AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2024 Auction: ಮಿನಿ ಹರಾಜಿನಲ್ಲಿ ಈ ಆರು ಆಟಗಾರರ ಮೇಲೆ ಹಣದ ಮಳೆಯಾಗುವುದು ಗ್ಯಾರಂಟಿ

IPL 2024 Auction: ನಾಳಿನ ಹರಾಜಿನಲ್ಲಿ 77 ಆಟಗಾರರು ಖರೀದಿದಾರರನ್ನು ಪಡೆಯಲ್ಲಿದ್ದಾರೆ. ಏತನ್ಮಧ್ಯೆ, ಹರಾಜಿಗೂ ಮೊದಲು, ಈ ಹರಾಜಿನಲ್ಲಿ ಯಾವ ಆಟಗಾರ ಹೆಚ್ಚಿನ ಬೆಲೆಗೆ ಮಾರಾಟವಾಗಬಹುದು ಎಂಬುದು ಎಲ್ಲರ ಕುತೂಹಲವಾಗಿದೆ. ಅದಕ್ಕೆ ಉತ್ತರ ಇಲ್ಲಿದೆ.

IPL 2024 Auction: ಮಿನಿ ಹರಾಜಿನಲ್ಲಿ ಈ ಆರು ಆಟಗಾರರ ಮೇಲೆ ಹಣದ ಮಳೆಯಾಗುವುದು ಗ್ಯಾರಂಟಿ
ಐಪಿಎಲ್ 2024
ಪೃಥ್ವಿಶಂಕರ
|

Updated on: Dec 18, 2023 | 3:53 PM

Share

ಐಪಿಎಲ್ ಕಿರು ಹರಾಜು (IPL 2023 Auction) ಡಿಸೆಂಬರ್ 19 ರಂದು ದುಬೈನಲ್ಲಿ ಮಧ್ಯಾಹ್ನ 1 ಗಂಟೆಯಿಂದ ಆರಂಭವಾಗಲಿದೆ. 333 ಆಟಗಾರರ ಭವಿಷ್ಯ ನಿರ್ಧಾರಕ್ಕೆ ಇನ್ನು ಕೆಲವೇ ಗಂಟೆಗಳು ಬಾಕಿ ಉಳಿದಿವೆ. ವಾಸ್ತವವಾಗಿ ಮಿನಿ ಹರಾಜಿಗೆ ಬರೋಬ್ಬರಿ 1100 ಕ್ಕೂ ಹೆಚ್ಚು ಆಟಗಾರರು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದರು. ಆದರೆ ಅವರಲ್ಲಿ 333 ಆಟಗಾರರನ್ನು ಶಾರ್ಟ್​ ಲಿಸ್ಟ್ ಮಾಡಲಾಗಿದೆ. ಅದಾಗ್ಯೂ ಹರಾಜಿಗೆ ಅರ್ಹತೆ ಪಡೆದಿರುವ ಈ 333 ಆಟಗಾರರೂ ಖರೀದಿದಾರರನ್ನು ಪಡೆಯುವುದಿಲ್ಲ. ಏಕೆಂದರೆ ಎಲ್ಲಾ 10 ತಂಡಗಳಿಂದ ಕೇವಲ 77 ಸ್ಲಾಟ್​ಗಳು ಮಾತ್ರ ಖಾಲಿ ಉಳಿದಿವೆ. ಹೀಗಾಗಿ ನಾಳಿನ ಹರಾಜಿನಲ್ಲಿ 77 ಆಟಗಾರರು ಖರೀದಿದಾರರನ್ನು ಪಡೆಯಲ್ಲಿದ್ದಾರೆ. ಏತನ್ಮಧ್ಯೆ, ಹರಾಜಿಗೂ ಮೊದಲು, ಈ ಹರಾಜಿನಲ್ಲಿ ಯಾವ ಆಟಗಾರ ಹೆಚ್ಚಿನ ಬೆಲೆಗೆ ಮಾರಾಟವಾಗಬಹುದು ಎಂಬುದು ಎಲ್ಲರ ಕುತೂಹಲವಾಗಿದೆ. ಅದಕ್ಕೆ ಉತ್ತರ ಇಲ್ಲಿದೆ.

ಮಿಚೆಲ್ ಸ್ಟಾರ್ಕ್

ಆಸ್ಟ್ರೇಲಿಯಾದ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಸುಮಾರು ಎಂಟು ವರ್ಷಗಳ ನಂತರ ಈ ವರ್ಷ ಐಪಿಎಲ್‌ಗೆ ಬರುತ್ತಿದ್ದಾರೆ. ಇವರ ಹೆಸರು ಶಾರ್ಟ್‌ಲಿಸ್ಟ್ ಆಗುವಾಗ ಹತ್ತರಲ್ಲಿ 5 ತಂಡಗಳು ಅವರೊಂದಿಗೆ ಮಾತನಾಡಿ ತಮ್ಮ ತಂಡ ಸೇರುವ ಇಚ್ಛೆಯನ್ನು ವ್ಯಕ್ತಪಡಿಸಿದ್ದವು ಎನ್ನಲಾಗಿದೆ. ಆದಾಗ್ಯೂ, ಮಿಚೆಲ್ ಸ್ಟಾರ್ಕ್ ಯಾವ ತಂಡ ಹೆಚ್ಚು ಬಿಡ್ ಮಾಡುತ್ತದೋ, ಆ ತಂಡವನ್ನು ಸೇರಿಕೊಳ್ಳಲಿದ್ದಾರೆ. ಮುಂದಿನ ವರ್ಷ ಜೂನ್‌ನಲ್ಲಿ ನಡೆಯಲಿರುವ ಟಿ 20 ವಿಶ್ವಕಪ್ ದೃಷ್ಟಿಯಿಂದ ಮುಂದಿನ ವರ್ಷದ ಐಪಿಎಲ್‌ನಲ್ಲಿ ಆಡಲು ಬಯಸುವುದಾಗಿ ಮಿಚೆಲ್ ಸ್ಟಾರ್ಕ್ ಈಗಾಗಲೇ ಸ್ಪಷ್ಟಪಡಿಸಿದ್ದರು. ಇದಾದ ನಂತರ ಹಲವು ತಂಡಗಳು ಮಾರ್ಷ್​ರನ್ನು ತಮ್ಮ ಬುಟ್ಟಿಗೆ ಹಾಕಿಕೊಳ್ಳುವ ಇರಾದೆಯಲ್ಲಿವೆ. ಮಿಚೆಲ್ ಸ್ಟಾರ್ಕ್ ಎಡಗೈ ವೇಗದ ಬೌಲರ್ ಎಂಬುದು ವಿಶೇಷ. ಆರಂಭದಲ್ಲಿ ಎದುರಾಳಿ ತಂಡಕ್ಕೆ ಶಾಕ್ ಕೊಡುವುದರಲ್ಲಿ ಸ್ಟಾರ್ಕ್​ ಹೆಸರುವಾಸಿ. ಹಾಗೆಯೇ ಮಧ್ಯಮ ಓವರ್​ಗಳಲ್ಲಿ ವಿಕೆಟ್ ಪಡೆಯುವ ಸಾಮರ್ಥ್ಯವನ್ನೂ ಸ್ಟಾರ್ಕ್ ಹೊಂದಿದ್ದಾರೆ. ಮಿಚೆಲ್ ಸ್ಟಾರ್ಕ್ ಸೆಟ್ ನಾಲ್ಕರಲ್ಲಿ ಹರಾಜಿಗೆ ಬರಲಿದ್ದಾರೆ. ಅವರ ಮೂಲ ಬೆಲೆ 2 ಕೋಟಿ ರೂ. ಇದ್ದು, ಈ ಹರಾಜಿನಲ್ಲಿ ಸ್ಟಾರ್ಕ್ 15 ಕೋಟಿ ಗೂ ಅಧಿಕ ಮೊತ್ತ ಪಡೆಯುವ ಸಾಧ್ಯತೆಗಳಿವೆ.​

ಟ್ರಾವಿಸ್ ಹೆಡ್

ಆಸ್ಟ್ರೇಲಿಯಾದ ಈ ಆಲ್​ರೌಂಡರ್​ನ ಖರೀದಿಗೆ ಎಲ್ಲಾ ತಂಡಗಳು ಮುಗಿಬೀಳುವುದು ಖಚಿತ. ಅವರು ಎಂತಹ ಆಟಗಾರ ಎಂಬುದು ಇತ್ತೀಚೆಗೆ ಮುಕ್ತಾಯಗೊಂಡ ಏಕದಿನ ವಿಶ್ವಕಪ್​ನಲ್ಲಿಯೇ ತಿಳಿದಿದೆ. ಮೊದಲ ಸೆಮಿಫೈನಲ್‌ನಲ್ಲಿ ಅರ್ಧಶತಕ ಬಾರಿಸಿದ ಅವರು ಆ ಬಳಿಕ ಫೈನಲ್‌ನಲ್ಲಿ ಭಾರತದ ವಿರುದ್ಧ ಶತಕ ಬಾರಿಸುವ ಮೂಲಕ ತಮ್ಮ ತಂಡವನ್ನು ವಿಜೇತರನ್ನಾಗಿಸಿದ್ದರು. ಈ ಎರಡೂ ಪಂದ್ಯಗಳಲ್ಲಿ ಅವರು ಪಂದ್ಯ ಶ್ರೇಷ್ಠರಾಗಿದ್ದರು. ಇತ್ತೀಚೆಗಷ್ಟೇ ಐಸಿಸಿ ಅವರನ್ನು ನವೆಂಬರ್ ತಿಂಗಳ ಆಟಗಾರನ ತಿಂಗಳ ಆಟಗಾರ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಸ್ಫೋಟಕ ಬ್ಯಾಟಿಂಗ್​ಗೆ ಹೆಸರುವಾಸಿಯಾಗಿರುವ ಟ್ರಾವಿಸ್ ಹೆಡ್‌ ತಮ್ಮ ಮೂಲ ಬೆಲೆಯನ್ನು 2 ಕೋಟಿ ರೂಪಾಯಿಗಳಿಗೆ ಇರಿಸಿದ್ದಾರೆ. ಆದರೆ ಅವರ ಬಿಡ್ 16 ಕೋಟಿಗೂ ಮೀರಿ ಹೋಗುವುದು ಖಚಿತವಾಗಿದೆ. ಹೆಡ್ ಸೆಟ್​ 1 ರಲ್ಲಿ ಹರಾಜಿಗೆ ಬರಲಿದ್ದು, ಹರಾಜಿನ ಆರಂಭದಿಂದಲೇ ಅವರ ಮೇಲೆ ಹಣದ ಮಳೆಯಾಗುವುದು ಪಕ್ಕಾ.

IPL 2024 Auction: ಐಪಿಎಲ್ 2024 ಹರಾಜಿಗೆ ಕ್ಷಣಗಣನೆ: ಯಾವಾಗ?, ಎಷ್ಟು ಗಂಟೆಗೆ?, ಲೈವ್ ವೀಕ್ಷಿಸುವುದು ಹೇಗೆ?

ರಚಿನ್ ರವೀಂದ್ರ

ಇತ್ತೀಚೆಗೆ ಮುಗಿದ ಏಕದಿನ ವಿಶ್ವಕಪ್​ನಲ್ಲಿ ತಮ್ಮ ಸಾಮರ್ಥ್ಯ ಸಾಭೀತು ಪಡಿಸಿರುವ ನ್ಯೂಜಿಲೆಂಡ್‌ನ ರಚಿನ್ ರವೀಂದ್ರ ಕೂಡ ಮಿಚೆಲ್ ಸ್ಟಾರ್ಕ್ ಮತ್ತು ಟ್ರಾವಿಸ್ ಹೆಡ್‌ರಂತೆ ಅಧಿಕ ಬೆಲೆ ಪಡೆಯುವುದು ಖಚಿತ. ಎಡಗೈ ಬ್ಯಾಟ್ಸ್‌ಮನ್ ಆಗಿರುವ ರವೀಂದ್ರ ಸ್ಪಿನ್ ಬೌಲರ್ ಕೂಡ ಆಗಿದ್ದಾರೆ. ಮೂಲ ಬೆಲೆ ಕೇವಲ 50 ಲಕ್ಷ ರೂ. ಇರಿಸಿರುವ ರವೀಂದ್ರ ಅವರ ಬಿಡ್ ಕೂಡ 8 ರಿಂದ 10 ಕೋಟಿ ರೂ. ದಾಟಬಹುದಾಗಿದೆ. ಅವರು ಮೊದಲ ಬಾರಿಗೆ ಐಪಿಎಲ್‌ನಲ್ಲಿ ಆಡಲಿದ್ದಾರೆ. ಹೀಗಾಗಿ ತಂಡಗಳೂ ಇವರ ಮೇಲೆ ನಿಗಾ ಇಡಲಿವೆ. ರಚಿನ್ ಕೇವಲ 24 ವರ್ಷ ವಯಸ್ಸಿನವನಾಗಿರುವುದರಿಂದ ಅವರನ್ನು ಭವಿಷ್ಯದ ಆಟಗಾರನ ದೃಷ್ಟಿಯಿಂದ ಎಲ್ಲಾ ತಂಡಗಳು ಖರೀದಿಸಲು ಮುಂದಾಗಬಹುದು.

ಶಾರ್ದೂಲ್ ಠಾಕೂರ್

ಈ ಬಾರಿಯ ಹರಾಜಿನಲ್ಲಿ ವಿದೇಶಿ ಆಟಗಾರರಿಗೆ ಹೆಚ್ಚು ಬೇಡಿಕೆ ಇದೆ. ಆದರೆ ಹರಾಜಿನಲ್ಲಿರುವ ಭಾರತೀಯ ಆಟಗಾರರ ಪೈಕಿ ಕೆಲವೇ ಕೆಲವು ಆಟಗಾರರು ಅಧಿಕ ಹಣ ಪಡೆಯಲ್ಲಿದ್ದಾರೆ. ಅಂತಹವರಲ್ಲಿ ಶಾರ್ದೂಲ್ ಠಾಕೂರ್ ಕೂಡ ಒಬ್ಬರಾಗಿದ್ದು, ಅವರೂ ಕೂಡ ಭಾರಿ ಬೆಲೆಗೆ ಮಾರಾಟವಾಗಬಹುದು. ಮೂಲ ಬೆಲೆ 2 ಕೋಟಿ ರೂ. ಇರಿಸಿರುವ ಅವರು ಬಲಗೈ ವೇಗದ ಬೌಲರ್ ಆಗಿದ್ದು, ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಮೂಲಕ ಪಂದ್ಯಗಳನ್ನು ಗೆಲ್ಲಿಸುವ ಸಾಮರ್ಥ್ಯ ಹೊಂದಿದ್ದಾರೆ. ಐಪಿಎಲ್ 2022 ಗಾಗಿ ಹರಾಜು ನಡೆದಾಗ, ಡೆಲ್ಲಿ ಕ್ಯಾಪಿಟಲ್ಸ್ ಅವರನ್ನು 10.75 ಕೋಟಿ ರೂ.ಗೆ ಖರೀದಿಸಿತು. ಇದರ ನಂತರ, ಕೋಲ್ಕತ್ತಾ ನೈಟ್ ರೈಡರ್ಸ್ ಅವರನ್ನು ಟ್ರೇಡಿಂಗ್ ಮೂಲಕ ತಮ್ಮ ತಂಡಕ್ಕೆ ಕರೆತಂದಿತ್ತು.

ವನಿಂದು ಹಸರಂಗ

ಆರ್‌ಸಿಬಿ ಶ್ರೀಲಂಕಾದ ಲೆಗ್ ಸ್ಪಿನ್ನರ್ ವನಿಂದು ಹಸರಂಗಾ ಅವರನ್ನು ಬಿಡುಗಡೆ ಮಾಡುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿತ್ತು. ಈ ಆಟಗಾರ ಅದ್ಭುತ ಮ್ಯಾಚ್ ವಿನ್ನರ್. ಲೆಗ್ ಸ್ಪಿನ್ ಹೊರತಾಗಿ, ಅವರು ಬ್ಯಾಟಿಂಗ್ ಕೂಡ ಮಾಡುತ್ತಾರೆ. ಲಂಕಾ ಪ್ರೀಮಿಯರ್ ಲೀಗ್‌ನಲ್ಲಿ ಅವರ ಪ್ರದರ್ಶನ ಅದ್ಭುತವಾಗಿತ್ತು. ಈ ಆಟಗಾರನ ಮೇಲೆ ತಂಡಗಳು ರೂ 10 ಕೋಟಿಗೂ ಹೆಚ್ಚು ಬಾಜಿ ಕಟ್ಟಬಹುದು.

ಹರ್ಷಲ್ ಪಟೇಲ್

ಬಲಗೈ ವೇಗದ ಬೌಲರ್ ಹರ್ಷಲ್ ಪಟೇಲ್ ಕಳೆದ ಸೀಸನ್​ನಲ್ಲಿ ಆರ್​ಸಿಬಿ ತಂಡದಲ್ಲಿದ್ದರು. ಒಂದು ಸೀಸನ್‌ಗೆ 10.75 ಕೋಟಿ ಪಡೆಯುತ್ತಿದ್ದರು. ಆದರೆ ಇದೀಗ ಅವರನ್ನು ತಂಡದಿಂದ ಬಿಡುಗಡೆ ಮಾಡಲಾಗಿದ್ದು, ಈ ಹೆಸರು ಮತ್ತೊಮ್ಮೆ ಐಪಿಎಲ್ ಹರಾಜಿನಲ್ಲಿ ಕಾಣಿಸಿಕೊಳ್ಳಲಿದೆ. ಹರ್ಷಲ್ ಪಟೇಲ್ ಮತ್ತೊಮ್ಮೆ ದೊಡ್ಡ ಬಿಡ್ ಸ್ವೀಕರಿಸಬಹುದಾಗಿದ್ದು, ಅವರಿಗೆ 10 ಕೋಟಿಗೂ ಅಧಿಕ ಮೊತ್ತವನ್ನು ವ್ಯಯಿಸಲು ತಂಡಗಳು ಸಜ್ಜಾಗಿವೆ. ನಿಧಾನಗತಿಯ ಎಸೆತಗಳನ್ನು ಬೌಲ್ ಮಾಡಿ ವಿಕೆಟ್ ಪಡೆಯುವ ಸಾಮರ್ಥ್ಯ ಹರ್ಷಲ್ ಅವರ ವಿಶೇಷತೆಯಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ನಾನು ಲೋಫರ್, ದುನಿಯಾ ವಿಜಿ ನಮ್ಮ ಅಪ್ಪ ಇದ್ದಂಗೆ: ಯೋಗರಾಜ್ ಭಟ್ ನೇರ ಮಾತು
ನಾನು ಲೋಫರ್, ದುನಿಯಾ ವಿಜಿ ನಮ್ಮ ಅಪ್ಪ ಇದ್ದಂಗೆ: ಯೋಗರಾಜ್ ಭಟ್ ನೇರ ಮಾತು
ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ