AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

187 ರನ್​ಗಳ ಟಾರ್ಗೆಟ್: ಕೇವಲ 15 ರನ್​ಗಳಿಗೆ ಎದುರಾಳಿ ತಂಡ ಆಲೌಟ್..!

Asian Games 2023: 188 ರನ್​ಗಳ ಕಠಿಣ ಗುರಿಯನ್ನು ಪಡೆದ ಮಂಗೋಲಿಯಾ ಪರ 7 ಬ್ಯಾಟರ್​ಗಳು ಶೂನ್ಯಕ್ಕೆ ಔಟಾದರು. ಇನ್ನು ಆರಂಭಿಕ ಆಟಗಾರ್ತಿ ಬಟ್ಜರ್ಗಲ್ ಇಚಿಂಖೋರ್ಲೂ 19 ಎಸೆತಗಳಲ್ಲಿ 5 ರನ್​ಗಳಿಸಿದ್ದು ಗರಿಷ್ಠ ಸ್ಕೋರ್. ಇತ್ತ ಕರಾರುವಾಕ್ ದಾಳಿ ಸಂಘಟಿಸಿದ ಇಂಡೋನೇಷ್ಯಾದ ಆಂಡ್ರಿಯಾನಿ 3 ಓವರ್​ಗಳಲ್ಲಿ 8 ರನ್ ನೀಡಿ 4 ವಿಕೆಟ್ ಕಬಳಿಸಿದರು.

187 ರನ್​ಗಳ ಟಾರ್ಗೆಟ್: ಕೇವಲ 15 ರನ್​ಗಳಿಗೆ ಎದುರಾಳಿ ತಂಡ ಆಲೌಟ್..!
Indonesia Women vs Mongolia Women
TV9 Web
| Edited By: |

Updated on: Sep 19, 2023 | 4:46 PM

Share

ಚೀನಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್​ ಮಹಿಳಾ ಕ್ರಿಕೆಟ್ ಪಂದ್ಯದಲ್ಲಿ ಇಂಡೋನೇಷ್ಯಾ ಅಮೋಘ ಗೆಲುವು ಸಾಧಿಸಿ ಶುಭಾರಂಭ ಮಾಡಿದೆ. ಹ್ಯಾಂಗ್‌ಝೌನ ಪಿಂಗ್‌ಫೆಂಗ್ ಕ್ಯಾಂಪಸ್ ಕ್ರಿಕೆಟ್ ಫೀಲ್ಡ್​ನಲ್ಲಿ ನಡೆದ ಈ ಪಂದ್ಯದಲ್ಲಿ ಇಂಡೋನೇಷ್ಯಾ ಹಾಗೂ ಮಂಗೋಲಿಯಾ ಮಹಿಳಾ ತಂಡಗಳು ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ಟಾಸ್ ಗೆದ್ದ ಮಂಗೋಲಿಯಾ ತಂಡವು ಮೊದಲು ಬೌಲಿಂಗ್ ಮಾಡುವ ನಿರ್ಧಾರ ತೆಗೆದುಕೊಂಡಿತು.

ಅದರಂತೆ ಇನಿಂಗ್ಸ್ ಆರಂಭಿಸಿದ ಇಂಡೋನೇಷ್ಯಾ ತಂಡವು ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿತು. ಆರಂಭಿಕರಾದ ಲುಹ್ ದೇವಿ (62) ಅರ್ಧಶತಕ ಬಾರಿಸಿದರೆ, ಸಕಾರಿಣಿ 35 ರನ್​ಗಳ ಕಾಣಿಕೆ ನೀಡಿದರು. ಇನ್ನು ಮಾರಿಯಾ ಕೊರಾಜನ್ 22 ರನ್​ ಬಾರಿಸಿದರು. ಇದಾಗ್ಯೂ ತಂಡದ ಮೊತ್ತ 150 ರ ಗಡಿದಾಟುತ್ತಿರಲಿಲ್ಲ.

ಆದರೆ ಮಂಗೋಲಿಯಾ ಬೌಲರ್​ಗಳು 38 ವೈಡ್​ಗಳನ್ನು ಎಸೆದರು. ಅಲ್ಲದೆ ಒಟ್ಟು 49 ಎಕ್ಸ್​ಟ್ರಾ ರನ್​ಗಳನ್ನು ನೀಡಿದರು. ಪರಿಣಾಮ 20 ಓವರ್​ಗಳಲ್ಲಿ 4 ವಿಕೆಟ್ ಕಳೆದುಕೊಂಡು ಇಂಡೋನೇಷ್ಯಾ ತಂಡವು 187 ರನ್​ ಕಲೆಹಾಕಿತು.

188 ರನ್​ಗಳ ಕಠಿಣ ಗುರಿಯನ್ನು ಪಡೆದ ಮಂಗೋಲಿಯಾ ಪರ 7 ಬ್ಯಾಟರ್​ಗಳು ಶೂನ್ಯಕ್ಕೆ ಔಟಾದರು. ಇನ್ನು ಆರಂಭಿಕ ಆಟಗಾರ್ತಿ ಬಟ್ಜರ್ಗಲ್ ಇಚಿಂಖೋರ್ಲೂ 19 ಎಸೆತಗಳಲ್ಲಿ 5 ರನ್​ಗಳಿಸಿದ್ದು ಗರಿಷ್ಠ ಸ್ಕೋರ್.

ಇತ್ತ ಕರಾರುವಾಕ್ ದಾಳಿ ಸಂಘಟಿಸಿದ ಇಂಡೋನೇಷ್ಯಾದ ಆಂಡ್ರಿಯಾನಿ 3 ಓವರ್​ಗಳಲ್ಲಿ 8 ರನ್ ನೀಡಿ 4 ವಿಕೆಟ್ ಕಬಳಿಸಿದರು. ಇನ್ನು ರಹಮಾವತಿ ಮತ್ತು ಲುಹ್ ದೇವಿ ತಲಾ 2 ವಿಕೆಟ್ ಪಡೆದರು. ಇನ್ನಿಬ್ಬರು ರನೌಟ್ ಆಗಿ ನಿರ್ಗಮಿಸಿದ್ದರು.

ಕೇವಲ 10 ರನ್​ ಕಲೆಹಾಕಿದ ಮಂಗೋಲಿಯಾ:

ಇಲ್ಲಿ ಅಚ್ಚರಿಯ ವಿಷಯ ಎಂದರೆ ಮಂಗೋಲಿಯಾ ಬ್ಯಾಟರ್​ಗಳು ಕಲೆಹಾಕಿರುವುದು ಕೇವಲ 10 ರನ್​ಗಳು ಮಾತ್ರ. ಬಟ್ಜರ್ಗಲ್ ಇಚಿಂಖೋರ್ಲೂ 5 ರನ್ ಬಾರಿಸಿದರೆ, ಜಾರ್ಗಲ್ಸೈಖಾನ್ ಎರ್ಡೆನೆಸುವ್ಡ್ 1 ರನ್​ ಗಳಿಸಿ ಔಟಾಗಿದ್ದರು. ಇನ್ನು ನರಂಗರೇಲ್ 3 ರನ್ ಕಲೆಹಾಕಿದರೆ, ನಮುನ್ಝುಲ್ 1 ರನ್ ಬಾರಿಸಿದರು.

ಇದರೊಂದಿಗೆ ತಂಡದ ಮೊತ್ತ 10 ಕ್ಕೇರಿತು. ಇನ್ನುಳಿದ 5 ರನ್​ಗಳನ್ನು ಇಂಡೋನೇಷ್ಯಾಕ್ ಬೌಲರ್​ಗಳು ವೈಡ್​ಗಳ ರೂಪದಲ್ಲಿ ನೀಡಿದ್ದರು. ಇದರೊಂದಿಗೆ 10 ಓವರ್​ಗಳಲ್ಲಿ 15 ರನ್​ಗಳಿಸಿ ಮಂಗೋಲಿಯಾ ಸರ್ವಪತನ ಕಂಡಿತು. ಇತ್ತ ಏಷ್ಯನ್ ಗೇಮ್ಸ್​ನ ಮೊದಲ ಪಂದ್ಯದಲ್ಲೇ 172 ರನ್‌ಗಳ ಅಮೋಘ ಗೆಲುವು ದಾಖಲಿಸಿ ಇಂಡೋನೇಷ್ಯಾ ಮಹಿಳೆಯರು ಶುಭಾರಂಭ ಮಾಡಿದ್ದಾರೆ.

ಹೊರಗೆ ಬಂದಮೇಲೆ ಬಿಗ್ ಬಾಸ್ ಬಗ್ಗೆ ವಿಡಿಯೋ ಮಾಡಲು ನಿರ್ಧರಿಸಿದ ರಘು
ಹೊರಗೆ ಬಂದಮೇಲೆ ಬಿಗ್ ಬಾಸ್ ಬಗ್ಗೆ ವಿಡಿಯೋ ಮಾಡಲು ನಿರ್ಧರಿಸಿದ ರಘು
ಹಿಮಾಚಲ ಪ್ರದೇಶದಲ್ಲಿ ಭಾರೀ ಬಸ್ ಅಪಘಾತ; 9 ಜನ ಸಾವು, 40 ಮಂದಿಗೆ ಗಾಯ
ಹಿಮಾಚಲ ಪ್ರದೇಶದಲ್ಲಿ ಭಾರೀ ಬಸ್ ಅಪಘಾತ; 9 ಜನ ಸಾವು, 40 ಮಂದಿಗೆ ಗಾಯ
ಕಾಡು ಹಂದಿಗೆ ಹಾಕಿದ್ದ ಉರುಳಿಗೆ ಚಿರತೆ ಬಲಿ
ಕಾಡು ಹಂದಿಗೆ ಹಾಕಿದ್ದ ಉರುಳಿಗೆ ಚಿರತೆ ಬಲಿ
ಅಶ್ವಿನಿ ಗೌಡ ಎದುರಲ್ಲೇ ಧ್ರುವಂತ್ ಓವರ್ ಆ್ಯಕ್ಟಿಂಗ್; ವಿಡಿಯೋ ನೋಡಿ
ಅಶ್ವಿನಿ ಗೌಡ ಎದುರಲ್ಲೇ ಧ್ರುವಂತ್ ಓವರ್ ಆ್ಯಕ್ಟಿಂಗ್; ವಿಡಿಯೋ ನೋಡಿ
ಮಹಿಳೆಯರಿಗೆ ಬೆಂಗಳೂರು ಫುಲ್ ಸೇಫ್: ಸಿಲಿಕಾನ್ ಸಿಟಿಯನ್ನ ಕೊಂಡಾಡಿದ ಯುವತಿ
ಮಹಿಳೆಯರಿಗೆ ಬೆಂಗಳೂರು ಫುಲ್ ಸೇಫ್: ಸಿಲಿಕಾನ್ ಸಿಟಿಯನ್ನ ಕೊಂಡಾಡಿದ ಯುವತಿ
ಕೆಎಸ್‌ ಈಶ್ವರಪ್ಪಗೆ ವಿದೇಶದಿಂದ ಜೀವ ಬೆದರಿಕೆ , ದೂರು ದಾಖಲು!
ಕೆಎಸ್‌ ಈಶ್ವರಪ್ಪಗೆ ವಿದೇಶದಿಂದ ಜೀವ ಬೆದರಿಕೆ , ದೂರು ದಾಖಲು!
ಬಾವಿಗೆ ಬಿದ್ದು ಒದ್ದಾಡುತ್ತಿದ್ದ ಚಿರತೆ ರಕ್ಷಣೆ, ವಿಡಿಯೋ ನೋಡಿ
ಬಾವಿಗೆ ಬಿದ್ದು ಒದ್ದಾಡುತ್ತಿದ್ದ ಚಿರತೆ ರಕ್ಷಣೆ, ವಿಡಿಯೋ ನೋಡಿ
‘ಜನ ನಾಯಗನ್’ಗೆ ಹೈಕೋರ್ಟ್ ಶಾಕ್: ಬೆಳಿಗ್ಗೆ ನೀಡಿದ ಆದೇಶಕ್ಕೆ ಮಧ್ಯಾಹ್ನ ತಡೆ
‘ಜನ ನಾಯಗನ್’ಗೆ ಹೈಕೋರ್ಟ್ ಶಾಕ್: ಬೆಳಿಗ್ಗೆ ನೀಡಿದ ಆದೇಶಕ್ಕೆ ಮಧ್ಯಾಹ್ನ ತಡೆ
ಆಸ್ತಿ ವಿವಾದ: ಕೆಸರು ಗದ್ದೆಯಲ್ಲೇ ನಡೀತು ಫಿಲ್ಮಿ ಸ್ಟೈಲ್​​ ಫೈಟ್​​
ಆಸ್ತಿ ವಿವಾದ: ಕೆಸರು ಗದ್ದೆಯಲ್ಲೇ ನಡೀತು ಫಿಲ್ಮಿ ಸ್ಟೈಲ್​​ ಫೈಟ್​​
ಕಳಪೆ ಕೊಟ್ಟ ರಾಶಿಕಾ ಮೇಲೆ ಉರಿದು ಬಿದ್ದ ರಕ್ಷಿತಾ, ನಕ್ಕ ಧ್ರುವಂತ್
ಕಳಪೆ ಕೊಟ್ಟ ರಾಶಿಕಾ ಮೇಲೆ ಉರಿದು ಬಿದ್ದ ರಕ್ಷಿತಾ, ನಕ್ಕ ಧ್ರುವಂತ್