AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇವನು ಸಂಜು ಬಾಬಾ ಅಲ್ಲ ಸಂಜು ದಾದಾ!

ಸಂಜು ಸ್ಯಾಮ್ಸನ್​ರ ಸಿಡಿಲಬ್ಬರದ ಬ್ಯಾಟಿಂಗ್ ಮತ್ತು ರಾಹುಲ್ ತೆವಾಟಿಯಾರ ಸ್ಪಿನ್ ಮೋಡಿಯ ನೆರವಿನಿಂದ ರಾಜಸ್ತಾನ ರಾಯಲ್ಸ್ , ಇಂಡಿಯನ್ ಪ್ರಿಮೀಯರ್ ಲೀಗ್ 13ನೇ ಆವೃತಿಯ ತನ್ನ ಮೊದಲ ಪಂದ್ಯದಲ್ಲಿ ಕಳೆದ ಬಾರಿಯ ರನ್ನರ್ ಅಪ್ ಚೆನೈ ಸೂಪರ್ ಕಿಂಗ್ಸ್ ತಂಡವನ್ನು 16 ರನ್​ಗಳಿಂದ ಸುಲಭವಾಗಿ ಸೋಲಿಸಿತು. ಗೆಲ್ಲಲು 217ರನ್​ಗಳ ಬೃಹತ್ ಮೊತ್ತದ ಬೆನ್ನಟ್ಟಿದ ಚೆನೈ 200/6ಗಳಿಸುವಲ್ಲಿ ಮಾತ್ರಯಶ ಕಂಡಿತು. ಮೂರನೇ ಕ್ರಮಾಂಕದಲ್ಲಿ ಆಡಿದ ಫಫ್ ಡು ಪ್ಲೆಸ್ಸಿಸ್ ಅವರ ಶರವೇಗದ ಅರ್ಧ ಶತಕದ (72ರನ್, 37ಎಸೆತ 1X4 7X6) […]

ಇವನು ಸಂಜು ಬಾಬಾ ಅಲ್ಲ ಸಂಜು ದಾದಾ!
ಅರುಣ್​ ಕುಮಾರ್​ ಬೆಳ್ಳಿ
|

Updated on: Sep 22, 2020 | 11:46 PM

Share

ಸಂಜು ಸ್ಯಾಮ್ಸನ್​ರ ಸಿಡಿಲಬ್ಬರದ ಬ್ಯಾಟಿಂಗ್ ಮತ್ತು ರಾಹುಲ್ ತೆವಾಟಿಯಾರ ಸ್ಪಿನ್ ಮೋಡಿಯ ನೆರವಿನಿಂದ ರಾಜಸ್ತಾನ ರಾಯಲ್ಸ್ , ಇಂಡಿಯನ್ ಪ್ರಿಮೀಯರ್ ಲೀಗ್ 13ನೇ ಆವೃತಿಯ ತನ್ನ ಮೊದಲ ಪಂದ್ಯದಲ್ಲಿ ಕಳೆದ ಬಾರಿಯ ರನ್ನರ್ ಅಪ್ ಚೆನೈ ಸೂಪರ್ ಕಿಂಗ್ಸ್ ತಂಡವನ್ನು 16 ರನ್​ಗಳಿಂದ ಸುಲಭವಾಗಿ ಸೋಲಿಸಿತು.

ಗೆಲ್ಲಲು 217ರನ್​ಗಳ ಬೃಹತ್ ಮೊತ್ತದ ಬೆನ್ನಟ್ಟಿದ ಚೆನೈ 200/6ಗಳಿಸುವಲ್ಲಿ ಮಾತ್ರಯಶ ಕಂಡಿತು. ಮೂರನೇ ಕ್ರಮಾಂಕದಲ್ಲಿ ಆಡಿದ ಫಫ್ ಡು ಪ್ಲೆಸ್ಸಿಸ್ ಅವರ ಶರವೇಗದ ಅರ್ಧ ಶತಕದ (72ರನ್, 37ಎಸೆತ 1X4 7X6) ಹೊರತಾಗಿಯೂ ಪಂದ್ಯವನ್ನು ಸೋತಿತು. ಶೇನ್ ವಾಟ್ಸನ್ 33 (21 1X4 4X6), ಮುರಳಿ ವಿಜಯ್ 21 (21 3X4), ಕೇದಾರ್ ಜಾಧವ್ 22 (16 3X4) ರನ್​ಗಳ ಕಾಣಿಕೆ ನೀಡಿದರು. ಇನ್ನಿಂಗ್ಸ್ ಕೊನೆಯಲ್ಲಿ ನಾಯಕ ಎಮ್ ಎಸ್ ಧೋನಿ ಲಾಂಗ್ ಹ್ಯಾಂಡಲ್ ಉಪಯೋಗಿಸಿ ಅಜೇಯ 29 (17 3X6) ರನ್ ಬಾರಿಸಿದರಾದರೂ ಅದು ಸೋಲಿನ ಅಂತರವನ್ನು ಕಡಿಮೆ ಮಾಡುವಲ್ಲಿ ಮಾತ್ರ ನೆರವಾಯಿತು.

ರಾಜಸ್ತಾನದ ಪರ ತೆವಾಟಿಯಾ 37 ರನ್ ನೀಡಿ 3 ವಿಕೆಟ್ ಪಡೆದರೆ, ಜೊಫ್ರಾ ಆರ್ಚರ್, ಶ್ರೇಯಸ್ ಗೋಪಾಲ ಮತ್ತು ಟಾಮ್ ಕರನ್ ತಲಾ ಒಂದು ವಿಕೆಟ್ ಪಡೆದರು.

ಅಪಾರ ಪ್ರತಿಭಾವಂತನಾದರೂ ಸದಾ ರಾಷ್ಟ್ರೀಯ ಆಯ್ಕೆ ಸಮಿತಿಯ ಅವಕೃಪೆಗೊಳಗಾಗಿರುವ ಸಂಜು ಸ್ಯಾಮ್ಸನ್ ಇಂದು ತಮ್ಮ ಆಕ್ರಮಣಕಾರಿ ಬ್ಯಾಟಿಂಗ್ ಬಗ್ಗೆ ಮತ್ತೊಂದು ಸ್ಟೇಟ್​ಮೆಂಟ್ ಹೊರಡಿಸಿದರು. ಯುವ ಆಟಗಾರ ಯಶಸ್ವೀ ಜೈಸ್ವಾಲ್ ಔಟಾದ ನಂತರ ಕ್ರೀಸಿಗೆ ಆಗಮಿಸಿದ 25ರ ಪ್ರಾಯದ ಸ್ಯಾಮ್ಸನ್ ಕೇವಲ 19 ಎಸೆತಗಳಲ್ಲಿ ಅರ್ಧ ಶತಕ ಪೂರೈಸಿದರು. ಲೆಗ್ ಸ್ಪಿನ್ನರ್ ಪಿಯುಷ್ ಚಾವ್ಲಾ ಅವರ ಒಂದು ಓವರ್​ನಲ್ಲಿ ಸ್ಯಾಮ್ಸನ್ ಮತ್ತು ಸ್ಮಿತ್ 28 ರನ್​ಗಳನ್ನು ಚಚ್ಚಿದರು. ಬಿರುಗಾಳಿ ವೇಗದಲ್ಲಿ ಬ್ಯಾಟ್ ಮಾಡಿದ ಸ್ಯಾಮ್ಸನ್ 32 ಎಸೆತಗಳಲ್ಲಿ 74 ರನ್ ಬಾರಿಸಿ ಔಟಾಗುವ ಮುನ್ನ 9 ಬಾರಿ ಚೆಂಡನ್ನು ಬೌಂಡರಿ ಗೆರೆ ಮೇಲಿಂದ ಆಚೆ ಕಳಿಸಿದ್ದರು. ಅವರ ಇನ್ನಿಂಗ್ಸ್​ನಲ್ಲಿದ್ದಿದ್ದ್ದು ಕೇವಲ ಒಂದು ಬೌಂಡರಿ ಮಾತ್ರ. ಸ್ಯಾಮ್ಸನ್ ಅಕ್ಷರಶಃ ಸಿಎಸ್​ಕೆ ಬೌಲರ್​ಗಳ ಮಾರಣ ಹೋಮ ನಡೆಸಿದರು.

ಆಕ್ರಮಣಕಾರಿ ಮತ್ತು ಅಷ್ಟೇ ಸೆನ್ಸಿಬಲ್ ಆಟವಾಡಿದ ಸ್ಮಿತ್ 47 ಎಸೆತಗಳಲ್ಲಿ 69ರನ್ (4X4 4X6) ಬಾರಿಸಿದರು. ಸ್ಮಿತ್ ಮತ್ತು ಸ್ಯಾಮ್ಸನ್​ ಎರಡನೇ ವಿಕೆಟ್​ಗೆ ಕೇವಲ 9.2 ಓವರ್​ಗಳಲ್ಲಿ 121 ರನ್ ಸೇರಿಸಿದರು

ಇದು ಸಾಲದೆಂಬಂತೆ, ಇನ್ನಿಂಗ್ಸ್ ಕೊನೆಯ ಓವರ್​ನಲ್ಲಿ ಜೊಫ್ರಾ ಆರ್ಚರ್, ಎನ್ಗಿಡಿಯನ್ನು ಮನಬಂದಂತೆ ಚಚ್ಚಿದರು. ಆ ಓವರ್​ನಲ್ಲಿ ಎನ್ಗಿಡಿ ನೀಡಿದ್ದು; ಆರ್ಚರ್ ಬಾರಿಸಿದ ನಾಲ್ಕು ಸಿಕ್ಸ್​ರ್​ಗಳು ಸೇರಿದಂತೆ 30 ರನ್!

ಸಿಎಸ್​ಕೆ ಪರ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದ ಸ್ಯಾಮ್ ಕರನ್ 33 ರನ್ ನೀಡಿ 3 ವಿಕೆಟ್ ಪಡೆದರೆ, ದೀಪಕ್ ಚಹರ್, ಎನ್ಗಿಡಿ ಮತ್ತು ಚಾವ್ಲಾ ತಲಾ ಒಂದು ವಿಕೆಟ್ ಪಡೆದರು.