AB De Villier: ‘ಸಾರ್ವಕಾಲಿಕ ಶ್ರೇಷ್ಠ T20 ಆಟಗಾರ’ನನ್ನು ಹೆಸರಿಸಿದ ಎಬಿ ಡಿವಿಲಿಯರ್ಸ್

Ab De Villiers: ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡದ ಪರ 11 ವರ್ಷಗಳ ಕಾಲ ಆಡಿದ್ದ ಎಬಿಡಿ ಹಲವು ಬಾರಿ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟಿದ್ದರು. ಅಲ್ಲದೆ ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ ಒಟ್ಟು 184 ಪಂದ್ಯಗಳಿಂದ ಒಟ್ಟು 5162 ರನ್‌ ಕಲೆಹಾಕಿದ್ದರು.

AB De Villier: 'ಸಾರ್ವಕಾಲಿಕ ಶ್ರೇಷ್ಠ T20 ಆಟಗಾರ'ನನ್ನು ಹೆಸರಿಸಿದ ಎಬಿ ಡಿವಿಲಿಯರ್ಸ್
AB de Villiers
Follow us
ಝಾಹಿರ್ ಯೂಸುಫ್
|

Updated on: Mar 08, 2023 | 4:58 PM

ಸಾರ್ವಕಾಲಿಕ ಶ್ರೇಷ್ಠ ಟಿ20 ಆಟಗಾರ ಯಾರು? ಇಂತಹದೊಂದು ಪ್ರಶ್ನೆಯೊಂದನ್ನು ಕ್ರಿಕೆಟ್ ಅಂಗಳದಲ್ಲಿ ಹೊಡಿಬಡಿ ದಾಂಡಿಗನ ಅಬ್ಬರಿಸಿದ ಎಬಿ ಡಿವಿಲಿಯರ್ಸ್ (Ab De Villiers) ಅವರ ಮುಂದಿಡಲಾಗಿತ್ತು. ಈ ಕುತೂಹಲಕಾರಿ ಪ್ರಶ್ನೆಗೆ ಎಬಿಡಿ ನೀಡಿದ ಉತ್ತರ ಕೂಡ ಅಷ್ಟೇ ಕುತೂಹಲಕಾರಿಯಾಗಿತ್ತು ಎಂಬುದು ಇಲ್ಲಿ ವಿಶೇಷ. ಸಾಮಾನ್ಯವಾಗಿ ಎಬಿ ಡಿವಿಲಿಯರ್ಸ್ ಎಂದರೆ ಕಣ್ಮುಂದೆ ಬರುವ ಮತ್ತೊಂದು ಹೆಸರು ವಿರಾಟ್ ಕೊಹ್ಲಿ. ಇದರ ಜೊತೆಗೆ ಕ್ರಿಸ್ ಗೇಲ್ ಕೂಡ ಸೇರ್ಪಡೆಯಾಗುತ್ತದೆ. ಆರ್​ಸಿಬಿ ತಂಡದಲ್ಲಿ ತ್ರಿಮೂರ್ತಿಗಳಾಗಿ ಅಬ್ಬರಿಸಿ ಬೊಬ್ಬರಿದಿದ್ದ ಈ ಮೂವರ ನಡುವೆ ಅತ್ಯುತ್ತಮ ಗೆಳೆತನವಿದೆ. ಹೀಗಾಗಿಯೇ ಸಾರ್ವಕಾಲಿಕ ಶ್ರೇಷ್ಠ T20 ಆಟಗಾರ ಯಾರು ಎಂಬ ಪ್ರಶ್ನೆಗೆ ಈ ಇಬ್ಬರಲ್ಲಿ ಒಬ್ಬರ ಹೆಸರು ಎಬಿಡಿ ಬಾಯಿಯಿಂದ ಬರಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಡಿವಿಲಿಯರ್ಸ್ ಅವರ ಆಯ್ಕೆ ಬೇರೊಬ್ಬ ಆಟಗಾರ.

ಹೌದು, ಮಿಸ್ಟರ್ 360 ಡಿಗ್ರಿ ಖ್ಯಾತಿಯ ಎಬಿ ಡಿವಿಲಿಯರ್ಸ್ ಪ್ರಕಾರ ಸಾರ್ವಕಾಲಿಕ ಶ್ರೇಷ್ಠ ಟಿ20 ಆಟಗಾರ ಅಫ್ಘಾನಿಸ್ತಾನದ ಆಲ್​ರೌಂಡರ್ ರಶೀದ್ ಖಾನ್. ಬ್ಯಾಟ್ ಹಾಗೂ ಬೌಲಿಂಗ್ ಮೂಲಕ ಟಿ20 ಕ್ರಿಕೆಟ್​ನಲ್ಲಿ ಕಮಾಲ್ ಮಾಡುತ್ತಿರುವ ರಶೀದ್ ಅತ್ಯುತ್ತಮ ಆಟಗಾರ. ಅವರು ಯಾವಾಗಲೂ ಆಲ್​ರೌಂಡರ್ ಪ್ರದರ್ಶನದ ಮೂಲಕ ಪಂದ್ಯವನ್ನು ಗೆಲ್ಲಲು ಬಯಸುತ್ತಾರೆ. ಅದಕ್ಕಾಗಿ ತುಂಬಾ ಸ್ಪರ್ಧಾತ್ಮಕವಾಗಿ ಹೋರಾಡುವ ಗುಣ ಹೊಂದಿದ್ದಾರೆ. ಇದೇ ಕಾರಣದಿಂದಾಗಿ ನಾನು ರಶೀದ್ ಖಾನ್ ಅವರನ್ನು ಸಾರ್ವಕಾಲಿಕ ಶ್ರೇಷ್ಠ ಟಿ20 ಆಟಗಾರನಾಗಿ ಆಯ್ಕೆ ಮಾಡಿರುವೆ ಎಂದು ಎಬಿಡಿ ತಿಳಿಸಿದ್ದಾರೆ.

ಮಾತು ಮುಂದುವರೆಸಿದ ಎಬಿ ಡಿವಿಲಿಯರ್ಸ್, ನನ್ನ ಪ್ರಕಾರ ರಶೀದ್ ಖಾನ್ ಅತ್ಯುತ್ತಮ ಟಿ20 ಆಟಗಾರ ಮಾತ್ರವಲ್ಲ. ಅತ್ಯುತ್ತಮರಲ್ಲಿ ಅತ್ಯುತ್ತಮ ಆಟಗಾರ. ಹೀಗಾಗಿಯೇ ನಾನು ಆತನನ್ನುಸರ್ವ ಶ್ರೇಷ್ಠ ಟಿ20 ಕ್ರಿಕೆಟಿಗ ಎಂದು ಪರಿಗಣಿಸಿರುವೆ ಎಂದು ಎಬಿಡಿ ತಿಳಿಸಿದ್ದಾರೆ.

ಇದನ್ನೂ ಓದಿ
Image
Ravindra Jadeja: 500 ವಿಕೆಟ್ ಕಬಳಿಸಿ ಮತ್ತೊಂದು ದಾಖಲೆ ಬರೆದ ರವೀಂದ್ರ ಜಡೇಜಾ
Image
Rishabh Pant: ಅಪಘಾತದ ಬಳಿಕ ಜೀವನ ಹೇಗಿದೆ? ಮುಕ್ತವಾಗಿ ಮಾತನಾಡಿದ ರಿಷಭ್ ಪಂತ್
Image
IPL 2023: ಐಪಿಎಲ್​ ವೇಳೆ ಜೊತೆಯಾಗಿ ಕಾಣಿಸಿಕೊಳ್ಳಲಿದ್ದಾರೆ RCB ತ್ರಿಮೂರ್ತಿಗಳು
Image
IPL 2023: ಐಪಿಎಲ್​ನಿಂದ ಬುಮ್ರಾ ಔಟ್: ಮುಂಬೈ ಇಂಡಿಯನ್ಸ್​ ಮುಂದಿದೆ 3 ಆಯ್ಕೆಗಳು

ಇದನ್ನೂ ಓದಿ: AB de Villiers: ಸಿಡಿಲಬ್ಬರದ ಸಿಡಿಲಮರಿ ABDಯ ಈ 3 ದಾಖಲೆ ಮುರಿಯುವವರು ಯಾರು?

ಇನ್ನು ರಶೀದ್ ಖಾನ್ ಅವರ ಟಿ20 ದಾಖಲೆಗಳನ್ನು ಪರಿಶೀಲಿಸಿದರೂ ಈ ಆಯ್ಕೆಯ ಹಿಂದಿರುವ ಕಾರಣ ಬೆಳಕಿಗೆ ಬರುತ್ತದೆ. ಏಕೆಂದರೆ 24 ವರ್ಷದ ಅಫ್ಘಾನ್ ಆಟಗಾರ ಇದುವರೆಗೆ 77 ಟಿ20 ಪಂದ್ಯಗಳಿಂದ 126 ವಿಕೆಟ್ ಕಬಳಿಸಿದ್ದಾರೆ. ಹಾಗೆಯೇ 92 ಐಪಿಎಲ್ ಪಂದ್ಯಗಳಿಂದ 112 ವಿಕೆಟ್ ಪಡೆದಿದ್ದಾರೆ. ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶ ಎಂದರೆ ರಶೀದ್ ಖಾನ್ ಐಪಿಎಲ್​ನಲ್ಲಿ 2195 ಎಸೆತಗಳಲ್ಲಿ ನೀಡಿರುವುದು ಕೇವಲ 2333 ರನ್ ಮಾತ್ರ.​ ಅಲ್ಲದೆ ಎಷ್ಟೋ ಬಾರಿ ಭರ್ಜರಿ ಬ್ಯಾಟಿಂಗ್ ಮೂಲಕ ಮ್ಯಾಚ್ ಫಿನಿಶರ್​ ಆಗಿ ಹೊರಹೊಮ್ಮಿದ್ದಾರೆ. ಹೀಗಾಗಿ ಎಬಿಡಿ ರಶೀದ್ ಖಾನ್ ಅವರನ್ನು ಸಾರ್ವಕಾಲಿಕ ಶ್ರೇಷ್ಠ ಟಿ20 ಆಟಗಾರ ಎಂದು ಬಣ್ಣಿಸಿದ್ದಾರೆ.

ಆರ್​ಸಿಬಿಯ ಆಪತ್ಭಾಂದವ:

ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡದ ಪರ 11 ವರ್ಷಗಳ ಕಾಲ ಆಡಿದ್ದ ಎಬಿಡಿ ಹಲವು ಬಾರಿ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟಿದ್ದರು. ಅಲ್ಲದೆ ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ ಒಟ್ಟು 184 ಪಂದ್ಯಗಳಿಂದ ಒಟ್ಟು 5162 ರನ್‌ ಕಲೆಹಾಕಿದ್ದರು. ಈ ವೇಳೆ 3 ಭರ್ಜರಿ ಶತಕಗಳು, 40 ಅರ್ಧ ಶತಕಗಳನ್ನು ಬಾರಿಸಿದ್ದಾರೆ. ಅಲ್ಲದೆ ಆರ್​ಸಿಬಿ ಪರ ಅತೀ ಹೆಚ್ಚು ಪಂದ್ಯವಾಡಿದ ಹಾಗೂ ಅತೀ ಹೆಚ್ಚು ಕಾಲ ಆಡಿದ ವಿದೇಶಿ ಆಟಗಾರ ಎಂಬ ದಾಖಲೆ ಕೂಡ ಎಬಿಡಿ ಹೆಸರಿನಲ್ಲಿದೆ.

2021 ರಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್​ಗೆ ವಿದಾಯ ಹೇಳಿರುವ ಎಬಿಡಿ ಐಪಿಎಲ್ 2023 ರಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಆರ್​ಸಿಬಿ ಪಂದ್ಯದ ವೇಳೆ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಆರ್​ಸಿಬಿ ತನ್ನ ಶ್ರೇಷ್ಠ ಆಟಗಾರರಿಗೆ ಹಾಲ್ ಆಫ್ ಫೇಮ್ ಪ್ರಶಸ್ತಿ ನೀಡುತ್ತಿದ್ದು, ಈ ಗೌರವಾರ್ಥಕ ಪ್ರಶಸ್ತಿಗೆ ಆರ್​ಸಿಬಿ ತಂಡದ ಮಾಜಿ ಆಟಗಾರರಾದ ಎಬಿ ಡಿವಿಲಿಯರ್ಸ್ ಹಾಗೂ ಕ್ರಿಸ್ ಗೇಲ್ ಆಯ್ಕೆಯಾಗಿದ್ದಾರೆ.