WI vs BAN: 6 ಆಟಗಾರರು ಶೂನ್ಯಕ್ಕೆ ಔಟ್! ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಮುಜುಗರದ ದಾಖಲೆ ಬರೆದ ಬಾಂಗ್ಲಾದೇಶ

WI vs BAN: ಬಾಂಗ್ಲಾದೇಶದ ಆಟ ಎಷ್ಟು ಕೆಟ್ಟದಾಗಿದೆ ಎಂದರೆ ತಂಡದ ಸ್ಕೋರ್ ಒಂದೇ ಬಾರಿಗೆ 100 ರನ್‌ಗಳನ್ನು ತಲುಪುವಂತಿರಲಿಲ್ಲ. ಆದರೆ ಬಾಂಗ್ಲಾದೇಶದ ನಾಯಕ ಶಕೀಬ್ ಅಲ್ ಹಸನ್ 67 ಎಸೆತಗಳನ್ನು ಎದುರಿಸಿ 6 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 51 ರನ್ ಗಳಿಸಿದರು.

WI vs BAN: 6 ಆಟಗಾರರು ಶೂನ್ಯಕ್ಕೆ ಔಟ್! ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಮುಜುಗರದ ದಾಖಲೆ ಬರೆದ ಬಾಂಗ್ಲಾದೇಶ
WI vs BAN
Follow us
TV9 Web
| Updated By: ಪೃಥ್ವಿಶಂಕರ

Updated on: Jun 17, 2022 | 2:51 PM

ಬಾಂಗ್ಲಾದೇಶ ತಂಡ ಪ್ರಸ್ತುತ ವೆಸ್ಟ್ ಇಂಡೀಸ್ (West Indies vs Bangladesh) ಪ್ರವಾಸದಲ್ಲಿದೆ. ಆಂಟಿಗುವಾದ ವಿವಿಯನ್ ರಿಚರ್ಡ್ಸ್ ಸ್ಟೇಡಿಯಂನಲ್ಲಿ ಉಭಯ ರಾಷ್ಟ್ರಗಳ ನಡುವಿನ ಟೆಸ್ಟ್ ಪಂದ್ಯ ನಡೆಯುತ್ತಿದೆ. ಪಂದ್ಯದ ಮೊದಲ ದಿನ ಬಾಂಗ್ಲಾದೇಶ ತಂಡದ ಕಳಪೆ ಪ್ರದರ್ಶನ ಕಂಡು ಬಂತು. ತಂಡದ ಬ್ಯಾಟ್ಸ್‌ಮನ್‌ಗಳು ನೀಡಿದ ಪ್ರದರ್ಶನ ಈಗ ಇತಿಹಾಸದ ಪುಟಗಳನ್ನು ಸೇರಿದೆ. ಬಾಂಗ್ಲಾದೇಶದ ಆರು ಆಟಗಾರರು ಶೂನ್ಯ ರನ್‌ಗಳಿಗೆ ವಿಕೆಟ್ ಕಳೆದುಕೊಂಡು ಕೆಟ್ಟ ದಾಖಲೆಗೆ ಕೊರಳೊಡ್ಡಿದ್ದಾರೆ. ಬಾಂಗ್ಲಾದೇಶ (Bangladesh Cricket Team) ಸತತ ಎರಡನೇ ಟೆಸ್ಟ್ ಪಂದ್ಯದಲ್ಲೂ ಇಂತಹದೊಂದು ಆಟ ಪ್ರದರ್ಶಿಸಿದೆ. ಇದರೊಂದಿಗೆ ಇದೀಗ ಟೆಸ್ಟ್ ಕ್ರಿಕೆಟ್‌ನಲ್ಲಿ ತಂಡದ ಹೆಸರಲ್ಲಿ ನಾಚಿಕೆಗೇಡಿನ ದಾಖಲೆ ಬರೆದಿದೆ. ಶಕೀಬ್ ಅಲ್ ಹಸನ್ (Shakib Al Hasan) ಅವರ ಅರ್ಧಶತಕದ ನೆರವಿನಿಂದ ಬಾಂಗ್ಲಾದೇಶ ತಂಡ 103 ರನ್ ಗಳಿಸಿತು.

ಬಾಂಗ್ಲಾದೇಶದ ಆಟ ಎಷ್ಟು ಕೆಟ್ಟದಾಗಿದೆ ಎಂದರೆ ತಂಡದ ಸ್ಕೋರ್ ಒಂದೇ ಬಾರಿಗೆ 100 ರನ್‌ಗಳನ್ನು ತಲುಪುವಂತಿರಲಿಲ್ಲ. ಆದರೆ ಬಾಂಗ್ಲಾದೇಶದ ನಾಯಕ ಶಕೀಬ್ ಅಲ್ ಹಸನ್ 67 ಎಸೆತಗಳನ್ನು ಎದುರಿಸಿ 6 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 51 ರನ್ ಗಳಿಸಿದರು.

ಪ್ರವಾಸಿ ತಂಡದ 6 ಆಟಗಾರರು ಸ್ವಂತ ಖಾತೆಯನ್ನೂ ತೆರೆಯಲಿಲ್ಲ. ಇದು ಬಾಂಗ್ಲಾದೇಶದ ಆರಂಭಿಕ ಆಟಗಾರ ಮಹಮ್ಮದುಲ್ ಹಸನ್ ಜಾಯ್ ಅವರೊಂದಿಗೆ ಪ್ರಾರಂಭವಾಯಿತು. ತಂಡದ ಸ್ಕೋರ್​ 1 ಆಗಿದ್ದಾಗ ಗೋಲ್ಡನ್ ಡಕ್​ಗೆ ವಿಕೆಟ್ ಕಳೆದುಕೊಂಡರು. ಆರಂಭಿಕ ಪಂದ್ಯದ ಎರಡನೇ ಎಸೆತದಲ್ಲಿ ಅವರು ತಮ್ಮ ಮೊದಲ ಎಸೆತವನ್ನು ಎದುರಿ ರೋಚ್‌ಗೆ ಬಲಿಯಾದರು.

ಇದನ್ನೂ ಓದಿ
Image
Ranji Trophy: ಪೂಜಾರ 2.0; ಬರೋಬ್ಬರಿ 54 ಎಸೆತಗಳ ನಂತರ ಖಾತೆ ತೆರೆದ ಐಪಿಎಲ್​ನ ಸ್ಟಾರ್ ಓಪನರ್..!
Image
IND vs IRE: ಹಾರ್ದಿಕ್ ಭಾರತದ 9ನೇ ಟಿ20 ನಾಯಕ; 23 ವರ್ಷಗಳ ನಂತರ ಗುಜರಾತ್ ಆಟಗಾರನಿಗೆ ನಾಯಕತ್ವ!

ಇದನ್ನೂ ಓದಿ:ENG vs NZ: ಟೆಸ್ಟ್ ಕ್ರಿಕೆಟ್​ನಲ್ಲಿ ವಿಶ್ವದಾಖಲೆ ಬರೆದ ಇಂಗ್ಲೆಂಡ್ ವೇಗಿ ಜೇಮ್ಸ್ ಆಂಡರ್ಸನ್..!

ಆದರೆ ನಂತರ ಹಿಂದಿನ ಟೆಸ್ಟ್ ಪಂದ್ಯದಂತೆ ಶೂನ್ಯಕ್ಕೆ ಔಟಾಗುವ ಸರಮಾಲೆ ಆರಂಭವಾಯಿತು. ನಂತರ ತಂಡದ ಸ್ಕೋರ್ 3 ರನ್ ಆಗಿದ್ದಾಗ ಶಾಂಟೊ ಎರಡನೇ ವಿಕೆಟ್‌ಗೆ ಔಟಾದರು. ಅವರು 5 ಎಸೆತಗಳನ್ನು ಎದುರಿಸಿದರು. ಮೂರನೇ ವಿಕೆಟ್ ರೂಪದಲ್ಲಿ ಮೊನಿಮುಲ್ ಕೂಡ 6 ಎಸೆತಗಳನ್ನು ಎದುರಿಸಿ ಖಾತೆ ತೆರೆಯದೆ ಔಟಾದರು. 2 ಎಸೆತಗಳನ್ನು ಆಡಿದ ನೂರುಲ್ ಹಸನ್ ಶೂನ್ಯಕ್ಕೆ ಔಟಾದರು. ಮುಸ್ತಾಫಿಜುರ್ ರೆಹಮಾನ್ ಕೂಡ ಶೂನ್ಯಕ್ಕೆ ವಿಕೆಟ್ ಕಳೆದುಕೊಂಡರು. ಖಲೀಲ್ ಅಹ್ಮದ್ ಶೂನ್ಯಕ್ಕೆ ಔಟಾಗುವುದರೊಂದಿಗೆ ಶೂನ್ಯಕ್ಕೆ ಮರಳಿದ ಆರನೇ ಆಟಗಾರ ಎನಿಸಿಕೊಂಡರು.

ಸತತ ಎರಡನೇ ಪಂದ್ಯದಲ್ಲಿ ಕಳಪೆ ಪ್ರದರ್ಶನ

ಇದಕ್ಕೂ ಮುನ್ನ ಮೇ ತಿಂಗಳಲ್ಲಿ ಶ್ರೀಲಂಕಾ ಮತ್ತು ಬಾಂಗ್ಲಾದೇಶ ನಡುವೆ ಟೆಸ್ಟ್ ಪಂದ್ಯ ನಡೆದಿದ್ದು, ಇದು ಉಭಯ ದೇಶಗಳ ನಡುವಿನ ಟೆಸ್ಟ್ ಸರಣಿಯ ಎರಡನೇ ಪಂದ್ಯವಾಗಿತ್ತು. ಇದರಲ್ಲಿ 6 ಬಾಂಗ್ಲಾದೇಶ ಬ್ಯಾಟ್ಸ್‌ಮನ್‌ಗಳು ಖಾತೆ ತೆರೆಯದೆ ವಿಕೆಟ್ ಕಳೆದುಕೊಂಡರು. ಹೀಗಾಗಿ ಸತತ ಎರಡನೇ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶ ಬ್ಯಾಟ್ಸ್​ಮನ್​ಗಳು ಕಳಪೆ ಪ್ರದರ್ಶನ ನೀಡುವ ಮೂಲಕ ನಾಚಿಕೆಗೇಡಿನ ದಾಖಲೆ ಬರೆದಿದ್ದಾರೆ. ವೆಸ್ಟ್ ಇಂಡೀಸ್ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಸತತ ಎರಡು ಪಂದ್ಯಗಳಲ್ಲಿ ಆರು ಬ್ಯಾಟ್ಸ್‌ಮನ್‌ಗಳನ್ನು ಶೂನ್ಯಕ್ಕೆ ಔಟ್ ಮಾಡಿದ ಮೊದಲ ತಂಡವಾಗಿದೆ.

ಪಂದ್ಯದ ಸ್ಥಿತಿ

ಟಾಸ್ ಗೆದ್ದ ವೆಸ್ಟ್ ಇಂಡೀಸ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಟಾಸ್ ಸೋತ ಬಾಂಗ್ಲಾದೇಶ ಬ್ಯಾಟಿಂಗ್‌ಗೆ ಇಳಿಯಿತು. ಕಳಪೆ ಆಟದ ನಂತರ ತಂಡ 103 ರನ್‌ಗಳಿಗೆ ಆಲೌಟ್ ಆಯಿತು. ಇದರ ಬೆನ್ನಲ್ಲೇ ಆ್ಯಂಟಿಗುವಾ ಟೆಸ್ಟ್‌ನ ಮೊದಲ ದಿನದಂತ್ಯಕ್ಕೆ ವೆಸ್ಟ್ ಇಂಡೀಸ್ ಇನ್ನಿಂಗ್ಸ್ ಆರಂಭಿಸಿದ್ದು, ದಿನದಾಟದ ಅಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 95 ರನ್ ಗಳಿಸಿದೆ. ಇದೀಗ ಕೆರಿಬಿಯನ್ ತಂಡ ಬಾಂಗ್ಲಾ ತಂಡದ ಸ್ಕೋರ್​ನಿಂದ ಕೇವಲ 8 ರನ್ ಅಂತರದಲ್ಲಿದೆ. ಕೆರಿಬಿಯನ್ ನಾಯಕ ಕ್ರೇಗ್ ಬ್ರೈತ್‌ವೈಟ್ (42) ಮತ್ತು ಬೋನರ್ (12) ಅಜೇಯರಾಗುಳಿದಿದ್ದಾರೆ.

ಇದಕ್ಕೂ ಮುನ್ನ ವೆಸ್ಟ್ ಇಂಡೀಸ್ ತಂಡದ ಅಲ್ಜಾರಿ ಜೋಸೆಫ್ ಮತ್ತು ಜಿಡಾನೆ ಸಿಲ್ಸ್ ತಲಾ 3 ವಿಕೆಟ್‌ಗಳನ್ನು ಕಬಳಿಸಿದರು. ಹಾಗೆಯೇ ಕೆಮರ್ ರೋಚ್ ಮತ್ತು ಕೈಲ್ ಮೈಯರ್ಸ್ ತಲಾ 2 ವಿಕೆಟ್‌ಗಳನ್ನು ಬೇಗನೆ ಪಡೆದರು. ನಾಲ್ವರು ಬೌಲರ್‌ಗಳು ಬಾಂಗ್ಲಾದೇಶವನ್ನು ಮಂಡಿಯೂರುವಂತೆ ಮಾಡಿ ಮೊದಲ ದಿನ ಪಂದ್ಯದ ಮೇಲೆ ಪ್ರಭಾವ ಬೀರಿದರು.