AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

17 ಎಸೆತಗಳಲ್ಲಿ 90 ರನ್! ಈ ಆಂಗ್ಲ ಕ್ರಿಕೆಟಿಗನ ಸಿಕ್ಸರ್​ ಸುನಾಮಿಗೆ ಎದುರಾಳಿ ತಂಡ ಕೊಚ್ಚಿ ಹೋಗಿತ್ತು

20 ನೇ ಓವರ್‌ನಲ್ಲಿ ಔಟಾಗುವ ಮೊದಲು ಕ್ಲಾರ್ಕ್ 136 ರನ್ ಗಳಿಸಿದರು. ಅದರಲ್ಲಿ 90 ರನ್ಗಳು ಕೇವಲ 17 ಎಸೆತಗಳಲ್ಲಿ ಅಂದರೆ, ಸಿಕ್ಸರ್ ಮತ್ತು ಬೌಂಡರಿಗಳ ಸಹಾಯದಿಂದ ಬಂದವು.

17 ಎಸೆತಗಳಲ್ಲಿ 90 ರನ್! ಈ ಆಂಗ್ಲ ಕ್ರಿಕೆಟಿಗನ ಸಿಕ್ಸರ್​ ಸುನಾಮಿಗೆ ಎದುರಾಳಿ ತಂಡ ಕೊಚ್ಚಿ ಹೋಗಿತ್ತು
ಜೋ ಕ್ಲಾರ್ಕ್
ಪೃಥ್ವಿಶಂಕರ
|

Updated on: Jun 14, 2021 | 5:43 PM

Share

ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್‌ನ ಬ್ಯಾಟ್ಸ್‌ಮನ್‌ಗಳ ಕಳಪೆ ಪ್ರದರ್ಶನವು ತಂಡದ ಅಭಿಮಾನಿಗಳಿಗೆ, ಇಂಗ್ಲೆಂಡ್ ಕ್ರಿಕೆಟ್ ಮಂಡಳಿಗೆ ಮತ್ತು ಮಾಜಿ ಅನುಭವಿಗಳಿಗೆ ಬೇಸರ ತಂದಿರಬಹುದು. ಆದರೆ ಇಂಗ್ಲಿಷ್ ಕ್ರಿಕೆಟ್ ನಿರಂತರವಾಗಿ ಟಿ20 ಕ್ರಿಕೆಟ್​ಗೆ ನಿರಂತರವಾಗಿ ಸ್ಪೋಟಕ ಆಟಗಾರರನ್ನು ಪಡೆದುಕೊಳ್ಳುತ್ತಿದೆ. ಈ ದಿನಗಳಲ್ಲಿ ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ ಟಿ 20 ಬ್ಲಾಸ್ಟ್ ಪಂದ್ಯಾವಳಿಯಲ್ಲಿ ಅಂತಹ ಒಬ್ಬ ಯುವ ಬ್ಯಾಟ್ಸ್‌ಮನ್ ಹುಟ್ಟುಕೊಂಡಿದ್ದಾನೆ. ಹೆಸರು- ಜೋ ಕ್ಲಾರ್ಕ್. ಈ ನಾಟಿಂಗ್ಹ್ಯಾಮ್ಶೈರ್ ಬ್ಯಾಟ್ಸ್‌ಮನ್‌ ಆರ್ಭಟವನ್ನು ನಿಲ್ಲಿಸುವುದು ಎದುರಾಳಿ ತಂಡದ ಬೌಲರ್​ಗಳಿಗೆ ದೊಡ್ಡ ಸವಾಲಾಗಿತ್ತು. 25 ವರ್ಷದ ಬ್ಯಾಟ್ಸ್‌ಮನ್ ಮೈದಾನದಲ್ಲಿ ತನ್ನ ಬ್ಯಾಟ್‌ನಿಂದ ಜ್ವಾಲಾಮುಖಿಯಂತಹ ವಿನಾಶವನ್ನು ಸೃಷ್ಟಿಸಿದ. ನಾರ್ಥಾಂಪ್ಟನ್ಶೈರ್ ವಿರುದ್ಧದ ಟಿ 20 ಬ್ಲಾಸ್ಟ್ ಪಂದ್ಯದಲ್ಲಿ ಕ್ಲಾರ್ಕ್ ಕೇವಲ 65 ಎಸೆತಗಳಲ್ಲಿ 136 ರನ್ ಗಳಿಸಿ ಅಬ್ಬರಿಸಿದ್ದ.

ನಾರ್ಥಾಂಪ್ಟನ್‌ನ ಕೌಂಟಿ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ನಾಟಿಂಗ್ಹ್ಯಾಮ್ 20 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 217 ರನ್ ಗಳಿಸಿತು. ಈ ಅರ್ಧದಷ್ಟು ರನ್ಗಳು ಕ್ಲಾರ್ಕ್ ಅವರ ಬ್ಯಾಟ್ನಿಂದ ಬಂದವು. ಕ್ಲಾರ್ಕ್ ಆರಂಭಿಕನಾಗಿ ಕಣಕ್ಕಿಳಿದು ಅಬ್ಬರಿಸುವುದನ್ನು ಯಾವ ಬೌಲರ್​ಗೂ ತಡೆಯಲಾಗಲಿಲ್ಲ. ಕ್ಲಾರ್ಕ್ ಕೇವಲ 49 ಎಸೆತಗಳಲ್ಲಿ ತಮ್ಮ ಶತಕವನ್ನು ಪೂರ್ಣಗೊಳಿಸಿದರು, ಇದು ಟಿ 20 ವೃತ್ತಿಜೀವನದಲ್ಲಿ ಅವರ ಮೂರನೇ ಶತಕವಾಗಿದೆ.

17 ಎಸೆತಗಳಲ್ಲಿ 90 ರನ್ ಕ್ಲಾರ್ಕ್ ಅವರ ಈ ಇನ್ನಿಂಗ್ಸ್ನ ಪ್ರಮುಖ ವಿಷಯವೆಂದರೆ ಅವರು ಮೊದಲ ಓವರ್ನಿಂದ ಪ್ರಾರಂಭಿಸಿ ಕೊನೆಯ ಓವರ್ ವರೆಗೆ ತಮ್ಮ ಅಬ್ಬರವನ್ನು ಮುಂದುವರಿಸಿದರು. ಈ ಸಮಯದಲ್ಲಿ, ಕ್ಲಾರ್ಕ್ ಮೈದಾನದ ಸುತ್ತ ಸಿಕ್ಸರ್‌ಗಳ ಪಟಾಕಿ ಸಿಡಿಸಿದರು. 20 ನೇ ಓವರ್‌ನಲ್ಲಿ ಔಟಾಗುವ ಮೊದಲು ಕ್ಲಾರ್ಕ್ 136 ರನ್ ಗಳಿಸಿದರು. ಅದರಲ್ಲಿ 90 ರನ್ಗಳು ಕೇವಲ 17 ಎಸೆತಗಳಲ್ಲಿ ಅಂದರೆ, ಸಿಕ್ಸರ್ ಮತ್ತು ಬೌಂಡರಿಗಳ ಸಹಾಯದಿಂದ ಬಂದವು. ಈ ಸಮಯದಲ್ಲಿ, ಕ್ಲಾರ್ಕ್ 11 ಪ್ರಚಂಡ ಸಿಕ್ಸರ್‌ಗಳು ಮತ್ತು 6 ಬೌಂಡರಿಗಳನ್ನು ಸಹ ಗಳಿಸಿದರು.

ಇಂತಹ ಆರ್ಭಟ ಈಗಾಗಲೇ ಮಾಡಲಾಗಿದೆ ಈ ಮೊದಲು ನಡೆದ ಟಿ 20 ಬ್ಲಾಸ್ಟ್‌ನ ಮೊದಲ ಪಂದ್ಯದಲ್ಲೂ ಕ್ಲಾರ್ಕ್ ಅತ್ಯುತ್ತಮ ಇನ್ನಿಂಗ್ಸ್ ಆಡಿದ್ದರು. ವೋರ್ಸೆಸ್ಟರ್‌ಶೈರ್ ವಿರುದ್ಧ ಆಡಿದ ಕ್ಲಾರ್ಕ್ ಕೇವಲ 21 ಎಸೆತಗಳಲ್ಲಿ 45 ರನ್ ಗಳಿಸಿದರು, ಇದರಲ್ಲಿ 4 ಸಿಕ್ಸರ್ ಮತ್ತು 2 ಬೌಂಡರಿಗಳು ಸೇರಿವೆ. ಕ್ಲಾರ್ಕ್ ಅವರ ಟಿ 20 ದಾಖಲೆ ಅದ್ಭುತವಾಗಿದೆ. ಕ್ಲಾರ್ಕ್ ಇದುವರೆಗೆ ಆಡಿದ 76 ಟಿ 20 ಪಂದ್ಯಗಳಲ್ಲಿ 3 ಶತಕ ಮತ್ತು 10 ಅರ್ಧಶತಕಗಳೊಂದಿಗೆ 2007 ರನ್ ಗಳಿಸಿದ್ದಾರೆ. ಈ ಸಮಯದಲ್ಲಿ, ಕ್ಲಾರ್ಕ್ ಅವರ ಸ್ಟ್ರೈಕ್ ದರವು ಸುಮಾರು 154 ರಷ್ಟಿದೆ.

ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಓವರ್ ಮಧ್ಯದಲ್ಲಿಯೇ ಅಫ್ರಿದಿ ಬೌಲಿಂಗ್ ನಿಲ್ಲಿಸಿದ ಅಂಪೈರ್
ಓವರ್ ಮಧ್ಯದಲ್ಲಿಯೇ ಅಫ್ರಿದಿ ಬೌಲಿಂಗ್ ನಿಲ್ಲಿಸಿದ ಅಂಪೈರ್
ವಿಮಾನ ನಿಲ್ದಾಣದಲ್ಲಿ ಮೋದಿಗೆ ಜೋರ್ಡಾನ್‌ ಪ್ರಧಾನಿಯಿಂದ ಆತ್ಮೀಯ ಸ್ವಾಗತ
ವಿಮಾನ ನಿಲ್ದಾಣದಲ್ಲಿ ಮೋದಿಗೆ ಜೋರ್ಡಾನ್‌ ಪ್ರಧಾನಿಯಿಂದ ಆತ್ಮೀಯ ಸ್ವಾಗತ