CWG 2022: ಭಾರತಕ್ಕೆ ಮೊದಲ ಚಿನ್ನದ ಪದಕ; ವೇಟ್‌ಲಿಫ್ಟಿಂಗ್​ನಲ್ಲಿ ಚಿನ್ನ ಗೆದ್ದ ಮೀರಾಬಾಯಿ ಚಾನು

| Updated By: ಪೃಥ್ವಿಶಂಕರ

Updated on: Jul 30, 2022 | 10:53 PM

CWG 2022: ಮೀರಾಬಾಯಿ ಚಾನು ಭಾರತಕ್ಕೆ ಕಾಮನ್‌ವೆಲ್ತ್ ಗೇಮ್ಸ್ 2022 ರ ಮೊದಲ ಚಿನ್ನದ ಪದಕವನ್ನು ನೀಡಿದ್ದಾರೆ. ಚಾನು 49 ಕೆಜಿ ತೂಕ ವಿಭಾಗದಲ್ಲಿ ಒಟ್ಟು 201 ಕೆಜಿ ಭಾರ ಎತ್ತುವ ಮೂಲಕ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದರು.

CWG 2022: ಭಾರತಕ್ಕೆ ಮೊದಲ ಚಿನ್ನದ ಪದಕ; ವೇಟ್‌ಲಿಫ್ಟಿಂಗ್​ನಲ್ಲಿ ಚಿನ್ನ ಗೆದ್ದ ಮೀರಾಬಾಯಿ ಚಾನು
Follow us on

ಮೀರಾಬಾಯಿ ಚಾನು (Mirabai Chanu) ಭಾರತಕ್ಕೆ ಕಾಮನ್‌ವೆಲ್ತ್ ಗೇಮ್ಸ್​ನಲ್ಲಿ (Commonwealth Games 2022) ಮೊದಲ ಚಿನ್ನದ ಪದಕವನ್ನು ನೀಡಿದ್ದಾರೆ. ಚಾನು 49 ಕೆಜಿ ತೂಕ ವಿಭಾಗದಲ್ಲಿ ಒಟ್ಟು 201 ಕೆಜಿ ಭಾರ ಎತ್ತುವ ಮೂಲಕ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದರು. ಚಾನು ಸ್ನ್ಯಾಚ್‌ನಲ್ಲಿ 88 ಕೆಜಿ ಮತ್ತು ಕ್ಲೀನ್ ಮತ್ತು ಜರ್ಕ್‌ನಲ್ಲಿ 113 ಕೆಜಿ ಎತ್ತುವ ಮೂಲಕ ಪ್ರಶಸ್ತಿ ಗೆದ್ದು ದಾಖಲೆ ಕೂಡ ಮಾಡಿದ್ದಾರೆ. ಟೋಕಿಯೊ ಒಲಿಂಪಿಕ್ ಬೆಳ್ಳಿ ಪದಕ ವಿಜೇತ ಭಾರತದ ಈ ಸ್ಟಾರ್ ವೇಟ್‌ಲಿಫ್ಟರ್ ಸ್ನ್ಯಾಚ್‌ನಲ್ಲಿ ಕಾಮನ್‌ವೆಲ್ತ್ ಗೇಮ್ಸ್ ದಾಖಲೆಯನ್ನು ಮಾಡಿದ್ದಾರೆ.

ಕ್ಲೀನ್ ಮತ್ತು ಜರ್ಕ್‌ನಲ್ಲಿ ದಾಖಲೆ

ಇದನ್ನೂ ಓದಿ
CWG 2022: ಕಾಮನ್​ವೆಲ್ತ್​​ನಲ್ಲಿ ಕಂಚು ಗೆದ್ದ ಡ್ರೈವರ್ ಮಗ; ಕನ್ನಡಿಗನ ಸಾಧನೆಯ ಬಗ್ಗೆ ನಿಮಗೆಷ್ಟು ಗೊತ್ತು?
CWG 2022: ವೇಟ್‌ಲಿಫ್ಟಿಂಗ್​ನಲ್ಲಿ ಭಾರತಕ್ಕೆ ಎರಡನೇ ಪದಕ; 61 ಕೆಜಿ ವಿಭಾಗದಲ್ಲಿ ಕಂಚು ಗೆದ್ದ ಕನ್ನಡಿಗ ಗುರುರಾಜ ಪೂಜಾರಿ..!
CWG 2022: ಕೇವಲ ಒಂದೇ ಒಂದು ಕೆ.ಜಿ ಭಾರ ಪದಕದ ಬಣ್ಣವನ್ನೇ ಬದಲಾಯಿಸಿತು..!

ಕ್ಲೀನ್ ಅಂಡ್ ಜರ್ಕ್​ನಲ್ಲಿ ದಾಖಲೆಯ ಓಟ ಮುಂದುವರಿಸಿದ ಅವರು ಮೊದಲ ಪ್ರಯತ್ನದಲ್ಲಿ 109, ಎರಡನೇ ಪ್ರಯತ್ನದಲ್ಲಿ 113 ಕೆ.ಜಿ. ಭಾರ ಎತ್ತಿದರು. ಕ್ಲೀನ್ ಮತ್ತು ಜರ್ಕ್‌ನಲ್ಲಿ ಮೂರನೇ ಪ್ರಯತ್ನದಲ್ಲಿ 115 ಕೆಜಿ ಎತ್ತಲು ಚಾನು ಪ್ರಯತ್ನಿಸಿದರು, ಆದರೆ ಈ ಪ್ರಯತ್ನದಲ್ಲಿ ಯಶಸ್ವಿಯಾಗಲಿಲ್ಲ. ಭಾರತದ ಈ ಸ್ಟಾರ್ ವೇಟ್ ಲಿಫ್ಟರ್ ಕಳೆದ ಕಾಮನ್​ವೆಲ್ತ್ ಗೇಮ್ಸ್​ನಲ್ಲೂ ಚಿನ್ನ ಗೆದ್ದಿದ್ದರು. ಈಗ ಬರ್ಮಿಂಗ್ ಹ್ಯಾಮ್​ನಲ್ಲೂ ಅವರ ಸುವರ್ಣ ಪಯಣ ಮುಂದುವರೆಯಿತು. ಮೇರಿ ರೋಲಿಯಾ 172 ಕೆಜಿ ಎತ್ತುವ ಮೂಲಕ ಬೆಳ್ಳಿ ಪದಕ ಗೆದ್ದರೆ, ಹನಾ 171 ಕೆಜಿ ಎತ್ತುವ ಮೂಲಕ ಕಂಚಿನ ಪದಕ ಗೆದ್ದರು.

ಕಳೆದ ಕಾಮನ್‌ವೆಲ್ತ್ ಗೇಮ್ಸ್‌ ಸ್ನಾಚ್​ನಲ್ಲಿ 85 ಕೆಜಿ ಭಾರ ಎತ್ತಿದ್ದರು. ಕ್ಲೀನ್ ಅಂಡ್ ಜರ್ಕ್​ನಲ್ಲಿ 109 ಕೆಜಿ ಎತ್ತಿದರು. ಒಟ್ಟಾರೆಯಾಗಿ, ಅವರು 194 ಕೆಜಿ ಭಾರ ಎತ್ತಿ ಈ ಹಿಂದೆ ಕಾಮನ್ವೆಲ್ತ್ ಕ್ರೀಡಾಕೂಟದ ದಾಖಲೆಯನ್ನು ಹೊಂದಿದ್ದರು. ಚಾನು ಈ ಬಾರಿ ಆ ದಾಖಲೆಯನ್ನು ಮುರಿದಿದ್ದಾರೆ. ಈ ಹಿಂದೆ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಗೆದ್ದಿದ್ದ ಮೀರಾಬಾಯಿ ಚಾನು 2014ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಬೆಳ್ಳಿ ಗೆದ್ದಿದ್ದರು ಎಂಬುದು ಗಮನಿಸಬೇಕಾದ ಸಂಗತಿ. ಮತ್ತು 2018 ರಲ್ಲಿ, ಚಾನು ಗೋಲ್ಡ್ ಕೋಸ್ಟ್‌ನಲ್ಲಿ ಚಿನ್ನ ಗೆದ್ದಿದ್ದರು.

ಬರ್ಮಿಂಗ್ಹ್ಯಾಮ್ ಕ್ರೀಡಾಕೂಟದಲ್ಲಿ ಭಾರತ ಇದುವರೆಗೆ ಮೂರು ಪದಕಗಳನ್ನು ಗೆದ್ದಿದೆ, ಅದು ವೇಟ್‌ಲಿಫ್ಟಿಂಗ್‌ನಲ್ಲಿ ಮಾತ್ರ ಬಂದಿದೆ. ಇದಕ್ಕೂ ಮುನ್ನ ಸಂಕೇತ್ ಮಹದೇವ್ ಸರ್ಗಾರ್ ಬೆಳ್ಳಿ ಹಾಗೂ ಗುರುರಾಜ ಪೂಜಾರಿ ಕಂಚಿನ ಪದಕ ಜಯಿಸಿದ್ದರು. ಇದೀಗ ಮೀರಾಬಾಯಿ ಮೊದಲ ಚಿನ್ನದ ಪದಕ ಪಡೆದಿರುವುದರಿಂದ ಭಾರತದ ಪದಕದ ರೇಸಿಂಗ್ ಇನ್ನಷ್ಟು ಉತ್ತಮಗೊಳ್ಳಲಿದೆ.

Published On - 10:34 pm, Sat, 30 July 22