CWG 2022: ಕುಸ್ತಿಯಲ್ಲಿ ಭಾರತಕ್ಕೆ ಮತ್ತೊಂದು ಪದಕ; 50 ಕೆಜಿ ವಿಭಾಗದಲ್ಲಿ ಕಂಚು ಗೆದ್ದ ಪೂಜಾ ಗೆಹ್ಲೋಟ್
CWG 2022: ಭಾರತದ ಮಹಿಳಾ ಕುಸ್ತಿಪಟು ಪೂಜಾ ಗೆಹ್ಲೋಟ್ ಶನಿವಾರ ಮತ್ತೊಂದು ಪದಕವನ್ನು ದೇಶದ ಚೀಲದಲ್ಲಿ ಹಾಕಿದ್ದಾರೆ. 50 ಕೆಜಿ ತೂಕ ವಿಭಾಗದಲ್ಲಿ ಸ್ಕಾಟಿಷ್ ಕುಸ್ತಿಪಟುವನ್ನು 12-2 ರಿಂದ ತಾಂತ್ರಿಕ ದಕ್ಷತೆಯಲ್ಲಿ ಸೋಲಿಸುವ ಮೂಲಕ ಕಂಚಿನ ಪದಕವನ್ನು ಗೆದ್ದರು.
ಭಾರತದ ಮಹಿಳಾ ಕುಸ್ತಿಪಟು ಪೂಜಾ ಗೆಹ್ಲೋಟ್ (Pooja Gehlot) ಶನಿವಾರ ಮತ್ತೊಂದು ಪದಕವನ್ನು ದೇಶದ ಚೀಲದಲ್ಲಿ ಹಾಕಿದ್ದಾರೆ. 50 ಕೆಜಿ ತೂಕ ವಿಭಾಗದಲ್ಲಿ ಸ್ಕಾಟಿಷ್ ಕುಸ್ತಿಪಟುವನ್ನು 12-2 ರಿಂದ ತಾಂತ್ರಿಕ ದಕ್ಷತೆಯಲ್ಲಿ ಸೋಲಿಸುವ ಮೂಲಕ ಕಂಚಿನ ಪದಕವನ್ನು ಗೆದ್ದರು. ಕಾಮನ್ವೆಲ್ತ್ ಗೇಮ್ಸ್ನಲ್ಲಿ (Commonwealth Games) ಭಾರತಕ್ಕೆ ಕುಸ್ತಿಯಲ್ಲಿ ಇದು ಏಳನೇ ಪದಕವಾಗಿದೆ. ಇದಕ್ಕೂ ಮುನ್ನ ಶುಕ್ರವಾರ ಆರು ಭಾರತೀಯ ಕುಸ್ತಿ ಆಟಗಾರರು ಮ್ಯಾಟ್‌ಗೆ ಇಳಿದ್ದಿದ್ದು ಎಲ್ಲರೂ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.
ಸ್ಕಾಟ್ಲೆಂಡ್‌ನ ಕ್ರಿಸ್ಟೆಲ್ಲೆ ಲೆಮೊಫೆಕ್ ಅವರು ಪೂಜಾಗೆ ಆರಂಭದಲ್ಲಿ ಉತ್ತಮ ಹೋರಾಟ ನೀಡಿದರು. ಕೆಳಗೆ ಹಾಕುವ ಮೂಲಕ ಎರಡು ಅಂಕಗಳನ್ನು ಪಡೆದು ಪೂಜಾ ಮೇಲೆ ಒತ್ತಡ ಹೇರಲು ಬಯಸಿದ್ದರು. ಇದರ ನಂತರ, ಪೂಜಾ ಅದ್ಭುತ ಪುನರಾಗಮನವನ್ನು ಮಾಡಿದರು ಮತ್ತು ಎದುರಾಳಿಗೆ ಯಾವುದೇ ಅವಕಾಶವನ್ನು ನೀಡದೆ 10-2 ರಿಂದ ಮುನ್ನಡೆ ಸಾಧಿಸಿದರು. ಇದಾದ ಬಳಿಕ ಇನ್ನೆರಡು ಅಂಕಗಳನ್ನು ಪಡೆದು 10 ಅಂಕಗಳ ವ್ಯತ್ಯಾಸ ಮಾಡಿ ತಾಂತ್ರಿಕ ದಕ್ಷತೆಯ ಆಧಾರದ ಮೇಲೆ ಜಯ ಸಾಧಿಸಿದರು.
POOJA WINS BRONZE ?
U-23 World Championships Silver Medalist and debutant #PoojaGehlot ?♀️ (W-50kg) bags ?after defeating Scotland’s Letchidjo by technical superiority (12-2) ?
Amazing Gutwrench by Pooja to take the 8 points lead ? Complete dominance ?#Cheer4India pic.twitter.com/N7Z7CkFZVd
— SAI Media (@Media_SAI) August 6, 2022
ಸೆಮಿಫೈನಲ್‌ನಲ್ಲಿ ಸೋಲು
ಮಹಿಳೆಯರ 50ಕೆಜಿ ವಿಭಾಗದಲ್ಲಿ ಪೂಜಾ ತಾಂತ್ರಿಕ ಶ್ರೇಷ್ಠತೆಯಿಂದ ಸ್ಕಾಟ್ಲೆಂಡ್‌ನ ಕ್ರಿಸ್ಟೆಲ್ಲೆ ಎಲ್ ಅವರನ್ನು ಸೋಲಿಸಿದರು. ಇದರ ನಂತರ ಕ್ಯಾಮರೂನ್‌ನ ರೆಬೆಕಾ ಆಂಡೊಲೊ ಮುವಾಂಬೊ ಮೇಲೆ ವಾಕ್‌ಓವರ್ ನೀಡಲಾಯಿತು. ಆದರೆ ಸೆಮಿ-ಫೈನಲ್‌ನಲ್ಲಿ ಕೆನಡಾದ ಮ್ಯಾಡಿಸನ್ ಬಿಯಾಂಕಾ ಪಾರ್ಕ್ಸ್ ಎದುರು ಪೂಜಾ ಸೋಲನುಭವಿಸಿದರು. ಮ್ಯಾಡಿಸನ್ ಫೈನಲ್‌ಗೆ ಪ್ರವೇಶಿಸಿದ್ದರಿಂದ ಪೂಜಾ ಅವರು ಗೆದ್ದ ಕಂಚಿನ ಪದಕದ ಪಂದ್ಯವನ್ನು ಆಡುವ ಅವಕಾಶವನ್ನು ಪಡೆದರು.
Published On - 9:54 pm, Sat, 6 August 22