ಟೋಕಿಯೊ ಒಲಿಂಪಿಕ್ (Tokyo Olympic) ಬೆಳ್ಳಿ ಪದಕ ವಿಜೇತ ರವಿ ದಹಿಯಾ (Ravi Dahiya) ಕಾಮನ್‌ವೆಲ್ತ್ ಗೇಮ್ಸ್-2022 (Commonwealth Games-2022)ರಲ್ಲಿ ಪುರುಷರ 57 ಕೆಜಿ ತೂಕ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಶನಿವಾರ ನಡೆದ ಫೈನಲ್‌ನಲ್ಲಿ ರವಿ ಅವರು ನೈಜೀರಿಯಾ ಆಟಗಾರನನ್ನು ತಾಂತ್ರಿಕ ದಕ್ಷತೆಯ ಆಧಾರದ ಮೇಲೆ ಸೋಲಿಸಿ ಪದಕ ಗೆದ್ದರು. ಈ ಪಂದ್ಯದಲ್ಲಿ ರವಿ 10-0 ಅಂತರದಿಂದ ಗೆದ್ದರು. ನ್ಯೂಜಿಲೆಂಡ್ ಆಟಗಾರನನ್ನು ಮಣಿಸಿದ ರವಿ ಅವರು ಪಾಕಿಸ್ತಾನದ ಅಸಲ್ ಅಲಿ ಅವರನ್ನು 14-4 ಅಂತರದಿಂದ ಸೋಲಿಸಿ ಫೈನಲ್ ಪ್ರವೇಶಿಸಿ ಪದಕವನ್ನು ಖಚಿತಪಡಿಸಿಕೊಂಡರು.
ತನ್ನ ಎದುರಾಳಿಯ ವಿಕ್ನೇಸ್ ತಿಳಿದ ರವಿ ದಹಿಯಾ ಅದನ್ನು ತನ್ನ ಗೆಲುವಿಗೆ ಸದುಪಯೋಗ ಪಡಿಸಿಕೊಂಡರು. ಈ ನಡುವೆ ನೈಜೀರಿಯಾ ಆಟಗಾರ ದಾಳಿ ನಡೆಸಿದರಾದರೂ ರವಿ ಪ್ರಬಲ ಆಟ ಪ್ರದರ್ಶಿಸಿ ಅವರನ್ನು ಬಲೆಗೆ ಬೀಳಿಸಿದರು. ಇದೇ ವೇಳೆ ರವಿಗೆ ರೆಫರಿಯಿಂದ ನಿಷ್ಕ್ರಿಯತೆಯ ಎಚ್ಚರಿಕೆ ನೀಡಲಾಯಿತು. ಇಲ್ಲಿಂದ ತನ್ನ ಶಕ್ತಿ ಪ್ರದರ್ಶಿಸಿದ ರವಿ ಎರಡು ಅಂಕಗಳ ಗಳಿಸಲು ಎದುರಾಳಿಯ ಪಾದಗಳನ್ನು ಹಿಡಿದು ನೆಲಕ್ಕುರುಳಿಸಿ ಅಂಕವನ್ನು 8-0ಗೆ ಏರಿಸಿದರು.
RAVI WINS G?LD ?
3 time Asian Champion & #Tokyo2020 Olympics ? medalist ?♂️ @ravidahiya60 (M-57kg) has now conquered the #CommonwealthGames, winning GOLD ?on his debut ?
Brilliant Gutwrench & winning by technical superiority, that’s stoic & determined RAVI for you ?
1/1 pic.twitter.com/UhLFq7c8od— SAI Media (@Media_SAI) August 6, 2022
ಮೊದಲ ಬಾರಿಗೆ ಅದ್ಭುತ ಪ್ರದರ್ಶನ
ಈ ಕ್ರೀಡಾಕೂಟದಲ್ಲಿ ಅದ್ಭುತಗಳನ್ನು ಮಾಡಿದ ಮೊದಲ ಕುಸ್ತಿಪಟು ರವಿ. ಮೊಟ್ಟಮೊದಲ ಬಾರಿಗೆ ಒಲಿಂಪಿಕ್ಸ್ ಆಡಿದ ಅವರು ನಿರೀಕ್ಷೆಗೂ ಮೀರಿ ದೇಶಕ್ಕೆ ಬೆಳ್ಳಿ ಪದಕ ತಂದುಕೊಟ್ಟರು. ಟೋಕಿಯೊ ಒಲಿಂಪಿಕ್ಸ್-2020 ರಲ್ಲಿ ರವಿ ಪದಕ ಗೆಲ್ಲುತ್ತಾರೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ ಆದರೆ ಅವರು ಫೈನಲ್ ತಲುಪಿ ಬೆಳ್ಳಿ ಪದಕ ಗೆಲ್ಲುವಲ್ಲಿ ಯಶಸ್ವಿಯಾದರು. ಅದೇ ರೀತಿ, ಅವರು ಮೊದಲ ಬಾರಿಗೆ ಕಾಮನ್ವೆಲ್ತ್ ಕ್ರೀಡಾಕೂಟವನ್ನು ಆಡುತ್ತಿದ್ದಾರೆ. ಮೊದಲ ಕ್ರೀಡಾಕೂಟದಲ್ಲೇ ಅವರು ಚಿನ್ನದ ಪದಕವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಇಲ್ಲಿ ಆತನಿಂದ ಚಿನ್ನದ ಪದಕದ ಭರವಸೆ ಮಾತ್ರ ಇತ್ತು, ಅದನ್ನು ಅವರು ಈಡೇರಿಸಿದರು. ಇದಲ್ಲದೇ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಮೂರು ಚಿನ್ನದ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಅವರು ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕವನ್ನು ಗೆದ್ದಿದ್ದಾರೆ. ಜೊತೆಗೆ ವಿಶ್ವ ಜೂನಿಯರ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು.
ರಾಷ್ಟ್ರಪತಿ, ಪ್ರಧಾನಿ ಅಭಿನಂದಿಸಿದ್ದಾರೆ
ದಹಿಯಾ ಅವರನ್ನು ಅಭಿನಂದಿಸಿದ ಅಧ್ಯಕ್ಷ ಮುರ್ಮು, “ಕಾಮನ್‌ವೆಲ್ತ್ ಕ್ರೀಡಾಕೂಟದ ಕುಸ್ತಿ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ರವಿಕುಮಾರ್ ದಹಿಯಾ ಅವರಿಗೆ ಅಭಿನಂದನೆಗಳು. ನಿಮ್ಮ ಐತಿಹಾಸಿಕ ಗೆಲುವು ಭಾರತೀಯ ಕ್ರೀಡಾ ಪ್ರೇಮಿಗಳ ನೆನಪಿನಲ್ಲಿ ಉಳಿಯುತ್ತದೆ. ನೀವು ದೇಶವನ್ನು ಹೆಮ್ಮೆಪಡುವಂತೆ ಮಾಡಿದ್ದೀರಿ ಎಂದು ಬರೆದುಕೊಂಡಿದ್ದಾರೆ.
ದಹಿಯಾ ಚಿತ್ರವನ್ನು ಹಂಚಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ, ದಹಿಯಾ ಚಾಂಪಿಯನ್‌ನಂತೆ ಆಡಿದರು ಮತ್ತು ದೇಶವನ್ನು ಹೆಮ್ಮೆಪಡಿಸಿದರು. ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನ ಗೆದ್ದ ರವಿ ದಹಿಯಾ ಅವರಿಗೆ ಅಭಿನಂದನೆಗಳು. ಅವರ ಯಶಸ್ಸು ಉತ್ಸಾಹ ಮತ್ತು ಸಮರ್ಪಣೆ ಇದ್ದರೆ ಯಾವುದೇ ಕನಸು ದೊಡ್ಡದಲ್ಲ ಎಂಬುದನ್ನು ಸಾಬೀತುಪಡಿಸುತ್ತದೆ ಎಂದು ಬರೆದುಕೊಂಡಿದ್ದಾರೆ.
ಇನ್ನಷ್ಟು ಕಾಮನ್ವೆಲ್ತ್ ಗೇಮ್ಸ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:16 pm, Sat, 6 August 22