VIDEO: ಜೋರ್ಡನ್​ ಅದ್ಭುತವಾಗಿ ಕ್ಯಾಚ್​ ಹಿಡಿದ ರೀತಿಗೆ ಸೂರ್ಯಕುಮಾರ್​ ಯಾದವ್​ ಸ್ಟನ್​!

ಐದನೇ ಟಿ20 ಪಂದ್ಯದಲ್ಲಿ ಇಂಗ್ಲೆಡ್​ ಟಾಸ್​ ಗೆದ್ದು ಬೌಲಿಂಗ್​ ಆಯ್ಕೆ ಮಾಡಿಕೊಂಡಿತ್ತು. ಮೊದಲು ಬ್ಯಾಟಿಂಗ್​ಗೆ ಇಳಿದ ಟೀಂ ಇಂಡಿಯಾ ಹೊಡಿಬಡಿ ಆಟಕ್ಕೆ ಮುಂದಾಗಿತ್ತು.

VIDEO: ಜೋರ್ಡನ್​ ಅದ್ಭುತವಾಗಿ ಕ್ಯಾಚ್​ ಹಿಡಿದ ರೀತಿಗೆ ಸೂರ್ಯಕುಮಾರ್​ ಯಾದವ್​ ಸ್ಟನ್​!
ಕ್ರಿಸ್ ಜೋರ್ಡನ್​ ಹಿಡಿದ ಅದ್ಭುತ ಕ್ಯಾಚ್​
Edited By:

Updated on: Mar 21, 2021 | 10:52 AM

ಭಾರತ ಹಾಗೂ ಇಂಗ್ಲೆಂಡ್​ ನಡುವಣ ಐದನೇ ಹಾಗೂ ಕೊನೆಯ ಟಿ20 ಪಂದ್ಯ ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿದೆ. 14ನೇ ಓವರ್​ನಲ್ಲಿ ಒಂದು ಅದ್ಭುತವೇ ನಡೆದು ಹೋಗಿದೆ. ಕ್ರಿಸ್​ ಜೋರ್ಡನ್​ ಸರ್ಕಸ್​ ಮಾಡಿ ಹಿಡಿದ ಕ್ಯಾಚ್​ಗೆ ಬ್ಯಾಟಿಂಗ್​ನಲ್ಲಿದ್ದ ಸೂರ್ಯಕುಮಾರ್​ ಯಾದವ್​ ಸ್ಟನ್​ ಆಗಿದ್ದಾರೆ.

ಐದನೇ ಟಿ20 ಪಂದ್ಯದಲ್ಲಿ ಇಂಗ್ಲೆಡ್​ ಟಾಸ್​ ಗೆದ್ದು ಬೌಲಿಂಗ್​ ಆಯ್ಕೆ ಮಾಡಿಕೊಂಡಿತ್ತು. ರೋಹಿತ್​ ಶರ್ಮಾ ಜತೆಯಾಗಿ ವಿರಾಟ್​ ಕೊಹ್ಲಿ ಓಪನಿಂಗ್​ಗೆ ಇಳಿದು ಅಚ್ಚರಿ ಮೂಡಿಸಿದ್ದರು. ಮೊದಲು ಬ್ಯಾಟಿಂಗ್​ಗೆ ಇಳಿದ ಟೀಂ ಇಂಡಿಯಾ ಹೊಡಿಬಡಿ ಆಟಕ್ಕೆ ಮುಂದಾಗಿತ್ತು.

ಟೀಂ ಇಂಡಿಯಾ ಅದ್ಭುತ ಓಪನಿಂಗ್​ ಕಂಡುಕೊಂಡಿತ್ತು. ರೋಹಿತ್​ ಶರ್ಮಾ 34 ಬಾಲ್​ಗಳಲ್ಲಿ 64 ರನ್​ ಸಿಡಿಸಿದ್ದರು. ಇದರಲ್ಲಿ ನಾಲ್ಕು ಫೋರ್​ ಹಾಗೂ 5 ಸಿಕ್ಸ್​​ರ​​ಗಳಿದ್ದವು. ರೋಹಿತ್​ ಬೌಲ್ಡ್​ ಆದ ನಂತರ ಬ್ಯಾಟಿಂಗ್​ಗೆ ಇಳಿದಿದ್ದು ಸೂರ್ಯಕುಮಾರ್ ಯಾದವ್​. ಸೂರ್ಯಕುಮಾರ್ ಯಾವ್​ ಕೂಡ ಹೊಡಿಬಡಿ ಆಟಕ್ಕೆ ಮುಂದಾದರು. 12ನೇ ಓವರ್​ನಲ್ಲಿ ಕ್ರಿಸ್ ಜೋರ್ಡನ್​ ಬೌಲಿಂಗ್​ನಲ್ಲಿ ಬರೋಬ್ಬರಿ ನಾಲ್ಕು ಫೌರ್​ಗಳು ಬಂದಿದ್ದವು. ನಂತರ 14ನೇ ಓವರ್​ನಲ್ಲಿ ಆದಿಲ್​ ರಶೀದ್​ ಬೌಲಿಂಗ್​ಗೆ ಇಳಿದಿದ್ದರು. ಎರಡನೇ ಬಾಲ್​ ಎಸೆದಾಗ ಸೂರ್ಯಕುಮಾರ್​ ಯಾದವ್​ ಸಿಕ್ಸ್​ ಬಾರಿಸೋಕೆ ಮುಂದಾದರು.

ಈ ಬಾಲ್​ ಇನ್ನೇನು ಸಿಕ್ಸ್​ ಗಡಿ ಸಮೀಪಿಸಬೇಕಿತ್ತು. ಆದರೆ, ಓಡಿ ಬಂದ ಜೋರ್ಡನ್​ ಬಾಲ್​ ಹಿಡಿದುಕೊಂಡರು. ಇನ್ನೇನು ಅವರು ಸಿಕ್ಸ್​ ಗಡಿ ದಾಟಬೇಕಿತ್ತು. ಆಗ, ಬಾಲ್​ ಜೇಸನ್​ ರಾಯ್​ ಕೈಗೆ ನೀಡಿದ್ದರು. ಈ ಮೂಲಕ ಸೂರ್ಯಕುಮಾರ್ ಯಾದವ್​ ಅವರನ್ನು ಔಟ್​ ಮಾಡಿದ್ದರು. ಜೋರ್ಡನ್​ ಅದ್ಭುತ ಕ್ಯಾಚ್​ಗೆ ಸೂರ್ಯಕುಮಾರ್​ ಯಾದವ್​ ಹಾಗೂ ಕೊಹ್ಲಿ ಸ್ಟನ್​ ಆಗಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್​ ಆಗಿದೆ.

ಇದನ್ನೂ ಓದಿ: India vs England 5th T20I live Score: ಭಾರತದ ಭರ್ಜರಿ ಬ್ಯಾಟಿಂಗ್!

Published On - 8:34 pm, Sat, 20 March 21

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us