AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಲ್ಲಿಕಟ್ಟು ಆಯೋಜನೆಗೆ ಅನುಮತಿ ನೀಡಿದ ತಮಿಳುನಾಡು ಸರ್ಕಾರ; ಸ್ಪರ್ಧಿಗಳಿಗೆ ಕೊರೊನಾ ನೆಗೆಟಿವ್ ಪತ್ರ ಕಡ್ಡಾಯ

ಕೊವಿಡ್-19 ನಿಯಮಾವಳಿಯಂತೆ ಜಲ್ಲಿಕಟ್ಟು ನಡೆಯುವ ಸ್ಥಳದಲ್ಲಿ 150 ಸ್ಪರ್ಧಾಳುಗಳು ಭಾಗವಹಿಸಬಹುದಾಗಿದೆ. ಅವರೆಲ್ಲರೂ ಕೊರೊನಾ ನೆಗೆಟಿವ್ ವರದಿ ಪ್ರಮಾಣ ಪತ್ರ ಹೊಂದಿರಬೇಕಿದೆ.

ಜಲ್ಲಿಕಟ್ಟು ಆಯೋಜನೆಗೆ ಅನುಮತಿ ನೀಡಿದ ತಮಿಳುನಾಡು ಸರ್ಕಾರ; ಸ್ಪರ್ಧಿಗಳಿಗೆ ಕೊರೊನಾ ನೆಗೆಟಿವ್ ಪತ್ರ ಕಡ್ಡಾಯ
ಜಲ್ಲಿಕಟ್ಟು (ಸಂಗ್ರಹ ಚಿತ್ರ)
Follow us
TV9 Web
| Updated By: ganapathi bhat

Updated on:Apr 06, 2022 | 11:23 PM

ಚೆನ್ನೈ: ಕೊವಿಡ್-19 ಪರಿಸ್ಥಿತಿ ಮಧ್ಯೆ ಜಲ್ಲಿಕಟ್ಟು ಜಾನಪದ ಕ್ರೀಡಾಕೂಟ ನಡೆಸಲು ತಮಿಳುನಾಡು ಸರ್ಕಾರ ಅನುಮತಿ ನೀಡಿದೆ. ಕೊರೊನಾ ಪರಿಸ್ಥಿತಿ ಬಿಗಡಾಯಿಸದಂತೆ ತಡೆಯಲು ಸೂಕ್ತ ನಿಬಂಧನೆಗಳನ್ನು ಹೇರಿಕೊಂಡು ಜಲ್ಲಿಕಟ್ಟು ಆಯೋಜಿಸಬೇಕು ಎಂದೂ ಸರ್ಕಾರ ಆದೇಶಿಸಿದೆ.

ಕೊವಿಡ್-19 ನಿಯಮಾವಳಿಯಂತೆ ಜಲ್ಲಿಕಟ್ಟು ನಡೆಯುವ ಸ್ಥಳದಲ್ಲಿ 150 ಸ್ಪರ್ಧಾಳುಗಳು ಭಾಗವಹಿಸಬಹುದಾಗಿದೆ. ಅವರೆಲ್ಲರೂ ಕೊರೊನಾ ನೆಗೆಟಿವ್ ವರದಿ ಪ್ರಮಾಣ ಪತ್ರ ಹೊಂದಿರಬೇಕಿದೆ. ಜಲ್ಲಿಕಟ್ಟು ನೋಡಲು ಬರುವ ಪ್ರೇಕ್ಷಕರಿಗೂ ನಿಬಂಧನೆಗಳನ್ನು ಹೇರಿರುವ ಸರ್ಕಾರ, ಮಾಮೂಲಿಯಂತೆ ಸೇರುತ್ತಿದ್ದ ಒಟ್ಟು ಜನರ ಪೈಕಿ ಅರ್ಧದಷ್ಟು ಮಂದಿ ಮಾತ್ರ ಈ ವರ್ಷ ಇರಬೇಕು ಎಂದು ಸೂಚನೆ ನೀಡಿದೆ.

ಜಲ್ಲಿಕಟ್ಟು ಸ್ಪರ್ಧೆಯನ್ನು ಸುಪ್ರೀಂಕೋರ್ಟ್ 2014ರಲ್ಲಿ ನಿಷೇಧಿಸಿತ್ತು. ಆದರೆ, ತಮಿಳುನಾಡು ರಾಜ್ಯ ಸರ್ಕಾರ, ಜಲ್ಲಿಕಟ್ಟು ಆಟವು ತಮ್ಮ ಸಂಸ್ಕೃತಿಯ ಅಸ್ಮಿತೆ ಎಂದು ಜಲ್ಲಿಕಟ್ಟು ಸ್ಪರ್ಧೆ ನಡೆಸುವುದನ್ನು ಸಮರ್ಥಿಸಿಕೊಂಡಿತ್ತು. ಚೆನ್ನೈ ಸೇರಿದಂತೆ ತಮಿಳುನಾಡು ರಾಜ್ಯದಾದ್ಯಂತ ಈ ಸಂಬಂಧ ಪ್ರತಿಭಟನೆಗಳು ನಡೆದಿದ್ದವು. ಬಳಿಕ, 2017ರಲ್ಲಿ ಜಲ್ಲಿಕಟ್ಟು ಮೇಲಿನ ನಿಷೇಧವನ್ನು ಹಿಂಪಡೆಯಲಾಗಿತ್ತು.

ಜಲ್ಲಿಕಟ್ಟು ಜಾನಪದ ಕ್ರೀಡಾಕೂಟವನ್ನು ತಮಿಳುನಾಡಿನಲ್ಲಿ ಪ್ರತಿವರ್ಷ ಪೊಂಗಲ್ ಸಂದರ್ಭ ಆಯೋಜಿಸಲಾಗುತ್ತದೆ. ಈ ಬಾರಿ, ಜನವರಿ 14ರಿಂದ 17ರವರೆಗೆ ಪೊಂಗಲ್ ಆಚರಣೆ ನಡೆಯಲಿದ್ದು ಅದೇ ಸಮಯದಲ್ಲಿ ಜಲ್ಲಿಕಟ್ಟು ಆಟವನ್ನೂ ಆಯೋಜಿಸಲಾಗುತ್ತದೆ. ಪೊಂಗಲ್​ಗೆ ಇನ್ನೇನು ಇಪ್ಪತ್ತು ದಿನಗಳು ಉಳಿದಿರುವಂತೆ ಸರ್ಕಾರ ಈ ಕ್ರಮ ಕೈಗೊಂಡಿದೆ.

ಚಿತ್ತೂರಿನಲ್ಲಿ ಜಲ್ಲಿಕಟ್ಟು ಸಂಭ್ರಮ, 10ಕ್ಕೂ ಹೆಚ್ಚು ಯುವಕರಿಗೆ ಗಾಯ

Published On - 4:41 pm, Wed, 23 December 20

ಬಸ್​ ನಿಲ್ಲಿಸಿ ನಮಾಜ್​ ಮಾಡಿದ ಕೆಎಸ್​ಆರ್​ಟಿಸಿ ಚಾಲಕ, ವಿಡಿಯೋ ವೈರಲ್
ಬಸ್​ ನಿಲ್ಲಿಸಿ ನಮಾಜ್​ ಮಾಡಿದ ಕೆಎಸ್​ಆರ್​ಟಿಸಿ ಚಾಲಕ, ವಿಡಿಯೋ ವೈರಲ್
‘ಕರುಣೆಯೇ ಬೇಡ ಹಿಡಿ, ಹೊಡಿ, ಕಡಿ ಅಷ್ಟೇ ಬೇಕಿರೋದು’
‘ಕರುಣೆಯೇ ಬೇಡ ಹಿಡಿ, ಹೊಡಿ, ಕಡಿ ಅಷ್ಟೇ ಬೇಕಿರೋದು’
ಸೆಕೆಯಿಂದ ಕಂಗೆಟ್ಟಿದ್ದ ಬೆಂಗಳೂರಿಗರಿಗೆ ತಂಪೆರೆದ ಮಳೆರಾಯ
ಸೆಕೆಯಿಂದ ಕಂಗೆಟ್ಟಿದ್ದ ಬೆಂಗಳೂರಿಗರಿಗೆ ತಂಪೆರೆದ ಮಳೆರಾಯ
ಲಾಡ್ ಮತ್ತು ತಿಮ್ಮಾಪುರ ಮೈಲೇಜ್ ಗಿಟ್ಟಿಸುವ ಪ್ರಯತ್ನದಲ್ಲಿದ್ದಾರೆ: ಶಾಸಕ
ಲಾಡ್ ಮತ್ತು ತಿಮ್ಮಾಪುರ ಮೈಲೇಜ್ ಗಿಟ್ಟಿಸುವ ಪ್ರಯತ್ನದಲ್ಲಿದ್ದಾರೆ: ಶಾಸಕ
ರಾತ್ರಿ ಭರ್ಜರಿ ರಿಸೆಪ್ಷನ್, ಬೆಳಗ್ಗೆ ಮುಹೂರ್ತ ವೇಳೆ ತಾಳಿ ಕಟ್ಟಲ್ಲ ಎಂದ ವರ
ರಾತ್ರಿ ಭರ್ಜರಿ ರಿಸೆಪ್ಷನ್, ಬೆಳಗ್ಗೆ ಮುಹೂರ್ತ ವೇಳೆ ತಾಳಿ ಕಟ್ಟಲ್ಲ ಎಂದ ವರ
ಕಾಶಪ್ಪನವರ್ ಮತ್ತು ಯತ್ನಾಳ್ ಮಾತಿನಲ್ಲಿ ಭಾಷಾ ಮರ್ಯಾದೆ ಮೀರುತ್ತಿದ್ದಾರೆ
ಕಾಶಪ್ಪನವರ್ ಮತ್ತು ಯತ್ನಾಳ್ ಮಾತಿನಲ್ಲಿ ಭಾಷಾ ಮರ್ಯಾದೆ ಮೀರುತ್ತಿದ್ದಾರೆ
ಪೆಹಲ್ಗಾಮ್ ಉಗ್ರರ ದಾಳಿ: ಉತ್ತರ ಕನ್ನಡ ಪ್ರವಾಸಿ ಸ್ಥಳಗಳಲ್ಲಿ ಹೈಅಲರ್ಟ್​
ಪೆಹಲ್ಗಾಮ್ ಉಗ್ರರ ದಾಳಿ: ಉತ್ತರ ಕನ್ನಡ ಪ್ರವಾಸಿ ಸ್ಥಳಗಳಲ್ಲಿ ಹೈಅಲರ್ಟ್​
ಸೇನಾ ಭಾಷೆಯಲ್ಲಿ ಡಿ ಡೇ, ಎಚ್ ಫ್ಯಾಕ್ಟರ್ ಅಂದರೆ ಏನು? ಇಲ್ಲಿದೆ ನೋಡಿ
ಸೇನಾ ಭಾಷೆಯಲ್ಲಿ ಡಿ ಡೇ, ಎಚ್ ಫ್ಯಾಕ್ಟರ್ ಅಂದರೆ ಏನು? ಇಲ್ಲಿದೆ ನೋಡಿ
ಡಿ ಡೇ ಮತ್ತು ಹೆಚ್ ಫ್ಯಾಕ್ಟರ್ ಪದಗಳ ವಿವರಣೆ ನೀಡಿದ ಕರ್ನಲ್ ಹರಿ
ಡಿ ಡೇ ಮತ್ತು ಹೆಚ್ ಫ್ಯಾಕ್ಟರ್ ಪದಗಳ ವಿವರಣೆ ನೀಡಿದ ಕರ್ನಲ್ ಹರಿ
ಪಾಕಿಸ್ತಾನದ ಆರ್ಥಿಕ ಪರಿಸ್ಥಿತಿ ಹೇಗಿದೆ? ಪಾಕ್ ಪತ್ರಕರ್ತ ಹೇಳಿದ್ದೇನು?
ಪಾಕಿಸ್ತಾನದ ಆರ್ಥಿಕ ಪರಿಸ್ಥಿತಿ ಹೇಗಿದೆ? ಪಾಕ್ ಪತ್ರಕರ್ತ ಹೇಳಿದ್ದೇನು?