ಏಷ್ಯನ್ ಗೇಮ್ಸ್​ ಫುಟ್​ಬಾಲ್: ಮೊದಲ ಪಂದ್ಯದಲ್ಲೇ ಭಾರತ ತಂಡಕ್ಕೆ ಹೀನಾಯ ಸೋಲು

Asian Games 2023: 2-1 ಅಂತರ ಸಾಧಿಸಿದ ಬಳಿಕ ಆಕ್ರಮಣಕಾರಿ ಆಟಕ್ಕೆ ಒತ್ತು ನೀಡಿದ ಚೀನಾದ ಮುನ್ಪಡೆ ಆಟಗಾರರು 72 ಮತ್ತು 76 ನಿಮಿಷಗಳಲ್ಲಿ ಬ್ಯಾಕ್ ಟು ಬ್ಯಾಕ್ ಗೋಲು ಬಾರಿಸಿದರು. ಇತ್ತ 4-1 ಮುನ್ನಡೆ ಪಡೆಯುತ್ತಿದ್ದಂತೆ ಭಾರತೀಯ ಆಟಗಾರರು ನಿರಾಸೆಗೊಂಡರು.

ಏಷ್ಯನ್ ಗೇಮ್ಸ್​ ಫುಟ್​ಬಾಲ್: ಮೊದಲ ಪಂದ್ಯದಲ್ಲೇ ಭಾರತ ತಂಡಕ್ಕೆ ಹೀನಾಯ ಸೋಲು
India vs China
Follow us
TV9 Web
| Updated By: ಝಾಹಿರ್ ಯೂಸುಫ್

Updated on: Sep 19, 2023 | 7:31 PM

ಚೀನಾದ ಗುವಾಂಗ್‌ಝೌ ನಗರದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ಮೊದಲ ಪಂದ್ಯದಲ್ಲೇ ಭಾರತ ಫುಟ್​ಬಾಲ್ ತಂಡವು ಹೀನಾಯ ಸೋಲನುಭವಿಸಿದೆ. ಮಂಗಳವಾರ ಸಂಜೆ ನಡೆದ ಈ ಪಂದ್ಯದಲ್ಲಿ ಭಾರತ ತಂಡವನ್ನು ಚೀನಾ 5-1 ಅಂತರದಿಂದ ಪರಾಜಯಗೊಳಿಸಿದೆ.

ಈ ಪಂದ್ಯದಲ್ಲಿ ಭಾರತ ತಂಡವು ಆರಂಭದಿಂದಲೇ ಕೆಟ್ಟ ಪ್ರದರ್ಶನ ನೀಡಿತ್ತು. ಟೀಮ್ ಇಂಡಿಯಾ ಡಿಫೆಂಡರ್​ಗಳನ್ನು ಸುಲಭವಾಗಿ ವಂಚಿಸುವಲ್ಲಿ ಯಶಸ್ವಿಯಾದ ಚೀನಾ ತಂಡವು 17ನೇ ನಿಮಿಷದಲ್ಲಿಯೇ ಮೊದಲು ಗೋಲು ದಾಖಲಿಸಿತು.

ಆದರೆ, ಮೊದಲಾರ್ಧದಲ್ಲಿಯೇ ಭಾರತದ ರಾಹುಲ್ ಕೆ.ಪಿ ಅದ್ಭುತ ಗೋಲು ಬಾರಿಸಿ ಸ್ಕೋರ್ ಅಂತರವನ್ನು 1-1 ರಂತೆ ಸಮಬಲಗೊಳಿಸಿದರು. ಆದರೆ ದ್ವಿತೀಯಾರ್ಧದಲ್ಲೂ ಸಾಂಘಿಕ ಪ್ರದರ್ಶನ ನೀಡುವಲ್ಲಿ ಭಾರತ ತಂಡವು ವಿಫಲವಾಯಿತು. ಇದರ ಸಂಪೂರ್ಣ ಲಾಭ ಪಡೆದ ಚೀನಾ 51ನೇ ನಿಮಿಷದಲ್ಲಿ 2ನೇ ಗೋಲು ದಾಖಲಿಸಿದರು.

2-1 ಅಂತರ ಸಾಧಿಸಿದ ಬಳಿಕ ಆಕ್ರಮಣಕಾರಿ ಆಟಕ್ಕೆ ಒತ್ತು ನೀಡಿದ ಚೀನಾದ ಮುನ್ಪಡೆ ಆಟಗಾರರು 72 ಮತ್ತು 76 ನಿಮಿಷಗಳಲ್ಲಿ ಬ್ಯಾಕ್ ಟು ಬ್ಯಾಕ್ ಗೋಲು ಬಾರಿಸಿದರು. ಇತ್ತ 4-1 ಮುನ್ನಡೆ ಪಡೆಯುತ್ತಿದ್ದಂತೆ ಭಾರತೀಯ ಆಟಗಾರರು ನಿರಾಸೆಗೊಂಡರು.

ಇನ್ನು ಪಂದ್ಯ ಮುಗಿಯಲು ನಿಮಿಷಗಳಿರುವಾಗ 91 ನಿಮಿಷದಲ್ಲಿ ಮತ್ತೊಂದು ಗೋಲು ದಾಖಲಿಸುವ ಮೂಲಕ ಚೀನಾ 5-1 ಅಂತರದಿಂದ ಮೊದಲ ಪಂದ್ಯದಲ್ಲಿ ಜಯಬೇರಿ ಬಾರಿಸಿತು.

ಈ ಪಂದ್ಯದಲ್ಲಿ ಕಣಕ್ಕಿಳಿದ ಭಾರತದ ಪ್ಲೇಯಿಂಗ್-11:

ಗುರ್ಮೀತ್ ಸಿಂಗ್ (ಗೋಲ್‌ಕೀಪರ್), ಲಾಲ್ಚುನುಂಗ, ಸಂದೇಶ್, ಆಯುಷ್, ಸುಮಿತ್, ಅಮರ್‌ಜೀತ್, ರಹೀಮ್ ಅಲಿ, ರಾಹುಲ್ ಕೆಪಿ, ಸುನಿಲ್ ಛೆಟ್ರಿ (ನಾಯಕ), ಬಿ. ಮಿರಾಂಡಾ, ಅಬ್ದುಲ್ ಅಂಜು

ಬದಲಿ ಆಟಗಾರರು: ವಿಶಾಲ್ ಯಾದವ್ (ಗೋಲ್‌ಕೀಪರ್), ಸ್ಯಾಮ್ಯುಯೆಲ್ ಜೇಮ್ಸ್, ವಿ. ಬ್ಯಾರೆಟೊ, ರೋಹಿತ್ ದಾನು, ಧೀರಜ್ ಸಿಂಗ್, ಅಜ್ಫರ್ ನೂರಾನಿ.