ಭಾರತವು ಈ ವರ್ಷ 44 ನೇ ಒಲಿಂಪಿಯಾಡ್ ಚೆಸ್ ಗೇಮ್ಗೆ (Chess Olympiad 2022) ಆತಿಥ್ಯವಹಿಸಲಿದ್ದು, ಇದು ಕ್ರೀಡಾ ಪ್ರೇಮಿಗಳಲ್ಲಿ ಸಂತಸದ ವಾತಾವರಣ ಮೂಡಿಸಿದೆ. ಈ ಬಗ್ಗೆ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ. ಭಾರತದ ಚೆಸ್ ರಾಜಧಾನಿ ಈ ವರ್ಷ 44 ನೇ ಒಲಿಂಪಿಯಾಡ್ ಚೆಸ್ ಪಂದ್ಯಾವಳಿಯನ್ನು ಆಯೋಜಿಸುತ್ತದೆ ಎಂದು ಘೋಷಿಸಲು ಸಂತೋಷವಾಗಿದೆ. ಇದು ತಮಿಳುನಾಡಿಗೆ ಹೆಮ್ಮೆಯ ವಿಚಾರ. ವಿಶ್ವದ ಪ್ರಮುಖ ಚೆಸ್ ಆಟಗಾರರಿಗೆ ಚೆನ್ನೈಗೆ ಸ್ವಾಗತ ಎಂದು ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ (CM MK Stalin) ತಮ್ಮ ಟ್ವೀಟ್‌ನಲ್ಲಿ ತಿಳಿಸಿದ್ದಾರೆ. ಅವರ ಹೇಳಿಕೆಯನ್ನು ಅಖಿಲ ಭಾರತ ಚೆಸ್ ಫೆಡರೇಶನ್ (ಎಐಸಿಎಫ್) ಸಹ ಖಚಿತಪಡಿಸಿದೆ. ಎಐಸಿಎಫ್ ಸಿದ್ಧತೆ ನಡೆಸುತ್ತಿದೆ ಎಂದು ಹೇಳಲಾಗಿದೆ. ಆದ್ದರಿಂದ, ಭಾರತ ಸೇರಿದಂತೆ ಪ್ರಪಂಚದಾದ್ಯಂತದ ಕ್ರೀಡಾ ಪ್ರೇಮಿಗಳ ಗಮನ ಈಗ ಈ ಸ್ಪರ್ಧೆಯ ಮೇಲೆ ಕೇಂದ್ರೀಕೃತವಾಗಿದೆ .
ಅಂತಿಮವಾಗಿ ಚೆನ್ನೈ ಸೀಲ್
44ನೇ ಒಲಿಂಪಿಯಾಡ್ ಚೆಸ್ ಟೂರ್ನಿ ಜುಲೈ 26ರಿಂದ ಆಗಸ್ಟ್ 8ರವರೆಗೆ ರಷ್ಯಾದ ಮಾಸ್ಕೋದಲ್ಲಿ ನಡೆಯಬೇಕಿತ್ತು. ಆದರೆ ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದಿಂದಾಗಿ ಭಾರತದ ರಾಜಧಾನಿ ದೆಹಲಿ, ಗುಜರಾತ್ ಮತ್ತು ಚೆನ್ನೈ, ಈ 3 ನಗರಗಳಲ್ಲಿ ಯಾವುದಾದರೂ ಒಂದು ನಗರದಲ್ಲಿ ಒಲಿಂಪಿಯಾಡ್ ನಡೆಸಲು ಚರ್ಚೆ ಆರಂಭವಾಗಿತ್ತು. ಹೀಗಾಗಿ ಭಾರತೀಯ ಚೆಸ್ ಫೆಡರೇಶನ್‌ನ ಪ್ರಧಾನ ಕಾರ್ಯದರ್ಶಿ ಭರತ್ ಸಿಂಗ್ ಚೌಹಾಣ್ ಮತ್ತು ಕೋಚ್ ಶ್ರೀನಾಥ್ ನಾರಾಯಣನ್ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಅವರನ್ನು ಭೇಟಿ ಮಾಡಿದ್ದರು. ಆ ಬಳಿಕ ತಮಿಳುನಾಡಿನಲ್ಲಿ ಒಲಿಂಪಿಯಾಡ್ ಚೆಸ್ ಪಂದ್ಯಾವಳಿ ನಡೆಯಲಿದೆ ಎಂಬ ಸುದ್ದಿ ಹಬ್ಬಿತ್ತು. ಅದರ ನಂತರ, ಎಐಸಿಎಫ್ ಸ್ವತಃ ಆತಿಥೇಯ ಹುದ್ದೆಗೆ ಚೆನ್ನೈ ಹೆಸರನ್ನು ನಿರ್ಧರಿಸಿತು.
#ChessOlympiad2022 pic.twitter.com/U2bjZR0U1v
— M.K.Stalin (@mkstalin) March 16, 2022
ಹೆಮ್ಮೆಯ ಕ್ಷಣ – ವಿಶ್ವನಾಥನ್ ಆನಂದ್
ಒಲಿಂಪಿಯಾಡ್ ಭಾರತದಲ್ಲಿ ಎರಡನೇ ಅತಿದೊಡ್ಡ ವಿಶ್ವ ಚೆಸ್ ಪಂದ್ಯಾವಳಿಯಾಗಿದೆ. ಇದಕ್ಕೂ ಮುನ್ನ 2013ರಲ್ಲಿ ವಿಶ್ವನಾಥನ್ ಆನಂದ್ ಮತ್ತು ಮ್ಯಾಗ್ನಸ್ ಕಾರ್ಲ್‌ಸನ್ ನಡುವೆ ವಿಶ್ವ ಚಾಂಪಿಯನ್‌ಶಿಪ್ ಚೆಸ್ ಪಂದ್ಯ ಭಾರತದಲ್ಲಿ ನಡೆದಿತ್ತು. ಅದರ ನಂತರ, ಚೆನ್ನೈನಲ್ಲಿ ನಡೆಯುವ ಒಲಿಂಪಿಯಾಡ್ ಭಾರತದಲ್ಲಿ ಎರಡನೇ ಅತಿದೊಡ್ಡ ವಿಶ್ವ ಚೆಸ್ ಪಂದ್ಯಾವಳಿಯಾಗಲಿದೆ. ಒಲಿಂಪಿಯಾಡ್‌ನ ಆತಿಥೇಯರಾಗಿ ಆಯ್ಕೆಯಾಗಿರುವುದು ಭಾರತಕ್ಕೆ ಹೆಮ್ಮೆಯ ಕ್ಷಣ ಎಂದು ಚೆಸ್ ಆಟಗಾರ ವಿಶ್ವನಾಥನ್ ಆನಂದ್ ಹೇಳಿದ್ದಾರೆ.
Thank you sir for making Chennai all about chess ! A proud moment for all of Indian and Chennai chess community. Chennai Chess … always has a nice ring to it. The efforts of @aicfchess and @FIDE_chess in working together so swiftly is to be commended. https://t.co/UB6jIfKW5T
— Viswanathan Anand (@vishy64theking) March 15, 2022
#chennaichessolympiad2022! Vanakam https://t.co/ucfDM8Ojj3
— Viswanathan Anand (@vishy64theking) March 15, 2022
ಯುದ್ಧದಿಂದಾಗಿ ಭಾರತಕ್ಕೆ ಶಿಫ್ಟ್
ಒಂದೆಡೆ ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ ನಡೆಯುತ್ತಿದೆ. ಹೀಗಾಗಿ ರಷ್ಯಾದಿಂದ ಹೊರಕ್ಕೆ ಸ್ಥಳಾಂತರಗೊಂಡಿರುವ 44 ನೇ ಒಲಿಂಪಿಯಾಡ್ ಚೆಸ್ ಪಂದ್ಯಾವಳಿಯನ್ನು ಆಯೋಜಿಸುವ ಅವಕಾಶ ಭಾರತಕ್ಕೆ ಸಿಕ್ಕಿದೆ. ಜುಲೈ 26 ರಿಂದ ಆಗಸ್ಟ್ 8 ರವರೆಗೆ ರಷ್ಯಾದ ರಾಜಧಾನಿ ಮಾಸ್ಕೋದಲ್ಲಿ ಸ್ಪರ್ಧೆ ನಡೆಯಬೇಕಿತ್ತು. ಆದಾಗ್ಯೂ, ಉಕ್ರೇನ್ ಮತ್ತು ರಷ್ಯಾದಲ್ಲಿ ಯುದ್ಧದ ಕಾರಣ, FIDE, ಅಂತರರಾಷ್ಟ್ರೀಯ ಚೆಸ್ ಫೆಡರೇಶನ್, ಒಲಿಂಪಿಯಾಡ್ ಸೇರಿದಂತೆ ಎಲ್ಲಾ ಚೆಸ್ ಪಂದ್ಯಾವಳಿಗಳನ್ನು ರಷ್ಯಾದ ಹೊರಗೆ ನಡೆಸಲು ನಿರ್ಧರಿಸಿದೆ. ಆದ್ದರಿಂದ ಈ ಸ್ಪರ್ಧೆಯನ್ನು ಚೆನ್ನೈನಲ್ಲಿ ಆಯೋಜಿಸಲಾಗಿದೆ.
ಇದನ್ನೂ ಓದಿ:ಹೋಳಿ ಹಬ್ಬದ ಆಫರ್; ತನ್ನ ಫಾರ್ಮ್ಹೌಸ್ನಲ್ಲಿ ಬೆಳೆದ ಹಣ್ಣುಗಳನ್ನು ಕೊಳ್ಳುವವರಿಗೆ ವಿಶೇಷ ರಿಯಾಯಿತಿ ಕೊಟ್ಟ ಧೋನಿ!