86 ಫೋರ್, 7 ಸಿಕ್ಸ್: 498 ರನ್ ಚಚ್ಚಿದ ದ್ರೋಣ ದೇಸಾಯಿ

ಸೇಂಟ್ ಕ್ಸೇವಿಯರ್ಸ್ ಶಾಲಾ ತಂಡ ಕಲೆಹಾಕಿದ 844 ರನ್​ಗಳಿಗೆ ಉತ್ತರವಾಗಿ ಇನಿಂಗ್ಸ್ ಆರಂಭಿಸಿದ ಜೆಎಲ್ ಇಂಗ್ಲಿಷ್ ಸ್ಕೂಲ್ ತಂಡವು ಕೇವಲ 40 ರನ್​ಗಳಿಗೆ ಆಲೌಟ್ ಆದರು. ಇನ್ನು ಫಾಲೋ ಆನ್​ನೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದರೂ ನೂರು ರನ್ ಗಳಿಸಲು ಸಾಧ್ಯವಾಗಲಿಲ್ಲ. ಸೇಂಟ್ ಕ್ಸೇವಿಯರ್ಸ್ ತಂಡವು ಭರ್ಜರಿ ಜಯ ಸಾಧಿಸಿತು.

86 ಫೋರ್, 7 ಸಿಕ್ಸ್: 498 ರನ್ ಚಚ್ಚಿದ ದ್ರೋಣ ದೇಸಾಯಿ
Drona Desai
Follow us
ಝಾಹಿರ್ ಯೂಸುಫ್
|

Updated on: Sep 26, 2024 | 11:43 AM

ಟೆಸ್ಟ್ ಕ್ರಿಕೆಟ್​ನಲ್ಲಿ ಅತ್ಯಧಿಕ ಗರಿಷ್ಠ ರನ್​ಗಳಿಸಿದ ಬ್ಯಾಟರ್ ಯಾರೆಂಬ ಪ್ರಶ್ನೆಗೆ ಥಟ್ಟನೆ ಬರುವ ಉತ್ತರ ವೆಸ್ಟ್ ಇಂಡೀಸ್​ನ ಬ್ರಿಯಾನ್ ಲಾರಾ. 2004 ರಲ್ಲಿ ಲಾರಾ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ 400 ರನ್ ಬಾರಿಸಿ ವಿಶ್ವ ದಾಖಲೆ ನಿರ್ಮಿಸಿದ್ದರು. ಇದೀಗ ಅಂತಹದ್ದೇ ಸಾಧನೆ ಮಾಡಿದ್ದಾರೆ ಭಾರತೀಯ ಪ್ರತಿಭೆ ದ್ರೋಣ ದೇಸಾಯಿ. ಆದರೆ ಇದು ಶಾಲಾ ಕ್ರಿಕೆಟ್​ನಲ್ಲಿ ಎಂಬುದಷ್ಟೇ ವ್ಯತ್ಯಾಸ.

ಗುಜರಾತ್‌ನ 18 ವರ್ಷದ ಬ್ಯಾಟ್ಸ್‌ಮನ್ ದ್ರೋಣ ದೇಸಾಯಿ ಶಾಲಾ ಪಂದ್ಯಾವಳಿಯಲ್ಲಿ ಏಕಾಂಗಿಯಾಗಿ 498 ರನ್​ ಬಾರಿಸಿ ಇಡೀ ವಿಶ್ವದ ಗಮನ ಸೆಳೆದಿದ್ದಾರೆ. ಅಹಮದಾಬಾದ್‌ನಲ್ಲಿ ನಡೆದ 19 ವರ್ಷದೊಳಗಿನವರ ಈ ಪಂದ್ಯಾವಳಿಯಲ್ಲಿ ಸೇಂಟ್ ಕ್ಸೇವಿಯರ್ಸ್ ಮತ್ತು ಜೆಎಲ್ ಇಂಗ್ಲಿಷ್ ಸ್ಕೂಲ್​ ತಂಡಗಳು ಮುಖಾಮುಖಿಯಾಗಿದ್ದವು.

ಈ ಪಂದ್ಯದಲ್ಲಿ ಸೇಂಟ್ ಕ್ಸೇವಿಯರ್ಸ್ ಶಾಲೆಯ ಪರ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ದ್ರೋಣ ದೇಸಾಯಿ 320 ಎಸೆತಗಳಲ್ಲಿ 498 ರನ್ ಬಾರಿಸಿ ಹಿಂತಿರುಗಿದ್ದರು. ಒಟ್ಟು 372 ನಿಮಿಷಗಳ ಕಾಲ ಕ್ರೀಸ್‌ನಲ್ಲಿದ್ದ ದೇಸಾಯಿ ಬ್ಯಾಟ್​ನಿಂದ ಸಿಡಿದ ಫೋರ್​ಗಳ ಸಂಖ್ಯೆ 86, ಹಾಗೆಯೇ 7 ಸಿಕ್ಸ್​ಗಳನ್ನು ಸಹ ಬಾರಿಸಿದ್ದಾರೆ. ಅಂದರೆ ಬೌಂಡರಿಗಳಿಂದೇ ದ್ರೋಣ ದೇಸಾಯಿ 386 ರನ್​ಗಳನ್ನು ಕಲೆಹಾಕಿದ್ದಾರೆ.

ಇದನ್ನೂ ಓದಿ: IPL 2025: RCB ಉಳಿಸಿಕೊಳ್ಳುವ ಅನ್​ಕ್ಯಾಪ್ಡ್​ ಆಟಗಾರ ಯಾರು?

ಇನ್ನು ದ್ರೋಣ ದೇಸಾಯಿ ಔಟಾಗುವ ವೇಳೆ ತಂಡವು 775 ರನ್ ಕಲೆಹಾಕಿತು. ಅಲ್ಲದೆ ಅಂತಿಮವಾಗಿ ಸೇಂಟ್ ಕ್ಸೇವಿಯರ್ಸ್ ತಂಡವು 844 ರನ್ ಗಳಿಸಿ ಇನ್ನಿಂಗ್ಸ್ ಡಿಕ್ಲೇರ್ ಘೋಷಿಸಿದರು.

40 ರನ್​ಗಳಿಗೆ ಆಲೌಟ್:

ಸೇಂಟ್ ಕ್ಸೇವಿಯರ್ಸ್ ಶಾಲಾ ತಂಡ ಕಲೆಹಾಕಿದ 844 ರನ್​ಗಳಿಗೆ ಪ್ರತಿಯಾಗಿ ಇನಿಂಗ್ಸ್ ಆರಂಭಿಸಿದ ಜೆಎಲ್ ಇಂಗ್ಲಿಷ್ ಸ್ಕೂಲ್ ತಂಡವು ಕೇವಲ 40 ರನ್​ಗಳಿಗೆ ಆಲೌಟ್ ಆದರು. ಇನ್ನು ಫಾಲೋಆನ್​ನೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಜೆಎಲ್ ಇಂಗ್ಲಿಷ್ ತಂಡವು 92 ರನ್‌ಗಳಿಗೆ ಕುಸಿಯಿತು. ಈ ಮೂಲಕ ಸೇಂಟ್ ಕ್ಸೇವಿಯರ್ ತಂಡವು ಇನ್ನಿಂಗ್ಸ್ ಮತ್ತು 712 ರನ್​ಗಳ ಭರ್ಜರಿ ಜಯ ಸಾಧಿಸಿತು.

ಪ್ರಣವ್ ಧನವಾಡೆ ಹೆಸರಿನಲ್ಲಿದೆ ದಾಖಲೆ:

ಈ ಪಂದ್ಯದಲ್ಲಿ ದ್ರೋಣ ದೇಸಾಯಿ 498 ರನ್​ಗಳಿಸಿದರೂ ಇದು ದಾಖಲೆಯಲ್ಲ ಎಂಬುದು ವಿಶೇಷ. ಏಕೆಂದರೆ 2016 ರಲ್ಲಿ ನಡೆದ ಶಾಲಾ ಕ್ರಿಕೆಟ್​ನಲ್ಲಿ ಪ್ರಣವ್ ಧನವಾಡೆ ಅಜೇಯ 1009* ರನ್‌ ಬಾರಿಸಿ ದಾಖಲೆ ನಿರ್ಮಿಸಿದ್ದರು. ಅಂದು ಆರ್ಯ ಗುರುಕುಲ ವಿರುದ್ಧ ಕೆಸಿ ಗಾಂಧಿ ಶಾಲೆಯ ಪರವಾಗಿ ಇನ್ನಿಂಗ್ಸ್‌ ಆಡಿದ ಪ್ರಣವ್ 1000 ರನ್ ಗಳಿಸಿದ ಮೊದಲ ಬ್ಯಾಟ್ಸ್‌ಮನ್ ಎಂಬ ದಾಖಲೆಯನ್ನು ಬರೆದಿದ್ದರು. ಹಾಗೆಯೇ 2014 ರಲ್ಲಿ ಶಾಲಾ ಪಂದ್ಯಾವಳಿಯಲ್ಲಿ ಪೃಥ್ವಿ ಶಾ 546 ರನ್ ಬಾರಿಸಿ ಮಿಂಚಿದ್ದರು. ಇದೀಗ ಶಾಲಾ ಕ್ರಿಕೆಟ್ ಪಂದ್ಯಾವಳಿಯಲ್ಲಿ ಅಬ್ಬರಿಸಿದ ಬ್ಯಾಟರ್​ಗಳ ಪಟ್ಟಿಯಲ್ಲಿ ದ್ರೋಣ ದೇಸಾಯಿ ಕೂಡ ಸೇರ್ಪಡೆಯಾಗಿದ್ದಾರೆ.

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ