Cristiano Ronaldo: 12 ವರ್ಷಗಳ ಬಳಿಕ ತನ್ನ ಹಳೆಯ ಕ್ಲಬ್ ಮ್ಯಾಂಚೆಸ್ಟರ್ ಯುನೈಟೆಡ್​ಗೆ ಮರಳಿದ ಕ್ರಿಸ್ಟಿಯಾನೊ ರೊನಾಲ್ಡೊ

Cristiano Ronaldo:ಸ್ಟಿಯಾನೊ ರೊನಾಲ್ಡೊ ಅಭಿಮಾನಿಗಳಿಗೆ ಒಳ್ಳೆಯ ಸುದ್ದಿ ಇದೆ. ಪೋರ್ಚುಗಲ್​ನ ಈ ಸ್ಟಾರ್ ಆಟಗಾರ 12 ವರ್ಷಗಳ ನಂತರ ತನ್ನ ಹಳೆಯ ಕ್ಲಬ್ ಮ್ಯಾಂಚೆಸ್ಟರ್ ಯುನೈಟೆಡ್​ಗೆ ಮರಳಿದ್ದಾರೆ.

Cristiano Ronaldo: 12 ವರ್ಷಗಳ ಬಳಿಕ ತನ್ನ ಹಳೆಯ ಕ್ಲಬ್ ಮ್ಯಾಂಚೆಸ್ಟರ್ ಯುನೈಟೆಡ್​ಗೆ ಮರಳಿದ ಕ್ರಿಸ್ಟಿಯಾನೊ ರೊನಾಲ್ಡೊ
ಕ್ರಿಸ್ಟಿಯಾನೊ ರೊನಾಲ್ಡೊ
Updated By: ಪೃಥ್ವಿಶಂಕರ

Updated on: Aug 27, 2021 | 10:47 PM

ಕ್ರಿಸ್ಟಿಯಾನೊ ರೊನಾಲ್ಡೊ ಅಭಿಮಾನಿಗಳಿಗೆ ಒಳ್ಳೆಯ ಸುದ್ದಿ ಇದೆ. ಪೋರ್ಚುಗಲ್​ನ ಈ ಸ್ಟಾರ್ ಆಟಗಾರ 12 ವರ್ಷಗಳ ನಂತರ ತನ್ನ ಹಳೆಯ ಕ್ಲಬ್ ಮ್ಯಾಂಚೆಸ್ಟರ್ ಯುನೈಟೆಡ್ ಗೆ ಮರಳಿದ್ದಾರೆ. ಕ್ಲಬ್ ಸ್ವತಃ ಶುಕ್ರವಾರ ಟ್ವೀಟ್ ಮಾಡುವ ಮೂಲಕ ಈ ಬಗ್ಗೆ ಮಾಹಿತಿ ನೀಡಿದೆ. ಇಟಾಲಿಯನ್ ಕ್ಲಬ್ ಯುವೆಂಟಸ್‌ನೊಂದಿಗೆ ಮೂರು ವರ್ಷಗಳನ್ನು ಕಳೆದ ನಂತರ ರೊನಾಲ್ಟಿ ಇಂಗ್ಲಿಷ್ ಪ್ರೀಮಿಯರ್ ಲೀಗ್ ಕ್ಲಬ್‌ಗೆ ಮರಳಿದ್ದಾರೆ. ರೊನಾಲ್ಡೊ ಅವರು ಯುವೆಂಟಸ್‌ನಿಂದ ಬೇರ್ಪಟ್ಟ ಸುದ್ದಿ ಹೊರಬಿದ್ದ ನಂತರ ಮ್ಯಾಂಚೆಸ್ಟರ್ ಸಿಟಿಗೆ ಸೇರಬಹುದೆಂದು ಊಹಾಪೋಹಗಳಿದ್ದವು ಆದರೆ ರೊನಾಲ್ಡೊ ಯುನೈಟೆಡ್ ಸೇರಿಕೊಂಡಿದ್ದಾರೆ.

ಮುನ್ನಡೆಯುತ್ತಾ ಇರುತ್ತದೆ
ಈ ಬಗ್ಗೆ ಮಾತನಾಡಿದ ಅಲ್ಲೆಗ್ರಿ, ಇಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ. ಇದರಿಂದ ನಾನು ನಿರಾಶೆಗೊಂಡಿಲ್ಲ. ರೊನಾಲ್ಡೊ ತನ್ನ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಇಂತಹ ಸಂಗತಿಗಳು ಜೀವನದಲ್ಲಿ ನಡೆಯುತ್ತಲೇ ಇರುತ್ತವೆ. ಸಿವೊರಿ, ಪಾಲ್ತಿನಿ, ಡೆಲ್ ಪಿಯೆರೊ, ಜಿಡಾನೆ, ಬಫನ್ ಜುವೆಂಟಸ್ ಪರ ಆಡಿದ್ದಾರೆ. ಅವರು ಮೂರು ವರ್ಷಗಳ ಕಾಲ ಇಲ್ಲಿಯೇ ಇದ್ದರು, ಅವರು ಸಹ ತಂಡಕ್ಕೆ ಕೊಡುಗೆ ನೀಡಿದರು. ಹಾಗೆಯೇ ರೊನಾಲ್ಡೊ ತನ್ನನ್ನು ಯುವೆಂಟಸ್‌ಗೆ ಲಭ್ಯವಾಗುವಂತೆ ಮಾಡಿದರು. ಈಗ ತಂಡ ಬಿಟ್ಟು ಹೊರಡುತ್ತಿದ್ದಾನೆ. ಜೀವನ ಹಾಗೇನೆ ನಡೀತಾ ಹೋಗುತ್ತೆ ಎಂದಿದ್ದಾರೆ.

ತರಬೇತುದಾರ ಮತ್ತು ಕ್ಲಬ್ ನಿರ್ದೇಶಕ ಪಾವೆಲ್ ನೆಡ್ವೆಡ್ ಹೇಳಿದ ನಂತರವೂ ರೊನಾಲ್ಡೊ ಡ್ರೆಸ್ಸಿಂಗ್ ರೂಂನಲ್ಲಿರುವ ತನ್ನ ಲಾಕರ್ ಕೊಠಡಿಯನ್ನು ಸ್ವಚ್ಛಗೊಳಿಸಿದ್ದಾರೆ ಎಂದು ಸ್ಕೈ ಸ್ಪೋರ್ಟ್ಸ್ ಗುರುವಾರ ವರದಿ ಮಾಡಿದೆ. ಜೊತೆಗೆ ರೊನಾಲ್ಡೊ ತರಬೇತಿಗೂ ಹಾಜರಾಗಿಲ್ಲ ಮತ್ತು ತನ್ನ ಸಹ ಆಟಗಾರರಿಗೆ ವಿದಾಯ ಹೇಳಲು ಲಾ ತರಬೇತಿ ಕೇಂದ್ರಕ್ಕೆ ಬಂದಿದ್ದರು ಎಂದು ವರದಿಯಾಗಿದೆ.

ಸ್ಪ್ಯಾನಿಷ್ ಕ್ಲಬ್‌ನಿಂದ ಬಂದವರು
ರೊನಾಲ್ಡೊ ಈ ಮೊದಲು ಸ್ಪೇನ್‌ನ ಖ್ಯಾತ ಕ್ಲಬ್ ರಿಯಲ್ ಮ್ಯಾಡ್ರಿಡ್‌ನಲ್ಲಿ ಆಡುತ್ತಿದ್ದರು. ಅವರು 2009 ರಲ್ಲಿ ಸ್ಪ್ಯಾನಿಷ್ ಕ್ಲಬ್‌ಗೆ ಸೇರಿದರು ಮತ್ತು 2018 ರವರೆಗೆ ಈ ಕ್ಲಬ್‌ನೊಂದಿಗೆ ಇದ್ದರು. ಜೊತೆಗೆ ಈ ಕ್ಲಬ್‌ನಲ್ಲಿರುವಾಗಲೇ ರೊನಾಲ್ಡೊ ಲಾ ಲೀಗ್ ಪ್ರಶಸ್ತಿಗಳನ್ನು ಗೆದ್ದರು. ಮ್ಯಾಡ್ರಿಡ್ ಮೊದಲು, ರೊನಾಲ್ಡೊ ಇಂಗ್ಲಿಷ್ ಪ್ರೀಮಿಯರ್ ಲೀಗ್‌ನ ಭಾಗವಾಗಿದ್ದರು. ಅವರು 2003 ರಲ್ಲಿ ಮ್ಯಾಂಚೆಸ್ಟರ್ ಯುನೈಟೆಡ್‌ನೊಂದಿಗೆ ತಮ್ಮ ವೃತ್ತಿಪರ ಫುಟ್‌ಬಾಲ್ ವೃತ್ತಿಜೀವನವನ್ನು ಆರಂಭಿಸಿದರು.

Published On - 10:44 pm, Fri, 27 August 21