ನೀವು ಕ್ಷಮೆ ಕೇಳ್ಬೇಡಿ, ಸಂಭ್ರಮಿಸಬೇಕು: ಪ್ರಧಾನಿ ಮೋದಿ ಅವರ ಸ್ಪೂರ್ತಿದಾಯಕ ಮಾತಿಗೆ ಪಾಕ್ ಪತ್ರಕರ್ತ ಫಿದಾ

TV9 Digital Desk

| Edited By: Zahir Yusuf

Updated on: Aug 07, 2022 | 12:55 PM

Pooja Gehlot: ಪೂಜಾ ಗ್ಲೆಹ್ಲೋಟ್ 2019 ರ U23 ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ 53 ಕೆಜಿ ವಿಭಾಗದಲ್ಲಿ ಬೆಳ್ಳಿ ಗೆದ್ದಿದ್ದರು. ವಿಶೇಷ ಎಂದರೆ ಈ ಸಾಧನೆ ಮಾಡಿದ ಎರಡನೇ ಭಾರತೀಯ ಮಹಿಳೆಯಾಗಿದ್ದಾರೆ. ಭುಜದ ಗಾಯದ ಕಾರಣ ಎರಡು ವರ್ಷಗಳ ವಿರಾಮದ ನಂತರ ಗೆಹ್ಲೋಟ್ ಈ ಬಾರಿ ಕಾಮನ್​ವೆಲ್ತ್​ ಗೇಮ್ಸ್​ನಲ್ಲಿ ಕಾಣಿಸಿಕೊಂಡಿದ್ದರು

ನೀವು ಕ್ಷಮೆ ಕೇಳ್ಬೇಡಿ, ಸಂಭ್ರಮಿಸಬೇಕು: ಪ್ರಧಾನಿ ಮೋದಿ ಅವರ ಸ್ಪೂರ್ತಿದಾಯಕ ಮಾತಿಗೆ ಪಾಕ್ ಪತ್ರಕರ್ತ ಫಿದಾ
Pooja Gehlot - PM Modi

ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ (CWG 2022) ಮಹಿಳೆಯರ 50 ಕೆಜಿ ಫ್ರೀಸ್ಟೈಲ್ ಕುಸ್ತಿಯಲ್ಲಿ ಪೂಜಾ ಗೆಹ್ಲೋಟ್ (Pooja Gehlot) ಕಂಚಿನ ಪದಕ ಗೆದ್ದಿದ್ದಾರೆ. ಈ ಗೆಲುವಿನ ಬಳಿಕ ಮಾತನಾಡಿದ ಪೂಜಾ ಗೆಹ್ಲೋಟ್, ಚಿನ್ನದ ಪದಕ ಗೆಲ್ಲಲು ಸಾಧ್ಯವಾಗದಿರುವುದಕ್ಕೆ ಭಾರತೀಯರಲ್ಲಿ ನಾನು ಕ್ಷಮೆಯಾಚಿಸುತ್ತಿರುವುದಾಗಿ  ತಿಳಿಸಿದ್ದರು. ಅವರ ಈ ಭಾವುಕ ವಿಡಿಯೋ ವೀಕ್ಷಿಸಿರುವ ಮಾನ್ಯ ಪ್ರಧಾನಿ ನರೇಂದ್ರ ಮೋದಿ ಅವರು, ಪೂಜಾ ಅವರ ಸಾಧನೆಯನ್ನು ಶ್ಲಾಘಿಸಿ ಸಾಂತ್ವನ ಹೇಳಿದ್ದಾರೆ. ಇದೀಗ ಪ್ರಧಾನಿ ಅವರ ಈ ನಡೆಗೆ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿರುವುದು ವಿಶೇಷ.

ಪಂದ್ಯದ ನಂತರದ ಸಂದರ್ಶನವೊಂದರಲ್ಲಿ ಮಾತನಾಡಿದ ಪೂಜಾ ಗೆಹ್ಲೋಟ್, ಚಿನ್ನದ ಪದಕ ಗೆಲ್ಲದಿದ್ದಕ್ಕಾಗಿ ಬೇಸರವಾಗಿದೆ. ಇದಕ್ಕಾಗಿ ನಾನು ಭಾರತೀಯರಲ್ಲಿ ಕ್ಷಮೆಯಾಚಿಸುತ್ತೇನೆ. ನಾನು ಇಲ್ಲಿ ಚಿನ್ನದ ಪದಕ ಗೆದ್ದು ರಾಷ್ಟ್ರಗೀತೆಯನ್ನು ನುಡಿಸಬೇಕೆಂದು ಬಯಸಿದ್ದೆ. ಆದರೆ ಅದು ಸಾಧ್ಯವಾಗಲಿಲ್ಲ. ಹೀಗಾಗಿ ನೀವೆಲ್ಲರೂ ನನ್ನನ್ನು ಕ್ಷಮಿಸಬೇಕು. ನನ್ನ ತಪ್ಪುಗಳಿಂದ ಪಾಠ ಕಲಿಯುತ್ತೇನೆ. ಅವುಗಳನ್ನು ಸರಿಪಡಿಸಲು ಮುಂದಾಗುತ್ತೇನೆ ಎಂದು ಕಣ್ಣೀರಿನೊಂದಿಗೆ ಪೂಜಾ ಗೆಹ್ಲೋಟ್ ದೇಶದ ಜನರಲ್ಲಿ ಬಹಿರಂಗ ಕ್ಷಮೆಯಾಚಿಸಿದ್ದರು.

ಇದನ್ನೂ ಓದಿ

ಭಾರತಕ್ಕೆ ಕಂಚಿನ ಪದಕ ತಂದುಕೊಟ್ಟ ಕುಸ್ತಿಪಟುವಿನ ವಿಡಿಯೋ ನೋಡಿದ ಪ್ರಧಾನಿ ಮೋದಿ, ಆಕೆಗೆ ಸಾಂತ್ವನ ಹೇಳಿದ್ದಾರೆ. ಪೂಜಾ, ನಿಮ್ಮ ಪದಕದ ಗೆಲುವಿಗೆ ಸಂಭ್ರಮಿಸಬೇಕೇ ಹೊರತು ಕ್ಷಮೆ ಕೇಳಬೇಕಿಲ್ಲ. ನಿಮ್ಮ ಜೀವನ ಪಯಣ ನಮಗೆಲ್ಲರಿಗೂ ಸ್ಪೂರ್ತಿ ನೀಡುತ್ತೆ. ನಿಮ್ಮ ಯಶಸ್ಸು ನಮಗೆ ಸಂತೋಷವನ್ನು ನೀಡುತ್ತದೆ. ನಿಮ್ಮ ಮುಂದೆ ದೊಡ್ಡ ಗುರಿಗಳಿವೆ..ಹೀಗೆ ಮಿಂಚುತಲ್ಲೇ ಇರಿ..! ಎಂದು ಪ್ರಧಾನಿ ಮೋಡಿ ಪೂಜಾ ಗೆಹ್ಲೋಟ್ ಅವರನ್ನು ಹುರಿದುಂಬಿಸಿದ್ದಾರೆ.

ವಿಶೇಷ ಎಂದರೆ ಪ್ರಧಾನಿ ಮೋದಿ ಅವರ ಈ ಸ್ಪೂರ್ತಿದಾಯಕ ಮಾತುಗಳು ಅತ್ತ ಪಾಕಿಸ್ತಾನದ ಕ್ರೀಡಾ ಪ್ರೇಮಿಗಳ ಕಣ್ತೆರೆಸಿದೆ. ಭಾರತದ ಪ್ರಧಾನಿ ಮಂತ್ರಿಯ ಟ್ವೀಟ್ ಅನ್ನು ರೀಟ್ವೀಟ್ ಮಾಡಿರುವ ಪಾಕಿಸ್ತಾನದ ಪತ್ರಕರ್ತ ಶೀರಾಝ್ ಹಸನ್, ನಮ್ಮ ಪ್ರಧಾನಿ ಯಾವತ್ತಾದರೂ ಇಂತಹ ಸಂದೇಶಗಳನ್ನು ನೀಡಿದ್ದಾರೆಯೇ ಎಂದು ಬಹಿರಂಗ ಪ್ರಶ್ನೆಗಳನ್ನೆತ್ತಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರು ಶ್ರೀರಾಝ್ ಹಸನ್, ಭಾರತವು ತಮ್ಮ ಅಥ್ಲೀಟ್‌ಗಳನ್ನು ಈ ರೀತಿ ಪ್ರೊಜೆಕ್ಟ್ ಮಾಡುತ್ತದೆ ನೋಡಿ. ಪೂಜಾ ಗೆಹ್ಲೋಟ್ ಕಂಚು ಗೆದ್ದು, ಚಿನ್ನದ ಪದಕ ಗೆಲ್ಲಲು ಸಾಧ್ಯವಾಗದೆ ದುಃಖ ವ್ಯಕ್ತಪಡಿಸಿದ್ದರು. ಇದನ್ನು ನೋಡಿ ಪ್ರಧಾನಿ ಮೋದಿ ಅವರು ಪ್ರತಿಕ್ರಿಯಿಸಿದ್ದಾರೆ. ಪಾಕಿಸ್ತಾನದ ಪ್ರಧಾನಿ ಅಥವಾ ಅಧ್ಯಕ್ಷರಿಂದ ಇಂತಹ ಸಂದೇಶವನ್ನು ನೀವು ಎಂದಾದರೂ ನೋಡಿದ್ದೀರಾ? ಪಾಕಿಸ್ತಾನದ ಅಥ್ಲೀಟ್‌ಗಳು ಕೂಡ ಪದಕಗಳನ್ನು ಗೆಲ್ಲುತ್ತಿದ್ದಾರೆ ಎಂದು ಅವರಿಗೆ ತಿಳಿದಿದೆಯೇ? ಎಂದು ಆಕ್ರೋಶ ಹೊರಹಾಕಿದ್ದಾರೆ.

ಕಾಮನ್​ವೆಲ್ತ್ ಗೇಮ್ಸ್​ನಲ್ಲಿ ಕಂಚಿನ ಪದಕ ಗೆದ್ದರೂ, ಚಿನ್ನದ ಪದಕ ಕೈತಪ್ಪಿರುವ ನೋವಿಗೆ ಸ್ಪಂದಿಸಿರುವ ಪ್ರಧಾನಿ ಮೋದಿ ಅವರ ನಡೆಗೆ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ. ಅದರಲ್ಲೂ ಪ್ರಧಾನಿ ಪೂಜಾ ಅವರ ವಿಡಿಯೋವನ್ನು ರಿಟ್ವೀಟ್ ಮಾಡುವ ಮೂಲಕ ಅವರ ಸಾಧನೆಯನ್ನು ಮತ್ತಷ್ಟು ಮಂದಿಯ ಮುಂದೆ ತೆರೆದಿಟ್ಟಿದ್ದಾರೆ. ಇದೀಗ ಪೂಜಾ ಗೆಹ್ಲೋಟ್ ಅವರಿಗೆ ಅಭಿನಂದನೆಯ ಮಹಾಪೂರವೇ ಹರಿದು ಬರುತ್ತಿದೆ. ಅತ್ತ ಪಾಕಿಸ್ತಾನದ ಪತ್ರಕರ್ತ ಶ್ರೀರಾಝ್ ಕೂಡ ನರೇಂದ್ರ ಮೋದಿ ಅವರ ಟ್ವೀಟ್ ಅನ್ನು ಹಂಚಿಕೊಳ್ಳುವ ಮೂಲಕ ಅಲ್ಲಿನ ನಾಯಕರಗಳನ್ನು ತರಾಟೆಗೆ ತೆಗೆದುಕೊಂಡಿರುವುದು ವಿಶೇಷ.

ಪೂಜಾ ಗ್ಲೆಹ್ಲೋಟ್ 2019 ರ U23 ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ 53 ಕೆಜಿ ವಿಭಾಗದಲ್ಲಿ ಬೆಳ್ಳಿ ಗೆದ್ದಿದ್ದರು. ವಿಶೇಷ ಎಂದರೆ ಈ ಸಾಧನೆ ಮಾಡಿದ ಎರಡನೇ ಭಾರತೀಯ ಮಹಿಳೆಯಾಗಿದ್ದಾರೆ. ಭುಜದ ಗಾಯದ ಕಾರಣ ಎರಡು ವರ್ಷಗಳ ವಿರಾಮದ ನಂತರ ಗೆಹ್ಲೋಟ್ ಈ ಬಾರಿ ಕಾಮನ್​ವೆಲ್ತ್​ ಗೇಮ್ಸ್​ನಲ್ಲಿ ಕಾಣಿಸಿಕೊಂಡಿದ್ದರು. ಆರಂಭದಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಾ ಬಂದಿದ್ದ ಪೂಜಾ ಅಂತಿಮ ಹೋರಾಟಗಳ ವೇಳೆ ಎಡವಿದ್ದರು. ಇದಾಗ್ಯೂ ಸ್ಕಾಟಿಷ್ ಆಟಗಾರ್ತಿ ಕ್ರಿಸ್ಟೆಲ್ ಲಾಮೊಫ್ಯಾಕ್ ಲೆಟ್ಚಿಡ್ಜಿಯೊ ವಿರುದ್ಧ ಗೆಲ್ಲುವ ಮೂಲಕ ಭಾರತಕ್ಕೆ ಕಂಚಿನ ಪದಕ ತಂದುಕೊಟ್ಟಿದ್ದಾರೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada