Wimbledon 2021: ಆರನೇ ಬಾರಿಗೆ ವಿಂಬಲ್ಡನ್ ಗೆದ್ದ ಜೊಕೊವಿಕ್! ಗ್ರ್ಯಾಂಡ್ ಸ್ಲ್ಯಾಮ್ ಗೆಲ್ಲುವಲ್ಲಿ ಫೆಡರರ್-ನಡಾಲ್ ಸರಿಗಟ್ಟಿದ ನೊವಾಕ್

Wimbledon 2021: ಪುರುಷರ ವಿಭಾಗದಲ್ಲಿ ಹೆಚ್ಚು ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಗಳನ್ನು ಗೆಲ್ಲುವಲ್ಲಿ ಅವರು ಜಂಟಿ ನಂಬರ್ ಒನ್ ಆಗಿದ್ದಾರೆ. ಈಗ ರೋಜರ್ ಫೆಡರರ್ ಮತ್ತು ರಾಫೆಲ್ ನಡಾಲ್ ಅವರಂತೆ, ಅವರ ಹೆಸರಿಗೆ 20 ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಗಳು ಸೇರಿವೆ.

Wimbledon 2021: ಆರನೇ ಬಾರಿಗೆ ವಿಂಬಲ್ಡನ್ ಗೆದ್ದ ಜೊಕೊವಿಕ್! ಗ್ರ್ಯಾಂಡ್ ಸ್ಲ್ಯಾಮ್ ಗೆಲ್ಲುವಲ್ಲಿ ಫೆಡರರ್-ನಡಾಲ್ ಸರಿಗಟ್ಟಿದ ನೊವಾಕ್
ಆರನೇ ಬಾರಿಗೆ ವಿಂಬಲ್ಡನ್ ಗೆದ್ದ ಜೊಕೊವಿಕ್
Follow us
TV9 Web
| Updated By: ಪೃಥ್ವಿಶಂಕರ

Updated on:Jul 11, 2021 | 10:32 PM

ನೊವಾಕ್ ಜೊಕೊವಿಕ್ ವಿಂಬಲ್ಡನ್ 2021 ಗೆದ್ದಿದ್ದಾರೆ. ಫೈನಲ್‌ನಲ್ಲಿ ಇಟಲಿಯ ಮ್ಯಾಟಿಯೊ ಬೆರೆಟ್ಟಿನಿಯನ್ನು 6-7, 6-4, 6-4, 6-3 ಸೆಟ್‌ಗಳಿಂದ ಸೋಲಿಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. ಈ ವಿಜಯದೊಂದಿಗೆ ನೊವಾಕ್ ಜೊಕೊವಿಕ್ ಇತಿಹಾಸವನ್ನು ಸೃಷ್ಟಿಸಿದ್ದಾರೆ. ಪುರುಷರ ವಿಭಾಗದಲ್ಲಿ ಹೆಚ್ಚು ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಗಳನ್ನು ಗೆಲ್ಲುವಲ್ಲಿ ಅವರು ಜಂಟಿ ನಂಬರ್ ಒನ್ ಆಗಿದ್ದಾರೆ. ಈಗ ರೋಜರ್ ಫೆಡರರ್ ಮತ್ತು ರಾಫೆಲ್ ನಡಾಲ್ ಅವರಂತೆ, ಅವರ ಹೆಸರಿಗೆ 20 ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಗಳು ಸೇರಿವೆ. ಜೊಕೊವಿಕ್ ಈ ಮೊದಲು ಫ್ರೆಂಚ್ ಓಪನ್ ಗೆದ್ದಿದ್ದರು. ಫೈನಲ್‌ನಲ್ಲಿ ಸೋಲಿನೊಂದಿಗೆ, ಇಟಲಿಯ ಮ್ಯಾಟಿಯೊ ಬೆರೆಟ್ಟಿನಿ ಮೊದಲ ಬಾರಿಗೆ ಪ್ರಶಸ್ತಿಯನ್ನು ಗೆಲ್ಲುವ ಅವಕಾಶವನ್ನು ಕಳೆದುಕೊಂಡರು. ಬೆರೆಟ್ಟಿನಿ ಮೊದಲ ಬಾರಿಗೆ ವಿಂಬಲ್ಡನ್ ಫೈನಲ್ ತಲುಪಿದರು. ಟೈಬ್ರೇಕರ್​ನಲ್ಲಿ ಮೊದಲ ಸೆಟ್ ಅನ್ನು ಕಳೆದುಕೊಂಡ ನಂತರ, ಜೊಕೊವಿಕ್ ಭವ್ಯವಾದ ಪುನರಾಗಮನವನ್ನು ಮಾಡಿದರು ಮತ್ತು ಮುಂದಿನ ಮೂರು ಸೆಟ್ಗಳಲ್ಲಿ ಬೆರೆಟ್ಟಿನಿಗೆ ಗೆಲ್ಲುವ ಅವಕಾಶ ಕೂಡ ನೀಡಲಿಲ್ಲ.

ಜೊಕೊವಿಕ್​ಗೆ ಸುವರ್ಣಾವಕಾಶ ಈಗ ನೊವಾಕ್ ಜೊಕೊವಿಕ್ ಪುರುಷರ ವಿಭಾಗದಲ್ಲಿ ಹೆಚ್ಚಿನ ಗ್ರ್ಯಾಂಡ್ ಸ್ಲ್ಯಾಮ್ ಗೆದ್ದ ದಾಖಲೆಯನ್ನು ಸೃಷ್ಟಿಸುವ ಸುವರ್ಣಾವಕಾಶವನ್ನು ಹೊಂದಿದ್ದಾರೆ. ಯುಎಸ್ ಓಪನ್ ಗೆಲ್ಲುವ ಮೂಲಕ ಅವರು ಈ ಅದ್ಭುತವನ್ನು ಮಾಡಬಹುದು. ಇಲ್ಲಿ ನಡಾಲ್ ಮತ್ತು ಫೆಡರರ್‌ ಅವರ ಸವಾಲು ಎದುರಾದರೂ ಇಬ್ಬರೂ ಫಿಟ್‌ನೆಸ್ ಮತ್ತು ವಯಸ್ಸಿಗೆ ಸಂಬಂಧಿಸಿದ ಸಮಸ್ಯೆಗಳೊಂದಿಗೆ ಹೋರಾಡುತ್ತಿದ್ದಾರೆ. 34 ವರ್ಷದ ನೊವಾಕ್ ಜೊಕೊವಿಕ್​ಗೆ ಅಂತಹ ಯಾವುದೇ ಸಮಸ್ಯೆ ಇಲ್ಲ. ಜೊತೆಗೆ ಅವರು ಈಗಿರುವ ಫಾರ್ಮ್​ ಅನ್ನು ಗಮನಿಸಿದರೆ ಯಾರೂ ಕೂಡ ಅವರ ಮುಂದೆ ಗೆಲ್ಲುವುದು ತುಂಬಾ ಕಷ್ಟದ ವಿಚಾರವಾಗಿದೆ.

12 ಗ್ರ್ಯಾಂಡ್ ಸ್ಲ್ಯಾಮ್‌ಗಳಲ್ಲಿ ಎಂಟರಲ್ಲಿ ಗೆದ್ದಿರುವ ಜೊಕೊವಿಕ್ 2018 ರಿಂದ, ನೊವಾಕ್ ಜೊಕೊವಿಕ್ ಮಾತ್ರ ಗ್ರ್ಯಾಂಡ್ ಸ್ಲ್ಯಾಮ್ನಲ್ಲಿ ಅದ್ಭುತ ಆಟ ಆಡುತ್ತಿದ್ದಾರೆ. ಅವರು ಕಳೆದ 12 ಗ್ರ್ಯಾಂಡ್ ಸ್ಲ್ಯಾಮ್‌ಗಳಲ್ಲಿ ಎಂಟನ್ನು ತಮ್ಮ ಬುಟ್ಟಿಗೆ ಹಾಕಿಕೊಂಡಿದ್ದಾರೆ. ರಾಫೆಲ್ ನಡಾಲ್ ನಾಲ್ಕು ಮತ್ತು ರೋಜರ್ ಫೆಡರರ್ ಮತ್ತು ಡೊಮಿನಿಕ್ ಥೀಮ್ ತಲಾ ಒಂದು ಗ್ರ್ಯಾಂಡ್ ಸ್ಲ್ಯಾಮ್ ಗೆದ್ದಿದ್ದಾರೆ. ಫೆಡರರ್ ಕೊನೆಯ ಬಾರಿಗೆ 2018 ರಲ್ಲಿ ನಡೆದ ಆಸ್ಟ್ರೇಲಿಯನ್ ಓಪನ್‌ನಲ್ಲಿ ಗೆದ್ದರೆ, ನಡಾಲ್ ಕೊನೆಯದಾಗಿ 2020 ರ ಫ್ರೆಂಚ್ ಓಪನ್‌ನಲ್ಲಿ ಗೆದ್ದರು.

Published On - 10:21 pm, Sun, 11 July 21

ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್
ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್
ಬಿಜೆಪಿ ಸೋಲಿಗೆ ಯತ್ನಾಳ್​ನ ಹರಕು ಬಾಯಿ ಕಾರಣ: ರೇಣುಕಾಚಾರ್ಯ ವಾಗ್ದಾಳಿ
ಬಿಜೆಪಿ ಸೋಲಿಗೆ ಯತ್ನಾಳ್​ನ ಹರಕು ಬಾಯಿ ಕಾರಣ: ರೇಣುಕಾಚಾರ್ಯ ವಾಗ್ದಾಳಿ
ಸುದೀಪ್​ ಹೇಳಿದ ಒಂದೇ ಮಾತಿಗೆ ಉಗ್ರಂ ಮಂಜು, ಗೌತಮಿ ನಡುವಿನ ಸ್ನೇಹ ಕಟ್
ಸುದೀಪ್​ ಹೇಳಿದ ಒಂದೇ ಮಾತಿಗೆ ಉಗ್ರಂ ಮಂಜು, ಗೌತಮಿ ನಡುವಿನ ಸ್ನೇಹ ಕಟ್
ಅಂಬರೀಶ್ ಪುಣ್ಯಸ್ಮರಣೆ, ಸಮಾಧಿಗೆ ಪೂಜೆ ಮಾಡಿದ ಸುಮಲತಾ ಅಂಬರೀಶ್
ಅಂಬರೀಶ್ ಪುಣ್ಯಸ್ಮರಣೆ, ಸಮಾಧಿಗೆ ಪೂಜೆ ಮಾಡಿದ ಸುಮಲತಾ ಅಂಬರೀಶ್
ಮೊಮ್ಮಗ ನಿಖಿಲ್ ಸೋಲಿನ ಬಗ್ಗೆ ದೇವೇಗೌಡರ ಮೊದಲ ಪ್ರತಿಕ್ರಿಯೆ ಹೇಗಿತ್ತು ನೋಡಿ
ಮೊಮ್ಮಗ ನಿಖಿಲ್ ಸೋಲಿನ ಬಗ್ಗೆ ದೇವೇಗೌಡರ ಮೊದಲ ಪ್ರತಿಕ್ರಿಯೆ ಹೇಗಿತ್ತು ನೋಡಿ
ಸಮುದ್ರಕ್ಕೆ ಹಾರಿದ ಯುವತಿ, ರೋಚಕ ರಕ್ಷಣಾ ಕಾರ್ಯಾಚರಣೆ ಹೀಗಿತ್ತು ನೋಡಿ
ಸಮುದ್ರಕ್ಕೆ ಹಾರಿದ ಯುವತಿ, ರೋಚಕ ರಕ್ಷಣಾ ಕಾರ್ಯಾಚರಣೆ ಹೀಗಿತ್ತು ನೋಡಿ
ನಾಥನ್ ಲಿಯಾನ್ ಹೆಣೆದ ಬಲೆಗೆ ಬಿದ್ದ ರಿಷಭ್ ಪಂತ್
ನಾಥನ್ ಲಿಯಾನ್ ಹೆಣೆದ ಬಲೆಗೆ ಬಿದ್ದ ರಿಷಭ್ ಪಂತ್
ಆಸ್ಟ್ರೇಲಿಯಾ ಪಾಲಿಗೆ ದುಬಾರಿಯಾದ ಖ್ವಾಜಾ ಕೈಬಿಟ್ಟ ಕ್ಯಾಚ್
ಆಸ್ಟ್ರೇಲಿಯಾ ಪಾಲಿಗೆ ದುಬಾರಿಯಾದ ಖ್ವಾಜಾ ಕೈಬಿಟ್ಟ ಕ್ಯಾಚ್
ಮಹಾರಾಷ್ಟ್ರ: ಸ್ವತಂತ್ರ ಅಭ್ಯರ್ಥಿಯ ವಿಜಯೋತ್ಸವದ ವೇಳೆ ಅಗ್ನಿ ಅವಘಡ
ಮಹಾರಾಷ್ಟ್ರ: ಸ್ವತಂತ್ರ ಅಭ್ಯರ್ಥಿಯ ವಿಜಯೋತ್ಸವದ ವೇಳೆ ಅಗ್ನಿ ಅವಘಡ
ಸಂಭಾಲ್ ಜಾಮಾ ಮಸೀದಿ ಸಮೀಕ್ಷೆ ವೇಳೆ ಕಲ್ಲು ತೂರಾಟ
ಸಂಭಾಲ್ ಜಾಮಾ ಮಸೀದಿ ಸಮೀಕ್ಷೆ ವೇಳೆ ಕಲ್ಲು ತೂರಾಟ