ಎಮರ್ಜಿಂಗ್​ ಏಷ್ಯಾಕಪ್ ವೇಳಾಪಟ್ಟಿ ಪ್ರಕಟ: ಭಾರತ vs ಪಾಕಿಸ್ತಾನ್ ಮುಖಾಮುಖಿ

|

Updated on: Oct 08, 2024 | 12:03 PM

ACC T20 Emerging Asia Cup 2024: ಎಮರ್ಜಿಂಗ್ ಏಷ್ಯಾಕಪ್ ಟೂರ್ನಿ ಏಷ್ಯನ್ ರಾಷ್ಟ್ರಗಳ ಕ್ರಿಕೆಟ್ ಕದನ. ಈ ಟೂರ್ನಿಯಲ್ಲಿ ಆಯಾ ದೇಶಗಳ ಕಿರಿಯರ ತಂಡ ಅಥವಾ A ತಂಡಗಳು ಕಣಕ್ಕಿಳಿಯುತ್ತವೆ. ಈ ಹಿಂದೆ ಏಕದಿನ ಮಾದರಿಯಲ್ಲಿ ಆಯೋಜಿಸಲಾಗಿದ್ದ ಈ ಟೂರ್ನಿಯು ಈ ಬಾರಿ ಟಿ20 ಸ್ವರೂಪದಲ್ಲಿ ಜರುಗಲಿದೆ.

ಎಮರ್ಜಿಂಗ್​ ಏಷ್ಯಾಕಪ್ ವೇಳಾಪಟ್ಟಿ ಪ್ರಕಟ: ಭಾರತ vs ಪಾಕಿಸ್ತಾನ್ ಮುಖಾಮುಖಿ
IND vs PAK
Follow us on

ಉದಯೋನ್ಮುಖ ತಂಡಗಳ ಏಷ್ಯಾಕಪ್ ಟಿ20 ಟೂರ್ನಿಯ ವೇಳಾಪಟ್ಟಿ ಪ್ರಕಟವಾಗಿದೆ. ಒಮಾನ್​ನಲ್ಲಿ ನಡೆಯಲಿರುವ ಈ ಟೂರ್ನಿಯು ಅಕ್ಟೋಬರ್ 18 ರಿಂದ ಶುರುವಾಗಲಿದ್ದು, ಫೈನಲ್ ಪಂದ್ಯವು ಅಕ್ಟೋಬರ್ 27 ರಂದು ನಡೆಯಲಿದೆ. ಇನ್ನು ಈ ಬಾರಿಯ ಟೂರ್ನಿಯಲ್ಲಿ ಒಟ್ಟು 8 ತಂಡಗಳು ಭಾಗವಹಿಸಲಿವೆ.
ಈ ಎಂಟು ತಂಡಗಳನ್ನು ಎರಡು ಗ್ರೂಪ್​ಗಳಲ್ಲಿ ವಿಂಗಡಿಸಲಾಗಿದ್ದು, ಅದರಂತೆ ಮೊದಲ ಸುತ್ತಿನಲ್ಲಿ ಗುಂಪುಗಳಲ್ಲಿನ ತಂಡಗಳ ನಡುವೆ ಪೈಪೋಟಿ ನಡೆಯಲಿದೆ.

ಎಮರ್ಜಿಂಗ್​ ಏಷ್ಯಾ ಕಪ್ 2024ರ ತಂಡಗಳು:

  • ಗ್ರೂಪ್- A
  • ಶ್ರೀಲಂಕಾ ಎ
  • ಬಾಂಗ್ಲಾದೇಶ್ ಎ
  • ಅಫ್ಘಾನಿಸ್ತಾನ್ ಎ
  • ಹಾಂಗ್ ಕಾಂಗ್ ಎ

ಇದನ್ನೂ ಓದಿ: ಹಾರ್ದಿಕ್ ಪಾಂಡ್ಯ ಸಿಕ್ಸರ್​ಗೆ ಕೆಳಗೆ ಬಿದ್ದ ವಿರಾಟ್ ಕೊಹ್ಲಿಯ ದಾಖಲೆ

  • ಗ್ರೂಪ್-B
  • ಭಾರತ ಎ
  • ಪಾಕಿಸ್ತಾನ್ ಎ
  • ಯುಎಇ ಎ
  • ಒಮಾನ್ ಎ

ಭಾರತ vs ಪಾಕಿಸ್ತಾನ್ ಮುಖಾಮುಖಿ:

ಎಮರ್ಜಿಂಗ್ ಏಷ್ಯಾಕಪ್ ಟೂರ್ನಿಯ ಗ್ರೂಪ್ ಬಿ ನಲ್ಲಿ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಕಾಣಿಸಿಕೊಂಡಿವೆ. ಹೀಗಾಗಿ ಮೊದಲ ಸುತ್ತಿನಲ್ಲೇ ಸಾಂಪ್ರದಾಯಿಕ ಎದುರಾಳಿಗಳು ಮುಖಾಮುಖಿಯಾಗಲಿದ್ದಾರೆ. ಅದರಂತೆ ಅಕ್ಟೋಬರ್ 19 ರಂದು ನಡೆಯಲಿರುವ 4ನೇ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಎದುರು ಬದುರಾಗಲಿದೆ.

ಈ ಟೂರ್ನಿಯ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ:

  1. ಅಕ್ಟೋಬರ್ 18: ಬಾಂಗ್ಲಾದೇಶ್ ಎ vs ಹಾಂಗ್ ಕಾಂಗ್ ಎ
  2. ಅಕ್ಟೋಬರ್ 18: ಶ್ರೀಲಂಕಾ ಎ vs ಅಫ್ಘಾನಿಸ್ತಾನ ಎ
  3. ಅಕ್ಟೋಬರ್ 19: ಒಮಾನ್ vs ಯುಎಇ ಎ
  4. ಅಕ್ಟೋಬರ್ 19: ಭಾರತ ಎ vs ಪಾಕಿಸ್ತಾನ್ ಎ
  5. ಅಕ್ಟೋಬರ್ 20: ಶ್ರೀಲಂಕಾ ಎ vs ಹಾಂಗ್ ಕಾಂಗ್ ಎ
  6. ಅಕ್ಟೋಬರ್ 20: ಬಾಂಗ್ಲಾದೇಶ್ ಎ vs ಅಫ್ಘಾನಿಸ್ತಾನ್ ಎ
  7. ಅಕ್ಟೋಬರ್ 21: ಒಮಾನ್ vs ಪಾಕಿಸ್ತಾನ ಎ
  8. ಅಕ್ಟೋಬರ್ 21: ಭಾರತ ಎ vs ಯುಎಇ ಎ
  9. ಅಕ್ಟೋಬರ್ 22: ಅಫ್ಘಾನಿಸ್ತಾನ್ ಎ vs ಹಾಂಗ್ ಕಾಂಗ್ ಎ
  10. ಅಕ್ಟೋಬರ್ 22: ಶ್ರೀಲಂಕಾ ಎ vs ಬಾಂಗ್ಲಾದೇಶ್ ಎ
  11. ಅಕ್ಟೋಬರ್ 23: ಪಾಕಿಸ್ತಾನ್ ಎ vs ಯುಎಇ ಎ
  12. ಅಕ್ಟೋಬರ್ 23: ಒಮಾನ್ vs ಭಾರತ ಎ
  13. ಅಕ್ಟೋಬರ್ 25: ಸೆಮಿಫೈನಲ್ 1
  14. ಅಕ್ಟೋಬರ್ 25: ಸೆಮಿಫೈನಲ್ 2
  15. ಅಕ್ಟೋಬರ್ 27: ಫೈನಲ್