viral video: ಗ್ರ್ಯಾಂಡ್‌ಸ್ಲಾಮ್ ಗೆದ್ದ ಖುಷಿ: ತನ್ನ ಪುಟ್ಟ ಅಭಿಮಾನಿಗೆ ಮೈದಾನದಲ್ಲೆ ಉಡುಗೊರೆ ನೀಡಿದ ಜೊಕೊವಿಕ್!

TV9kannada Web Team

TV9kannada Web Team | Edited By: pruthvi Shankar

Updated on: Jun 14, 2021 | 4:59 PM

ಆಟದಲ್ಲಿ ನೊವಾಕ್​ ಜೊಕೊವಿಕ್​ ಗೆದ್ದ ಖುಷಿಯಲ್ಲಿ ಬಾಲಕ ಹೆಚ್ಚು ಸಂತೋಷಗೊಂದಿದ್ದನು. ಇದರ ಬೆನ್ನಲೇ ಟೆನಿಸ್​ ಬ್ಯಾಟ್​ ಸಿಕ್ಕಿರುವುದು ಬಾಲಕನಿಗೆ ಹೆಚ್ಚು ಖುಷಿ ನೀಡಿದೆ.

viral video: ಗ್ರ್ಯಾಂಡ್‌ಸ್ಲಾಮ್ ಗೆದ್ದ ಖುಷಿ: ತನ್ನ ಪುಟ್ಟ ಅಭಿಮಾನಿಗೆ ಮೈದಾನದಲ್ಲೆ ಉಡುಗೊರೆ ನೀಡಿದ ಜೊಕೊವಿಕ್!
ನೊವಾಕ್​ ಜೊಕೊವಿಕ್

ಭಾನುವಾರ ನಡೆದ ಎರಡನೇ ಗ್ರ್ಯಾಂಡ್​ ಫ್ರೆಂಚ್​ ಓಪನ್​ನ ಪುರುಷರ ಸಿಂಗಲ್ಸ್​ ವಿಭಾಗದ ಫನಲ್ಸ್​ನಲ್ಲಿ ವಿಶ್ವದ ನಂಬರ್​-1 ಆಟಗಾರ ಸೆರ್ಬಿಯಾದ ನೊವಾಕ್​ ಜೊಕೊವಿಕ್​ ಗೆದ್ದು ಗ್ರ್ಯಾಂಡ್ಸ್​ಸ್ಲಾಮ್​ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಈ ನಡುವೆಯೇ ಒಂದು ಅಪರೂಪದ ಕ್ಷಣವು ವಿಡಿಯೋದಲ್ಲಿ ಸೆರೆಯಾಗಿದ್ದು ನೆಟ್ಟಿಗರ ಗಮನ ಸೆಳೆದಿದೆ. ಭರ್ಜರಿ ಗೆಲುವಿನ ಮಧ್ಯೆಯೇ, ಜೊಕೊವಿಕ್​ ತಾವು ಆಟವಾಡಿದ ಟೆನ್ನಿಸ್​ ಬ್ಯಾಟ್​ಅನ್ನು ಚಿಕ್ಕ ಬಾಲಕನಿಗೆ ಉಡುಗೊರೆಯಾಗಿ ನೀಡಿದ್ದಾರೆ. ಈ ಕ್ಷಣವನ್ನು ಲೈವ್​ ಕ್ಯಾಮಾರಾದಲ್ಲಿ ಸೆರೆ ಹಿಡಿಯಲಾಗಿದ್ದು ಬಾಲಕನನ್ನು ನೋಡಿದ ನೆಟ್ಟಿಗರು ‘ಲಕ್ಕಿ ಮ್ಯಾನ್​’ ಎಂದು ಪ್ರತಿಕ್ರಿಯಿಸಿದ್ದಾರೆ.

ಆಟದ ಸಮಯದಲ್ಲಿ ಆ ಹುಡುಗ ಪ್ರತಿ ಹಂತದಲ್ಲೂ ನನ್ನನ್ನು ಪ್ರೋತ್ಸಾಹಿಗಿಸಿದ್ದಾನೆ. ಇದನ್ನು ನಾನು ಗಮನಿಸುತ್ತಿದ್ದೆ. ಯಾವ ಕ್ಷಣದಲ್ಲಿಯೂ ಕೂಡಾ ಹುಡುಗ ನನ್ನನ್ನು ಹುರಿದುಂಬಿಸುವುದನ್ನು ಬಿಡಲಿಲ್ಲ. ನಾನು ಗೆದ್ದ ಕ್ಷಣದಲ್ಲಿ ಆತನ ಮುಖದಲ್ಲಿ ಹೆಚ್ಚು ಸಂತೋಷವನ್ನು ನೋಡಿದೆ. ಸ್ಪರ್ಧೆ ಮುಗಿಯುವವರೆಗೂ ನನ್ನ ಬೆಂಬಲಿಗನಾಗಿ ನನ್ನ ಜತೆ ಇದ್ದುದರಿಂದ ಆತನಿಗೆ ಕೃಜ್ಞತೆಗಳು ಎಂದು ನೊವಾಕ್​ ಜೊಕೊವಿಕ್ ಪ್ರತಿಕ್ರಿಯೆ ನೀಡಿದ್ದಾರೆ.

ತಾಜಾ ಸುದ್ದಿ

ಆಟದಲ್ಲಿ ನೊವಾಕ್​ ಜೊಕೊವಿಕ್​ ಗೆದ್ದ ಖುಷಿಯಲ್ಲಿ ಬಾಲಕ ಹೆಚ್ಚು ಸಂತೋಷಗೊಂದಿದ್ದನು. ಇದರ ಬೆನ್ನಲೇ ಟೆನಿಸ್​ ಬ್ಯಾಟ್​ ಸಿಕ್ಕಿರುವುದು ಬಾಲಕನಿಗೆ ಹೆಚ್ಚು ಖುಷಿ ನೀಡಿದೆ. ವಿಡಿಯೋ ನೋಡಿದ ನೆಟ್ಟಿಗರು ಹುಡುಗನಿಗೆ ಲಕ್ಕಿ ಮ್ಯಾನ್​ ಎಂದು ಕರೆದಿದ್ದಾರೆ. ಇನ್ನು ಕೆಲವರು ಅಭಿನಂದನೆ ತಿಳಿಸಿದ್ದಾರೆ. ಟೆನ್ನಿಸ್​ ಆಟವನ್ನು ಕಲಿಯಬೇಕು ಮತ್ತು ನೊವಾಕ್​ ಜೊಕೊವಿಕ್​ ಅವರಂತೆಯೇ ಆಗಬೇಕು ಎಂದು ಪ್ರೋತ್ಸಾಹ ನೀಡಿದ್ದಾರೆ.

ಇದನ್ನೂ ಓದಿ:

ಫ್ರೆಂಚ್ ಓಪನ್‌ ಫೈನಲ್; ಸ್ಟೆಫಾನೊಸ್ ಸಿಟ್ಸಿಪಾಸ್ ಮಣಿಸಿ 19ನೇ ಗ್ರ್ಯಾಂಡ್‌ಸ್ಲಾಮ್ ಪ್ರಶಸ್ತಿ ಗೆದ್ದ ನೊವಾಕ್ ಜೊಕೊವಿಕ್

Australian Open 2021: 9ನೇ ಬಾರಿಗೆ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಗೆದ್ದ ನೊವಾಕ್ ಜೊಕೊವಿಕ್

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada