ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ಅರುಣ್ ಜೇಟ್ಲಿ ಪ್ರತಿಮೆ; ಸ್ಪಿನ್ ಮಾಂತ್ರಿಕ ಬಿಶನ್ ಸಿಂಗ್ ಬೇಡಿಗೆ ಬೇಸರ, ಕಾರಣವೇನು?

|

Updated on: Dec 23, 2020 | 1:39 PM

ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಅಸೋಸಿಯೇಷನ್‌ನ (ಡಿಡಿಸಿಎ) ಸಂಸ್ಕೃತಿಯನ್ನು ಖಂಡಿಸಿರುವ ಬಿಶನ್ ಸಿಂಗ್ ಬೇಡಿ, ಡಿಡಿಸಿಎ ಸ್ವಜನಪಕ್ಷಪಾತವನ್ನು ಉತ್ತೇಜಿಸುತ್ತಿದೆ ಜೊತೆಗೆ ನಿರ್ವಾಹಕರನ್ನು ಕ್ರಿಕೆಟಿಗರಿಗಿಂತ ಮುಂದಿಡುತ್ತಿದೆ ಎಂದು ಆರೋಪಿಸಿದ್ದಾರೆ.

ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ಅರುಣ್ ಜೇಟ್ಲಿ ಪ್ರತಿಮೆ; ಸ್ಪಿನ್ ಮಾಂತ್ರಿಕ ಬಿಶನ್ ಸಿಂಗ್ ಬೇಡಿಗೆ ಬೇಸರ, ಕಾರಣವೇನು?
ಬಿಶನ್ ಸಿಂಗ್ ಬೇಡಿ ಮತ್ತು ಅರುಣ್ ಜೇಟ್ಲಿ
Follow us on

ನವದೆಹಲಿ: ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ದಿವಂಗತ ಮಾಜಿ ಅಧ್ಯಕ್ಷ ಅರುಣ್ ಜೇಟ್ಲಿಯ ಪ್ರತಿಮೆ ಸ್ಥಾಪನೆಗೆ ಡಿಡಿಸಿಎ ವಿರುದ್ಧ ಸ್ಪಿನ್ ದಂತಕಥೆ ಬಿಶನ್ ಸಿಂಗ್ ಬೇಡಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ.. ಕೋಟ್ಲಾ ಮೈದಾನದಲ್ಲಿ 2017 ರಲ್ಲಿ ಪ್ರೇಕ್ಷಕರ ಸ್ಟಾಂಡ್​ಗೆ ತಮ್ಮ ಹೆಸರಿಡಲಾಗಿದ್ದು, ಅದನ್ನು ತೆಗೆದುಹಾಕುವಂತೆ ಸೂಚಿಸಿದ್ದಾರೆ.

DDCA ಸದಸ್ಯತ್ವವನ್ನೂ ತ್ಯಜಿಸುವೆ ಬಿಡಿ ಎಂದ ಬೇಡಿ
ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಅಸೋಸಿಯೇಷನ್‌ನ (ಡಿಡಿಸಿಎ) ಸಂಸ್ಕೃತಿಯನ್ನು ಖಂಡಿಸಿರುವ ಬಿಶನ್ ಸಿಂಗ್ ಬೇಡಿ, ಡಿಡಿಸಿಎ ಸ್ವಜನ ಪಕ್ಷಪಾತವನ್ನು ಉತ್ತೇಜಿಸುತ್ತಿದೆ. ಜೊತೆಗೆ ಆಡಳಿತ ನಿರ್ವಾಹಕರನ್ನು ಆಟಗಾರರಿಗಿಂತ ಹೆಚ್ಚು ಎಂದು ಬಿಂಬಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಅಲ್ಲದೆ, ನನ್ನ ಡಿಡಿಸಿಎ ಸದಸ್ಯತ್ವವನ್ನೂ ನಾನು ತ್ಯಜಿಸುತ್ತೇನೆ ಎಂದು ಬೇಡಿ ತಮ್ಮ ಪತ್ರದಲ್ಲಿ ಬರೆದಿದ್ದಾರೆ.

ತಾನು ಎಂದಿಗೂ ಅರುಣ್ ಜೇಟ್ಲಿ ಕಾರ್ಯಶೈಲಿಯ ಅಭಿಮಾನಿಯಲ್ಲ
ಬೇಡಿ ಇನ್ನೂ ಮುಂದುವರೆದು, ತನ್ನ ನಿರ್ಧಾರವನ್ನು ಸಂದರ್ಭಕ್ಕೆ ತಕ್ಕಂತೆ ಹೇಳುವುದಾದರೆ.. ತಾನು ಎಂದಿಗೂ ಅರುಣ್ ಜೇಟ್ಲಿ ಕಾರ್ಯಶೈಲಿಯ ಅಭಿಮಾನಿಯಲ್ಲ ಮತ್ತು ನನಗೆ ಒಪ್ಪದ ಯಾವುದೇ ನಿರ್ಧಾರವನ್ನು ನಾನು ಯಾವಾಗಲೂ ವಿರೋಧಿಸುತ್ತೇನೆ ಎಂದಿದ್ದಾರೆ.

ದಿವಂಗತ ಅರುಣ್ ಜೇಟ್ಲಿ 1999 ರಿಂದ 2013 ರವರೆಗೆ ಅಂದರೆ 14 ವರ್ಷಗಳ ಕಾಲ ಡಿಡಿಸಿಎ ಅಧ್ಯಕ್ಷರಾಗಿದ್ದರು. ಅವರ ಸ್ಮರಣೆಯನ್ನು ಗೌರವಿಸಲು ಕೋಟ್ಲಾದಲ್ಲಿ ಆರು ಅಡಿ ಪ್ರತಿಮೆಯನ್ನು ಸ್ಥಾಪಿಸಲು ಡಿಡಿಸಿಎ ಯೋಜಿಸಿದೆ. ಈ ತೀರ್ಮಾನದಿಂದ ಕೋಪಗೊಂಡಿರುವ ಬಿಶನ್ ಸಿಂಗ್ ಬೇಡಿ ಪ್ರೇಕ್ಷಕರ ಗ್ಯಾಲರಿಯಲ್ಲಿರುವ ತಮ್ಮ ಹೆಸರನ್ನು ತೆಗೆಯುವಂತೆ ಡಿಡಿಸಿಎಗೆ ಇದೀಗ ಮನವಿ ಮಾಡಿದ್ದಾರೆ.

ಅರುಣ್ ಜೇಟ್ಲಿ ಮೈದಾನ ಉದಯ, ಭಾವುಕ ಪತ್ನಿ ಕಣ್ಣೀರು

ಫಿರೋಜ್ ಷಾ ಕೋಟ್ಲಾ ಇನ್ನು ಅರುಣ್ ಜೇಟ್ಲಿ ಸ್ಟೇಡಿಯಂ