India vs England 5th T20I live Score: ಸುಲಭ ಜಯದೊಂದಿಗೆ ಸರಣಿ ಮೇಲೆ ಒಡೆತನ ಸಾಧಿಸಿದ ಟೀಮ್ ಇಂಡಿಯಾ

ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದ್ದು ಭುವನೇಶ್ವರ್ ಕಮಾರ್. ತಮ್ಮ ಕೋಟಾದ 4 ಓವರ್​ಗಳಲ್ಲಿ ಕೇವಲ 15 ರನ್​ ನೀಡಿದ  ಭುವಿ  2 ವಿಕೆಟ್​ ಪಡೆದರು

India vs England 5th T20I live Score: ಸುಲಭ ಜಯದೊಂದಿಗೆ ಸರಣಿ ಮೇಲೆ ಒಡೆತನ ಸಾಧಿಸಿದ ಟೀಮ್ ಇಂಡಿಯಾ
ಪಂದ್ಯದ ವ್ಯಕ್ತಿ ಭುವನೇಶ್ವರ್ ಕುಮಾರ್
Follow us
ಅರುಣ್​ ಕುಮಾರ್​ ಬೆಳ್ಳಿ
|

Updated on:Mar 20, 2021 | 11:25 PM

ಅಹಮದಾಬಾದ್: ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವೆ ಟಿ20 ಸರಣಿಯ 5ನೇ ಮತ್ತು ಕೊನೆಯ ಪಂದ್ಯದಲ್ಲಿ ಪ್ರವಾಸಿ ತಂಡವನ್ನು ಸುಲಭವಾಗಿ 36 ರನ್​ಗಳಿಂದ ಸೋಲಿಸಿದ ಭಾರತ ಸರಣಿಯನ್ನು 3-2 ಅಂತರದಿಂದ ತನ್ನದಾಗಿಸಿಕೊಂಡಿದೆ. ಗೆಲ್ಲಲು 225ರನ್ ಗಳಿಸಬೇಕಿದ್ದ ಆಂಗ್ಲರಿಗೆ ನಿಗದಿತ 20 ಓವರ್​ಗಳಲ್ಲಿ 188/8 ಗಳಿಸಲು ಮಾತ್ರ ಸಾಧ್ಯವಾಯಿತು.  ಇಂಗ್ಲೆಂಡ್ ಪರ ಕೇವಲ ದಾವಿದ್ ಮಲಾನ್ (68, 46 ಎಸೆತ 9 ಬೌಂಡರಿ 2 ಸಿಕ್ಸ್) ಮತ್ತು ಜೋಸ್ ಬಟ್ಲರ್ 52 ( 34 ಎಸೆತ 2 ಬೌಂಡರಿ 4 ಸಿಕ್ಸ್) ಮಾತ್ರ ಹೋರಾಟ ಪ್ರದರ್ಶಿಸಿದರು. 45 ರನ್​ಗ​ಳಿಗೆ 3 ವಿಕೆಟ್​   ಶಾರ್ದುಲ್ ಠಾಕೂರ್ ಭಾರತದ ಯಶಸ್ವೀ ಬೌಲರ್ ಎನಿಸಿದರು.

ಆದರೆ, ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದ್ದು ಭುವನೇಶ್ವರ್ ಕಮಾರ್. ತಮ್ಮ ಕೋಟಾದ 4 ಓವರ್​ಗಳಲ್ಲಿ ಕೇವಲ 15 ರನ್​ ನೀಡಿದ  ಭುವಿ  2 ವಿಕೆಟ್​ ಪಡೆದರು.

ಟಿ20 ಕ್ರಿಕೆಟ್​ನಲ್ಲಿ ಇಂಗ್ಲೆಂಡ್ ವಿಶ್ದ ನಂಬರ್ ವನ್ ತಂಡ ಎನಿಸಿದೆ. ಮೂರನೇ ಌಂಕಿನ ಭಾರತ ಅದನ್ನು ಸೋಲಿಸಿ ಅಕ್ಟೋಬರ್-ನವೆಂಬರ್​ ನಡೆಯುವ ಟಿ20 ವಿಶ್ವಕಪ್​ಗೆ ಮುಂಚೆ ತನ್ನ ಆತ್ಮವಿಶ್ವಾಸವನ್ನು ಮುಗಿಲೆತ್ತರಕ್ಕೆ ಏರಿಸಿಕೊಂಡಿದೆ.

ಟಾಸ್ ಸೋತು ಮೊದಲು ಬ್ಯಾಟ್​ ಮಾಡಿದ ಭಾರತ 224/2 ಮೊತ್ತ ಗಳಿಸಿತು. ನಾಯಕ ವಿರಾಟ್ ಕೊಹ್ಲಿ 52 ಎಸೆತಗಳಲ್ಲಿ ಅಜೇಯ 80 ರನ್ (7 ಬೌಂಡರಿ 2 ಸಿಕ್ಸರ್) ಬಾರಿಸಿದರು. ಅವರೊಂದಿಗೆ ಇನ್ನಿಂಗ್ಸ್ ಆರಂಭಿಸಿದ ರೋಹಿತ್ ಶರ್ಮ ಕೇವಲ 34 ಎಸೆತಗಳಲ್ಲಿ 64 ರನ್ (4 ಬೌಂಡರಿ 5 ಸಿಕ್ಸ್ ) ಬಾರಿಸಿದರು, ನಾಯಕ ಮತ್ತು ಉಪನಾಯಕ ಮೊದಲ ವಿಕೆಟ್​ಗೆ 9 ಓವರ್​ಗಳಲ್ಲಿ 94 ರನ್ ಸೇರಿಸಿದರು .

ಮೂರನೇ ಕ್ರಮಾಂಕದಲ್ಲಿ ಆಡಲು ಬಂದ  ಸೂರ್ಯಕುಮಾರ್ ಯಾದವ್ 17 ಎಸೆತಗಳಲ್ಲಿ 32 ರನ್ ಗಳಿಸಿದರು, ಅವರ ಸ್ಕೋರಿನಲ್ಲಿ 3 ಬೌಂಡರಿ 2 ಸಿಕ್ಸ್ ಇದ್ದವು.

ಈ ಪಂದ್ಯಕ್ಕೆ ರಾಹುಲ್ ಅವರನ್ನು ಕೈಬಿಟ್ಟು ಅವರ ಸ್ಥಾನದಲ್ಲಿ ವೇಗದ ಬೌಲರ್ ಟಿ ನಟರಾಜನ್ ಅವರನ್ನು ಆಡಿಸಲಾಯಿತು.

ಅಂತಿಮ ಸ್ಕೋರ್:

ಭಾರತ: 224/2 (20 ಓವರ್​ಗಳಲ್ಲಿ)

ಇಂಗ್ಲೆಂಡ್: 188/8 (20 ಓವರ್​ಗಳಲ್ಲಿ)

Published On - 10:55 pm, Sat, 20 March 21

ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್