VIDEO: ಭಾರತ-ಪಾಕಿಸ್ತಾನ್ ಕದನ ಕುತೂಹಲದ ಪ್ರೊಮೊ ಬಿಡುಗಡೆ
India Vs Pakistan: ಸೆಪ್ಟೆಂಬರ್ 2 ರಂದು ಭಾರತ ತಂಡವು ತನ್ನ ಮೊದಲ ಪಂದ್ಯವನ್ನು ಆಡಲಿದ್ದು, ಈ ಪಂದ್ಯದಲ್ಲಿ ಪಾಕಿಸ್ತಾನ್ ತಂಡವನ್ನು ಎದುರಿಸಲಿರುವುದು ವಿಶೇಷ. ಅಂದರೆ ಪಾಕ್ ವಿರುದ್ಧ ಕಣಕ್ಕಿಳಿದು ಟೀಮ್ ಇಂಡಿಯಾ ಏಷ್ಯಾಕಪ್ ಅಭಿಯಾನ ಆರಂಭಿಸಲಿದೆ.
ಏಷ್ಯಾಕಪ್ನ ಹೈವೋಲ್ಟೇಜ್ ಕದನ ಭಾರತ-ಪಾಕಿಸ್ತಾನ್ ನಡುವಣ ಪಂದ್ಯದ ಪ್ರೊಮೊ ವಿಡಿಯೋವನ್ನು ಸ್ಟಾರ್ ಸ್ಪೋರ್ಟ್ಸ್ ಬಿಡುಗಡೆ ಮಾಡಿದೆ. ಈ ಬಹು ನಿರೀಕ್ಷಿತ ಪಂದ್ಯದ ಪ್ರೊಮೊ ವಿಡಿಯೋವನ್ನು ಭಾರತದ 77ನೇ ಸ್ವಾತಂತ್ರ್ಯ ದಿನಾಚರಣೆಯಂದೇ ರಿಲೀಸ್ ಮಾಡಿರುವುದು ವಿಶೇಷ.
ಸಾಂಪ್ರದಾಯಿಕ ಎದುರಾಳಿಗಳ ಮತ್ತೊಂದು ಮುಖಾಮುಖಿಯನ್ನು ಪ್ರತಿನಿಧಿಸುವ ಈ ಪ್ರೊಮೊ ವಿಡಿಯೋದಲ್ಲಿ ಭಾರತೀಯ ದೇಶಭಕ್ತಿಯನ್ನು ಎತ್ತಿ ಹಿಡಿಯಲಾಗಿದೆ. ಅಲ್ಲದೆ ರಾಷ್ಟ್ರ ಧ್ವಜವನ್ನು ಹಾರಿಸುವ ಮೂಲಕ ಮೆನ್ ಇನ್ ಬ್ಲೂ (ಟೀಮ್ ಇಂಡಿಯಾ) ವನ್ನು ಹುರಿದುಂಬಿಸುವಂತೆ ವಿಡಿಯೋದಲ್ಲಿ ತಿಳಿಸಲಾಗಿದೆ.
Great rivalries demand great resilience & IND v PAK is the #GreatestRivalry there ever could be. 👊🔥
So raise your 🇮🇳 flags up high and come cheer for the #MenInBlue. 💙
Tune-in to #INDvPAK on #AsiaCupOnStar Sep 2, Saturday | 2 PM onwards | Star Sports Network#Cricket pic.twitter.com/xgzBnlNYfe
— Star Sports (@StarSportsIndia) August 15, 2023
ಇನ್ನು ಏಷ್ಯಾಕಪ್ಗಾಗಿ ಈಗಾಗಲೇ ಪಾಕಿಸ್ತಾನ್ ತಂಡವನ್ನು ಪ್ರಕಟಿಸಲಾಗಿದೆ. ಎಂದಿನಂತೆ ಈ ಬಾರಿ ಕೂಡ ಬಾಬರ್ ಆಝಂ ತಂಡವನ್ನು ಮುನ್ನಡೆಸಲಿದ್ದು, ಉಪನಾಯಕನಾಗಿ ಶಾದಾಬ್ ಖಾನ್ ಕಾಣಿಸಿಕೊಳ್ಳಲಿದ್ದಾರೆ. ಮತ್ತೊಂದೆಡೆ ಭಾರತ ಇನ್ನೂ ಕೂಡ ಏಷ್ಯಾಕಪ್ ತಂಡವನ್ನು ಪ್ರಕಟಿಸಿಲ್ಲ. ಪ್ರಸ್ತುತ ಮಾಹಿತಿ ಪ್ರಕಾರ ಆಗಸ್ಟ್ 20 ರಂದು ಟೀಮ್ ಇಂಡಿಯಾವನ್ನು ಘೋಷಿಸಲಾಗುತ್ತದೆ ಎಂದು ತಿಳಿದು ಬಂದಿದೆ.
ಮೊದಲ ಮುಖಾಮುಖಿ:
ಈ ಬಾರಿಯ ಏಷ್ಯಾಕಪ್ನ ಮೊದಲ ಪಂದ್ಯದಲ್ಲಿ ಪಾಕಿಸ್ತಾನ್ ಹಾಗೂ ನೇಪಾಳ ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯವು ಪಾಕಿಸ್ತಾನದ ಮುಲ್ತಾನ್ನಲ್ಲಿ ಜರುಗಲಿದೆ. ಅಂದರೆ ಈ ಸಲ ಏಷ್ಯಾಕಪ್ ಹೈಬ್ರಿಡ್ ಮಾದರಿಯಲ್ಲಿ ಜರುಗುತ್ತಿದ್ದು, 4 ಪಂದ್ಯಗಳು ಪಾಕಿಸ್ತಾನದಲ್ಲಿ ನಡೆದರೆ, ಉಳಿದ ಪಂದ್ಯಗಳಿಗೆ ಶ್ರೀಲಂಕಾ ಆತಿಥ್ಯವಹಿಸಲಿದೆ.
ಅದರಂತೆ ಸೆಪ್ಟೆಂಬರ್ 2 ರಂದು ಭಾರತ ತಂಡವು ತನ್ನ ಮೊದಲ ಪಂದ್ಯವನ್ನು ಆಡಲಿದ್ದು, ಈ ಪಂದ್ಯದಲ್ಲಿ ಪಾಕಿಸ್ತಾನ್ ತಂಡವನ್ನು ಎದುರಿಸಲಿರುವುದು ವಿಶೇಷ. ಅಂದರೆ ಪಾಕ್ ವಿರುದ್ಧ ಕಣಕ್ಕಿಳಿದು ಟೀಮ್ ಇಂಡಿಯಾ ಏಷ್ಯಾಕಪ್ ಅಭಿಯಾನ ಆರಂಭಿಸಲಿದೆ.
ಇದನ್ನೂ ಓದಿ: Asia Cup 2023 Schedule: ಏಷ್ಯಾಕಪ್ ವೇಳಾಪಟ್ಟಿ ಪ್ರಕಟ
ಪಾಕಿಸ್ತಾನ್ ತಂಡ: ಅಬ್ದುಲ್ಲಾ ಶಫೀಕ್, ಫಖರ್ ಝಮಾನ್, ಇಮಾಮ್-ಉಲ್-ಹಕ್, ಬಾಬರ್ ಆಝಂ (ನಾಯಕ), ಸಲ್ಮಾನ್ ಅಲಿ ಅಘಾ, ಇಫ್ತಿಕರ್ ಅಹ್ಮದ್, ತಯ್ಯಬ್ ತಾಹಿರ್, ಸೌದ್ ಶಕೀಲ್, ಮೊಹಮ್ಮದ್ ರಿಝ್ವಾನ್, ಮೊಹಮ್ಮದ್ ಹ್ಯಾರಿಸ್, ಶಾದಾಬ್ ಖಾನ್, ಮೊಹಮ್ಮದ್ ನವಾಝ್, ಉಸಾಮಾ ಅಶ್ರಫ್, ಹ್ಯಾರಿಸ್ ರೌಫ್, ಮೊಹಮ್ಮದ್ ವಾಸಿಂ, ನಸೀಮ್ ಶಾ, ಶಾಹೀನ್ ಅಫ್ರಿದಿ.