CWG 2022: ಕುಸ್ತಿಯಲ್ಲಿ ಭಾರತಕ್ಕೆ 5ನೇ ಚಿನ್ನ; 53 ಕೆಜಿ ವಿಭಾಗದಲ್ಲಿ ಹ್ಯಾಟ್ರಿಕ್ ಚಿನ್ನ ಗೆದ್ದ ವಿನೇಶ್ ಫೋಗಟ್
CWG 2022: ಬರ್ಮಿಂಗ್ಹ್ಯಾಮ್ ಕಾಮನ್ವೆಲ್ತ್ ಗೇಮ್ಸ್ 2022 ರಲ್ಲಿ ಭಾರತವು ಕುಸ್ತಿಯಲ್ಲಿ ತನ್ನ ಐದನೇ ಚಿನ್ನದ ಪದಕವನ್ನು ಪಡೆದುಕೊಂಡಿದೆ. ಭಾರತದ ದೊಡ್ಡ ಭರವಸೆಗಳಲ್ಲಿ ಒಬ್ಬರಾದ ಸೂಪರ್ಸ್ಟಾರ್ ಕುಸ್ತಿಪಟು ವಿನೇಶ್ ಫೋಗಟ್ 53 ಕೆಜಿ ವಿಭಾಗದಲ್ಲಿ ಚಿನ್ನದ ಪದಕವನ್ನು ಗೆದ್ದಿದ್ದಾರೆ.
ಬರ್ಮಿಂಗ್ಹ್ಯಾಮ್ ಕಾಮನ್ವೆಲ್ತ್ ಗೇಮ್ಸ್ 2022 (Birmingham Commonwealth Games 2022)ರಲ್ಲಿ ಭಾರತವು ಕುಸ್ತಿಯಲ್ಲಿ ತನ್ನ ಐದನೇ ಚಿನ್ನದ ಪದಕವನ್ನು ಪಡೆದುಕೊಂಡಿದೆ. ಭಾರತದ ದೊಡ್ಡ ಭರವಸೆಗಳಲ್ಲಿ ಒಬ್ಬರಾದ ಸೂಪರ್ಸ್ಟಾರ್ ಕುಸ್ತಿಪಟು ವಿನೇಶ್ ಫೋಗಟ್ (Vinesh Phogat) 53 ಕೆಜಿ ವಿಭಾಗದಲ್ಲಿ ಚಿನ್ನದ ಪದಕವನ್ನು ಗೆದ್ದಿದ್ದಾರೆ. ಅನುಭವಿ ಕುಸ್ತಿಪಟು ವಿನೇಶ್ ಅವರು ನಾರ್ಡಿಕ್ ಮಾದರಿಯಿಂದ ಈ ವಿಭಾಗದ ಪಂದ್ಯಗಳ ಎಲ್ಲಾ ಮೂರು ಪಂದ್ಯಗಳನ್ನು ಗೆದ್ದರು. ಈ ಮೂಲಕ ಹೆಚ್ಚು ಅಂಕಗಳನ್ನು ಗಳಿಸುವ ಮೂಲಕ ಚಿನ್ನದ ಪದಕವನ್ನು ಗೆದ್ದಿದ್ದಾರೆ. ಈ ಮೂಲಕ ವಿನೇಶ್ ಸತತ ಮೂರನೇ ಬಾರಿಗೆ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಅದ್ಭುತ ಹ್ಯಾಟ್ರಿಕ್ ಸಾಧನೆ ಮಾಡಿದರು.
ವಿನೇಶ್ ಈ ಹಿಂದೆ 2014ರ ಗ್ಲಾಸ್ಗೋ ಗೇಮ್ಸ್‌ನಲ್ಲಿ 48 ಕೆಜಿ ವಿಭಾಗದಲ್ಲಿ ಚಿನ್ನ ಗೆದ್ದಿದ್ದರೆ, 2018ರ ಗೋಲ್ಡ್ ಕೋಸ್ಟ್ ಗೇಮ್ಸ್‌ನಲ್ಲಿ 50 ಕೆಜಿಯಲ್ಲಿ ಚಿನ್ನ ಗೆದ್ದಿದ್ದರು. ಇದರ ನಂತರ, ಈಗ CWG ನಲ್ಲಿ ಮೂರನೇ ಬಾರಿಗೆ 53 ಕೆಜಿಯಲ್ಲಿ ಚಿನ್ನ ಗೆದ್ದಿದ್ದಾರೆ. ಇಷ್ಟೇ ಅಲ್ಲ, ಈ ಪದಕದಿಂದ ವಿನೇಶ್ ಕಳೆದ ವರ್ಷದ ಟೋಕಿಯೊ ಒಲಿಂಪಿಕ್ಸ್‌ನ ನಿರಾಸೆಯನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಲಿದ್ದಾರೆ. ಟೋಕಿಯೊದಲ್ಲಿ ವಿನೇಶ್ ಪದಕ ಗೆಲ್ಲುತ್ತಾರೆ ಎಂದು ಎಲ್ಲರು ನಿರೀಕ್ಷಿಸಿದ್ದರು ಆದರೆ ಗೆಲ್ಲಲು ಸಾಧ್ಯವಾಗಲಿಲ್ಲ. ಇದೀಗ ಒಂದು ವರ್ಷದ ಬಳಿಕ ಮಹತ್ವದ ಪದಕ ಗೆದ್ದಿದ್ದಾರೆ.
GOLD ?HATTRICK FOR VINESH ??@Phogat_Vinesh has scripted history yet again, from being the 1️⃣st Indian woman ?♀️ to win GOLD at both CWG & Asian Games, to becoming the 1️⃣st Indian woman ?♀️ to bag 3 consecutive GOLD?at #CommonwealthGames ?
?️GOLD by VICTORY BY FALL ? 1/1 pic.twitter.com/CeeGYqJ0RT
— SAI Media (@Media_SAI) August 6, 2022
ನಾರ್ಡಿಕ್ ಫಾರ್ಮ್ಯಾಟ್ ಎಂದರೇನು?
ವಿನೇಶ್ ಅವರಿಗೆ ಈ ಪಂದ್ಯ ಅಷ್ಟು ಸುಲಭವಾಗಿ ಇರಲಿಲ್ಲ, ಇದರಲ್ಲಿ ಕುಸ್ತಿಪಟುಗಳನ್ನು ಎರಡು ವಿಭಿನ್ನ ಗುಂಪುಗಳಾಗಿ ವಿಂಗಡಿ, ನಂತರ ಫೈನಲ್ ನಡೆಯುತ್ತದೆ. ಈ ಪಂದ್ಯವನ್ನು ನಾರ್ಡಿಕ್ ಮಾದರಿಯಲ್ಲಿ ಆಡಲಾಯಿತು. ಮೂಲಭೂತವಾಗಿ, ತೂಕ ವಿಭಾಗದಲ್ಲಿ 6 ಕ್ಕಿಂತ ಹೆಚ್ಚು ಸ್ಪರ್ಧಿಗಳು ಇಲ್ಲದಿದ್ದಾಗ ನಾರ್ಡಿಕ್ ಸ್ವರೂಪವನ್ನು ಬಳಸಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಎಲ್ಲಾ ಕುಸ್ತಿಪಟುಗಳು ‘ರೌಂಡ್ ರಾಬಿನ್’ ಅಡಿಯಲ್ಲಿ ಪರಸ್ಪರ ಪೈಪೋಟಿ ನಡೆಸಬೇಕಾಗಿದೆ. ಅದರ ಆಧಾರದ ಮೇಲೆ, ಹೆಚ್ಚು ಅಂಕಗಳನ್ನು ಹೊಂದಿರುವವರು ಚಿನ್ನವನ್ನು ಪಡೆಯುತ್ತಾರೆ.
ಈ ಮೂಲಕ ವಿನೇಶ್ ಅವರ 53 ಕೆ.ಜಿ ವಿಭಾಗದಲ್ಲಿ ಕೇವಲ 4 ಕುಸ್ತಿಪಟುಗಳಿದ್ದರು. ಭಾರತವಲ್ಲದೆ ಕೆನಡಾ, ನೈಜೀರಿಯಾ ಮತ್ತು ಶ್ರೀಲಂಕಾದ ಕುಸ್ತಿಪಟುಗಳೂ ಇದ್ದರು. ವಿನೇಶ್ ಅವರು ಆಡಿದ ಎಲ್ಲಾ ಮೂರು ಪಂದ್ಯಗಳನ್ನು ಗೆದ್ದು ಹೆಚ್ಚಿನ ಅಂಕಗಳೊಂದಿಗೆ ಚಿನ್ನದ ಪದಕವನ್ನು ಗೆದ್ದರು. ವಿನೇಶ್ ಕೊನೆಯ ಬೌಟ್‌ನಲ್ಲಿ ಶ್ರೀಲಂಕಾದ ಕುಸ್ತಿಪಟುವನ್ನು ಸೋಲಿಸಿ ಕ್ಲೀನ್ ಸ್ವೀಪ್ ಮಾಡಿದರು. ಇದರೊಂದಿಗೆ ಕುಸ್ತಿಯಲ್ಲಿ ಭಾರತಕ್ಕೆ ಐದು ಮತ್ತು 11 ನೇ ಚಿನ್ನದ ಪದಕವನ್ನು ನೀಡಿದರು.
ಇನ್ನಷ್ಟು ಕಾಮನ್ವೆಲ್ತ್ ಗೇಮ್ಸ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:40 pm, Sat, 6 August 22