CWG 2022: ಬಾಕ್ಸಿಂಗ್​ನಲ್ಲಿ ಮತ್ತೊಂದು ಸ್ವರ್ಣ; 51 ಕೆಜಿ ವಿಭಾಗದಲ್ಲಿ ಚಿನ್ನ ಗೆದ್ದ ಅಮಿತ್ ಪಂಗಲ್

| Updated By: ಪೃಥ್ವಿಶಂಕರ

Updated on: Aug 07, 2022 | 5:19 PM

CWG 2022: ಭಾರತದ ಸ್ಟಾರ್ ಬಾಕ್ಸರ್ ಅಮಿತ್ ಪಂಗಲ್ ಕಾಮನ್‌ವೆಲ್ತ್ ಗೇಮ್ಸ್ 2022 ರಲ್ಲಿ ಇಂಗ್ಲೆಂಡ್‌ ಬಾಕ್ಸರ್‌ಗೆ ಸೋಲಿನ ಪಂಚ್ ನೀಡುವ ಮೂಲಕ ತಮ್ಮ ಪದಕದ ಬಣ್ಣವನ್ನು ಬದಲಾಯಿಸಿದ್ದಾರೆ.

CWG 2022: ಬಾಕ್ಸಿಂಗ್​ನಲ್ಲಿ ಮತ್ತೊಂದು ಸ್ವರ್ಣ; 51 ಕೆಜಿ ವಿಭಾಗದಲ್ಲಿ ಚಿನ್ನ ಗೆದ್ದ ಅಮಿತ್ ಪಂಗಲ್
Follow us on

ಭಾನುವಾರ ನಡೆದ ಕಾಮನ್‌ವೆಲ್ತ್ ಗೇಮ್ಸ್ 2022 (Commonwealth Games 2022)ರಲ್ಲಿ ಭಾರತದ ಸ್ಟಾರ್ ಬಾಕ್ಸರ್ ಅಮಿತ್ ಪಂಗಲ್ (Amit Panghal) ಕಾಮನ್‌ವೆಲ್ತ್ ಗೇಮ್ಸ್ 2022 ರಲ್ಲಿ ಇಂಗ್ಲೆಂಡ್‌ ಬಾಕ್ಸರ್‌ಗೆ ಸೋಲಿನ ಪಂಚ್ ನೀಡುವ ಮೂಲಕ ತಮ್ಮ ಪದಕದ ಬಣ್ಣವನ್ನು ಬದಲಾಯಿಸಿದ್ದಾರೆ. 2018ರ ಗೋಲ್ಡ್ ಕೋಸ್ಟ್ ಕಾಮನ್​ವೆಲ್ತ್ ಗೇಮ್ಸ್​ನಲ್ಲಿ ಬೆಳ್ಳಿಗೆ ತೃಪ್ತಿಪಟ್ಟುಕೊಂಡಿದ್ದ ಪಂಗಲ್ ಅಂತಿಮವಾಗಿ ಈ ಬಾರಿ 51 ಕೆ.ಜಿ. ವಿಭಾಗದಲ್ಲಿ ಭಾರತಕ್ಕೆ 15ನೇ ಚಿನ್ನದ ಪದಕ ನೀಡಿದರು. ಪಂಗಲ್ ಅವರ ಈ ಪದಕ ಭಾರತದ 15ನೇ ಚಿನ್ನದ ಪದಕವಾಗಿದೆ.

ಇಡೀ ಪಂದ್ಯದಲ್ಲಿ ಪಂಗಲ್ ಪ್ರಾಬಲ್ಯ

ಇದನ್ನೂ ಓದಿ
CWG 2022: ಭಾರತಕ್ಕೆ ಮತ್ತೊಂದು ಪದಕ ಫಿಕ್ಸ್; ಬ್ಯಾಡ್ಮಿಂಟನ್​ನಲ್ಲಿ ಫೈನಲ್ ಪ್ರವೇಶಿಸಿದ ಪಿವಿ ಸಿಂಧು..!
CWG 2022: ನೀತು ಪಂಚ್‌ಗೆ ಬೆದರಿದ ಇಂಗ್ಲೆಂಡ್ ಬಾಕ್ಸರ್; ಬಾಕ್ಸಿಂಗ್​ನಲ್ಲಿ ಭಾರತಕ್ಕೆ ಬಂಗಾರ
CWG 2022: ಶೂಟೌಟ್‌ನಲ್ಲಿ ನ್ಯೂಜಿಲೆಂಡ್ ತಂಡವನ್ನು ಸೋಲಿಸಿ ಕಂಚಿನ ಪದಕ ಗೆದ್ದ ಭಾರತ ಮಹಿಳಾ ಹಾಕಿ ತಂಡ

ಎಲ್ಲಾ ಮೂರು ಸುತ್ತುಗಳಲ್ಲಿ, ಪಂಗಲ್ ಅವರು ಇಂಗ್ಲಿಷ್ ಬಾಕ್ಸರ್‌ಗೆ ಮರಳುವ ಅವಕಾಶವನ್ನು ನೀಡದೆ ಅವರ ಮೇಲೆ ಒತ್ತಡ ಹೇರಿದರು. ಮೊದಲ ಸುತ್ತಿನಲ್ಲಿ 5 ತೀರ್ಪುಗಾರರು ಪಂಗಲ್‌ಗೆ ತಲಾ 10 ಅಂಕಗಳನ್ನು ನೀಡಿದರು. ಎರಡನೇ ಸುತ್ತಿನಲ್ಲಿ, ಪಂಗಲ್ 5 ರಲ್ಲಿ 4 ತೀರ್ಪುಗಾರರಿಂದ 10 ಅಂಕಗಳನ್ನು ಪಡೆಯುವಲ್ಲಿ ಯಶಸ್ವಿಯಾದರು. ಮೂರನೇ ಸುತ್ತಿನಲ್ಲಿಯೂ ಪಂಗಲ್‌ಗೆ 4 ತೀರ್ಪುಗಾರರು 10 ಅಂಕಗಳನ್ನು ನೀಡಿದರು. ಈ ಮೂಲಕ ಭಾರತದ ಬಾಕ್ಸರ್ 5-0 ಯಿಂದ ಪ್ರಶಸ್ತಿಯನ್ನು ಗೆದ್ದರು.

ಸೆಮಿಫೈನಲ್​ನಲ್ಲಿನ​ ತಪ್ಪು ರಿಪೀಟ್ ಆಗಲಿಲ್ಲ

ಈ ಮೊದಲು ಪಂಗಲ್ ಜಿಂಬಾಬ್ವೆಯ ಪ್ಯಾಟ್ರಿಕ್ ಚೈನಾಂಬಾ ಅವರನ್ನು 5-0 ಅಂತರದಿಂದ ಸೋಲಿಸಿ ಫೈನಲ್ ಪ್ರವೇಶಿಸಿದರು. ಸೆಮಿಫೈನಲ್‌ನಲ್ಲಿ ಪಂಗಲ್ ಪ್ರಾಥಮಿಕ ಸುತ್ತಿನಲ್ಲಿ ಹಿಂದುಳಿದಿದ್ದರು, ಆರಂಭದಿಂದಲೂ ಎದುರಾಳಿ ಆಟಗಾರ ಅವರ ಮೇಲೆ ಪಂಚ್‌ಗಳ ಮಳೆಗರೆದರು. ಆದಾಗ್ಯೂ ಪಂಗಲ್ ಬಲವಾದ ಪುನರಾಗಮನ ಮಾಡಿದರು. ಭಾರತದ ಬಾಕ್ಸರ್ ಫೈನಲ್‌ನಲ್ಲಿ ಸೆಮಿಫೈನಲ್​ನಲ್ಲಿ ಮಾಡಿದ ತಪ್ಪನ್ನು ಪುನರಾವರ್ತಿಸಲಿಲ್ಲ. ರಿಂಗ್‌ಗೆ ಪ್ರವೇಶಿಸಿದ ತಕ್ಷಣ ಪಂಗಲ್, ಇಂಗ್ಲಿಷ್ ಬಾಕ್ಸರ್‌ನ ಉತ್ಸಾಹವನ್ನು ಉತ್ತಮ ಪಂಚ್‌ಗಳಿಂದ ಹತ್ತಿಕ್ಕಿದರು. ಇದು ಎದುರಾಳಿಯ ಮೇಲೆ ಒತ್ತಡ ಹೇರಲು ಅವರಿಗೆ ಸುಲಭವಾಯಿತು. ಮೊದಲ ಸುತ್ತಿನಿಂದಲೇ ತೀರ್ಪುಗಾರರ ನಿರ್ಧಾರ ಅಮಿತ್ ಪಂಗಲ್ ಪರವಾಗಿತ್ತು.

ಪಂಗಲ್‌ ಹೊಡೆತದ ಮುಂದೆ ಎದುರಾಳಿ ಅಸಹಾಯಕ

ಪಂಗಲ್ ಅವರ ಪಂಚ್‌ಗಳು ಇಂಗ್ಲಿಷ್ ಬಾಕ್ಸರ್‌ನನ್ನೂ ತೀವ್ರವಾಗಿ ಹಾನಿಗೊಳಿಸಿದವು. ಕೀರನ್ ಮೆಕ್‌ಡೊನಾಲ್ಡ್ ಅವರು ಭಾರತದ ಆಟಗಾರನ ಪ್ರಬಲ ಪಂಚ್‌ಗಳಿಂದ ತೀವ್ರವಾಗಿ ಗಾಯಗೊಂಡರು. ಇದಕ್ಕೆ ಪ್ರತ್ಯಕ್ಷ ಸಾಕ್ಷಿ ಎಂಬಂತೆ ಆತನ ಮುಖದಿಂದ ರಕ್ತ ಬರುತ್ತಿರುವುದು ಕಂಡುಬಂತು. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಹೃದಯ ವಿದ್ರಾವಕ ಸೋಲನ್ನು ಅನುಭವಿಸಿದ ನಂತರ ಬರ್ಮಿಂಗ್ಹ್ಯಾಮ್‌ನಲ್ಲಿ ಪಂಗಲ್ ಅದ್ಭುತ ಪುನರಾಗಮನ ಮಾಡಿ ಪದಕ ಗೆಲ್ಲುವಲ್ಲಿ ಯಶಸ್ವಿಯಾದರು.

Published On - 4:14 pm, Sun, 7 August 22