AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಮರ್ಜಿಂಗ್​ ಏಷ್ಯಾಕಪ್ ವೇಳಾಪಟ್ಟಿ ಪ್ರಕಟ: ಭಾರತ vs ಪಾಕಿಸ್ತಾನ್ ಮುಖಾಮುಖಿ

ACC T20 Emerging Asia Cup 2024: ಎಮರ್ಜಿಂಗ್ ಏಷ್ಯಾಕಪ್ ಟೂರ್ನಿ ಏಷ್ಯನ್ ರಾಷ್ಟ್ರಗಳ ಕ್ರಿಕೆಟ್ ಕದನ. ಈ ಟೂರ್ನಿಯಲ್ಲಿ ಆಯಾ ದೇಶಗಳ ಕಿರಿಯರ ತಂಡ ಅಥವಾ A ತಂಡಗಳು ಕಣಕ್ಕಿಳಿಯುತ್ತವೆ. ಈ ಹಿಂದೆ ಏಕದಿನ ಮಾದರಿಯಲ್ಲಿ ಆಯೋಜಿಸಲಾಗಿದ್ದ ಈ ಟೂರ್ನಿಯು ಈ ಬಾರಿ ಟಿ20 ಸ್ವರೂಪದಲ್ಲಿ ಜರುಗಲಿದೆ.

ಎಮರ್ಜಿಂಗ್​ ಏಷ್ಯಾಕಪ್ ವೇಳಾಪಟ್ಟಿ ಪ್ರಕಟ: ಭಾರತ vs ಪಾಕಿಸ್ತಾನ್ ಮುಖಾಮುಖಿ
IND vs PAK
ಝಾಹಿರ್ ಯೂಸುಫ್
|

Updated on: Oct 08, 2024 | 12:03 PM

Share

ಉದಯೋನ್ಮುಖ ತಂಡಗಳ ಏಷ್ಯಾಕಪ್ ಟಿ20 ಟೂರ್ನಿಯ ವೇಳಾಪಟ್ಟಿ ಪ್ರಕಟವಾಗಿದೆ. ಒಮಾನ್​ನಲ್ಲಿ ನಡೆಯಲಿರುವ ಈ ಟೂರ್ನಿಯು ಅಕ್ಟೋಬರ್ 18 ರಿಂದ ಶುರುವಾಗಲಿದ್ದು, ಫೈನಲ್ ಪಂದ್ಯವು ಅಕ್ಟೋಬರ್ 27 ರಂದು ನಡೆಯಲಿದೆ. ಇನ್ನು ಈ ಬಾರಿಯ ಟೂರ್ನಿಯಲ್ಲಿ ಒಟ್ಟು 8 ತಂಡಗಳು ಭಾಗವಹಿಸಲಿವೆ. ಈ ಎಂಟು ತಂಡಗಳನ್ನು ಎರಡು ಗ್ರೂಪ್​ಗಳಲ್ಲಿ ವಿಂಗಡಿಸಲಾಗಿದ್ದು, ಅದರಂತೆ ಮೊದಲ ಸುತ್ತಿನಲ್ಲಿ ಗುಂಪುಗಳಲ್ಲಿನ ತಂಡಗಳ ನಡುವೆ ಪೈಪೋಟಿ ನಡೆಯಲಿದೆ.

ಎಮರ್ಜಿಂಗ್​ ಏಷ್ಯಾ ಕಪ್ 2024ರ ತಂಡಗಳು:

  • ಗ್ರೂಪ್- A
  • ಶ್ರೀಲಂಕಾ ಎ
  • ಬಾಂಗ್ಲಾದೇಶ್ ಎ
  • ಅಫ್ಘಾನಿಸ್ತಾನ್ ಎ
  • ಹಾಂಗ್ ಕಾಂಗ್ ಎ

ಇದನ್ನೂ ಓದಿ: ಹಾರ್ದಿಕ್ ಪಾಂಡ್ಯ ಸಿಕ್ಸರ್​ಗೆ ಕೆಳಗೆ ಬಿದ್ದ ವಿರಾಟ್ ಕೊಹ್ಲಿಯ ದಾಖಲೆ

  • ಗ್ರೂಪ್-B
  • ಭಾರತ ಎ
  • ಪಾಕಿಸ್ತಾನ್ ಎ
  • ಯುಎಇ ಎ
  • ಒಮಾನ್ ಎ

ಭಾರತ vs ಪಾಕಿಸ್ತಾನ್ ಮುಖಾಮುಖಿ:

ಎಮರ್ಜಿಂಗ್ ಏಷ್ಯಾಕಪ್ ಟೂರ್ನಿಯ ಗ್ರೂಪ್ ಬಿ ನಲ್ಲಿ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಕಾಣಿಸಿಕೊಂಡಿವೆ. ಹೀಗಾಗಿ ಮೊದಲ ಸುತ್ತಿನಲ್ಲೇ ಸಾಂಪ್ರದಾಯಿಕ ಎದುರಾಳಿಗಳು ಮುಖಾಮುಖಿಯಾಗಲಿದ್ದಾರೆ. ಅದರಂತೆ ಅಕ್ಟೋಬರ್ 19 ರಂದು ನಡೆಯಲಿರುವ 4ನೇ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಎದುರು ಬದುರಾಗಲಿದೆ.

ಈ ಟೂರ್ನಿಯ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ:

  1. ಅಕ್ಟೋಬರ್ 18: ಬಾಂಗ್ಲಾದೇಶ್ ಎ vs ಹಾಂಗ್ ಕಾಂಗ್ ಎ
  2. ಅಕ್ಟೋಬರ್ 18: ಶ್ರೀಲಂಕಾ ಎ vs ಅಫ್ಘಾನಿಸ್ತಾನ ಎ
  3. ಅಕ್ಟೋಬರ್ 19: ಒಮಾನ್ vs ಯುಎಇ ಎ
  4. ಅಕ್ಟೋಬರ್ 19: ಭಾರತ ಎ vs ಪಾಕಿಸ್ತಾನ್ ಎ
  5. ಅಕ್ಟೋಬರ್ 20: ಶ್ರೀಲಂಕಾ ಎ vs ಹಾಂಗ್ ಕಾಂಗ್ ಎ
  6. ಅಕ್ಟೋಬರ್ 20: ಬಾಂಗ್ಲಾದೇಶ್ ಎ vs ಅಫ್ಘಾನಿಸ್ತಾನ್ ಎ
  7. ಅಕ್ಟೋಬರ್ 21: ಒಮಾನ್ vs ಪಾಕಿಸ್ತಾನ ಎ
  8. ಅಕ್ಟೋಬರ್ 21: ಭಾರತ ಎ vs ಯುಎಇ ಎ
  9. ಅಕ್ಟೋಬರ್ 22: ಅಫ್ಘಾನಿಸ್ತಾನ್ ಎ vs ಹಾಂಗ್ ಕಾಂಗ್ ಎ
  10. ಅಕ್ಟೋಬರ್ 22: ಶ್ರೀಲಂಕಾ ಎ vs ಬಾಂಗ್ಲಾದೇಶ್ ಎ
  11. ಅಕ್ಟೋಬರ್ 23: ಪಾಕಿಸ್ತಾನ್ ಎ vs ಯುಎಇ ಎ
  12. ಅಕ್ಟೋಬರ್ 23: ಒಮಾನ್ vs ಭಾರತ ಎ
  13. ಅಕ್ಟೋಬರ್ 25: ಸೆಮಿಫೈನಲ್ 1
  14. ಅಕ್ಟೋಬರ್ 25: ಸೆಮಿಫೈನಲ್ 2
  15. ಅಕ್ಟೋಬರ್ 27: ಫೈನಲ್
Follow Us
ವಿಜಯೇಂದ್ರನನ್ನು ಕಿತ್ತಾಕಿ: ಆಡಿಯೋ ವೈರಲ್ ಬಗ್ಗೆ ಸದಾನಂದಗೌಡ ಹೇಳಿದ್ದಿಷ್ಟು
ವಿಜಯೇಂದ್ರನನ್ನು ಕಿತ್ತಾಕಿ: ಆಡಿಯೋ ವೈರಲ್ ಬಗ್ಗೆ ಸದಾನಂದಗೌಡ ಹೇಳಿದ್ದಿಷ್ಟು
"ವಿಜಯೇಂದ್ರನನ್ನು ಕಿತ್ತು ಬಿಸಾಕಿ": ಬಿಜೆಪಿಯಲ್ಲಿ ಅಲ್ಲೋಲ ಕಲ್ಲೋಲ
ನಾಳೆಯಿಂದ SIR, ಮನೆಗೆ ಬರ್ತಾರೆ ಅಧಿಕಾರಿಗಳು: ನೀವೇನು ಮಾಡಬೇಕಾದ್ದೇನು ನೋಡಿ
ನಾಳೆಯಿಂದ SIR, ಮನೆಗೆ ಬರ್ತಾರೆ ಅಧಿಕಾರಿಗಳು: ನೀವೇನು ಮಾಡಬೇಕಾದ್ದೇನು ನೋಡಿ
ಮಂಗಳೂರಿನಲ್ಲಿ ಕೇರಳದ ಚಿನ್ನದ ವ್ಯಾಪಾರಿಯ ಸಿನೀಮಿಯ ದರೋಡೆ
ಮಂಗಳೂರಿನಲ್ಲಿ ಕೇರಳದ ಚಿನ್ನದ ವ್ಯಾಪಾರಿಯ ಸಿನೀಮಿಯ ದರೋಡೆ
ನಿವೃತ್ತ ಶಿಕ್ಷಕನಿಗೆ ಹೊಸ ಬೈಕ್ ಉಡುಗೊರೆ ನೀಡಿದ ಹಳೆಯ ವಿದ್ಯಾರ್ಥಿಗಳು!
ನಿವೃತ್ತ ಶಿಕ್ಷಕನಿಗೆ ಹೊಸ ಬೈಕ್ ಉಡುಗೊರೆ ನೀಡಿದ ಹಳೆಯ ವಿದ್ಯಾರ್ಥಿಗಳು!
ಲಗೇಜ್ ಬ್ಯಾಗ್‌ನಲ್ಲಿತ್ತು 21 ಕೋಟಿ ರೂ. ಮೌಲ್ಯದ ಡ್ರಗ್ಸ್!
ಲಗೇಜ್ ಬ್ಯಾಗ್‌ನಲ್ಲಿತ್ತು 21 ಕೋಟಿ ರೂ. ಮೌಲ್ಯದ ಡ್ರಗ್ಸ್!
ಸಿದ್ದು ಸೈಡ್​ಲೈನ್ ಆದ್ರಾ ಎಂದಿದ್ದಕ್ಕೆ ಸತೀಶ್ ಜಾರಕಿಹೊಳಿ ಮಾರ್ಮಿಕ ಮಾತು!
ಸಿದ್ದು ಸೈಡ್​ಲೈನ್ ಆದ್ರಾ ಎಂದಿದ್ದಕ್ಕೆ ಸತೀಶ್ ಜಾರಕಿಹೊಳಿ ಮಾರ್ಮಿಕ ಮಾತು!
ಉದ್ಯಮಿಯಿಂದ 1.05 ಕೋಟಿ ರೂ. ದರೋಡೆ ಕೇಸಲ್ಲಿ ಐವರ ಬಂಧನ
ಉದ್ಯಮಿಯಿಂದ 1.05 ಕೋಟಿ ರೂ. ದರೋಡೆ ಕೇಸಲ್ಲಿ ಐವರ ಬಂಧನ
ಚನ್ನಪಟ್ಟಣ: ಕೆಂಪೇಗೌಡರ ಬ್ಯಾನರ್‌ಗೆ ಬೆಂಕಿ, ಕಿಡಿಗೇಡಿಗಳ ಕೃತ್ಯಕ್ಕೆ ಆಕ್ರೋ
ಚನ್ನಪಟ್ಟಣ: ಕೆಂಪೇಗೌಡರ ಬ್ಯಾನರ್‌ಗೆ ಬೆಂಕಿ, ಕಿಡಿಗೇಡಿಗಳ ಕೃತ್ಯಕ್ಕೆ ಆಕ್ರೋ
ರಾಜ್ಯದ ಒಂದೆಡೆ ವರುಣಾರ್ಭಟ; ಇನ್ನೊಂದೆಡೆ ಮುಂಗಾರಿನ ಮುನಿಸು!
ರಾಜ್ಯದ ಒಂದೆಡೆ ವರುಣಾರ್ಭಟ; ಇನ್ನೊಂದೆಡೆ ಮುಂಗಾರಿನ ಮುನಿಸು!