ICC Test Rankings: ಕಿವೀಸ್ ವಿರುದ್ಧ ಅಬ್ಬರಿಸಿದ ರೂಟ್ ಈಗ ನಂ.1; ಟಾಪ್ 5 ಟೆಸ್ಟ್​ ಬ್ಯಾಟರ್​ಗಳ ವಿವರ ಇಲ್ಲಿದೆ

ICC Test Rankings: ಬ್ಯಾಟ್ಸ್‌ಮನ್‌ಗಳ ಇತ್ತೀಚಿನ ಟೆಸ್ಟ್ ಶ್ರೇಯಾಂಕದಲ್ಲಿ, ಜೋ ರೂಟ್ ಮತ್ತು ಮಾರ್ನಸ್ ಲ್ಯಾಬುಸ್‌ಚಾಗ್ನೆ ಹೊರತುಪಡಿಸಿ, ಸ್ಟೀವ್ ಸ್ಮಿತ್ ಮೂರನೇ ಸ್ಥಾನದಲ್ಲಿದ್ದಾರೆ, ಪಾಕಿಸ್ತಾನದ ನಾಯಕ ಬಾಬರ್ ಅಜಮ್ ನಾಲ್ಕನೇ ಸ್ಥಾನದಲ್ಲಿದ್ದಾರೆ ಮತ್ತು ಕೇನ್ ವಿಲಿಯಮ್ಸನ್ ಐದನೇ ಸ್ಥಾನದಲ್ಲಿದ್ದಾರೆ.

ICC Test Rankings: ಕಿವೀಸ್ ವಿರುದ್ಧ ಅಬ್ಬರಿಸಿದ ರೂಟ್ ಈಗ ನಂ.1; ಟಾಪ್ 5 ಟೆಸ್ಟ್​ ಬ್ಯಾಟರ್​ಗಳ ವಿವರ ಇಲ್ಲಿದೆ
Joe Root
Follow us
TV9 Web
| Updated By: ಪೃಥ್ವಿಶಂಕರ

Updated on:Jun 15, 2022 | 3:38 PM

ಇಂಗ್ಲೆಂಡ್‌ನ ಮಾಜಿ ನಾಯಕ ಹಾಗೂ ಬ್ಯಾಟ್ಸ್‌ಮನ್ ಜೋ ರೂಟ್ (Joe Root) ತಮ್ಮ ಅಪ್ರತಿಮ ಪ್ರದರ್ಶನಕ್ಕೆ ಕೊನೆಗೂ ಬಹುಮಾನ ಪಡೆದಿದ್ದಾರೆ. ರೂಟ್ ಈಗ ಟೆಸ್ಟ್ ಕ್ರಿಕೆಟ್‌ನಲ್ಲಿ ಹೊಸ ವಿಶ್ವದ ನಂಬರ್ ಒನ್ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಜೋ ರೂಟ್ ಅವರು ಮಾರ್ನಸ್ ಲ್ಯಾಬುಸ್ಚಾಗ್ನೆ (Marnus Labuschagne) ಅವರಿಂದ ವಿಶ್ವದ ನಂಬರ್ ಒನ್ ಸ್ಥಾನವನ್ನು ಕಿತ್ತುಕೊಂಡಿದ್ದಾರೆ. ಆಸ್ಟ್ರೇಲಿಯದ ಬ್ಯಾಟ್ಸ್‌ಮನ್ ಮಾರ್ನಸ್ ಲ್ಯಾಬುಸ್ಚಾಗ್ನೆ ನಂಬರ್ ಒನ್ ಕುರ್ಚಿಯಲ್ಲಿ ಬಹಳ ಹೊತ್ತು ಕುಳಿತಿದ್ದರು. ಆದರೆ ಪ್ರಸ್ತುತ ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಅಥವಾ ಈ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಜೋ ರೂಟ್ ಪ್ರದರ್ಶನ ನೀಡಿದ ರೀತಿ, ಅವರನ್ನು ವಿಶ್ವದ ನಂಬರ್ ಒನ್ ಟೆಸ್ಟ್ (ICC Test Rankings) ಬ್ಯಾಟ್ಸ್‌ಮನ್‌ನನ್ನಾಗಿ ಮಾಡಿತು.

ಕಳೆದ ಡಿಸೆಂಬರ್‌ನಲ್ಲಿ ಅಡಿಲೇಡ್‌ನಲ್ಲಿ ಇಂಗ್ಲೆಂಡ್ ವಿರುದ್ಧ 103 ರನ್ ಮತ್ತು 51 ರನ್ ಗಳಿಸುವ ಮೂಲಕ ಆಸ್ಟ್ರೇಲಿಯಾದ ಲ್ಯಾಬುಸ್ಚಾಗ್ನೆ ವಿಶ್ವದ ನಂಬರ್ ಒನ್ ಟೆಸ್ಟ್ ಬ್ಯಾಟ್ಸ್‌ಮನ್ ಆಗಿದ್ದರು. ಆದರೆ, ರೂಟ್ ಅವರ ಇತ್ತೀಚಿನ ಫಾರ್ಮ್ ಅವರಿಂದ ಅವರ ನಂಬರ್ ಒನ್ ಸ್ಥಾನವನ್ನು ಕಸಿದುಕೊಂಡಿದೆ. ಈಗ ಟೆಸ್ಟ್‌ನಲ್ಲಿ ಮುಂದಿನ ಅತ್ಯುತ್ತಮ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ.

ಈ ಕಾರಣಗಳಿಂದಾಗಿ ಜೋ ರೂಟ್ ವಿಶ್ವದ ನಂಬರ್ ಒನ್

ಇದನ್ನೂ ಓದಿ
Image
Virat Kohli: ಮಡದಿ, ಮಗಳೊಂದಿಗೆ ರಜೆ ಮುಗಿಸಿ ಬಂದ ಕೊಹ್ಲಿ ಸೀದಾ ಹೋಗಿದ್ದು ಆಸ್ಪತ್ರೆಗೆ..! ಕಾರಣವೇನು?
Image
ICC Rankings: ಕೊಹ್ಲಿಯನ್ನು ಹಿಂದಿಕ್ಕಿದ ಪಾಕ್ ಕ್ರಿಕೆಟಿಗ! ಆಲ್​ರೌಂಡರ್ ಕೋಟಾದಲ್ಲಿ ಜಡೇಜಾ ನಂ.1

ಜೋ ರೂಟ್ ಟೆಸ್ಟ್‌ನಲ್ಲಿ ವಿಶ್ವದ ನಂಬರ್ ಒನ್ ಬ್ಯಾಟ್ಸ್‌ಮನ್ ಆಗಿದ್ದು ಹೇಗೆಂದರೆ, ಈ ಕ್ಯಾಲೆಂಡರ್ ವರ್ಷದಲ್ಲಿ ಅವರು ಇಲ್ಲಿಯವರೆಗೆ 4 ಶತಕಗಳನ್ನು ಗಳಿಸಿದ್ದಾರೆ. ಜೊತೆಗೆ ಇಂಗ್ಲೆಂಡ್ ಪರ 10000 ಟೆಸ್ಟ್ ರನ್ ಗಳಿಸಿದ ಎರಡನೇ ಬ್ಯಾಟ್ಸ್‌ಮನ್ ಕೂಡ. ಇದು ರೂಟ್‌ಗೆ ಟೆಸ್ಟ್‌ನಲ್ಲಿ ಅತ್ಯುತ್ತಮ ಬ್ಯಾಟ್ಸ್‌ಮನ್ ಎಂಬ ಬಿರುದನ್ನು ತಂದುಕೊಡಲು ಕಾರಣವಾಗಿವೆ. ರೂಟ್ ಈಗ 897 ರೇಟಿಂಗ್ ಪಾಯಿಂಟ್‌ಗಳನ್ನು ಪಡೆದಿದ್ದು, ಈ ಅಂಕಗಳು ಎರಡನೇ ಸ್ಥಾನಕ್ಕೆ ಕುಸಿದಿರುವ ಮಾರ್ನಸ್ ಲ್ಯಾಬುಸ್ಚಾಗ್ನೆಗಿಂತ 9 ಅಂಕಗಳು ಹೆಚ್ಚಿವೆ.

ಇದನ್ನೂ ಓದಿ:ENG vs NZ: ಜೋ ರೂಟ್ ದಾಖಲೆಯ ಶತಕ; ಮೊದಲ ಟೆಸ್ಟ್​ನಲ್ಲಿ ಕಿವೀಸ್​ಗೆ ಸೋಲಿನ ರುಚಿ ತೋರಿಸಿದ ಆಂಗ್ಲರು

ನಂಬರ್ ಒನ್ ಸ್ಥಾನಕ್ಕಾಗಿ ಕದನ

ಆದಾಗ್ಯೂ, ಮಾರ್ನಸ್ ಲ್ಯಾಬುಸ್ಚಾಗ್ನೆ ಮತ್ತೊಮ್ಮೆ ವಿಶ್ವದ ನಂಬರ್ ಒನ್ ಆಗುವ ಅವಕಾಶವನ್ನು ಹೊಂದಿದ್ದಾರೆ. ಈ ತಿಂಗಳ ಅಂತ್ಯದಲ್ಲಿ ನಡೆಯಲಿರುವ ಶ್ರೀಲಂಕಾ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಅವರು ಈ ಅವಕಾಶವನ್ನು ಪಡೆಯಬಹುದು. ಆದರೆ ಮತ್ತೊಂದೆಡೆ, ನಂಬರ್ ಒನ್ ಸ್ಥಾನದಲ್ಲಿ ತನ್ನನ್ನು ಉಳಿಸಿಕೊಳ್ಳಲು ಅವಕಾಶವು ರೂಟ್ ಬಳಿ ಉಳಿಯುತ್ತದೆ. ಏಕೆಂದರೆ ಇಂಗ್ಲೆಂಡ್ ತಂಡದ ಮುಂದಿನ ಶೆಡ್ಯೂಲ್ ಕೂಡ ತುಂಬಾ ಬ್ಯುಸಿಯಾಗಿದೆ.

ಟೆಸ್ಟ್‌ನಲ್ಲಿ ಅಗ್ರ 5 ಬ್ಯಾಟ್ಸ್‌ಮನ್‌ಗಳು

ಜೋ ರೂಟ್ ಸದ್ಯ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ನಿರತರಾಗಿದ್ದಾರೆ. ಇದಾದ ನಂತರ ಇಂಗ್ಲೆಂಡ್ ಭಾರತಕ್ಕೆ ಆತಿಥ್ಯ ವಹಿಸಬೇಕು, ನಂತರ ದಕ್ಷಿಣ ಆಫ್ರಿಕಾ ವಿರುದ್ಧ ಸರಣಿ ಪಂದ್ಯಗಳನ್ನು ಆಡಬೇಕು. ಬ್ಯಾಟ್ಸ್‌ಮನ್‌ಗಳ ಇತ್ತೀಚಿನ ಟೆಸ್ಟ್ ಶ್ರೇಯಾಂಕದಲ್ಲಿ, ಜೋ ರೂಟ್ ಮತ್ತು ಮಾರ್ನಸ್ ಲ್ಯಾಬುಸ್‌ಚಾಗ್ನೆ ಹೊರತುಪಡಿಸಿ, ಸ್ಟೀವ್ ಸ್ಮಿತ್ ಮೂರನೇ ಸ್ಥಾನದಲ್ಲಿದ್ದಾರೆ, ಪಾಕಿಸ್ತಾನದ ನಾಯಕ ಬಾಬರ್ ಅಜಮ್ ನಾಲ್ಕನೇ ಸ್ಥಾನದಲ್ಲಿದ್ದಾರೆ ಮತ್ತು ಕೇನ್ ವಿಲಿಯಮ್ಸನ್ ಐದನೇ ಸ್ಥಾನದಲ್ಲಿದ್ದಾರೆ.

Published On - 3:37 pm, Wed, 15 June 22