129 ರನ್ಗಳನ್ನು ಬೆನ್ನಟ್ಟಿದ ತಂಡವನ್ನು 125 ರನ್ಗಳಿಗೆ ಆಲ್ಔಟ್ ಮಾಡಲಾಯಿತು. ಆದರೆ ಸೋತ ತಂಡವನ್ನು ವಿಜೇತ ತಂಡ ಘೋಷಿಸಲಾಯಿತು. ಗುರಿಗಿಂತ ಕಡಿಮೆ ರನ್ ಗಳಿಸಿ, ಇಡೀ ತಂಡವು ಆಲ್ ಔಟ್ ಆದ ನಂತರವೂ ಆ ತಂಡ ಗೆದ್ದಾಗ ನಮಗೆಲ್ಲರಿಗೂ ಆಶ್ಚರ್ಯವಾಗುವುದು ಸಹಜ. ಅಂತಹ ವಿಚಿತ್ರ ಘಟನೆಯೊಂದು ಮಾಲ್ಟಾ ಮತ್ತು ಬೆಲ್ಜಿಯಂ ನಡುವಿನ ನಾಲ್ಕನೇ ಟಿ 20 ಪಂದ್ಯದ ವೇಳೆ ಇದು ಸಂಭವಿಸಿದೆ. ಮಾಲ್ಟಾ ತಂಡಕ್ಕೆ ಗೆಲ್ಲಲು 129 ರನ್‌ಗಳ ಅಗತ್ಯವಿತ್ತು. ಆದರೆ ತಂಡದ ಎಲ್ಲಾ ಬ್ಯಾಟ್ಸ್‌ಮನ್‌ಗಳು 125 ರನ್‌ಗಳಿಗೆ ಆಲೌಟ್ ಆದರು ಆದರೆ ತಂಡವನ್ನು ವಿಜಯಶಾಲಿ ಎಂದು ಘೋಷಿಸಲಾಯಿತು ಮತ್ತು ಬೆಲ್ಜಿಯಂ ಸೋಲನ್ನು ಎದುರಿಸಬೇಕಾಯಿತು. ಮಾಲ್ಟಾ ತಂಡಕ್ಕೆ ಐದು ಪೆನಾಲ್ಟಿ ರನ್ಗಳು ಸಿಕ್ಕಿದ್ದರಿಂದ ಅವರು ಜಯ ಗಳಿಸಬೇಕಾಯ್ತು. ಪಂದ್ಯದ ಅಧಿಕಾರಿಯೊಬ್ಬರೊಂದಿಗೆ ಬೆಲ್ಜಿಯಂ ತಂಡದ ಆಟಗಾರ ಅನುಚಿತವಾಗಿ ನಡೆದುಕೊಂಡ ಆರೋಪದಡಿಯಲ್ಲಿ ಬೆಲ್ಜಿಯಂ ತಂಡಕ್ಕೆ 5 ರನ್‌ಗಳ ಪೆನಾಲ್ಟಿ ಹಾಕಲಾಯಿತು. ಹೀಗಾಗಿ ಮಾಲ್ಟಾ ಪೆನಾಲ್ಟಿ ಯಿಂದ ಐದು ರನ್ ಗಳಿಸಿ ಜಯಗಳಿಸಿತು. ಆದರೆ, ಈ ನಿರ್ಧಾರದ ಬಗ್ಗೆ ಸಾಕಷ್ಟು ವಿವಾದಗಳು ಕೇಳಿಬಂದಿವೆ.
ಮಾಹಿತಿಯ ಪ್ರಕಾರ, ಬೆಲ್ಜಿಯಂ ತಂಡದ ಆಟಗಾರ ಶಹರ್ಯಾರ್ ಬಟ್ ಪಂದ್ಯಕ್ಕೆ ಸಂಬಂಧಿಸಿದ ಅಧಿಕಾರಿಯನ್ನು ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ. ಆದಾಗ್ಯೂ, ಬಟ್ ಯಾವಾಗ ಕೆಟ್ಟದಾಗಿ ವರ್ತಿಸಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ. ಇನ್ನಿಂಗ್ಸ್ ವಿರಾಮದ ಸಮಯದಲ್ಲಿ ಅಥವಾ ಮಾಲ್ಟಾ ತಂಡ ಬ್ಯಾಟಿಂಗ್ ಮಾಡುವ ಸಮಯದಲ್ಲಿ ಕೆಟ್ಟದಾಗಿ ವರ್ತಿಸಿದ್ದಾರೆಯೇ?ಎಂಬುದು ಕೂಡ ಇನ್ನೂ ಏನೂ ಸ್ಪಷ್ಟವಾಗಿಲ್ಲ. ಆದರೆ ಬಟ್ ಅವರ ದುರವರ್ತನೆಯಿಂದಾಗಿ ಅವರ ತಂಡಕ್ಕೆ ಐದು ರನ್ ದಂಡ ವಿಧಿಸಲಾಯಿತು. ಈ ನಿರ್ಧಾರವನ್ನು ಶಿಸ್ತು ಕ್ರಮದಡಿಯಲ್ಲಿ ತೆಗೆದುಕೊಳ್ಳಲಾಗಿದೆ.
ಬೆಲ್ಜಿಯಂ ಆಟಗಾರರು ವಿಜಯದ ಸಂಭ್ರಮದಲ್ಲಿ ನಿರತ
ರನ್ಗಳನ್ನು ಬೆನ್ನಟ್ಟಿದ ಮಾಲ್ಟಾ ತಂಡವನ್ನು ಕೊನೆಯ ಓವರ್ನಲ್ಲಿ 125 ರನ್ಗಳಿಗೆ ಆಲ್ಔಟ್ ಮಾಡಲಾಯಿತು. ಕೊನೆಯ ಓವರ್‌ನಲ್ಲಿ ಮಾಲ್ಟಾ ಗೆಲುವಿಗೆ ಐದು ರನ್‌ಗಳ ಅಗತ್ಯವಿತ್ತು. ಆದರೆ ಮೊದಲ ಎಸೆತದಲ್ಲಿ ಒಂದು ರನ್ ಗಳಿಸಲಾಯಿತು ಮತ್ತು ನಂತರ ಅಶೋಕ್ ಬಿಷ್ಣೋಯ್ ಎರಡನೇ ಎಸೆತದಲ್ಲಿ ಔಟ್ ಆದರು. ಈ ರೀತಿಯಾಗಿ ತಂಡವು ಗುರಿ ತಲುಪುವ ಮುಂಚೆಯೇ ಸರ್ವಪತನಗೊಂಡಿತು. ಬಳಿಕ ಬೆಲ್ಜಿಯಂ ಆಟಗಾರರು ಮೈದಾನದಲ್ಲೇ ಸಂಭ್ರಮಾಚರಣೆಯನ್ನು ಪ್ರಾರಂಭಿಸಿದರು. ಆದರೆ ಕೆಲವು ನಿಮಿಷಗಳ ನಂತರ, ಎಂಸಿಸಿ ಕಾನೂನು 16.7 ರ ಅಡಿಯಲ್ಲಿ ಮಾಲ್ಟಾ ತಂಡವನ್ನು ವಿಜೇತರೆಂದು ಘೋಷಿಸಲಾಯಿತು. ಈ ನಿಯಮದಡಿಯಲ್ಲಿ ಮಾಲ್ಟಾ ಐದು ರನ್ ಗಳಿಸಿತು.
ನಿಯಮ ಹೇಳುವುದೇನು?
ಪಂದ್ಯದ ಅಧಿಕಾರಿಗಳು ಕೊನೆಯ ಓವರ್‌ಗೆ ಮೊದಲು ಮಾತನಾಡಿದ್ದಾರೆ ಎಂದು ಹೇಳಲಾಗಿದೆ. ಇದರ ನಂತರ ಫೀಲ್ಡ್ ಅಂಪೈರ್‌ಗಳು ಮತ್ತು ಬೆಲ್ಜಿಯಂ ಆಟಗಾರರ ಬಗ್ಗೆಯೂ ಚರ್ಚೆ ನಡೆಯಿತು. ಆದರೆ ಅಂಪೈರ್‌ಗಳು ರನ್‌ಗಳನ್ನು ಹೆಚ್ಚಿಸಲು ಸ್ಕೋರರ್‌ಗಳಿಗೆ ಸೂಚಿಸಿರಲಿಲ್ಲ ಅಥವಾ ಮೈದಾನದಲ್ಲಿ ಪೆನಾಲ್ಟಿ ರನ್‌ಗಳ ಕುರಿತು ಮಾತುಕತೆ ನಡೆದಿದೆ ಎಂದು ಪ್ರಸಾರಕರು ಹೇಳಲಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಪಂದ್ಯದ ನಂತರ ಫಲಿತಾಂಶ ಬಂದಾಗ, ಈ ರೀತಿಯ ನಿರ್ಧಾರ ಕೈಗೊಳ್ಳುವುದು ಸರಿಯಲ್ಲ ಎಂಬ ವಿವಾದಗಳು ಎದ್ದಿವೆ. ಎಂಸಿಸಿಯ ನಿಯಮ 42 ರ ಪ್ರಕಾರ, ಪೆನಾಲ್ಟಿ ರನ್ಗಳನ್ನು ನೀಡಿದರೆ, ಅದು ತಕ್ಷಣವೇ ಸ್ಕೋರ್ಬೋರ್ಡ್ನಲ್ಲಿ ಅಪ್ಡೆಟ್ ಆಗಬೇಕು ಮತ್ತು ರನ್ ಅನ್ನು ಹೆಚ್ಚಿಸಲು ಸ್ಕೋರರ್ಗೆ ಹೇಳಬೇಕು. ಈ ರೀತಿಯ ನಿಯಾಮಾನುಸಾರವಾಗಿ ಕ್ರಮ ಜರುಗಿರದಿದ್ದರೆ ಈ ನಿರ್ಧಾರವನ್ನು ತಡೆಹಿಡಿಯಲಾಗುತ್ತದೆ. ಇದೀಗ ಈ ಬಗ್ಗೆ ವಿಚಾರಣೆ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ. ಐಸಿಸಿ ಕೂಡ ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಿದೆ.