CWG 2022: ಇಂದಿನಿಂದ ಕಾಮನ್‌ವೆಲ್ತ್ ಗೇಮ್ಸ್ ಆರಂಭ; ಭಾರತೀಯ ಆಟಗಾರರ ಸಂಪೂರ್ಣ ವೇಳಾಪಟ್ಟಿ ಹೀಗಿದೆ

| Updated By: ಪೃಥ್ವಿಶಂಕರ

Updated on: Jul 28, 2022 | 5:19 PM

CWG 2022: ಕಾಮನ್ ವೆಲ್ತ್ ಗೇಮ್ಸ್ ಆರಂಭಕ್ಕೂ ಮುನ್ನವೇ ನೀರಜ್ ಚೋಪ್ರಾ (Neeraj Chopra) ರೂಪದಲ್ಲಿ ಭಾರತಕ್ಕೆ ದೊಡ್ಡ ಹಿನ್ನಡೆಯಾಗಿದೆ. ಗಾಯದ ಸಮಸ್ಯೆಯಿಂದಾಗಿ ನೀರಜ್ ಈ ಪಂದ್ಯದಿಂದ ಹೊರಗುಳಿದಿದ್ದಾರೆ.

CWG 2022: ಇಂದಿನಿಂದ ಕಾಮನ್‌ವೆಲ್ತ್ ಗೇಮ್ಸ್ ಆರಂಭ; ಭಾರತೀಯ ಆಟಗಾರರ ಸಂಪೂರ್ಣ ವೇಳಾಪಟ್ಟಿ ಹೀಗಿದೆ
Commonwealth Games
Follow us on

ಇಂದಿನಿಂದ ಕಾಮನ್‌ವೆಲ್ತ್ (Commonwealth Games) ಕ್ರೀಡಾಕೂಟ ಆರಂಭವಾಗಿದೆ. ಭಾರತೀಯ ಆಟಗಾರರು ಕೂಡ ಈ ಕ್ರೀಡಾಕೂಟದಲ್ಲಿ ತಮ್ಮ ಶಕ್ತಿ ಪ್ರದರ್ಶನಕ್ಕೆ ಸಜ್ಜಾಗಿದ್ದಾರೆ. ಆದರೆ ಕಾಮನ್ ವೆಲ್ತ್ ಗೇಮ್ಸ್ ಆರಂಭಕ್ಕೂ ಮುನ್ನವೇ ನೀರಜ್ ಚೋಪ್ರಾ (Neeraj Chopra) ರೂಪದಲ್ಲಿ ಭಾರತಕ್ಕೆ ದೊಡ್ಡ ಹಿನ್ನಡೆಯಾಗಿದೆ. ಗಾಯದ ಸಮಸ್ಯೆಯಿಂದಾಗಿ ನೀರಜ್ ಈ ಪಂದ್ಯದಿಂದ ಹೊರಗುಳಿದಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಈಗ ಭಾರತದ ಸಂಪೂರ್ಣ ಜವಾಬ್ದಾರಿ ಪಿವಿ ಸಿಂಧು, ಮನಿಕಾ ಬಾತ್ರಾ, ಮೀರಾಬಾಯಿ ಚಾನು, ಲೊವ್ಲಿನಾ, ನಿಖತ್ ಜರೀನ್, ಸಾಕ್ಷಿ ಮಲಿಕ್, ವಿನೇಶ್ ಫೋಗಟ್ (PV Sindhu, Manika Batra, Mirabai Chanu, Lovlina, Nikhat Zareen, Sakshi Malik, Vinesh Phogat) ಅವರ ಮೇಲಿದೆ. ಉದ್ಘಾಟನಾ ಸಮಾರಂಭ ಜುಲೈ 28 ರಂದು ಭಾರತೀಯ ಕಾಲಮಾನ ರಾತ್ರಿ 11.30 ಕ್ಕೆ ಆರಂಭವಾಗಲಿದೆ.

ಭಾರತದ ಪ್ರದರ್ಶನದಲ್ಲಿ ನಿರಂತರ ಸುಧಾರಣೆ

ಅದೇ ಸಮಯದಲ್ಲಿ, ಜುಲೈ 29 ರಿಂದ ಭಾರತೀಯ ಆಟಗಾರರು ತಮ್ಮ ಸವಾಲನ್ನು ಪ್ರಸ್ತುತಪಡಿಸಲಿದ್ದಾರೆ. ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತ ಇದುವರೆಗೆ 181 ಚಿನ್ನ, 173 ಬೆಳ್ಳಿ, 149 ಕಂಚಿನ ಪದಕ ಸೇರಿದಂತೆ ಒಟ್ಟು 503 ಪದಕಗಳನ್ನು ಗೆದ್ದಿದೆ. ಕಳೆದ 3 ಕಾಮನ್‌ವೆಲ್ತ್ ಗೇಮ್ಸ್‌ಗಳಲ್ಲಿ ಭಾರತ 503 ಪದಕಗಳಲ್ಲಿ 231 ಪದಕಗಳನ್ನು ಗೆದ್ದಿದೆ. ಭಾರತದ ಆಟಗಾರರು ನಿರಂತರವಾಗಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಕಳೆದ ಬಾರಿ ಗೋಲ್ಡ್‌ಕೋಸ್ಟ್‌ನಲ್ಲಿ ನಡೆದಿದ್ದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತ 26 ಚಿನ್ನ, 20 ಬೆಳ್ಳಿ ಮತ್ತು 20 ಕಂಚು ಸೇರಿದಂತೆ ಒಟ್ಟು 66 ಪದಕಗಳನ್ನು ಗೆದ್ದಿತ್ತು. ಈ ಕಾಮನ್‌ವೆಲ್ತ್‌ನಲ್ಲಿ 215 ಭಾರತೀಯ ಆಟಗಾರರು ಭಾಗವಹಿಸಲಿದ್ದಾರೆ. ಭಾರತೀಯ ಆಟಗಾರರು ಯಾವಾಗ ಮೈದಾನಕ್ಕೆ ಇಳಿಯುತ್ತಾರೆ ಹಾಗೂ ಯಾವ ಸಮಯಕ್ಕೆ ಪಂದ್ಯಗಳು ಆರಂಭವಾಗಲಿವೆ ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.

ಇದನ್ನೂ ಓದಿ
CWG 2022: ಕಾಮನ್‌ವೆಲ್ತ್‌ ಗೇಮ್ಸ್​ನಿಂದ ನೀರಜ್ ಔಟ್, ಭಾರತಕ್ಕೆ ಪದಕ ಮಿಸ್! ಪಾಕಿಸ್ತಾನಕ್ಕೆ ತೆರೆಯಿತು ಭಾಗ್ಯದ ಬಾಗಿಲು
CWG 2022: ಸಾರ್ವಜನಿಕ ರಜೆ ಘೋಷಿಸಿತ್ತು ಭಾರತ! ಕಾಮನ್‌ವೆಲ್ತ್​ನಲ್ಲಿ ಮಿಲ್ಕಾ ಸಿಂಗ್ ಗೆದ್ದ ಮೊದಲ ಚಿನ್ನದ ಪದಕದ ಕಥೆಯಿದು
ಜಾವೆಲಿನ್ ಥ್ರೋ ವಿಭಾಗದಲ್ಲಿ ಕಾಮನ್‌ವೆಲ್ತ್‌, ಏಷ್ಯನ್ ಗೇಮ್ಸ್‌ಗೆ ಅರ್ಹತೆ ಪಡೆದ ಹಾಸನದ ಮನು ಶೆಟ್ಟಿ!

ಕ್ರೀಡೆಯ ಹೆಸರು

ದಿನಾಂಕ

ಸಮಯ

ಸ್ಟಾರ್ ಆಟಗಾರರು

ಬ್ಯಾಡ್ಮಿಂಟನ್ ಜುಲೈ 29 ರಿಂದ ಆಗಸ್ಟ್ 8 ರವರೆಗೆ ಸಂಜೆ 5 ರಿಂದ ಪಿವಿ ಸಿಂಧು, ಲಕ್ಷ್ಯ ಸೇನ್, ಕಿಡಂಬಿ ಶ್ರೀಕಾಂತ್
ಬಾಕ್ಸಿಂಗ್ ಜುಲೈ 29 ರಿಂದ ಆಗಸ್ಟ್ 7 ರವರೆಗೆ ರಾತ್ರಿ 9 ರಿಂದ ನಿಖತ್ ಜರೀನ್, ಲೊವ್ಲಿನಾ ಬೋರೆಗೊಹಾನ್
ವೇಟ್ ಲಿಫ್ಟಿಂಗ್ 30 ಜುಲೈ ನಿಂದ 3 ಆಗಸ್ಟ್ ಬೆಳಿಗ್ಗೆ 05 ರಿಂದ ಮೀರಾಬಾಯಿ ಚಾನು, ಜೆರೆಮಿ ಲಾಲ್ರಿನ್ನುಂಗಾ
ಕುಸ್ತಿ ಆಗಸ್ಟ್ 5 ಮತ್ತು 6 ರಂದು ರಾತ್ರಿ 7.30 ರಿಂದ ಭಜರಂಗ್ ಪುನಿಯಾ, ವಿನೇಶ್ ಫೋಗಟ್, ಸಾಕ್ಷಿ ಮಲಿಕ್
ಅಥ್ಲೆಟಿಕ್ಸ್ ಜುಲೈ 30 ರಿಂದ ಆಗಸ್ಟ್ 7 ರವರೆಗೆ ಬೆಳಿಗ್ಗೆ 10 ರಿಂದ ಎಂ ಶ್ರೀಶಂಕರ್, ಹಿಮಾ ದಾಸ್, ದ್ಯುತಿ ಚಂದ್
ಕ್ರಿಕೆಟ್ 29 ಜುಲೈ ರಿಂದ ಆಗಸ್ಟ್ 7 ವರೆಗೆ ಬೆಳಿಗ್ಗೆ 11ರಿಂದ ಸ್ಮೃತಿ ಮಂಧಾನ, ಹರ್ಮನ್‌ಪ್ರೀತ್ ಕೌರ್
ಹಾಕಿ ಜುಲೈ 29 ರಿಂದ ಆಗಸ್ಟ್ 8 ರವರೆಗೆ ಸಂಜೆ 7.30
ಸೈಕ್ಲಿಂಗ್ ಜುಲೈ 29 ರಿಂದ ರಾತ್ರಿ 10 ರಿಂದ ರೊನಾಲ್ಡೊ, ಮಯೂರಿ ಲೂಟ್
ಜೂಡೋ 1 ರಿಂದ 3 ಆಗಸ್ಟ್ ವರೆಗೆ ಮಧ್ಯಾಹ್ನ 2.30 ರಿಂದ ಸುಶೀಲ
ಸ್ಕ್ವಾಷ್ ಜುಲೈ 29 ರಿಂದ ಆಗಸ್ಟ್ 8 ರವರೆಗೆ ಸಂಜೆ 4.30 ರಿಂದ ದೀಪಿಕಾ ಪಳ್ಳಿಕಲ್, ಜೋಷ್ನಾ ಚಿನಪ್ಪ
ಟೇಬಲ್ ಟೆನ್ನಿಸ್ ಜುಲೈ 29 ರಿಂದ ಆಗಸ್ಟ್ 8 ರವರೆಗೆ ಮಧ್ಯಾಹ್ನ 2 ರಿಂದ ಶರತ್ ಕಮಲ್, ಜಿ ಸತ್ಯನ್, ಮನಿಕಾ ಬಾತ್ರಾ

4 ಕ್ರೀಡೆಯಲ್ಲಿ ಭಾರತ ಸ್ಪರ್ಧಿಸುತ್ತಿಲ್ಲ

ಭಾರತವು 3×3 ಬ್ಯಾಸ್ಕೆಟ್‌ಬಾಲ್, ಬೀಚ್ ವಾಲಿಬಾಲ್, ನೆಟ್ ಬಾಲ್ ಮತ್ತು ರಗ್ಬಿ ಈವೆಂಟ್‌ಗಳಲ್ಲಿ ಸವಾಲು ಹಾಕುವುದಿಲ್ಲ. ಕಾಮನ್‌ವೆಲ್ತ್‌ನಲ್ಲಿ ಭಾರತವು ಶೂಟಿಂಗ್‌ನಲ್ಲಿ ಅನೇಕ ಪದಕಗಳನ್ನು ಗೆದ್ದಿದೆ, ಆದರೆ ಈ ಬಾರಿ ಶೂಟಿಂಗ್ ಈ ಆಟಗಳ ಭಾಗವಾಗಿಲ್ಲ. ಇದು ಭಾರತದ ಪದಕಗಳ ಮೇಲೂ ಪರಿಣಾಮ ಬೀರಲಿದೆ.

 

Published On - 2:25 pm, Thu, 28 July 22