
ಸನ್ ರೈಸರ್ಸ್ ಹೈದರಾಬಾದ್ ತಂಡದ ಒಡತಿ ಕಾವ್ಯಾ ಮಾರನ್ಗೆ ಬ್ಯಾನ್ ಬಿಸಿ ತಟ್ಟಿದೆ. ದಿ ಹಂಡ್ರೆಡ್ ಲೀಗ್ನಲ್ಲಿ ಕಾವ್ಯಾ ಅವರ ಸನ್ರೈಸರ್ಸ್ ಲೀಡ್ಸ್ ಫ್ರಾಂಚೈಸಿಯು ಪಾಕಿಸ್ತಾನದ ಸ್ಪಿನ್ನರ್ ಅಬ್ರಾರ್ ಅಹ್ಮದ್ ಅವರನ್ನು ಖರೀದಿ ಮಾಡಿತು. ಆಕ್ಷನ್ ಅಲ್ಲಿ 2.35 ಕೋಟಿ ರೂಪಾಯಿಯನ್ನು ಕೊಡಲು ಸನ್ರೈಸರ್ಸ್ ಒಪ್ಪಿಕೊಂಡಿತು. ಈ ಬೆನ್ನಲ್ಲೇ ಕಾವ್ಯಾ ಮಾರನ್ ಅವರು ಸಾಕಷ್ಟು ಟೀಕೆ ಎದುರಿಸಿದರು. ಅಷ್ಟೇ ಅಲ್ಲ, ಸನ್ರೈಸರ್ಸ್ ಲೀಡ್ಸ್ ಟ್ವಿಟರ್ ಖಾತೆ ಬ್ಯಾನ್ ಆಗಿದೆ.
ಮಾರ್ಚ್ 12ರ ರಾತ್ರಿ 8.30ಕ್ಕೆ ವೇಳೆಗೆ ಈ ಖರೀದಿ ನಡೆದಿದೆ. ಇಂದು (ಮಾರ್ಚ್ 13) ಮುಂಜಾನೆ ಸನ್ರೈಸರ್ಸ್ ಲೀಡ್ಸ್ ಟ್ವಿಟರ್ ಖಾತೆಯನ್ನು ಸಸ್ಪೆಂಡ್ ಮಾಡಲಾಗಿದೆ. ಭಾರತೀಯರು ಸಾಕಷ್ಟು ಸಂಖ್ಯೆಯಲ್ಲಿ ಸನ್ರೈಸರ್ಸ್ ಲೀಡ್ಸ್ ಟ್ವಿಟರ್ ಖಾತೆಯನ್ನು ರಿಪೋರ್ಟ್ ಮಾಡಿರಬಹುದು ಎಂದು ಊಹಿಸಲಾಗಿದೆ. ಈ ಕಾರಣದಿಂದಲೇ ಸಸ್ಪೆಂಡ್ ಆಗಿರಬಹುದು ಎಂಬುದು ಕೆಲವರ ಊಹೆ.
ಹಂಡ್ರೆಡ್ ಲೀಗ್ಸ್ ಆಕ್ಷನ್ ಅಲ್ಲಿ ಕಾವ್ಯಾ ಮಾರನ್, ತಂಡದ ಕೋಚ್ ಡ್ಯಾನಿಯಲ್ ವಿಟ್ಟೋರಿ ಇದ್ದರು. ಭಾರತ ಒಡೆತನದ ನಾಲ್ಕು ತಂಡಗಳು ಹಂಡ್ರೆಡ್ ಲೀಗ್ನಲ್ಲಿ ಇದ್ದು, ಇವರು ಪಾಕಿಸ್ತಾನ ಆಟಗಾರರನ್ನು ಖರೀದಿಸುತ್ತಾರೆಯೇ ಎಂಬ ಪ್ರಶ್ನೆ ಇತ್ತು. ಕಾವ್ಯಾ ಅವರು ತೆಗೆದುಕೊಂಡ ಒಂದು ನಿರ್ಧಾರಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗಿದೆ. ಇದು ಐಪಿಎಲ್ ತಂಡದ ವರ್ಚಸ್ಸಿನ ಮೇಲೂ ಪರಿಣಾಮ ಬಿರಬಹುದು.
🚨 SUNRISERS LEEDS FRANCHISE OFFICIAL ACCOUNT SUSPENDED 🚨
– Last night at 8:30 PM, Sunrisers picked Abrar Ahmed in their team, and by 2:00 AM their Twitter account was suspended 😭😭.
– This shows the power of Indian people. Now Kavya Maran will understand what people’s… pic.twitter.com/sSPN475K6E
— Bemba Tavuma 🐐 (@gaandfaadtits) March 13, 2026
ಸನ್ನರೈಸರ್ಸ್ ಲೀಡ್ಸ್ ಅಬ್ರಾರ್ಗೆ ವೆಲ್ಕಮ್ ಎಂದು ಪೋಸ್ಟ್ ಹಾಕಿತ್ತು. ಈ ಪೋಸ್ಟ್ ಸಾಕಷ್ಟು ವೈರಲ್ ಆಯಿತು. ಕಾವ್ಯಾ ಅವರನ್ನು ಬ್ಯಾನ್ ಮಾಡುವಂತೆ ಟ್ವಿಟರ್ನಲ್ಲಿ ಟ್ರೆಂಡ್ ಆಗಿದೆ. ಸನ್ನರೈಸರ್ಸ್ ಲೀಡ್ಸ್ ಟ್ವಿಟರ್ ಖಾತೆ ಓಪನ್ ಮಾಡಿದರೆ ‘ಈ ಖಾತೆಯನ್ನು ಸಸ್ಪೆಂಡ್ ಮಾಡಲಾಗಿದೆ’ ಎಂಬ ಬರಹ ಕಾಣುತ್ತದೆ.
ಭಾರತದಲ್ಲಿ ಪಾಕಿಸ್ತಾನ ಆಟಗಾರರ ಮೇಲೆ ಸಂಪೂರ್ಣ ಬ್ಯಾನ್ ಹೇರಲಾಗಿದೆ. ಅವರ ಜೊತೆ ಐಸಿಸಿ ಟೂರ್ನಮೆಂಟ್ ಹೊರತುಪಡಿಸಿ ಮತ್ಯಾವುದೇ ಪಂದ್ಯವನ್ನು ಆಡುತ್ತಿಲ್ಲ. ಹೀಗಿರುವಾಗ ಸನ್ರೈಸರ್ಸ್ ಹೈದರಾಬಾದ್ನ ಸೋದರ ಸಂಸ್ಥೆಯಾಗಿರುವ ಸನ್ರೈಸರ್ಸ್ ಲೀಡ್ಸ್ ಪಾಕ್ ಆಟಗಾರನನ್ನು ಖರೀರಿದಿಸಿದ್ದು ಎಷ್ಟು ಸರಿ ಎಂಬ ಪ್ರಶ್ನೆ ಮೂಡಿದೆ. ಈ ವಿರೋಧದ ಬಳಿಕ ಆಟಗಾರನನ್ನು ಕೈ ಬಿಡಲಾಗುವುದೇ ಎಂಬ ಪ್ರಶ್ನೆ ಮೂಡಿದೆ.
ಮತ್ತಷ್ಟು ಕ್ರೀಡಾ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ..