CWG 2022: ಭಾರತಕ್ಕೆ ಮತ್ತೊಂದು ಪದಕ ಫಿಕ್ಸ್; ಬ್ಯಾಡ್ಮಿಂಟನ್ನಲ್ಲಿ ಫೈನಲ್ ಪ್ರವೇಶಿಸಿದ ಪಿವಿ ಸಿಂಧು..!
CWG 2022: ಎರಡು ಬಾರಿ ಒಲಿಂಪಿಕ್ ಪದಕ ವಿಜೇತೆ ಸಿಂಧು ಅವರು ಸೆಮಿಫೈನಲ್‌ನಲ್ಲಿ ಸಿಂಗಾಪುರದ ಜಿಯಾ ಮಿನ್ ಅವರನ್ನು ಸೋಲಿಸಿ 2022ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತಕ್ಕೆ ಪದಕ ಖಚಿತಪಡಿಸಿದ್ದಾರೆ.
ಎರಡು ಬಾರಿ ಒಲಿಂಪಿಕ್ ಪದಕ ವಿಜೇತೆ (Olympic medalist) ಸಿಂಧು (PV Sindhu) ಅವರು ಸೆಮಿಫೈನಲ್‌ನಲ್ಲಿ ಸಿಂಗಾಪುರದ ಜಿಯಾ ಮಿನ್ ಅವರನ್ನು ಸೋಲಿಸಿ 2022ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ (Commonwealth Games 2022) ಭಾರತಕ್ಕೆ ಪದಕ ಖಚಿತಪಡಿಸಿದ್ದಾರೆ. ಮೊದಲ ಗೇಮ್‌ನಲ್ಲಿ ಭಾರತದ ತಾರೆ ಸಿಂಗಾಪುರದ ಆಟಗಾರ್ತಿಯಿಂದ ಕಠಿಣ ಸವಾಲನ್ನು ಎದುರಿಸಿದರೂ, ಸಿಂಧು ತಮ್ಮ ಅನುಭವವನ್ನು ಉತ್ತಮವಾಗಿ ಬಳಸಿಕೊಂಡು ಮೊದಲ ಗೇಮ್ ಅನ್ನು 21-19 ಮತ್ತು ಎರಡನೇ ಗೇಮ್‌ನಲ್ಲಿ 21-17 ರಿಂದ ಗೆದ್ದು ಫೈನಲ್ ಪ್ರವೇಶಿಸಿದರು.
ಸಿಂಧು ಸೆಮಿಫೈನಲ್‌ಗೆ ಪ್ರವೇಶಿಸಲು ಸಾಕಷ್ಟು ಹೋರಾಟ ನಡೆಸಬೇಕಾಯಿತು. ಸಿಂಧು, ಕ್ವಾರ್ಟರ್ ಫೈನಲ್‌ನಲ್ಲಿ 60ನೇ ಶ್ರೇಯಾಂಕದ ಮಲೇಷ್ಯಾದ ಗೋ ವೀ ಜಿನ್ ಅವರನ್ನು ಸೋಲಿಸಲು ಸಾಕಷ್ಟು ಬೆವರು ಹರಿಸಬೇಕಾಯ್ತು. ಕೊನೆಗೂ ಸಿಂಧು 19-21, 21-14, 21-18 ಅಂತರದಲ್ಲಿ ಪಂದ್ಯವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಸಿಂಧು ಈ ಹಿಂದೆ 2014ರಲ್ಲಿ ಕಾಮನ್‌ವೆಲ್ತ್‌ನಲ್ಲಿ ಕಂಚು ಹಾಗೂ 2018ರಲ್ಲಿ ಬೆಳ್ಳಿ ಪದಕ ಗೆದ್ದಿದ್ದರು.
SUPER SINDHU IN FINALS! ???
A top class performance from @Pvsindhu1 to win her semis clash and inch closer to the?medal.
Kudos champ! ?
Score: 21-19, 21-17. @himantabiswa | @sanjay091968 #IndiaPhirKaregaSmash#B2022 #CWG2022 #Badminton @birminghamcg22 pic.twitter.com/d2WwQsVj7K
— BAI Media (@BAI_Media) August 7, 2022
ಸಿಂಧುಗೆ ಇಂಜುರಿ
ಪಂದ್ಯದ ವೇಳೆ, ಸಿಂಧು ತನ್ನ ಎಡಗಾಲಿಗೆ ಬ್ಯಾಂಡೇಜ್ ಸುತ್ತಿಕೊಂಡಿರುವುದು ಕಂಡುಬಂತು, ಇದರಿಂದಾಗಿ ಸಿಂಧು ನಡೆದಾಡಲು ಸ್ವಲ್ಪ ತೊಂದರೆ ಅನುಭವಿಸುತ್ತಿದ್ದರು. ಇದರ ಲಾಭ ಪಡೆದ ಸಿಂಗಾಪುರದ ಆಟಗಾರ್ತಿ ಅಮೋಘ ಆರಂಭ ನೀಡಿ 8-4ರ ಮುನ್ನಡೆ ಸಾಧಿಸಿದ್ದರು. ಆದರೆ ಪುನರಾಗಮನದಲ್ಲಿ ಮಿಂಚಿದ ಸಿಂಧು ಸ್ಕೋರ್ ಸಮಬಲಗೊಳಿಸಲು ಹೆಚ್ಚು ಸಮಯ ತೆಗೆದುಕೊಳ್ಳಲಿಲ್ಲ. ಡ್ರಾಪ್ ಶಾಟ್ ಮೂಲಕ ಪಾಯಿಂಟ್ಸ್ ಕಲೆಹಾಕಿದ ಅವರು ವಿರಾಮದವರೆಗೂ 11-9 ರಿಂದ ಮುನ್ನಡೆ ಸಾಧಿಸಿದರು.
#CommonwealthGames22 | India’s PV Sindhu beats Singapore’s Yeo Jia Min in Women’s Singles – Badminton; to play for gold next
(File photo) pic.twitter.com/GVfWVwHA7f
— ANI (@ANI) August 7, 2022
ಆದರೆ ಸಿಂಗಾಪುರದ ಆಟಗಾರ್ತಿ ಪಂದ್ಯದಲ್ಲಿ ಮತ್ತೆ ಪುನರಾಗಮನವನ್ನು ಮಾಡಿ ಪಾಯಿಂಟ್ ಅನ್ನು 16-19 ಕ್ಕೆ ತಂದು ನಿಲ್ಲಿಸಿದರು. ಎರಡನೇ ಗೇಮ್‌ನಲ್ಲೂ ಜಿಯಾ ಸಿಂಧುಗೆ ತೀವ್ರ ಪೈಪೋಟಿ ನೀಡಿದರು ಯಶಸ್ಸು ಸಾಧಿಸಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಸಿಂಧು ಪ್ರಬಲ ಚಿನ್ನದ ಪದಕ ಗೆಲ್ಲುವಲ್ಲಿ ಯಶಸ್ವಿಯಾದರು.
Published On - 3:36 pm, Sun, 7 August 22