ಏಳನೇ ಆವೃತ್ತಿಯ ಐಸಿಸಿ ಟಿ20 ವಿಶ್ವಕಪ್ (2021 ICC Mens T20 World Cup) ಕಾವೇರುತ್ತಿದೆ. ಇಂದುಕೂಡ ಸೂಪರ್ 12ಗೆ (Super 12) ಲಗ್ಗೆಯಿಡಲು ಅರ್ಹತಾ ಸುತ್ತಿನ ಪಂದ್ಯದಲ್ಲಿ ಎರಡು ಮ್ಯಾಚ್ ನಡೆಯಲಿದೆ. ಕೂಟದ ಪ್ರಮುಖ ರೌಂಡ್ ಆಗಿರುವ ಸೂಪರ್-12 ಹಂತವನ್ನು ಪ್ರವೇಶಿಸಲಿರುವ 4 ತಂಡಗಳನ್ನು ನಿರ್ಧರಿಸುವ ಗ್ರೂಪ್ ಪಂದ್ಯಗಳ ಪೈಕಿ ಇಂದು ಸ್ಕಾಟ್ಲೆಂಡ್ ಮತ್ತು ಪಪುವಾ ನ್ಯೂಗಿನಿ (Papua New Guinea vs Scotland) ಐದನೇ ಮ್ಯಾಚ್ನಲ್ಲಿ ಮುಖಾಮುಖಿ ಆಗಲಿದೆ. 6ನೇ ಪಂದ್ಯದಲ್ಲಿ ಓಮನ್ ಮತ್ತು ಬಾಂಗ್ಲಾದೇಶ (Bangladesh vs Oman) ತಂಡ ಗೆಲುವಿಗೆ ಹೋರಾಟ ನಡೆಸಲಿದೆ.
ಸಂಜೆ 3:30ಕ್ಕೆ ಆರಂಭವಾಗಲಿರುವ ಸ್ಕಾಟ್ಲೆಂಡ್ ಮತ್ತು ಪಪುವಾ ನ್ಯೂಗಿನಿ ಪಂದ್ಯ ಸಾಕಷ್ಟು ಕುತೂಹಲ ಕೆರಳಿಸಿದೆ. ಮೊದಲ ಕಾದಾಟದಲ್ಲಿ ಸೋತಿರುವ ಪಪುವಾ ನ್ಯೂಗಿನಿಗೆ ಇದು ಗೆಲ್ಲಲೇ ಬೇಕಾದ ಪಂದ್ಯವಾಗಿದೆ. ಅಸಾದ್ ವಾಲ ನಾಯಕನಾಗಿ ಜವಾಬ್ದಾರಿಯಿಂದ ಆಡಬೇಕಿದೆ. ಟೋನಿ ಉರಾ, ಲೆಗಾ ಸೈಕಾ, ಚಾರ್ಲೆಸ್ ಅಮಿನಿ ಇವರಿಗೆ ಸಾತ್ ನೀಡಬೇಕಿದೆ.
ಸ್ಕಾಟ್ಲೆಂಡ್ ತಂಡ ಬಾಂಗ್ಲಾದೇಶ ವಿರುದ್ಧ ಗೆದ್ದು ವಿಶ್ವಾಸದಲ್ಲಿದೆ. ಇಂದಿನ ಪಂದ್ಯ ಗೆದ್ದು ಸೂಪರ್ 12ಗೆ ಹಂತಿರವಾಗುವ ಅಂದಾಜಿನಲ್ಲಿದೆ. ಕ್ರಿಸ್ ಗ್ರೀಸ್ ಆಲ್ರೌಂಡರ್ ಪ್ರದರ್ಶನ ತಂಡದ ದೊಡ್ಡ ಪ್ಲಸ್ ಪಾಯಿಂಟ್ ಆಗಿದೆ. ಮುನ್ಸೆ ಕೂಡ ಉತ್ತಮ ಲಯದಲ್ಲಿದ್ದಾರೆ.
ಇನ್ನು ಇಂದು ನಡೆಯಲಿರುವ ಮತ್ತೊಂದು ಪಂದ್ಯದಲ್ಲಿ ಓಮನ್ ಮತ್ತು ಬಾಂಗ್ಲಾ ಮುಖಾಮುಖಿ ಆಗುತ್ತಿದೆ. ಕಳೆದ ಪಂದ್ಯದಲ್ಲಿ ಸೋತ ಮೊಹಮ್ಮದುಲ್ಲ ಪಡೆ ಹೇಗೆ ಕಮ್ಬ್ಯಾಕ್ ಮಾಡುತ್ತದೆ ಎಂಬುದು ಕುತೂಹಲ. ತಂಡದಲ್ಲಿ ಸ್ಟಾರ್ ಆಟಗಾರರಿದ್ದರೂ ಸಂಘಟಿತ ಪ್ರದರ್ಶನ ನೀಡಲು ಎಡವುತ್ತಿದೆ. ಇತ್ತ ಓಮನ್ ತಂಡ ಕಳೆದ ಪಂದ್ಯದಲ್ಲಿ ಪಪುವಾ ವಿರುದ್ಧ 10 ವಿಕೆಟ್ಗಳ ಅಮೋಘ ಗೆಲುವು ಕಂಡಿತ್ತು. ಓಪನರ್ಗಳಾದ ಅಕಿಬ್ ಇಲ್ಯಾಸ್ ಮತ್ತು ಜಿತೇಂದರ್ ಸಿಂಗ್ ಅಜೇಯರಾಗಿ ಉಳಿದು ತಂಡಕ್ಕೆ ಗೆಲುವು ತಂದುಕೊಟ್ಟಿದ್ದರು. ಹೀಗಾಗಿ ಇವರಿಬ್ಬರ ನಡುವಣ ಕಾಳಗ ಸಾಕಷ್ಟು ಕುತೂಹಲ ಕೆರಳಿಸಿದೆ.
ಪಾಯಿಂಟ್ ಪಟ್ಟಿ:
ಗ್ರೂಪ್ ಎ:
1) ಶ್ರೀಲಂಕಾ: 1 ಪಂದ್ಯ 2 ಅಂಕ
2) ಐರ್ಲೆಂಡ್: 1 ಪಂದ್ಯ 2 ಅಂಕ
3) ನೆದರ್ಲೆಂಡ್ಸ್: 1 ಪಂದ್ಯ 0 ಅಂಕ
4) ನಮೀಬಿಯಾ: 1 ಪಂದ್ಯ 0 ಅಂಕ
ಗ್ರೂಪ್ ಬಿ:
1) ಓಮನ್: 1 ಪಂದ್ಯ 2 ಅಂಕ
2) ಸ್ಕಾಟ್ಲೆಂಡ್: 1 ಪಂದ್ಯ 2 ಅಂಕ
3) ಬಾಂಗ್ಲಾದೇಶ: 1 ಪಂದ್ಯ 0 ಅಂಕ
4) ಪಪುವಾ ನ್ಯೂಗಿನಿಯಾ: 1 ಪಂದ್ಯ 0 ಅಂಕ
SuryaKumar Yadav: ಇಂಗ್ಲೆಂಡ್ ವಿರುದ್ಧ ಗೆದ್ದ ಖುಷಿಯ ನಡುವೆ ಟೀಮ್ ಇಂಡಿಯಾಕ್ಕೆ ಆಘಾತ: ಸ್ಟಾರ್ ಬ್ಯಾಟರ್ ಅನುಮಾನ?
Sri Lanka vs Namibia: ಶ್ರೀಲಂಕಾ ಬೌಲರ್ಗಳ ದಾಳಿಗೆ ನಲುಗಿದ ನಮೀಬಿಯಾ: ಸಿಂಹಳೀಯರಿಂದ ಭರ್ಜರಿ ಆರಂಭ
(2021 ICC Mens T20 World Cup Bangladesh vs Oman and Papua New Guinea vs Scotland in Group B Match Today)