ಟೀಂ ಇಂಡಿಯಾ ಆಟಗಾರರಿಗೆ Fitness From Home!
ಐಪಿಎಲ್ಗೆ ಮನೆಯಲ್ಲೇ ಪ್ರಾಕ್ಟೀಸ್ ಮಾಡಿಕೊಳ್ಳೋಣ ಅಂದ್ರೆ, ಐಪಿಎಲ್ ಕ್ಯಾನ್ಸಲ್ ಆಗಿದೆ. ವಿದೇಶಿ ಪ್ರವಾಸ ಮಾಡೋಣ ಅಂದ್ರೆ ಕೊರೊನಾ ಭಯ. ಲಾಕ್ಡೌನ್ನಿಂದಾಗಿ ಟೀಮ್ ಇಂಡಿಯಾ ಆಟಗಾರರೆಲ್ಲಾ ತಮ್ಮ ತಮ್ಮ ಮನೆಯಲ್ಲೇ ಇದ್ದಾರೆ. ಆದ್ರೀಗ ಬಿಸಿಸಿಐ ಟೀಮ್ ಇಂಡಿಯಾ ಆಟಗಾರರಿಗಾಗಿ ವರ್ಕ್ ಫ್ರಮ್ ಹೋಮ್ ಪ್ರಾರಂಭಿಸಿದೆ. ವರ್ಕ್ ಫ್ರಮ್ ಹೋಮ್ಗಾಗಿ ಬಿಸಿಸಿಐ ಪ್ರತ್ಯೇಕವಾದ ಅಪ್ಲಿಕೇಶನ್ವೊಂದನ್ನ ಸಿದ್ಧಪಡಿಸಿದ್ದು, ಆಟಗಾರರಿಗೆ ಅದನ್ನ ಡೌನ್ಲೋಡ್ ಮಾಡಿಕೊಳ್ಳುವಂತೆ ಸೂಚಿಸಿದೆ. ಬಿಸಿಸಿಐ ಈ ಅಪ್ಲಿಕೇಶನ್ ಮಾಡಿರೋ ಉದ್ದೇಶ, ಆಟಗಾರರನ್ನ ದೈಹಿಕವಾಗಿ ಹಾಗೂ ಮಾನಸಿಕವಾಗಿ ಫಿಟ್ ಆಗಿರುವಂತೆ ಮಾಡೋದಾಗಿದೆ. […]
ಐಪಿಎಲ್ಗೆ ಮನೆಯಲ್ಲೇ ಪ್ರಾಕ್ಟೀಸ್ ಮಾಡಿಕೊಳ್ಳೋಣ ಅಂದ್ರೆ, ಐಪಿಎಲ್ ಕ್ಯಾನ್ಸಲ್ ಆಗಿದೆ. ವಿದೇಶಿ ಪ್ರವಾಸ ಮಾಡೋಣ ಅಂದ್ರೆ ಕೊರೊನಾ ಭಯ. ಲಾಕ್ಡೌನ್ನಿಂದಾಗಿ ಟೀಮ್ ಇಂಡಿಯಾ ಆಟಗಾರರೆಲ್ಲಾ ತಮ್ಮ ತಮ್ಮ ಮನೆಯಲ್ಲೇ ಇದ್ದಾರೆ.
ಆದ್ರೀಗ ಬಿಸಿಸಿಐ ಟೀಮ್ ಇಂಡಿಯಾ ಆಟಗಾರರಿಗಾಗಿ ವರ್ಕ್ ಫ್ರಮ್ ಹೋಮ್ ಪ್ರಾರಂಭಿಸಿದೆ. ವರ್ಕ್ ಫ್ರಮ್ ಹೋಮ್ಗಾಗಿ ಬಿಸಿಸಿಐ ಪ್ರತ್ಯೇಕವಾದ ಅಪ್ಲಿಕೇಶನ್ವೊಂದನ್ನ ಸಿದ್ಧಪಡಿಸಿದ್ದು, ಆಟಗಾರರಿಗೆ ಅದನ್ನ ಡೌನ್ಲೋಡ್ ಮಾಡಿಕೊಳ್ಳುವಂತೆ ಸೂಚಿಸಿದೆ.
ಬಿಸಿಸಿಐ ಈ ಅಪ್ಲಿಕೇಶನ್ ಮಾಡಿರೋ ಉದ್ದೇಶ, ಆಟಗಾರರನ್ನ ದೈಹಿಕವಾಗಿ ಹಾಗೂ ಮಾನಸಿಕವಾಗಿ ಫಿಟ್ ಆಗಿರುವಂತೆ ಮಾಡೋದಾಗಿದೆ. ಇದ್ರಲ್ಲಿ ಆನ್ಲೈನ್ ತರಬೇತಿ ಸೆಷನ್ಸ್ ಮತ್ತು ಚಾಟ್ ರೂಮ್ ಸೇರಿದಂತೆ ನಾಲ್ಕು ಹಂತಗಳ ಯೋಜನೆಯೊಂದಿಗೆ ಪ್ರಶ್ನಾವಳಿಯನ್ನ ಒದಗಿಸಲಾಗಿದೆ.
ಆಟಗಾರರು, ತರಬೇತುದಾರರು ಮತ್ತು ಸಹಾಯಕ ಸಿಬ್ಬಂದಿಗೆ ನೆರವು ನೀಡಲು ಅಪ್ಲಿಕೇಶನ್ ಸಹಾಯಕವಾಗಲಿದೆ. ಇಲ್ಲಿ ಆಟಗಾರರ ವೈಯಕ್ತಿಕ ಮತ್ತು ತಂಡದ ಪ್ರದರ್ಶನ, ಕೌಶಲ್ಯ ಹಾಗೂ ಗಾಯದ ಸಮಸ್ಯೆ ಸೇರಿದಂತೆ ಇತರೆ ಮಾಹಿತಿ ನೀಡಲಾಗಿರುತ್ತದೆ.
ಈ ಅಪ್ಲಿಕೇಶನ್ ಕಾರ್ಯನಿರ್ವಹಣೆ ಕುರಿತು ಪ್ರತಿಕ್ರಿಯೆ ನೀಡಿರೋ ಬಿಸಿಸಿಐ ಖಜಾಂಚಿ ಅರುಣ್ ಧುಮಾಲ್, ಇದು ಹಂತ ಹಂತದ ಪ್ರಕ್ರಿಯೆಯಾಗಿದ್ದು, ಇದನ್ನು ಬಿಸಿಸಿಐ ಕಾರ್ಯದರ್ಶಿಗಳು ಪ್ರತಿದಿನ ಪರಿಶೀಲನೆ ನಡೆಸಿ ಪ್ರಗತಿಯನ್ನು ಗಮನಿಸುತ್ತಾರೆ. ಆಟಗಾರರ ದೈಹಿಕ-ಮಾನಸಿಕ ಆರೋಗ್ಯ, ಆನ್ಲೈನ್ ವೃತ್ತಿಪರ ನೆರವು, ಆಹಾರ ಪದ್ಧತಿ, ಫಿಟ್ನೆಸ್ ಸೆಷನ್ಸ್ಗಳನ್ನ ಪ್ರತಿದಿನ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಟೀಂ ಇಂಡಿಯಾ ಬ್ಯಾಟಿಂಗ್ ಕೋಚ್ ವಿಕ್ರಂ ರಾಥೋಡ್ ಪ್ರತಿ ಆಟಗಾರರ ಬಗ್ಗೆ ಪ್ರತ್ಯೇಕವಾಗಿ ಗಮನ ಹರಿಸುತ್ತಿದ್ದಾರೆ. ಫೀಲ್ಡಿಂಗ್ ಕೋಚ್ ಆರ್.ಶೀಧರ್ ಆಟಗಾರರಿಗೆ ಸೂಕ್ತ ಪ್ರತಿಕ್ರಿಯೆ ನೀಡಲು ಕೆಲ ಪ್ರಶ್ನಾವಳಿಯನ್ನು ಸಿದ್ಧಪಡಿಸಿದ್ದಾರೆ. ಕೋಚ್ಗಳು ನೀಡುವ ಸಲಹೆಗಳೊಂದಿಗೆ ಆಟಗಾರರು ಉತ್ತಮ ಮಾತುಕತೆ ನಡೆಸುತ್ತಿದ್ದಾರೆ ಎಂದು ವಿವರಿಸಿದ್ದಾರೆ.
ಅಲ್ಲದೇ ಲಾಕ್ಡೌನ್ ಮುಗಿದ ಬಳಿಕ ಎಲ್ಲಾ ಆಟಗಾರರಿಗೂ ಹೊರಾಂಗಣ ತರಬೇತಿ ನೀಡಲಾಗುತ್ತೆ. ಅಲ್ಲಿವರೆಗೂ ಟೀಮ್ ಇಂಡಿಯಾ ಆಟಗಾರರು ಬಿಸಿಸಿಐ ಹೊಸ ಅಪ್ಲಿಕೇಷನ್ನಲ್ಲಿ ಫಿಟ್ನೆಸ್ನತ್ತ ಗಮನ ಹರಿಸಲಿದ್ದಾರೆ.
Published On - 12:04 pm, Fri, 15 May 20