ದೇಶಿ ಕ್ರಿಕೆಟ್​ಗೆ ಸಿಹಿ ಸುದ್ದಿ ನೀಡಿದ ಬಿಸಿಸಿಐ; ರಣಜಿ, ಸೈಯದ್ ಮುಷ್ತಾಕ್ ಅಲಿ, ವಿಜಯ್ ಹಜಾರೆ ಪಂದ್ಯಾವಳಿಗಳ ದಿನಾಂಕ ಪ್ರಕಟ

ಮಂಡಳಿಯ ಪ್ರಕಾರ, 2021-22ರ ಕ್ರೀಡಾ ಋತುವಿನಲ್ಲಿ ಎಲ್ಲಾ ವಯೋಮಾನದವರ ಒಟ್ಟು 2127 ಹೋಮ್ ಪಂದ್ಯಗಳನ್ನು ಆಡಲಾಗುವುದು, ಇದರಲ್ಲಿ ರಣಜಿ ಟ್ರೋಫಿಯೂ ಸೇರಿದೆ.

ದೇಶಿ ಕ್ರಿಕೆಟ್​ಗೆ ಸಿಹಿ ಸುದ್ದಿ ನೀಡಿದ ಬಿಸಿಸಿಐ; ರಣಜಿ, ಸೈಯದ್ ಮುಷ್ತಾಕ್ ಅಲಿ, ವಿಜಯ್ ಹಜಾರೆ ಪಂದ್ಯಾವಳಿಗಳ ದಿನಾಂಕ ಪ್ರಕಟ
ಪ್ರಾತಿನಿಧಿಕ ಚಿತ್ರ
Follow us
ಪೃಥ್ವಿಶಂಕರ
|

Updated on: Jul 03, 2021 | 6:17 PM

ಭಾರತದ ದೇಶೀಯ ಕ್ರಿಕೆಟಿಗರಿಗೆ ಒಳ್ಳೆಯ ಸುದ್ದಿ ಬಂದಿದೆ. ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ದೇಶೀಯ ಆವೃತ್ತಿಯ ಬಗ್ಗೆ ಮಹತ್ತರ ಹೇಳಿಕೆಯನ್ನು ಪ್ರಕಟಿಸಿದೆ. ಹೊಸ ಋತುಮಾನವು ಮಹಿಳಾ ಏಕದಿನ ಪಂದ್ಯಾವಳಿಯೊಂದಿಗೆ ಪ್ರಾರಂಭವಾಗಲಿದ್ದು, ನಂತರ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯನ್ನು ಸಹ ಆಯೋಜಿಸಲಾಗುವುದು. ರಣಜಿ ಟ್ರೋಫಿಯ ಬಗ್ಗೆ ದೊಡ್ಡ ಸುದ್ದಿ ಹೊರಬಿದ್ದಿದೆ. ಕಳೆದ ವರ್ಷ ಕೊರೊನಾ ವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಮುಂದೂಡಲ್ಪಟ್ಟ ದೇಶದ ಅತ್ಯುನ್ನತ ಪ್ರಥಮ ದರ್ಜೆ ಪಂದ್ಯಾವಳಿ ಮತ್ತೊಮ್ಮೆ ಮರಳುತ್ತಿದೆ. 38 ತಂಡಗಳ ಈ ಪಂದ್ಯಾವಳಿ ನವೆಂಬರ್ 16 ರಿಂದ ಪ್ರಾರಂಭವಾಗಲಿದ್ದು, ಮುಂದಿನ 3 ತಿಂಗಳವರೆಗೆ ಮುಂದುವರಿಯಲಿದೆ. ಫೆಬ್ರವರಿ 23 ರಿಂದ ಮಾರ್ಚ್ 26 ರವರೆಗೆ ನಡೆಯಲಿರುವ ವಿಜಯ್ ಹಜಾರೆ ಟ್ರೋಫಿಯೊಂದಿಗೆ ದೇಶೀಯ ಋತುಮಾನವು ಕೊನೆಗೊಳ್ಳಲಿದೆ.

ಜುಲೈ 3 ರ ಶನಿವಾರ ಹೊಸ ಆವೃತ್ತಿಯನ್ನು ಪ್ರಕಟಿಸಿದ ಬಿಸಿಸಿಐ, ಎಲ್ಲಾ ಪಂದ್ಯಾವಳಿಗಳನ್ನು ಯಶಸ್ವಿಯಾಗಿ ಆಯೋಜಿಸಲು ಸಾಧ್ಯವಾಗುತ್ತದೆ ಎಂದು ಮಂಡಳಿಯು ವಿಶ್ವಾಸ ಹೊಂದಿದೆ, ಎಲ್ಲಾ ಆಟಗಾರರ ಆರೋಗ್ಯ ಮತ್ತು ಸುರಕ್ಷತೆಯ ಬಗ್ಗೆ ಹೆಚ್ಚಿನ ಗಮನ ಹರಿಸಲಾಗಿದೆ. ಕೊರೊನಾ ವೈರಸ್ ಕಾರಣದಿಂದಾಗಿ ಮಂಡಳಿಯು ಕಳೆದ ವರ್ಷದಲ್ಲಿ ಪಂದ್ಯಾವಳಿಗಳನ್ನು ಕಡಿಮೆಗೊಳಿಸಿತ್ತು ಮತ್ತು ಮುಷ್ತಾಕ್ ಅಲಿ ಟಿ 20 ಪಂದ್ಯಾವಳಿ, ವಿಜಯ್ ಹಜಾರೆ ಏಕದಿನ ಪಂದ್ಯಾವಳಿ ಮತ್ತು ಹಿರಿಯ ಮಹಿಳಾ ಏಕದಿನ ಪಂದ್ಯಾವಳಿಯನ್ನು ಮಾತ್ರ ಆಯೋಜಿಸಲಾಗಿತ್ತು.

2000 ಕ್ಕೂ ಹೆಚ್ಚು ಪಂದ್ಯಗಳು ನಡೆಯಲಿವೆ ಮಂಡಳಿಯ ಪ್ರಕಾರ, 2021-22ರ ಕ್ರೀಡಾ ಋತುವಿನಲ್ಲಿ ಎಲ್ಲಾ ವಯೋಮಾನದವರ ಒಟ್ಟು 2127 ಹೋಮ್ ಪಂದ್ಯಗಳನ್ನು ಆಡಲಾಗುವುದು, ಇದರಲ್ಲಿ ರಣಜಿ ಟ್ರೋಫಿಯೂ ಸೇರಿದೆ. ಇದು ಮೂರು ತಿಂಗಳವರೆಗೆ ಇರುತ್ತದೆ, ವಿಜಯ್ ಹಜಾರೆ ಟ್ರೋಫಿ ಕೂಡ ಒಂದು ತಿಂಗಳು ಇರುತ್ತದೆ. ಆದರೆ, ಈ ಎಲ್ಲಾ ಪಂದ್ಯಾವಳಿಗಳನ್ನು ಬಯೋ-ಬಬಲ್‌ನಲ್ಲಿ ಆಡಲಾಗುತ್ತದೆಯೆ ಅಥವಾ ಇಲ್ಲವೇ ಎಂದು ಮಂಡಳಿಯಿಂದ ಇನ್ನೂ ತಿಳಿಸಲಾಗಿಲ್ಲ?

ದೇಶೀಯ ಋತುವಿನ ಕ್ಯಾಲೆಂಡರ್ ಇಲ್ಲಿದೆ 21 ಸೆಪ್ಟೆಂಬರ್ 2021: ಹಿರಿಯ ಮಹಿಳಾ ಏಕದಿನ ಲೀಗ್

ಅಕ್ಟೋಬರ್ 27, 2021: ಹಿರಿಯ ಮಹಿಳಾ ಏಕದಿನ ಚಾಲೆಂಜರ್ ಟ್ರೋಫಿ

20 ಅಕ್ಟೋಬರ್ – 12 ನವೆಂಬರ್ 2021: ಸೈಯದ್ ಮುಷ್ತಾಕ್ ಅಲಿ ಟ್ರೋಫಿ

16 ನವೆಂಬರ್ 2021 – 19 ಫೆಬ್ರವರಿ 2022: ರಣಜಿ ಟ್ರೋಫಿ

23 ಫೆಬ್ರವರಿ 2022 – 26 ಮಾರ್ಚ್ 2022: ವಿಜಯ್ ಹಜಾರೆ ಟ್ರೋಫಿ

ವಯೋಮಾನದವರ ಪಂದ್ಯಾವಳಿಗಳನ್ನು ಸಹ ಆಯೋಜಿಸಲಾಗಿದೆ ಈ ದೊಡ್ಡ ಪಂದ್ಯಾವಳಿಗಳ ಹೊರತಾಗಿ, 23 ವರ್ಷದೊಳಗಿನವರು, 19 ವರ್ಷದೊಳಗಿನವರು ಮತ್ತು 16 ವರ್ಷದೊಳಗಿನವರ ಮಹಿಳಾ ಮತ್ತು ಪುರುಷರ ವಿಭಾಗಗಳ ಎಲ್ಲಾ ಪ್ರಮುಖ ಪಂದ್ಯಾವಳಿಗಳನ್ನು ಸಹ ಈ ಅವಧಿಯಲ್ಲಿ ಆಯೋಜಿಸಲಾಗುವುದು. ಇವುಗಳಲ್ಲಿ ಸಿಕೆ ನಾಯ್ಡು ಟ್ರೋಫಿ, ವಿನೂ ಮಕಾಡ್ ಟ್ರೋಫಿ, ವಿಜಯ್ ಮರ್ಚೆಂಟ್ ಟ್ರೋಫಿ, ಕೂಚ್ ಬೆಹರ್ ಟ್ರೋಫಿ ಮತ್ತು ಏಕದಿನ-ಟಿ 20 ಲೀಗ್ ಸೇರಿವೆ.

ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ