಸಿದ ಎಲ್ಲರಿಗೂ ಧನ್ಯವಾದ ಹೇಳಲು ಬಯಸುತ್ತೇನೆ. ಕಳೆದ 48 ಗಂಟೆಗಳಲ್ಲಿ, ನಾನು ಇಬ್ಬರು ಶ್ರೇಷ್ಠ ಆಟಗಾರರ ವಿರುದ್ಧ ಒಂಬತ್ತು ಗಂಟೆಗಳ ಕಾಲ ಆಡಿದ್ದೇನೆ. ಕೊನೆಯ ಮೂರು ದಿನಗಳು ದೈಹಿಕವಾಗಿ ಕಠಿಣವಾಗಿದ್ದವು, ಆದರೆ ನನ್ನ ಸಾಮರ್ಥ್ಯವನ್ನು ನಾನು ನಂಬಿದ್ದೇನೆ ಎಂದು ಸಂಭ್ರಮವನ್ನು ಹಂಚಿಕೊಂಡರು.

Published On - 11:45 pm, Sun, 13 June 21

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್