ಏಷ್ಯನ್ ಗೇಮ್ಸ್ನಿಂದ ಹಿಂದೆ ಸರಿದ ಖ್ಯಾತ ಕುಸ್ತಿಪಟು ವಿನೇಶ್ ಫೋಗಟ್
Vinesh Phogat: ವಿನೇಶ್ ಫೋಗಟ್ 2018 ರಲ್ಲಿ ಜಕಾರ್ತದಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ ಭಾರತಕ್ಕೆ ಚಿನ್ನದ ಪದಕ ಗ ಚಿನ್ನದ ಪದಕ ಗೆದ್ದುಕೊಟ್ಟಿದ್ದರು. ಇದೀಗ ಸ್ಪರ್ಧೆಯಿಂದ ಹಿಂದೆ ಸರಿಯುವ ನಿರ್ಧಾರ ತೆಗೆದುಕೊಂಡಿದ್ದು, ಅವರ ಬದಲಿಗೆ 19 ವರ್ಷದ ಕುಸ್ತಿಪಟು ಆಂಟಿಮ್ ಪಂಗಲ್ ಏಷ್ಯನ್ ಗೇಮ್ಸ್‌ನಲ್ಲಿ ಭಾಗವಹಿಸುವ ಸಾಧ್ಯತೆಯಿದೆ.
ಮುಂಬರುವ ಏಷ್ಯನ್ ಗೇಮ್ಸ್ನಿಂದ ಭಾರತದ ಖ್ಯಾತ ಕುಸ್ತಿಪಟು ವಿನೇಶ್ ಫೋಗಟ್ ಹಿಂದೆ ಸರಿದಿದ್ದಾರೆ. ಆಗಸ್ಟ್ 13 ರಂದು ಅಭ್ಯಾಸದಲ್ಲಿ ನಿರತಾಗಿದ್ದ ವೇಳೆ ಅವರ ಮೊಣಕಾಲಿಗೆ ಗಂಭೀರ ಗಾಯವಾಗಿದ್ದು, ಹೀಗಾಗಿ 19ನೇ ಏಷ್ಯನ್ ಕ್ರೀಡಾಕೂಟದಿಂದ ಹಿಂದೆ ಸರಿಯಲು ನಿರ್ಧರಿಸಿದ್ದಾರೆ.
ವಿನೇಶ್ ಫೋಗಟ್ 2018 ರಲ್ಲಿ ಜಕಾರ್ತದಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ ಭಾರತಕ್ಕೆ ಚಿನ್ನದ ಪದಕ ಗ ಚಿನ್ನದ ಪದಕ ಗೆದ್ದುಕೊಟ್ಟಿದ್ದರು. ಇದೀಗ ಸ್ಪರ್ಧೆಯಿಂದ ಹಿಂದೆ ಸರಿಯುವ ನಿರ್ಧಾರ ತೆಗೆದುಕೊಂಡಿದ್ದು, ಅವರ ಬದಲಿಗೆ 19 ವರ್ಷದ ಕುಸ್ತಿಪಟು ಆಂಟಿಮ್ ಪಂಗಲ್ ಏಷ್ಯನ್ ಗೇಮ್ಸ್‌ನಲ್ಲಿ ಭಾಗವಹಿಸುವ ಸಾಧ್ಯತೆಯಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ವಿನೇಶ್ ಫೋಗಟ್, “ಎಲ್ಲರಿಗೂ ನಮಸ್ಕಾರ! ನಾನು ಅತ್ಯಂತ ದುಃಖದ ಸುದ್ದಿಯನ್ನು ಹಂಚಿಕೊಳ್ಳಲು ಬಯಸುತ್ತೇನೆ. ಒಂದೆರಡು ದಿನಗಳ ಹಿಂದೆ, ಆಗಸ್ಟ್ 13, 2023 ರಂದು ನಾನು ತರಬೇತಿ ನಡೆಸುತ್ತಿದ್ದಾಗ ನನ್ನ ಎಡ ಮೊಣಕಾಲಿಗೆ ಗಾಯವಾಗಿದೆ. ಸ್ಕ್ಯಾನಿಂಗ್ ಮತ್ತು ಟೆಸ್ಟ್ಗಳ ಬಳಿಕ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಅದರಂತೆ ಆಗಸ್ಟ್ 17 ರಂದು ಮುಂಬೈನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತೇನೆ. 2018 ರಲ್ಲಿ ಜಕಾರ್ತದಲ್ಲಿ ನಾನು ಗೆದ್ದ ಏಷ್ಯನ್ ಗೇಮ್ಸ್ ಚಿನ್ನದ ಪದಕವನ್ನು ಭಾರತಕ್ಕೆ ಉಳಿಸಿಕೊಳ್ಳುವುದು ನನ್ನ ಕನಸಾಗಿತ್ತು. ಆದರೆ ದುರದೃಷ್ಟವಶಾತ್, ಈ ಗಾಯವು ನನ್ನ ಭಾಗವಹಿಸುವಿಕೆಯನ್ನು ತಡೆ ಹಿಡಿದಿದೆ. ಈ ಬಗ್ಗೆ ಸಂಬಂಧಪಟ್ಟ ಎಲ್ಲರಿಗೂ ತಿಳಿಸಿದ್ದು, ಅಧಿಕಾರಿಗಳು ತಕ್ಷಣವೇ ಮೀಸಲು ಕುಸ್ತಿಪಟುವನ್ನು ಏಷ್ಯನ್ ಗೇಮ್ಸ್‌ಗೆ ಕಳುಹಿಸಬಹುದು ಎಂದು ವಿನೇಶ್ ಫೋಗಟ್ ಬರೆದುಕೊಂಡಿದ್ದಾರೆ.
ಅಷ್ಟೇ ಅಲ್ಲದೆ, ಎಲ್ಲಾ ಅಭಿಮಾನಿಗಳು ನನ್ನನ್ನು ಬೆಂಬಲಿಸುವುದನ್ನು ಮುಂದುವರಿಸಲು ನಾನು ವಿನಂತಿಸುತ್ತೇನೆ. ಇದರಿಂದ ನಾನು ಶೀಘ್ರದಲ್ಲೇ ಬಲಶಾಲಿಯಾಗಿ ಮತ್ತೆ ಮ್ಯಾಟ್‌ಗೆ ಮರಳುತ್ತೇನೆ. ಹಾಗೆಯೇ ಪ್ಯಾರಿಸ್ 2024 ಒಲಿಂಪಿಕ್ಸ್‌ಗಾಗಿ ತಯಾರಿ ನಡೆಸುತ್ತೇನೆ. ನಿಮ್ಮ ಬೆಂಬಲ ನನಗೆ ಸಾಕಷ್ಟು ಶಕ್ತಿಯನ್ನು ನೀಡಲಿದೆ ಎಂದು ವಿನೇಶ್ ಫೋಗಟ್ ತಿಳಿಸಿದ್ದಾರೆ.
ಏಷ್ಯನ್ ಗೇಮ್ಸ್ 2023 ರಲ್ಲಿ ಭಾಗವಹಿಸುವ ಭಾರತೀಯ ಕುಸ್ತಿಪಟುಗಳ ಸಂಪೂರ್ಣ ಪಟ್ಟಿ ಹೀಗಿದೆ:
ಗ್ರೀಕೋ-ರೋಮನ್ ವಿಭಾಗ:
ಜ್ಞಾನೇಂದರ್ (60 ಕೆಜಿ), ನೀರಜ್ (67 ಕೆಜಿ), ವಿಕಾಶ್ (77 ಕೆಜಿ), ಸುನಿಲ್ ಕುಮಾರ್ (87 ಕೆಜಿ), ನರಿಂದರ್ ಚೀಮಾ (97 ಕೆಜಿ), ನವೀನ್ (130 ಕೆಜಿ)
ಮಹಿಳಾ ಫ್ರೀಸ್ಟೈಲ್ ವಿಭಾಗ:
ಪೂಜಾ ಗೆಹ್ಲೋಟ್ (50 ಕೆಜಿ), ಆಂಟಿಮ್ ಪಂಗಲ್ (53 ಕೆಜಿ), ಮಾನ್ಸಿ ಅಹ್ಲಾವತ್ (57 ಕೆಜಿ), ಸೋನಮ್ ಮಲಿಕ್ (62 ಕೆಜಿ), ರಾಧಿಕಾ (68 ಕೆಜಿ), ಕಿರಣ್ (76 ಕೆಜಿ)
ಇದನ್ನೂ ಓದಿ: CWG 2022: ಕುಸ್ತಿಯಲ್ಲಿ ಭಾರತಕ್ಕೆ 5ನೇ ಚಿನ್ನ; 53 ಕೆಜಿ ವಿಭಾಗದಲ್ಲಿ ಹ್ಯಾಟ್ರಿಕ್ ಚಿನ್ನ ಗೆದ್ದ ವಿನೇಶ್ ಫೋಗಟ್
ಪುರುಷರ ಫ್ರೀಸ್ಟೈಲ್ ವಿಭಾಗ:
ಅಮನ್ ಸೆಹ್ರಾವತ್ (57 ಕೆಜಿ) ಬಜರಂಗ್ ಪುನಿಯಾ – 65 ಕೆಜಿ (ವಿಶಾಲ್ ಕಲಿರಾಮನ್-ಸ್ಟ್ಯಾಂಡ್‌ಬೈ), ಯಶ್ (74 ಕೆಜಿ), ದೀಪಕ್ ಪುನಿಯಾ (86 ಕೆಜಿ), ವಿಕ್ಕಿ (97 ಕೆಜಿ), ಸುಮಿತ್ (125 ಕೆಜಿ).
Published On - 6:51 pm, Tue, 15 August 23