202 ರನ್​ಗಳ ಗುರಿ ಬೆನ್ನತ್ತಿದ ತಂಡ 22 ರನ್​ಗಳಿಗೆ ಆಲೌಟ್..!

Asian Games 2023: ಏಷ್ಯನ್ ಗೇಮ್ಸ್​ನಲ್ಲಿ ಭಾರತ ಮಹಿಳಾ ತಂಡವು ಗುರುವಾರದಿಂದ ಅಭಿಯಾನ ಆರಂಭಿಸಲಿದೆ. ತನ್ನ ಮೊದಲ ಕ್ವಾಲಿಫೈಯರ್​ ಪಂದ್ಯದಲ್ಲಿ ಮಲೇಷ್ಯಾ ತಂಡವನ್ನು ಎದುರಿಸಲಿದ್ದು, ಈ ಮೂಲಕ ಶುಭಾರಂಭ ಮಾಡುವ ಇರಾದೆಯಲ್ಲಿದೆ. ಇನ್ನು ಎರಡನೇ ಕ್ವಾಲಿಫೈಯರ್​ ಪಂದ್ಯದಲ್ಲಿ ಪಾಕಿಸ್ತಾನ್ ತಂಡವು ಇಂಡೋನೇಷ್ಯಾ ತಂಡವನ್ನು ಎದುರಿಸಲಿದೆ. ಹೀಗಾಗಿ ಸೆಮಿಫೈನಲ್​ನಲ್ಲಿ ಭಾರತ ಮತ್ತು ಪಾಕಿಸ್ತಾನ್ ಮುಖಾಮುಖಿಯಾಗುವ ಸಾಧ್ಯತೆಯಿದೆ.

202 ರನ್​ಗಳ ಗುರಿ ಬೆನ್ನತ್ತಿದ ತಂಡ 22 ರನ್​ಗಳಿಗೆ ಆಲೌಟ್..!
Hong Kong W vs Mongolia W
Follow us
TV9 Web
| Updated By: ಝಾಹಿರ್ ಯೂಸುಫ್

Updated on: Sep 20, 2023 | 7:29 PM

ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ಮಹಿಳಾ ಟಿ20 ಪಂದ್ಯದಲ್ಲಿ ಹಾಂಗ್​ಕಾಂಗ್ ತಂಡವು ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಮಂಗೋಲಿಯಾ ತಂಡವು ಬೌಲಿಂಗ್ ಆಯ್ದುಕೊಂಡಿತು. ಅದರಂತೆ ಇನಿಂಗ್ಸ್ ಆರಂಭಿಸಿದ ಹಾಂಗ್​​ಕಾಂಗ್ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ.

ಕೇವಲ 10 ರನ್​ಗಳಿಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ತಂಡಕ್ಕೆ ನಾಯಕಿ ಕ್ಯಾರಿ ಚಾನ್ ಆಸರೆಯಾದರು. ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ ಕ್ಯಾರಿ ಚಾನ್ 39 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 11 ಫೋರ್​ಗಳೊಂದಿಗೆ 70 ರನ್ ಚಚ್ಚಿದರು.

ಇನ್ನು ಯೀ ಶಾನ್ ತೊ ಅಜೇಯ 34 ರನ್ ಬಾರಿಸಿದರೆ, ಮರ್ಯಮ್ ಬೀಬಿ ಅಜೇಯ 30 ರನ್​ಗಳ ಕೊಡುಗೆ ನೀಡಿದರು. ಇದರ ಜೊತೆಗೆ ಮಂಗೋಲಿಯಾ ತಂಡವು ಎಕ್ಸ್​ಟ್ರಾ ರೂಪದಲ್ಲಿ 36 ರನ್​ಗಳನ್ನು ಬಿಟ್ಟುಕೊಟ್ಟಿದ್ದರು. ಪರಿಣಾಮ 20 ಓವರ್​ಗಳಲ್ಲಿ 4 ವಿಕೆಟ್ ನಷ್ಟಕ್ಕೆ ಹಾಂಗ್​ಕಾಂಗ್ ತಂಡವು 202 ರನ್ ಕಲೆಹಾಕಿತು.

203 ರನ್​ಗಳ ಕಠಿಣ ಗುರಿ ಬೆನ್ನತ್ತಿದ ಮಂಗೋಲಿಯಾ 21 ರನ್​ಗಳಿಸುಷ್ಟರಲ್ಲಿ 6 ವಿಕೆಟ್ ಕಳೆದುಕೊಂಡಿತು. ಅಚ್ಚರಿ ಎಂದರೆ ತಂಡದ ಮೊತ್ತಕ್ಕೆ ಒಂದು ರನ್ ಸೇರ್ಪಡೆಯಾಗುವಷ್ಟರಲ್ಲಿ ಉಳಿದ ನಾಲ್ವರು ಕೂಡ ವಿಕೆಟ್ ಒಪ್ಪಿಸಿದ್ದರು. ಇದರೊಂದಿಗೆ 12.4 ಓವರ್​ಗಳಲ್ಲಿ ಮಂಗೋಲಿಯಾ ತಂಡವು 22 ರನ್​ಗಳಿಗೆ ಸರ್ಪಪತನ ಕಂಡಿತು. ಅತ್ತ ಹಾಂಗ್​ಕಾಂಗ್ ತಂಡವು 180 ರನ್​ಗಳಿಂದ ಜಯಭೇರಿ ಬಾರಿಸಿತು.

ಅತ್ಯಲ್ಪ ಮೊತ್ತಕ್ಕೆ ಆಲೌಟ್ ಆಗಿದ್ದ ಮಂಗೋಲಿಯಾ:

ಇದಕ್ಕೂ ಮುನ್ನ ಇಂಡೋನೇಷ್ಯಾ ವಿರುದ್ಧದ ಪಂದ್ಯದಲ್ಲೂ ಮಂಗೋಲಿಯಾ ತಂಡ ಕೇವಲ 15 ರನ್​ಗಳಿಗೆ ಆಲೌಟ್ ಆಗಿತ್ತು. ಇದರೊಂದಿಗೆ ಏಷ್ಯನ್ ಗೇಮ್ಸ್​ನಲ್ಲಿ ಅತೀ ಕಡಿಮೆ ಮೊತ್ತಕ್ಕೆ ಆಲೌಟ್ ಆದ ತಂಡ ಎಂಬ ಹೀನಾಯ ದಾಖಲೆ ಮಂಗೋಲಿಯಾ ತಂಡದ ಹೆಸರಿಗೆ ಸೇರ್ಪಡೆಯಾಗಿತ್ತು. ಇದೀಗ 2ನೇ ಪಂದ್ಯದಲ್ಲಿ 22 ರನ್​ಗಳಿಗೆ ಇನಿಂಗ್ಸ್ ಅಂತ್ಯಗೊಳಿಸಿ ನಿರಾಸೆ ಮೂಡಿಸಿದೆ.

ಭಾರತ ತಂಡದ ಅಭಿಯಾನ:

ಏಷ್ಯನ್ ಗೇಮ್ಸ್​ನಲ್ಲಿ ಭಾರತ ಮಹಿಳಾ ತಂಡವು ಗುರುವಾರದಿಂದ ಅಭಿಯಾನ ಆರಂಭಿಸಲಿದೆ. ತನ್ನ ಮೊದಲ ಕ್ವಾಲಿಫೈಯರ್​ ಪಂದ್ಯದಲ್ಲಿ ಮಲೇಷ್ಯಾ ತಂಡವನ್ನು ಎದುರಿಸಲಿದ್ದು, ಈ ಮೂಲಕ ಶುಭಾರಂಭ ಮಾಡುವ ಇರಾದೆಯಲ್ಲಿದೆ.

ಇನ್ನು ಎರಡನೇ ಕ್ವಾಲಿಫೈಯರ್​ ಪಂದ್ಯದಲ್ಲಿ ಪಾಕಿಸ್ತಾನ್ ತಂಡವು ಇಂಡೋನೇಷ್ಯಾ ತಂಡವನ್ನು ಎದುರಿಸಲಿದೆ. ಹೀಗಾಗಿ ಸೆಮಿಫೈನಲ್​ನಲ್ಲಿ ಭಾರತ ಮತ್ತು ಪಾಕಿಸ್ತಾನ್ ಮುಖಾಮುಖಿಯಾಗುವ ಸಾಧ್ಯತೆಯಿದೆ.

ಮಾಲೂರು ಹತ್ತಿರದ ಪ್ರಸನ್ನ ವೆಂಕಟರಮಣ ದೇವಸ್ಥಾನ ಪ್ರಾಚೀನ ಇತಿಹಾಸದ ಪ್ರತೀಕ
ಮಾಲೂರು ಹತ್ತಿರದ ಪ್ರಸನ್ನ ವೆಂಕಟರಮಣ ದೇವಸ್ಥಾನ ಪ್ರಾಚೀನ ಇತಿಹಾಸದ ಪ್ರತೀಕ
ಸಂಚಾರಕ್ಕೆ ಅನುಮತಿ ನೀಡಿದರೆ ಸುವರ್ಣ ಸೌಧದ ಮುಂದೆ ಪ್ರತಿಭಟನೆ: ವಾಟಾಳ್
ಸಂಚಾರಕ್ಕೆ ಅನುಮತಿ ನೀಡಿದರೆ ಸುವರ್ಣ ಸೌಧದ ಮುಂದೆ ಪ್ರತಿಭಟನೆ: ವಾಟಾಳ್
‘ಭೈರತಿ ರಣಗಲ್’ ಸಿನಿಮಾ ನೋಡಿದ ಗೀತಾ ಶಿವರಾಜ್ ಕುಮಾರ್ ಮೊದಲ ರಿಯಾಕ್ಷನ್
‘ಭೈರತಿ ರಣಗಲ್’ ಸಿನಿಮಾ ನೋಡಿದ ಗೀತಾ ಶಿವರಾಜ್ ಕುಮಾರ್ ಮೊದಲ ರಿಯಾಕ್ಷನ್
ಮಂಡ್ಯ: ಪಾಂಡವಪುರ ಪುರಸಭೆ ನಿವೇಶನಗಳ ಹಂಚಿಕೆಯಲ್ಲಿ ಅಕ್ರಮ
ಮಂಡ್ಯ: ಪಾಂಡವಪುರ ಪುರಸಭೆ ನಿವೇಶನಗಳ ಹಂಚಿಕೆಯಲ್ಲಿ ಅಕ್ರಮ
‘ಭೈರತಿ ರಣಗಲ್’ ಲುಕ್​ನಲ್ಲೇ ಶಿವಣ್ಣನ ಸಿನಿಮಾ ನೋಡಲು ಬಂದ ಡಾಲಿ ಧನಂಜಯ್
‘ಭೈರತಿ ರಣಗಲ್’ ಲುಕ್​ನಲ್ಲೇ ಶಿವಣ್ಣನ ಸಿನಿಮಾ ನೋಡಲು ಬಂದ ಡಾಲಿ ಧನಂಜಯ್
ಜವಾರಿ ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ಹನುಮಂತ
ಜವಾರಿ ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ಹನುಮಂತ
Daily Devotional: ಶನಿ ನೇರ ಸಂಚಾರ ಯಾರಿಗೆಲ್ಲ ಅದೃಷ್ಟ? ವಿಡಿಯೋ ನೋಡಿ
Daily Devotional: ಶನಿ ನೇರ ಸಂಚಾರ ಯಾರಿಗೆಲ್ಲ ಅದೃಷ್ಟ? ವಿಡಿಯೋ ನೋಡಿ
ಶನಿದೇವ ಕುಂಬ ರಾಶಿಗೆ ಪ್ರವೇಶಿಸುವ ಈ ದಿನದ ರಾಶಿ ಭವಿಷ್ಯ ತಿಳಿಯಿರಿ
ಶನಿದೇವ ಕುಂಬ ರಾಶಿಗೆ ಪ್ರವೇಶಿಸುವ ಈ ದಿನದ ರಾಶಿ ಭವಿಷ್ಯ ತಿಳಿಯಿರಿ
ಮನೆಯಲ್ಲಿ ಸಲಗೆನಾ, ಸ್ಟ್ರೀಕ್ಟಾ? ವಿದ್ಯಾರ್ಥಿನಿ ಪ್ರಶ್ನೆಗೆ ಡಿಕೆಶಿ ಉತ್ತರ
ಮನೆಯಲ್ಲಿ ಸಲಗೆನಾ, ಸ್ಟ್ರೀಕ್ಟಾ? ವಿದ್ಯಾರ್ಥಿನಿ ಪ್ರಶ್ನೆಗೆ ಡಿಕೆಶಿ ಉತ್ತರ
ತಮಗೊಂದು ಗ್ಯಾರಂಟಿ ನೀಡುವಂತೆ ವಿದ್ಯಾರ್ಥಿ ಕೇಳಿದ ಪ್ರಶ್ನೆಗೆ ಡಿಸಿಎಂ ಉತ್ತರ
ತಮಗೊಂದು ಗ್ಯಾರಂಟಿ ನೀಡುವಂತೆ ವಿದ್ಯಾರ್ಥಿ ಕೇಳಿದ ಪ್ರಶ್ನೆಗೆ ಡಿಸಿಎಂ ಉತ್ತರ