
ಐಸಿಸಿ ಏಕದಿನ ವಿಶ್ವಕಪ್ 2027 ಆರಂಭಕ್ಕೆ ಇನ್ನು ಒಂದು ವರ್ಷಕ್ಕೂ ಹೆಚ್ಚು ಸಮಯ ಬಾಕಿ ಇರುವಾಗಲೇ, ಕ್ರಿಕೆಟ್ ವಲಯದಲ್ಲಿ ಸೆಮಿಫೈನಲ್ ತಲುಪುವ ತಂಡಗಳ ಕುರಿತು ಚರ್ಚೆಗಳು ಈಗಿನಿಂದಲೇ ಕಾವು ಪಡೆದುಕೊಂಡಿವೆ. ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಆರೋನ್ ಫಿಂಚ್ ಅವರು ಇತ್ತೀಚೆಗೆ ತಮ್ಮ ಆರಂಭಿಕ ಮುನ್ಸೂಚನೆಯನ್ನು ಹಂಚಿಕೊಂಡಿದ್ದು, ಕ್ರಿಕೆಟ್ ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಆರೋನ್ ಫಿಂಚ್, ತಮ್ಮ ನೆಚ್ಚಿನ ನಾಲ್ಕು ಬಲಿಷ್ಠ ತಂಡಗಳನ್ನು ಆರಿಸಿದ್ದಾರೆ. ಆದರೆ, ಐಸಿಸಿ ಟೂರ್ನಿಗಳಲ್ಲಿ ಯಾವಾಗಲೂ ಬಲಿಷ್ಠ ಪ್ರದರ್ಶನ ನೀಡುವ ನ್ಯೂಝಿಲೆಂಡ್ ಮತ್ತು ಪಾಕಿಸ್ತಾನ ತಂಡಗಳನ್ನು ಅವರು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ.
ಆರೋನ್ ಫಿಂಚ್ ಅವರ ಪ್ರಕಾರ, 2027ರ ವಿಶ್ವಕಪ್‌ನಲ್ಲಿ ಈ ಕೆಳಗಿನ ನಾಲ್ಕು ತಂಡಗಳು ಸೆಮಿಫೈನಲ್ ಪ್ರವೇಶಿಸಲಿವೆ…
ಸಾಮಾನ್ಯವಾಗಿ ಐಸಿಸಿ ಟೂರ್ನಿಗಳ ನಾಕೌಟ್ ಹಂತಕ್ಕೆ ಸುಲಭವಾಗಿ ಲಗ್ಗೆ ಇಡುವ ನ್ಯೂಝಿಲೆಂಡ್ ಮತ್ತು ಪಾಕಿಸ್ತಾನ್ ತಂಡಗಳನ್ನು ಫಿಂಚ್ ತಮ್ಮ ಪಟ್ಟಿಯಿಂದ ಹೊರಗಿಟ್ಟಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಆಫ್ರಿಕನ್ ಪಿಚ್‌ಗಳ ಪರಿಸ್ಥಿತಿ ಮತ್ತು ಸದ್ಯ ತಂಡಗಳು ಹೊಂದಿರುವ ಸಮತೋಲನವನ್ನು ಆಧರಿಸಿ ತಾವು ಈ ನಿರ್ಧಾರಕ್ಕೆ ಬಂದಿರುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.
2027ರ ಅಕ್ಟೋಬರ್ 2 ರಿಂದ ನವೆಂಬರ್ 21 ರವರೆಗೆ ನಡೆಯಲಿರುವ ಈ ಮೆಗಾ ಟೂರ್ನಿಗೆ ಸೌತ್ ಆಫ್ರಿಕಾ, ಝಿಂಬಾಬ್ವೆ ಮತ್ತು ನಮೀಬಿಯಾ ಜಂಟಿಯಾಗಿ ಆತಿಥ್ಯ ವಹಿಸುತ್ತಿವೆ. ಒಟ್ಟು 14 ತಂಡಗಳು ಪಾಲ್ಗೊಳ್ಳಲಿರುವ ಈ ಜಿದ್ದಾಜಿದ್ದಿನ ಟೂರ್ನಿಯಲ್ಲಿ ಆಫ್ರಿಕಾದ ವಿಭಿನ್ನ ಮತ್ತು ಸವಾಲಿನ ಪಿಚ್‌ಗಳಿಗೆ ಬೇಗನೆ ಹೊಂದಿಕೊಳ್ಳುವ, ಆಳವಾದ ಬ್ಯಾಟಿಂಗ್ ಹಾಗೂ ಬೌಲಿಂಗ್ ಲೈನ್-ಅಪ್ ಹೊಂದಿರುವ ತಂಡಗಳೇ ಅಂತಿಮ ನಾಲ್ಕರ ಘಟ್ಟ ತಲುಪಲಿವೆ ಎಂಬುದು ಫಿಂಚ್ ಅವರ ಲೆಕ್ಕಾಚಾರವಾಗಿದೆ.
ಇದನ್ನೂ ಓದಿ: ಕೆನಡಾ ತಂಡದ ವಿಶ್ವ ದಾಖಲೆ ಮುರಿದ ಟೀಮ್ ಇಂಡಿಯಾ
ಒಟ್ಟಾರೆಯಾಗಿ, ಆರೋನ್ ಫಿಂಚ್ ಅವರ ಈ ಮುಂಚಿತ ಭವಿಷ್ಯವು ಕ್ರಿಕೆಟ್ ಲೋಕದಲ್ಲಿ ಭಾರಿ ಚರ್ಚೆಗೆ ನಾಂದಿ ಹಾಡಿದೆ. 2027ರ ಅಕ್ಟೋಬರ್‌ನಲ್ಲಿ ಆಫ್ರಿಕಾ ಮಣ್ಣಿನಲ್ಲಿ ಆರಂಭವಾಗಲಿರುವ ಈ ಮಹಾಸಮರದಲ್ಲಿ, ಫಿಂಚ್ ಲೆಕ್ಕಾಚಾರದಂತೆಯೇ ದೈತ್ಯ ತಂಡಗಳು ಸೆಮಿಫೈನಲ್ ಪ್ರವೇಶಿಸುತ್ತವೆಯೇ ಅಥವಾ ನ್ಯೂಝಿಲೆಂಡ್ ಮತ್ತು ಪಾಕಿಸ್ತಾನ ತಂಡಗಳು ಭರ್ಜರಿ ಕಮ್‌ಬ್ಯಾಕ್ ಮಾಡಿ ಫಿಂಚ್ ಭವಿಷ್ಯವನ್ನು ಸುಳ್ಳಾಗಿಸುತ್ತವೆಯೇ ಎಂಬುದನ್ನು ಕಾದುನೋಡಬೇಕಿದೆ.