ಏಕದಿನ ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ಧರಿಸಲಿರುವ ನೂತನ ಜೆರ್ಸಿಯ ವಿನ್ಯಾಸ ಅನಾವರಣಗೊಂಡಿದೆ. ಏಕದಿನ ವಿಶ್ವಕಪ್ಗೂ ಮುನ್ನ ಅಡಿಡಾಸ್ ಕಂಪೆನಿಯು ಪ್ರಕಟಿಸಿರುವ ಥೀಮ್ ಸಾಂಗ್ನಲ್ಲಿ ನೂತನ ಜೆರ್ಸಿಯಲ್ಲಿ ಭಾರತೀಯ ಆಟಗಾರರು ಕಾಣಿಸಿಕೊಂಡಿದ್ದಾರೆ. ಇದರೊಂದಿಗೆ ಇದೇ ವಿನ್ಯಾಸದಲ್ಲಿರುವ ಜೆರ್ಸಿಯಲ್ಲಿ ಭಾರತ ತಂಡ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ.
ಖ್ಯಾತ ಗಾಯಕ ರಫ್ತಾರ್ ಹಾಡಿರುವ ಈ ಹಾಡಿನಲ್ಲಿ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ರವೀಂದ್ರ ಜಡೇಜಾ, ಹಾರ್ದಿಕ್ ಪಾಂಡ್ಯ ಸೇರಿದಂತೆ ಭಾರತ ತಂಡದ ಕೆಲ ಆಟಗಾರರು ಕಾಣಿಸಿಕೊಂಡಿದ್ದಾರೆ. ಏಷ್ಯಾಕಪ್ನಲ್ಲಿ ಧರಿಸಿದ್ದ ಅದೇ ಬಣ್ಣದ ಜೆರ್ಸಿಯನ್ನು ಭಾರತೀಯ ಆಟಗಾರರು ತೊಟ್ಟಿದ್ದಾರೆ.
1983 ignited the spark.
2011 brought in glory.
2023 marks the beginning of #3KaDream. pic.twitter.com/1eA0mRiosV— adidas (@adidas) September 20, 2023
ಆದರೆ ಈ ಜೆರ್ಸಿಯ ಭುಜ ಭಾಗದಲ್ಲಿ ತ್ರಿವರ್ಣ ಧ್ವಜದ ಮೂರು ಬಣ್ಣಗಳನ್ನು ನೀಡಲಾಗಿರುವುದು ವಿಶೇಷ. ಹೀಗಾಗಿ ಇದೇ ಮಾದರಿಯ ಜೆರ್ಸಿಯಲ್ಲಿ ಭಾರತ ವಿಶ್ವಕಪ್ನಲ್ಲಿ ಕಣಕ್ಕಿಳಿಯುವುದು ಖಚಿತ ಎನ್ನಬಹುದು.
Team India World Cup Jersey 2023#teamindia #WorldCup2023 pic.twitter.com/J1G2VxTQ3I
— CRICKETIGA (@CRICKETIGA_) September 20, 2023
ಇಲ್ಲಿ ಭಾರತದ ಜೆರ್ಸಿಯ ಭುಜ ಭಾಗದಲ್ಲಿ ತ್ರಿವರ್ಣ ಧ್ವಜದ ಜೊತೆಗೆ ಮುಂಭಾಗದಲ್ಲಿ ಡ್ರೀಮ್ 11 ಜಾಹೀರಾತು ಇದೆ. ಆದರೆ ಏಕದಿನ ವಿಶ್ವಕಪ್ ಜೆರ್ಸಿಯಲ್ಲಿ ಯಾವುದೇ ಕಂಪೆನಿಯ ಜಾಹೀರಾತು ಕಾಣಿಸಿಕೊಳ್ಳುವುದಿಲ್ಲ.
Indian Team World Cup 2023 Jersey#teamindiajersey #indianteamjersey pic.twitter.com/g15m2hq22m
— CRICKETIGA (@CRICKETIGA_) September 20, 2023
ಬದಲಾಗಿ ಏಕದಿನ ವಿಶ್ವಕಪ್ ಲೋಗೋ ಹಾಗೂ ಇಂಡಿಯಾ ಎಂಬ ಬರಹ ಮಾತ್ರ ಇರಲಿದೆ. ಹೀಗಾಗಿ ತ್ರಿವರ್ಣ ಪಟ್ಟಿಯೊಂದಿಗೆ ಈ ಬಾರಿ ಕೂಡ ಟೀಮ್ ಇಂಡಿಯಾ ಬ್ಲೂ ಜೆರ್ಸಿಯಲ್ಲಿ ಕಣಕ್ಕಿಳಿಯುವುದು ಖಚಿತ ಎನ್ನಬಹುದು.
ಇದನ್ನೂ ಓದಿ: ಸರ್ವಶ್ರೇಷ್ಠ ಸಾಧನೆ: ಮೊಹಮ್ಮದ್ ಸಿರಾಜ್ ಈಗ ವಿಶ್ವದ ನಂಬರ್ 1 ಬೌಲರ್
ಈ ಬಾರಿಯ ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ತೀನ್ ಕಾ ಡ್ರೀಮ್ (ಮೂರರ ಕನಸು) ಘೋಷಣೆಯೊಂದಿಗೆ ಕಣಕ್ಕಿಳಿಯಲಿದೆ. ಅಂದರೆ ಈಗಾಗಲೇ 2 ಏಕದಿನ ವಿಶ್ವಕಪ್ ಗೆದ್ದಿರುವ ಭಾರತ ತಂಡವು 3ನೇ ಬಾರಿ ವರ್ಲ್ಡ್ ಕಪ್ ಗೆಲ್ಲುವ ಉಮೇದಿನಲ್ಲಿದೆ. ಈ ಕನಸನ್ನು ಹುರಿದುಂಬಿಸುವಂತಹ ಶೀರ್ಷಿಕೆ ಹಾಡನ್ನು ಅಡಿಡಾಸ್ ಕಂಪೆನಿ ಬಿಡುಗಡೆ ಮಾಡಿರುವುದು ವಿಶೇಷ.