ಹಾಗಂತ, ಆಸ್ಟ್ರೇಲಿಯಾದ ಸ್ಟಾರ್ ಬ್ಯಾಟ್ಸ್ಮನ್ ಸ್ಟಿವೆನ್ ಸ್ಮಿತ್ ನೇತೃತ್ವದ ರಾಜಸ್ತಾನ ತಂಡ ದುರ್ಬಲವೇನೂ ಅಲ್ಲ. ಅದು ನಿಸ್ಸಂಶಯವಾಗಿ ಅತ್ಯಂತ ಸಮತೋಲನದಿಂದ ಕೂಡಿದ ತಂಡವಾಗಿದೆ. ಆದರೆ, ಅದರ ಇಬ್ಬರು ಪ್ರಮುಖ ಆಟಗಾರರಾಗಿರುವ ಬೆನ್ ಸ್ಟೋಕ್ಸ್ ಮತ್ತು ಜೊಸ್ ಬಟ್ಲರ್ ಇಂದಿನ ಪಂದ್ಯದಲ್ಲಿ ಆಡುವುದಿಲ್ಲವಾದ್ದರಿಂದ ಬ್ಯಾಲೆನ್ಸ್ ಕೊಂಚ ಏರುಪೇರಾಗಬಹುದು. ತಂದೆಯ ಅನಾರೋಗ್ಯದ ನಿಮಿತ್ತ ಸ್ಟೋಕ್ಸ್ ನ್ಯೂಜಿಲೆಂಡ್ಗೆ ಹೋಗಿದ್ದರೆ, ಬಟ್ಲರ್ ಅವರ ಕ್ವಾರಂಟೈನ್ ಅವಧಿ ಇನ್ನೂ ಪೂರ್ಣಗೊಂಡಿಲ್ಲ.
ಅಂಡರ್-19 ವಿಶ್ವಕಪ್-2020ನಲ್ಲಿ ಅಪ್ರತಿಮ ಬ್ಯಾಟಿಂಗ್ ಪ್ರದರ್ಶನ ನೀಡಿ ಭಾರತಕ್ಕೆ ಹಲವು ಪಂದ್ಯಗಳನ್ನು ಗೆದ್ದುಕೊಟ್ಟ ಪಾನಿ ಪೂರಿ ಹುಡುಗ ಯಶಸ್ವೀ ಜೈಸ್ವಾಲ್ ರಾಜಸ್ತಾನ ತಂಡದ ಪರ ಇನ್ನಿಂಗ್ಸ್ ಆರಂಭಿಸುವ ಸಾಧ್ಯತೆಯಿದೆ. ಜೈಸ್ವಾಲ್ ಬಗ್ಗೆ ಬಹಳ ಮಾತುಗಳು ಕೇಳಿಬರುತ್ತಿವೆ. ಅವರು ಭವಿಷ್ಯದ ಸ್ಟಾರ್ ಮತ್ತು ಟೀಮ್ ಇಂಡಿಯಾಗೆ ಬಹಳ ವರ್ಷಗಳವರೆಗೆ ಆಡಲಿದ್ದಾರೆ ಅಂತ ಕ್ರಿಕೆಟ್ ಪರಿಣಿತರು ಹಾಗೂ ಕೆಲ ಮಾಜಿ ಆಟಗಾರರು ಅಭಿಪ್ರಾಯಪಟ್ಟಿದ್ದಾರೆ. ಕನ್ನಡಿಗ ರಾಬಿನ್
ಅವರ ನಂತರ ಭಾರಿ ಹೊಡೆತಗಳನ್ನು ಆಡುವ ಡೇವಿಡ್ ಮಿಲ್ಲರ್ ಕಣಕ್ಕಿಳಿಯುವ ಸಾಧ್ಯತೆಯಿದೆ. 2018 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಆಡಿದ್ದ ಮನನ್ ವೊಹ್ರಾ ಉತ್ತಮ ಬ್ಯಾಟ್ಸ್ಮನ್. ಯುವ ಆಟಗಾರ ರಿಯಾನ್ ಪರಾಗ್ ಮೇಲೂ ಭಾರಿ ಭರವಸೆ ಇಡಲಾಗಿದೆ. ರಾಜಸ್ತಾನ ತಂಡದ ಬ್ಯಾಟಿಂಗ್ ಹೀಗಿರಬೇಕಾದರೆ ಸ್ಟೋಕ್ಸ್ ಮತ್ತು ಬಟ್ಲರ್ ಟೀಮಿಗೆ ವಾಪಸ್ಸಾದಾಗ ಅದು ಮತ್ತಷ್ಟು ಬಲಿಷ್ಠವಾಗಲಿದೆ. ವೇಗದ ಬೌಲರ್ ಟಾಮ್ ಕರನ್ (ಸ್ಯಾಮ್ ಕರನ್ ಅವರ ಸಹೋದರ) ಉಪಯುಕ್ತ ಬ್ಯಾಟ್ಸ್ಮನ್ ಕೂಡ ಆಗಿರುವುದರಿಂದ ಅವರನ್ನು ಆಡಿಸಿದರೆ ಟೀಮಿನ ಬ್ಯಾಲೆನ್ಸ್ ಅದ್ಭುತವಾಗಿರುತ್ತದೆ. ತಂಡದಲ್ಲಿರುವ ಮತ್ತೊಬ್ಬ ಕನ್ನಡಿಗ ಶ್ರೇಯಸ್ ಗೋಪಾಲ್ ಬೇಸಿಕಲ್ಲೀ ಸ್ಪಿನ್ ಬೌಲರ್ ಆದರೂ ಬ್ಯಾಟಿಂಗ್ನಲ್ಲಿ ಸಹ ಕೆಲವು ಸಲ ಮಿಂಚಿದ್ದಾರೆ.
ಜೊಫ್ರಾ ಆರ್ಚರ್, ಌಂಡ್ರ್ಯೂ ಟೈ, ಜಯದೇವ್ ಉನಾಡ್ಕಟ್, ಕರನ್, ಕಾರ್ತಿಕ್ ತ್ಯಾಗಿ, ಅಂಕಿತ್ ರಜಪೂತ್, ಒಷೇನ್ ಥಾಮಸ್ ಅವರನ್ನೊಳಗೊಂಡ ರಾಜಸ್ತಾನ್ನ ವೇಗದ ಬೌಲಿಂಗ್ ಇಲಾಖೆ ಸಧೃಡವಾಗಿದೆ. ಆದರೆ ಗೋಪಾಲ್ ಮತ್ತು ಮಾಯಾಂಕ್ ಮಾರ್ಕಂಡೆ ಅವರನ್ನು ಬಿಟ್ಟರೆ ತಂಡದಲ್ಲಿ ಭಯ ಹುಟ್ಟಿಸುವ ಸ್ಪಿನ್ನರ್ಗಳಿಲ್ಲ. ಬೌಲಿಂಗ್ ವಿಭಾಗಕ್ಕೆ ಯಾಱರನ್ನು ಆರಿಸುತ್ತಾರೆ ಎನ್ನುವುದು ಕುತೂಹಲಕಾರಿಯಾಗಿದೆ.
ಮತ್ತೊಂದೆಡೆ ಮುಂಬೈ ವಿರುದ್ಧ ಗೆದ್ದ ಟೀಮಿನಲ್ಲಿ ಸಿಎಸ್ಕೆ ಥಿಂಕ್ಟ್ಯಾಂಕ್ ಪ್ರಾಯಶಃ ಹೆಚ್ಚು ಬದಲಾವಣೆಗಳನ್ನು ಮಾಡಲಿಕ್ಕಿಲ್ಲ. ಮುರಳಿ ವಿಜಯ್ ಸ್ಥಾನಕ್ಕೆ ಫಿಟ್ ಆಗಿರುವ ಋತುರಾಜ ಗಾಯಕ್ವಾಡ್ ಅವರನ್ನು ಆಡಿಸಬಹುದು. ಸುರೇಶ್ ರೈನಾ ಅವರ ಅನುಪಸ್ಥಿತಿಯನ್ನು ಟೀಮು ಅನುಭವಿಸುತ್ತಿದೆಯಾದರೂ ಮೊದಲ ಪಂದ್ಯದಲ್ಲಿ ಉತ್ಕೃಷ್ಟ ಬ್ಯಾಟಿಂಗ್ ಪ್ರದರ್ಶನ ನೀಡಿದ ಅಂಬಟಿ ರಾಯುಡು ಅವರನ್ನು ಹೆಚ್ಚು ನೆಚ್ಚಿಕೊಂಡಿದೆ. ಮುಂಬೈ ವಿರುದ್ಧ ಅರ್ಧ ಶತಕ ಬಾರಿಸಿದ ಫಫ್ ಡು ಪ್ಲೆಸ್ಸಿ ಉತ್ತಮ ಫಾರ್ಮ್ನಲ್ಲಿದ್ದಾರೆ.
ನಾಯಕ ಧೋನಿ ಮೊದಲ ಪಂದ್ಯದಲ್ಲಿ ಬ್ಯಾಟಿಂಗ್ನಲ್ಲಿ ವಿಫಲರಾಗಿದ್ದರು. ಆದರೆ ಅವರನ್ನು ಟಿ20 ಆವೃತಿಯಲ್ಲಿ ಅವರನ್ನು ಕಟ್ಟಿ ಹಾಕುವುದು ಸಾಧ್ಯವಿಲ್ಲ. ಶೇನ್ ವ್ಯಾಟ್ಸನ್ ವಿಷಯದಲ್ಲೂ ಇದೇ ಮಾತನ್ನು ಹೇಳಬಹುದು. ಲುಂಗಿ ಎನ್ಗಿಡಿ, ಜೋಷ್ ಹೇಜಲ್ವುಡ್, ದೀಪಕ್ ಚಹರ್ ಮತ್ತು ಸ್ಯಾಮ್ ಕರನ್ ಅವರನ್ನೊಳಗೊಂಡಿರುವ ಸಿಎಸ್ಕೆ ವೇಗದ ಬೌಲಿಂಗ್ ಫಾರ್ಮೈಡೇಬಲ್ ಅಂತ ಹೇಳಿದರೂ ಅದು ಅಂಡರ್ಸ್ಟೇಟ್ಮೆಂಟ್ ಅನಿಸಿಕೊಳ್ಳುತ್ತದೆ. ಸ್ಪಿನ್ ವಿಭಾಗವನ್ನು ಪುನಃ ರವೀಂದ್ರ ಜಡೇಜಾ ಮತ್ತು ಪಿಯುಷ್ ಚಾವ್ಲಾ ನಿಭಾಯಿಸಬಹುದು.
ರಾಜಸ್ತಾನ ಮತ್ತು ಚೆನೈ ಸಮಬಲದ ತಂಡಗಳಾಗಿರುವುದರಿಂದ ಪಂದ್ಯ ಖಂಡಿತವಾಗಿಯೂ ರೋಚಕವಾಗಿರಲಿದೆ.