ಟಿ20 ಕ್ರಿಕೆಟ್​ನಲ್ಲಿ ಮತ್ತೊಂದು ಕೆಟ್ಟ ಪಂದ್ಯ: ಕೇವಲ 35 ರನ್​ಗಳಿಗೆ ಆಲೌಟ್..!

| Updated By: ಝಾಹಿರ್ ಯೂಸುಫ್

Updated on: Jun 17, 2022 | 1:04 PM

Botswana vs Uganda: ಉಗಾಂಡಾ ಬೌಲರ್​ಗಳ ಮುಂದೆ ಕ್ರೀಸ್ ಕಚ್ಚಿ ನಿಲ್ಲುವ ಪ್ರಯತ್ನ ಮಾಡಿದರೆ ಹೊರತು ರನ್​ಗಳಿಸಲು ಸಾಧ್ಯವಾಗಿರಲಿಲ್ಲ. ಪರಿಣಾಮ ಬೋಟ್ಸ್ವಾನಾ ತಂಡದ ಐವರು ಶೂನ್ಯಕ್ಕೆ ಔಟಾದರು.

ಟಿ20 ಕ್ರಿಕೆಟ್​ನಲ್ಲಿ ಮತ್ತೊಂದು ಕೆಟ್ಟ ಪಂದ್ಯ: ಕೇವಲ 35 ರನ್​ಗಳಿಗೆ ಆಲೌಟ್..!
ಸಾಂದರ್ಭಿಕ ಚಿತ್ರ
Follow us on

ಟೀಮ್ ಇಂಡಿಯಾ ಕಳೆದ ವರ್ಷ ಆಸ್ಟ್ರೇಲಿಯಾ ವಿರುದ್ದ ಅಡಿಲೇಡ್‌ನಲ್ಲಿ ಕೇವಲ 36 ರನ್‌ಗಳಿಗೆ ಆಲೌಟ್ ಆಗಿತ್ತು. ಇದೀಗ ಈ ಕಳಪೆ ಇನಿಂಗ್ಸ್​ ಅನ್ನು ಕೂಡ ಮೀರಿಸುವಂತೆ ಮತ್ತೊಂದು ತಂಡ ಕೇವಲ 35 ರನ್​ಗಳಿಗೆ ಆಲೌಟ್ ಆಗಿದೆ. ಅದು ಕೂಡ ಟಿ20 ಕ್ರಿಕೆಟ್​ನಲ್ಲಿ ಎಂಬುದು ವಿಶೇಷ. ಕಿಗಾಲಿ ಸಿಟಿಯಲ್ಲಿ ನಡೆಯುತ್ತಿರುವ ಕ್ವಿಬುಕಾ ಮಹಿಳಾ ಟ್ವೆಂಟಿ20 ಪಂದ್ಯಾವಳಿಯ 25ನೇ ಪಂದ್ಯದಲ್ಲಿ ಬೋಟ್ಸ್ವಾನಾ ಮತ್ತು ಉಗಾಂಡಾ ತಂಡಗಳು ಮುಖಾಮುಖಿಯಾಗಿತ್ತು. ಟಾಸ್ ಗೆದ್ದ ಉಗಾಂಡಾ ತಂಡವು ಮೊದಲು ಬೌಲಿಂಗ್ ಆಯ್ದುಕೊಂಡರು. ಅದರಂತೆ ಇನಿಂಗ್ಸ್​ ಆರಂಭಿಸಿದ ಬೋಟ್ಸ್ವಾನಾ ತಂಡವು ಆರಂಭಿಕ ಆಘಾತಕ್ಕೆ ಒಳಗಾಗಿತ್ತು.

ಮೊದಲ ಓವರ್​ನಲ್ಲೇ ವಿಕೆಟ್ ಕಳೆದುಕೊಂಡ ಬೋಟ್ಸ್ವಾನಾ ಆ ಬಳಿಕ ಚೇತರಿಸಿಕೊಳ್ಳಲೇ ಇಲ್ಲ ಎಂಬುದು ಅಚ್ಚರಿ. ಅಂದರೆ ಉಗಾಂಡಾ ಬೌಲರ್​ಗಳ ಮುಂದೆ ಕ್ರೀಸ್ ಕಚ್ಚಿ ನಿಲ್ಲುವ ಪ್ರಯತ್ನ ಮಾಡಿದರೆ ಹೊರತು ರನ್​ಗಳಿಸಲು ಸಾಧ್ಯವಾಗಿರಲಿಲ್ಲ. ಪರಿಣಾಮ ಬೋಟ್ಸ್ವಾನಾ ತಂಡದ ಐವರು ಶೂನ್ಯಕ್ಕೆ ಔಟಾದರು. ಇನ್ನು ಉಳಿದವರು ಎರಡಂಕಿ ಮೊತ್ತ ಕಲೆಹಾಕುವಲ್ಲಿ ವಿಫಲರಾದರು. ಇದಾಗ್ಯೂ 18.5 ಓವರ್​ಗಳ ಬ್ಯಾಟ್ ಮಾಡಿದ ಬೋಟ್ಸ್ವಾನಾ ಆಟಗಾರ್ತಿಯರು ಅಂತಿಮವಾಗಿ ಕಲೆಹಾಕಿದ್ದು ಕೇವಲ 35 ರನ್​ ಮಾತ್ರ.

ತಂಡದ ಪರ ಮೂಡಿಬಂದ ಅತ್ಯಧಿಕ ಸ್ಕೋರ್​ ಅಂದರೆ 7. ಇತ್ತ ಆಲೌಟ್ ಆಗದಂತೆ ನೋಡಿಕೊಳ್ಳಲು ಹೋದ ಬೋಟ್ಸ್ವಾನಾ ಆಟಗಾರ್ತಿಯರು 19ನೇ ಓವರ್​ನಲ್ಲಿ 35 ರನ್​ಗಳಿಗೆ ಸರ್ವಪತನ ಕಂಡಿತು. ಉಗಾಂಡಾ ಪರ ಅವೆಕೋ ಹಾಗೂ ಎಂಬಬಾಜಿ ತಲಾ 3 ವಿಕೆಟ್ ಉರುಳಿಸಿ ಮಿಂಚಿದರು. ಇನ್ನು 36 ರನ್​ಗಳ ಸಾಧಾರಣ ಗುರಿ ಪಡೆದ ಉಗಾಂಡಾ ತಂಡವು 7.3 ಓವರ್​ಗಳಲ್ಲಿ 1 ವಿಕೆಟ್ ನಷ್ಟಕ್ಕೆ ಗುರಿ ತಲುಪುವ ಮೂಲಕ 9 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತು.

ಇದನ್ನೂ ಓದಿ
On This Day: ಏಕದಿನ ವಿಶ್ವಕಪ್​: ಕೇವಲ 45 ರನ್​ಗೆ ಆಲೌಟ್..!
Heinrich Klaasen: ಬಡವರ ಧೋನಿ, RCB ಆಟಗಾರ…ಯಾರು ಈ ಹೆನ್ರಿಕ್ ಕ್ಲಾಸೆನ್..?
Hardik Pandya: ದಿನೇಶ್ ಕಾರ್ತಿಕ್ ವಿರುದ್ದ ಸೇಡು ತೀರಿಸಿಕೊಂಡ್ರಾ ಹಾರ್ದಿಕ್ ಪಾಂಡ್ಯ?
Dinesh Karthik: ಟೀಮ್ ಇಂಡಿಯಾ ಪರ ಯಾರೂ ಮಾಡದ ದಾಖಲೆ ಬರೆದ ದಿನೇಶ್ ಕಾರ್ತಿಕ್

ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್​ನಲ್ಲಿ ಅತೀ ಕಡಿಮೆ ರನ್​ಗಳಿಸಿದ ಕೆಟ್ಟ ದಾಖಲೆ ಟರ್ಕಿ ದೇಶದ ಹೆಸರಿನಲ್ಲಿದೆ. 2019 ರಲ್ಲಿ ಚೆಕ್ ರಿಪಬ್ಲಿಕ್ ವಿರುದ್ದದ ಪಂದ್ಯದಲ್ಲಿ ಟರ್ಕಿ ತಂಡವು ಕೇವಲ 21 ರನ್​ಗೆ ಆಲೌಟ್ ಆಗಿತ್ತು. ಇನ್ನು ಟೀಮ್ ಇಂಡಿಯಾ ಟಿ20 ಕ್ರಿಕೆಟ್​ನಲ್ಲಿ ಗಳಿಸಿದ ಅತೀ ಕಡಿಮೆ ರನ್​ ಎಂದರೆ 74. 2008 ರಲ್ಲಿ ಆಸ್ಟ್ರೇಲಿಯಾ ವಿರುದ್ದ ಭಾರತ ತಂಡವು ಕೇವಲ 74 ರನ್​ಗೆ ಆಲೌಟ್ ಆಗಿ ಹೀನಾಯ ಸೋಲನುಭವಿಸಿತ್ತು.

 

ಕ್ರಿಕೆಟ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

 

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.