IND vs BAN: ಭಾರತ vs ಬಾಂಗ್ಲಾದೇಶ್ ನಡುವಣ 2ನೇ ಟಿ20 ಪಂದ್ಯ ಎಷ್ಟು ಗಂಟೆಗೆ ಶುರು?

India India vs Bangladesh, 2nd T20I: ಬಾಂಗ್ಲಾದೇಶ್ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಮ್ಯಾಚ್​ನಲ್ಲೇ ಟೀಮ್ ಇಂಡಿಯಾ ಪಾರುಪತ್ಯ ಮೆರೆದಿದೆ. ಗ್ವಾಲಿಯರ್​ನಲ್ಲಿ ನಡೆದ ಈ ಪಂದ್ಯವನ್ನು ಭಾರತ ತಂಡವು 7 ವಿಕೆಟ್​ಗಳಿಂದ ಗೆದ್ದುಕೊಂಡಿದೆ. ಇದೀಗ ಉಭಯ ತಂಡಗಳು ಎರಡನೇ ಪಂದ್ಯಕ್ಕಾಗಿ ಸಜ್ಜಾಗಿದೆ.

IND vs BAN: ಭಾರತ vs ಬಾಂಗ್ಲಾದೇಶ್ ನಡುವಣ 2ನೇ ಟಿ20 ಪಂದ್ಯ ಎಷ್ಟು ಗಂಟೆಗೆ ಶುರು?
India vs Bangladesh
Follow us
|

Updated on:Oct 08, 2024 | 2:05 PM

ಭಾರತ ಮತ್ತು ಬಾಂಗ್ಲಾದೇಶ್ ನಡುವಣ 2ನೇ ಟಿ20 ಪಂದ್ಯವು ನಾಳೆ (ಅ.9) ನಡೆಯಲಿದೆ. ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯವು ಬಾಂಗ್ಲಾದೇಶ್ ತಂಡದ ಪಾಲಿಗೆ ನಿರ್ಣಾಯಕ. ಏಕೆಂದರೆ ಗ್ವಾಲಿಯರ್​ನಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಬಾಂಗ್ಲಾ ವಿರುದ್ಧ ಟೀಮ್ ಇಂಡಿಯಾ 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ಹೀಗಾಗಿ ಎರಡನೇ ಪಂದ್ಯದ ಮೂಲಕ ಸರಣಿ ವಶಪಡಿಸಿಕೊಳ್ಳುವ ಉತ್ತಮ ಅವಕಾಶ ಭಾರತ ತಂಡದ ಮುಂದಿದೆ.

ಅತ್ತ ಸರಣಿ ಆಸೆಯನ್ನು ಜೀವಂತವಿರಿಸಿಕೊಳ್ಳಬೇಕಿದ್ದರೆ ಬಾಂಗ್ಲಾದೇಶ್ ತಂಡವು 2ನೇ ಪಂದ್ಯದಲ್ಲಿ ಜಯ ಸಾಧಿಸುವುದು ಅನಿವಾರ್ಯ. ಹೀಗಾಗಿ ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಉಭಯ ತಂಡಗಳಿಂದ ಭರ್ಜರಿ ಪೈಪೋಟಿ ನಿರೀಕ್ಷಿಸಬಹುದು.

ದೆಹಲಿ ಪಿಚ್ ರಿಪೋರ್ಟ್​?

ಅರುಣ್ ಜೇಟ್ಲಿ ಕ್ರೀಡಾಂಗಣದ ಪಿಚ್ ಬ್ಯಾಟರ್​ಗಳ ಸ್ವರ್ಗ. ಈ ಮೈದಾನದಲ್ಲಿ ಸಣ್ಣ ಬೌಂಡರಿಗಳಿದ್ದು, ಹೀಗಾಗಿ ಇಲ್ಲಿ ಸಿಕ್ಸ್​ ಮತ್ತು ಫೋರ್​ಗಳನ್ನು ಸಹ ನಿರೀಕ್ಷಿಸಬಹುದು. ಇದಾಗ್ಯೂ ಈ ಮೈದಾನದಲ್ಲಿ ಸ್ಪಿನ್ನರ್​ಗಳು ಗೇಮ್ ಚೇಂಜರ್​ ಆಗಿ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಅತ್ಯುತ್ತಮ ಸ್ಪಿನ್ನರ್​ಗಳನ್ನು ಹೊಂದಿರುವ ತಂಡವು ಪಂದ್ಯದ ಚಿತ್ರಣ ಬದಲಿಸಬಲ್ಲರು.

ಟಾಸ್ ಗೆದ್ದರೆ?

ಈ ಮ್ಯಾಚ್​ನಲ್ಲಿ ಟಾಸ್ ಗೆಲ್ಲುವ ತಂಡ ಬೌಲಿಂಗ್ ಆಯ್ದುಕೊಳ್ಳುವ ಸಾಧ್ಯತೆ ಹೆಚ್ಚು. ಏಕೆಂದರೆ ಈ ಪಿಚ್​ ಬ್ಯಾಟಿಂಗ್​ಗೆ ಸಹಕಾರಿಯಾಗಿರುವ ಕಾರಣ ಚೇಸಿಂಗ್ ಮಾಡುವುದು ಸುಲಭ. ಅದರಲ್ಲೂ ಇಲ್ಲಿ ಆಡಲಾದ 7 ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಚೇಸಿಂಗ್ ಮಾಡಿದ ತಂಡವು 4 ಬಾರಿ ಗೆದ್ದಿದೆ. ಹೀಗಾಗಿ ಟಾಸ್ ಗೆಲ್ಲುವ ತಂಡ ಬೌಲಿಂಗ್ ಆಯ್ದುಕೊಳ್ಳುವ ಸಾಧ್ಯತೆಯಿದೆ.

ಎಷ್ಟು ಗಂಟೆಗೆ ಪಂದ್ಯ ಶುರು?

ಭಾರತ ಮತ್ತು ಬಾಂಗ್ಲಾದೇಶ್ ನಡುವಣ ಈ ಪಂದ್ಯವು ರಾತ್ರಿ 7 ಗಂಟೆಯಿಂದ ಶುರುವಾಗಲಿದೆ. ದೆಹಲಿಯಲ್ಲಿ ನಡೆಯಲಿರುವ ಈ ಮ್ಯಾಚ್​ ಅನ್ನು ಸ್ಪೋರ್ಟ್ಸ್ 18 ಚಾನೆಲ್ ಹಾಗೂ ಜಿಯೋ ಸಿನಿಮಾ ಆ್ಯಪ್​ಗಳಲ್ಲಿ ಲೈವ್ ವೀಕ್ಷಿಸಬಹುದು.

ಉಭಯ ತಂಡಗಳು:

ಭಾರತ ಟಿ20 ತಂಡ: ಸೂರ್ಯಕುಮಾರ್ ಯಾದವ್(ನಾಯಕ) ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್, ರಿಂಕು ಸಿಂಗ್, ಹಾರ್ದಿಕ್ ಪಾಂಡ್ಯ, ರಿಯಾನ್ ಪರಾಗ್, ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ವರುಣ್ ಚಕ್ರವರ್ತಿ, ಜಿತೇಶ್ ಶರ್ಮಾ, ಅರ್ಷದೀಪ್ ಸಿಂಗ್, ಹರ್ಷಿತ್ ರಾಣಾ, ಮಯಾಂಕ್ ಯಾದವ್, ತಿಲಕ್ ವರ್ಮಾ.

ಇದನ್ನೂ ಓದಿ: ಯಶಸ್ವಿ ಜೈಸ್ವಾಲ್ ಆರ್ಭಟಕ್ಕೆ ಸೆಹ್ವಾಗ್ ದಾಖಲೆಯೇ ಧ್ವಂಸ..!

ಬಾಂಗ್ಲಾದೇಶ್ ಟಿ20 ತಂಡ: ನಜ್ಮುಲ್ ಹೊಸೈನ್ ಶಾಂತೊ (ನಾಯಕ), ತಂಝಿದ್ ಹಸನ್ ತಮೀಮ್, ಪರ್ವೇಝ್ ಹೊಸೈನ್ ಎಮನ್, ತೌಹಿದ್ ಹೃದೋಯ್, ಮಹಮ್ಮದುಲ್ಲಾ, ಲಿಟ್ಟನ್ ಕುಮಾರ್ ದಾಸ್, ಜಾಕಿರ್ ಅಲಿ, ಮೆಹಿದಿ ಹಸನ್ ಮಿರಾಝ್, ಮಹೇದಿ ಹಸನ್, ರಿಶಾದ್ ಹೊಸೈನ್, ಮುಸ್ತಾಫಿಜುರ್ ರೆಹಮಾನ್, ತಸ್ಕಿನ್ ಅಹ್ಮದ್, ಶೋರಿಫುಲ್ ಇಸ್ಲಾಂ, ತಂಝಿಮ್ ಹಸನ್ ಸಾಕಿಬ್, ರಕೀಬುಲ್ ಹಸನ್.

Published On - 2:03 pm, Tue, 8 October 24