Chris Gayle: ಟಿ-20 ಕ್ರಿಕೆಟ್ ಇತಿಹಾಸದಲ್ಲಿ ಯಾರೂ ಮಾಡಿರದ ವಿಶೇಷ ದಾಖಲೆ ನಿರ್ಮಿಸಿದ ಕ್ರಿಸ್ ಗೇಲ್

| Updated By: Vinay Bhat

Updated on: Jul 13, 2021 | 10:11 AM

Chris Gayle: ಆಸೀಸ್ ವಿರುದ್ಧದ ಮೂರನೇ ಟಿ-20 ಪಂದ್ಯದಲ್ಲಿ ಅಬ್ಬರದ ಬ್ಯಾಟಿಂಗ್ ನಡೆಸಿದ ಗೇಲ್ ಕೇವಲ 38 ಎಸೆತಗಳಲ್ಲಿ 4 ಬೌಂಡರಿ, 7 ಸಿಕ್ಸ್ ಸಿಡಿಸಿ 67 ರನ್ ಚಚ್ಚಿದರು. ಜೊತೆಗೆ ಟಿ-20 ಇತಿಹಾಸದಲ್ಲಿ ಒಟ್ಟು 14,000 ರನ್ ಪೂರೈಸಿದರು.

Chris Gayle: ಟಿ-20 ಕ್ರಿಕೆಟ್ ಇತಿಹಾಸದಲ್ಲಿ ಯಾರೂ ಮಾಡಿರದ ವಿಶೇಷ ದಾಖಲೆ ನಿರ್ಮಿಸಿದ ಕ್ರಿಸ್ ಗೇಲ್
ಏಕೆಂದರೆ ಗೇಲ್ ಇತ್ತೀಚೆಗೆ ಮುಕ್ತಾಯವಾದ ಟಿ20 ವಿಶ್ವಕಪ್​ನಲ್ಲಿ ನಿವೃತ್ತಿ ನೀಡುವ ಸುಳಿವು ನೀಡಿದ್ದರು. ಹೀಗಾಗಿ 42 ವರ್ಷದ ಕ್ರಿಸ್ ಗೇಲ್ ಮುಂದಿನ ಸೀಸನ್ ಐಪಿಎಲ್ ಆಡಲಿದ್ದಾರಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿತು. ಇದೀಗ ಎಬಿಡಿ ನಿವೃತ್ತಿ ಬೆನ್ನಲ್ಲೇ ಈ ಎಲ್ಲಾ ಪ್ರಶ್ನೆಗಳಿಗೆ ಕ್ರಿಸ್ ಗೇಲ್ ಉತ್ತರ ನೀಡಿದ್ದಾರೆ. ಅದು ಕೂಡ ಒಂದೇ ಒಂದು ವಾಕ್ಯದ ಮೂಲಕ ಎಂಬುದು ವಿಶೇಷ.
Follow us on

ಕೆರಿಬಿಯನ್ನರ ನಾಡಿನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ (Australia) ವಿರುದ್ಧದ ಮೂರನೇ ಟಿ-20 ಪಂದ್ಯದಲ್ಲಿ ವೆಸ್ಟ್​ ಇಂಡೀಸ್ (West Indies) ತಂಡದ ಸ್ಫೋಟಕ ಬ್ಯಾಟ್ಸ್​ಮನ್​ ಕ್ರಿಸ್ ಗೇಲ್ (Chris Gayle) ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಟಿ-20 ಕ್ರಿಕೆಟ್ ಇತಿಹಾಸದಲ್ಲಿ ಈವರೆಗೆ ಯಾರೂ ಮಾಡಿರದ ವಿಶೇಷ ಸಾಧನೆ ಗೈದಿದ್ದಾರೆ. ಗೇಲ್ ಟಿ-20 ಇತಿಹಾಸದಲ್ಲಿ ಒಟ್ಟು 14,000 ರನ್ ಪೂರೈಸಿದ ಮೊಟ್ಟ ಮೊದಲ ಆಟಗಾರ ಎಂಬ ದಾಖಲೆ ಬರೆದಿದ್ದಾರೆ.

ಆಸೀಸ್ ವಿರುದ್ಧದ ಮೂರನೇ ಟಿ-20 ಪಂದ್ಯದಲ್ಲಿ ಅಬ್ಬರದ ಬ್ಯಾಟಿಂಗ್ ನಡೆಸಿದ ಗೇಲ್ ಕೇವಲ 38 ಎಸೆತಗಳಲ್ಲಿ 4 ಬೌಂಡರಿ, 7 ಸಿಕ್ಸ್ ಸಿಡಿಸಿ 67 ರನ್ ಚಚ್ಚಿದರು. ಈ ಮೂಲಕ ಟಿ-20 ಕ್ರಿಕೆಟ್​ನಲ್ಲಿ ಅರ್ಧಶತಕದ ಬರ ಎದುರಿಸುತ್ತಿದ್ದ ಗೇಲ್ ಕೊನೆಗೂ ಕಮ್​ಬ್ಯಾಕ್ ಮಾಡಿದರು. 2016 ರಲ್ಲಿ ಗೇಲ್ ಬ್ಯಾಟ್​ನಿಂದ ಟಿ-20ಯಲ್ಲಿ ಕೊನೆಯ ಅರ್ಧಶತಕ ಬಂದಿತ್ತು.

ಗೇಲ್ ಅವರ ಸ್ಫೋಟಕ ಆಟದ ನೆರವಿನಿಂದ ವೆಸ್ಟ್​ ಇಂಡೀಸ್ ತಂಡ ಆಸೀಸ್ ವಿರುದ್ಧದ ಟಿ-20 ಸರಣಿಯನ್ನೂ ವಶಪಡಿಸಿಕೊಂಡಿದೆ. ಪಂದ್ಯ ಮುಗಿದ ಬಳಿಕ ಮಾತನಾಡಿದ ಗೇಲ್, “ನಿಮಗೆಲ್ಲ ತಿಳಿದಿರುವಾಗೆ ನಾನು ಬ್ಯಾಟಿಂಗ್​ನಲ್ಲಿ ಸ್ಟ್ರಗಲ್ ಮಾಡುತ್ತಿದ್ದೆ. ರನ್ ಗಳಿಸಲು ಕಷ್ಟ ಪಡುತ್ತಿದ್ದೆ. ಇದೊಂದು ಅದ್ಭುತ ಜರ್ನಿ, ಸರಣಿ ಜಯ ಸಾಧಿಸಿದ್ದು ತುಂಬಾನೆ ಸಂತಸ ನೀಡಿದೆ” ಎಂದು ಹೇಳಿದರು.

 

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡ 20 ಓವರ್​ನಲ್ಲಿ 6 ವಿಕೆಟ್ ಕಳೆದುಕೊಂಡು 141 ರನ್ ಗಳಿಸಿತಷ್ಟೆ. ಹೆನ್ರಿಕ್ಯೂಸ್ 29 ಎಸೆತಗಳಲ್ಲಿ 33 ರನ್ ಬಾರಿಸಿದರೆ, ನಾಯಕ ಆ್ಯರೋನ್ ಫಿಂಚ್ 31 ಎಸೆತಗಳಲ್ಲಿ 30 ರನ್ ಗಳಿಸಿದರು. ವಿಂಡೀಸ್ ಪರ ಹೇಡನ್ ವಾಲ್ಶ್ 2 ವಿಕೆಟ್ ಪಡೆದರು.

ಇತ್ತ 142 ರನ್​ಗಳ ಸಾಧಾರಣ ಟಾರ್ಗೆಟ್ ಬೆನ್ನಟ್ಟಿದ ವೆಸ್ಟ್​ ಇಂಡೀಸ್ ಆರಂಭದಲ್ಲಿ ಆಂಡ್ರೆ ಫ್ಲೆಟ್ಚರ್(4) ಮತ್ತು ಸಿಮಾನ್ಸ್(15) ವಿಕೆಟ್ ಕಳೆದುಕೊಂಡಿತಾದರು, ನಂತರದಲ್ಲಿ ಶುರುವಾಗಿದ್ದು ಗೇಲ್ ಆರ್ಭಟ. ನಾಯಕ ನಿಕೋಲಸ್ ಪೂರನ್ ಜೊತೆಯಾದ ಗೇಲ್ ಮನಬಂದಂತೆ ಬ್ಯಾಟ್ ಬೀಸಿದರು. ಬೌಂಡರಿ-ಸಿಕ್ಸರ್​ಗಳ ಮಳೆ ಸುರಿಸಿದರು.

ಗೇಲ್ ಕೇವಲ 38 ಎಸೆತಗಳಲ್ಲಿ 4 ಬೌಂಡರಿ, 7 ಸಿಕ್ಸ್ ಸಿಡಿಸಿ 67 ರನ್ ಚಚ್ಚಿದರು. ಪೂರನ್ 27 ಎಸೆತಗಳಲ್ಲಿ ಅಜೇಯ 32 ರನ್ ಗಳಿಸಿದರು. ವಿಂಡೀಸ್ 14.5 ಓವರ್​ನಲ್ಲೇ 4 ವಿಕೆಟ್ ಕಳೆದುಕೊಂಡು 142 ರನ್ ಬಾರಿಸುವ ಮೂಲಕ 6 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದ್ದಲ್ಲದೆ ಸರಣಿ ವಶಪಡಿಸಿಕೊಂಡಿತು.

ಸದ್ಯ ಐದು ಪಂದ್ಯಗಳ ಟಿ-20 ಸರಣಿಯಲ್ಲಿ ವೆಸ್ಟ್ ಇಂಡೀಸ್ 3-0 ಮುನ್ನಡೆ ಸಾಧಿಸಿದೆ. ನಾಲ್ಕನೇ ಪಂದ್ಯ ಜುಲೈ 14 ರಂದು ನಡೆಯಲಿದೆ.

ICC Player of the Month: ಭಾರತೀಯ ಆಟಗಾರರಿಗೆ ಮತ್ತೊಮ್ಮೆ ನಿರಾಶೆ! ಡೆವೊನ್ ಕಾನ್ವೇಗೆ ಒಲಿದ ಪ್ರಶಸ್ತಿ

IND vs SL: ಭಾರತ ವಿರುದ್ಧದ ಸರಣಿ ಆರಂಭಕ್ಕೂ ಮುನ್ನ ಕ್ರಿಕೆಟ್ ಬಿಟ್ಟು ಸೇನೆಗೆ ಸೇರಿದ ಲಂಕಾ ತಂಡದ ಮಾಜಿ ನಾಯಕ

Published On - 10:06 am, Tue, 13 July 21