AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

UEFA Champions League Final: ಎರಡನೇ ಬಾರಿ ಚಾಂಪಿಯನ್ ಪಟ್ಟಕ್ಕೇರಿದ ಚೆಲ್ಸಿಯಾ.. ಸೋತ ಮ್ಯಾಂಚೆಸ್ಟರ್ ಸಿಟಿ

UEFA Champions League: ಇದಕ್ಕೂ ಮುನ್ನ 2012 ರಲ್ಲಿ ಚೆಲ್ಸಿಯಾ ಜರ್ಮನಿಯ ಬೇಯರ್ನ್ ಮ್ಯೂನಿಚ್ ತಂಡವನ್ನು ಸೋಲಿಸಿ ಚಾಂಪಿಯನ್ಸ್ ಲೀಗ್ ಗೆದ್ದಿತ್ತು. ಒಂಬತ್ತು ವರ್ಷಗಳ ನಂತರ, ಚೆಲ್ಸಿಯಾ ಮತ್ತೊಮ್ಮೆ ಫೈನಲ್ ಗೆದ್ದಿದೆ.

UEFA Champions League Final: ಎರಡನೇ ಬಾರಿ ಚಾಂಪಿಯನ್ ಪಟ್ಟಕ್ಕೇರಿದ ಚೆಲ್ಸಿಯಾ.. ಸೋತ ಮ್ಯಾಂಚೆಸ್ಟರ್ ಸಿಟಿ
ಚೆಲ್ಸಿಯಾ ತಂಡ
ಪೃಥ್ವಿಶಂಕರ
|

Updated on:May 30, 2021 | 8:17 PM

Share

ಚೆಲ್ಸಿಯಾ ಈ ವರ್ಷ ಚಾಂಪಿಯನ್ಸ್ ಲೀಗ್ ಗೆದ್ದಿದೆ. ಪ್ರಪಂಚದಾದ್ಯಂತದ ಲಕ್ಷಾಂತರ ಅಭಿಮಾನಿಗಳು ಪ್ರತಿವರ್ಷ ಈ ಸ್ಪರ್ಧೆಯನ್ನು ವಿಶ್ವದಾದ್ಯಂತದ ಅತ್ಯುತ್ತಮ ಕ್ಲಬ್‌ಗಳ ಭಾಗವಹಿಸುವಿಕೆಯೊಂದಿಗೆ ವೀಕ್ಷಿಸುತ್ತಾರೆ. ಚೆಲ್ಸಿಯಾ ಮತ್ತು ಮ್ಯಾಂಚೆಸ್ಟರ್ ಯುನೈಟೆಡ್ ಈ ವರ್ಷದ ಚಾಂಪಿಯನ್ಸ್ ಲೀಗ್ ಫೈನಲ್‌ನಲ್ಲಿ ಮುಖಾಮುಖಿಯಾಗಿದ್ದವು. ಈ ಬಾರಿ, ಚೆಲ್ಸಿಯಾ ಮಿಡ್‌ಫೀಲ್ಡರ್ ಕೈ ಹೋವಿಟ್ಜ್ ಗಳಿಸಿದ ಗೋಲಿನ ಸಹಾಯದಿಂದಾಗಿ ಚೆಲ್ಸಿಯಾ ಗೆಲುವು ಸಾಧಿಸಿದೆ.

ಇದಕ್ಕೂ ಮುನ್ನ 2012 ರಲ್ಲಿ ಚೆಲ್ಸಿಯಾ ಜರ್ಮನಿಯ ಬೇಯರ್ನ್ ಮ್ಯೂನಿಚ್ ತಂಡವನ್ನು ಸೋಲಿಸಿ ಚಾಂಪಿಯನ್ಸ್ ಲೀಗ್ ಗೆದ್ದಿತ್ತು. ಒಂಬತ್ತು ವರ್ಷಗಳ ನಂತರ, ಚೆಲ್ಸಿಯಾ ಮತ್ತೊಮ್ಮೆ ಫೈನಲ್ ಗೆದ್ದಿದೆ. ಮತ್ತೊಂದೆಡೆ, ಮ್ಯಾಂಚೆಸ್ಟರ್ ಸಿಟಿ ಎರಡನೇ ಬಾರಿಗೆ ಫೈನಲ್‌ನಲ್ಲಿ ಸೋತಿದೆ. ಈ ಗೆಲುವಿನೊಂದಿಗೆ, ಚೆಲ್ಸಿಯಾ ಇಂಗ್ಲಿಷ್ ಪ್ರೀಮಿಯರ್ ಲೀಗ್‌ನಲ್ಲಿ ಎರಡು ಬಾರಿ ಚಾಂಪಿಯನ್ಸ್ ಲೀಗ್ ಗೆದ್ದ ಮೂರನೇ ತಂಡವಾಯಿತು. ಲಿವರ್‌ಪೂಲ್ ಮತ್ತು ಮ್ಯಾಂಚೆಸ್ಟರ್ ಯುನೈಟೆಡ್ ಈ ಮೊದಲು ಎರಡು ಬಾರಿ ಚಾಂಪಿಯನ್ಸ್ ಲೀಗ್ ಗೆದ್ದಿದೆ.

ಕೊರೊನಾದಿಂದ ಸ್ಥಳ ಬದಲಾವಣೆ ಕೊರೊನಾದ ಪ್ರಭಾವವು ಹೆಚ್ಚುತ್ತಿರುವುದರಿಂದ ಚಾಂಪಿಯನ್ಸ್ ಲೀಗ್ ಫೈನಲ್‌ನ ಸ್ಥಳವನ್ನು ಬದಲಾಯಿಸಲಾಯಿತು. ಹೀಗಾಗಿ ಟರ್ಕಿಯ ರಾಜಧಾನಿ ಇಸ್ತಾಂಬುಲ್‌ನಲ್ಲಿ ಪೋರ್ಚುಗಲ್‌ನ ಪೋರ್ಟೊದಲ್ಲಿ ಪಂದ್ಯ ನಡೆಯಿತು.

ಪಂದ್ಯದ ರೋಚಕತೆ ಮ್ಯಾಂಚೆಸ್ಟರ್ ಸಿಟಿ ಮತ್ತು ಚೆಲ್ಸಿಯಾ ನಡುವಿನ ಪಂದ್ಯವು ಮೊದಲಿನಿಂದ ಕುತೂಹಲ ಹೆಚ್ಚಿಸಿತ್ತು. ವಿಶ್ವದ ಪ್ರಬಲ ಫುಟ್ಬಾಲ್ ಆಟಗಾರರ ಸೈನ್ಯವನ್ನು ಹೊಂದಿರುವ ಕಾರಣ ಎರಡೂ ತಂಡಗಳಿಗೆ ಸುಲಭವಾಗಿ ಸ್ಕೋರ್ ಮಾಡಲು ಸಾಧ್ಯವಾಗಲಿಲ್ಲ. ಏತನ್ಮಧ್ಯೆ, 42 ನೇ ನಿಮಿಷದಲ್ಲಿ, ಮಿಡ್‌ಫೀಲ್ಡರ್ ಕೈ ಹೋವಿಟ್ಜ್ ಚೆಲ್ಸಿಯಾದ ಮೇಸನ್ ಮೌಂಟ್‌ನ ಪಾಸ್‌ನಲ್ಲಿ ಗೋಲು ಗಳಿಸಿ ತಂಡಕ್ಕೆ 1-0 ಮುನ್ನಡೆ ನೀಡಿದರು. ಇಡೀ ಪಂದ್ಯ ಮುಗಿಯುವವರೆಗೂ ಉಭಯ ತಂಡಗಳಿಗೆ ಒಂದೇ ಗೋಲು ಗಳಿಸಲು ಸಾಧ್ಯವಾಗಲಿಲ್ಲ. ಹೆಚ್ಚುವರಿ 7 ನಿಮಿಷಗಳಲ್ಲಿ 1 ಗೋಲು ಗಳಿಸಿದ ನಂತರ ಚೆಲ್ಸಿಯಾವನ್ನು ವಿಜೇತರು ಎಂದು ಘೋಷಿಸಲಾಯಿತು.

Published On - 8:17 pm, Sun, 30 May 21

ಶಿವರಾಜಕುಮಾರ್ ಹಾಡಿಗೆ ಹೆಜ್ಜೆ ಹಾಕಿದ ಶಾಸಕ ಹೆಚ್.ಸಿ.ಬಾಲಕೃಷ್ಣ
ಶಿವರಾಜಕುಮಾರ್ ಹಾಡಿಗೆ ಹೆಜ್ಜೆ ಹಾಕಿದ ಶಾಸಕ ಹೆಚ್.ಸಿ.ಬಾಲಕೃಷ್ಣ
ಶಾಮನೂರು ಶಿವಶಂಕರಪ್ಪ ಅಂತ್ಯಸಂಸ್ಕಾರ ಹೇಗೆ ನಡೆಯಲಿದೆ? ಇಲ್ಲಿದೆ ಮಾಹಿತಿ
ಶಾಮನೂರು ಶಿವಶಂಕರಪ್ಪ ಅಂತ್ಯಸಂಸ್ಕಾರ ಹೇಗೆ ನಡೆಯಲಿದೆ? ಇಲ್ಲಿದೆ ಮಾಹಿತಿ
ನಾನು ಸಖತ್ ದುಬಾರಿ ಎಂದ ಕಿಚ್ಚ ಸುದೀಪ್; ಕಾರಣವೇನು?
ನಾನು ಸಖತ್ ದುಬಾರಿ ಎಂದ ಕಿಚ್ಚ ಸುದೀಪ್; ಕಾರಣವೇನು?
ಶಾಮನೂರು ಶಿವಶಂಕರಪ್ಪ ನಿಧನ: ಅಂತ್ಯ ಸಂಸ್ಕಾರದ ಲೈವ್​​ ವಿಡಿಯೋ
ಶಾಮನೂರು ಶಿವಶಂಕರಪ್ಪ ನಿಧನ: ಅಂತ್ಯ ಸಂಸ್ಕಾರದ ಲೈವ್​​ ವಿಡಿಯೋ
ಶಾಮನೂರು ನಿಧನ: ದೆಹಲಿಯಲ್ಲಿ ‘ಕೈ’ ಶಾಸಕರು, ಸಚಿವರು ವಿಮಾನದಲ್ಲಿ ಲಾಕ್
ಶಾಮನೂರು ನಿಧನ: ದೆಹಲಿಯಲ್ಲಿ ‘ಕೈ’ ಶಾಸಕರು, ಸಚಿವರು ವಿಮಾನದಲ್ಲಿ ಲಾಕ್
ಸಂಸತ್ ಮೇಲಿನ ದಾಳಿ, ಅಫ್ಜಲ್​ ಗುರು ನಿರಪರಾಧಿ ಎಂದ ಅರುಂಧತಿ ರಾಯ್
ಸಂಸತ್ ಮೇಲಿನ ದಾಳಿ, ಅಫ್ಜಲ್​ ಗುರು ನಿರಪರಾಧಿ ಎಂದ ಅರುಂಧತಿ ರಾಯ್
ರಸ್ತೆ ಮಾಡುವುದರಿಂದ ಬಡವರ ಜೀವನ ಉದ್ದಾರ ಆಗ್ತದಾ: ಪರಮೇಶ್ವರ್ ಪ್ರಶ್ನೆ
ರಸ್ತೆ ಮಾಡುವುದರಿಂದ ಬಡವರ ಜೀವನ ಉದ್ದಾರ ಆಗ್ತದಾ: ಪರಮೇಶ್ವರ್ ಪ್ರಶ್ನೆ
ಇಂಗ್ಲೆಂಡ್ ವರನ ಕೈ ಹಿಡಿದ ಬೇಲೂರಿನ ವಧು! ನಡೆಯಿತು ಅದ್ದೂರಿ ಮದುವೆ
ಇಂಗ್ಲೆಂಡ್ ವರನ ಕೈ ಹಿಡಿದ ಬೇಲೂರಿನ ವಧು! ನಡೆಯಿತು ಅದ್ದೂರಿ ಮದುವೆ
ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ