Asian Games 2023: ಏಷ್ಯನ್ ಗೇಮ್ಸ್ ಟೀಮ್ ಇಂಡಿಯಾದ ವೇಳಾಪಟ್ಟಿ ಪ್ರಕಟ

Asian Games 2023: ಭಾರತ ಪುರುಷರ ತಂಡ ತನ್ನ ಮೊದಲ ಪಂದ್ಯವನ್ನು ಅಕ್ಟೋಬರ್ 3 ರಂದು ಆಡಲಿದೆ. ಟಿ20 ಮಾದರಿಯಲ್ಲಿ ನಡೆಯಲಿರುವ ಈ ಟೂರ್ನಿಯಲ್ಲಿ ಐಸಿಸಿ ಶ್ರೇಯಾಂಕದಲ್ಲಿ ಅಗ್ರಸ್ಥಾನಗಳಲ್ಲಿರುವ ಭಾರತ, ಪಾಕಿಸ್ತಾನ್, ಶ್ರೀಲಂಕಾ ಮತ್ತು ಬಾಂಗ್ಲಾದೇಶ್​ ತಂಡಗಳು ನೇರವಾಗಿ ಕ್ವಾರ್ಟರ್ ಫೈನಲ್ ತಲುಪಿವೆ.

Asian Games 2023: ಏಷ್ಯನ್ ಗೇಮ್ಸ್ ಟೀಮ್ ಇಂಡಿಯಾದ ವೇಳಾಪಟ್ಟಿ ಪ್ರಕಟ
Team India
Follow us
TV9 Web
| Updated By: ಝಾಹಿರ್ ಯೂಸುಫ್

Updated on: Sep 16, 2023 | 10:17 PM

ಚೀನಾದ ಹ್ಯಾಂಗ್‌ಝೌನಲ್ಲಿ ಸೆಪ್ಟಂಬರ್ 23 ರಿಂದ ಪ್ರಾರಂಭವಾಗುವ ಏಷ್ಯನ್ ಗೇಮ್ಸ್‌ನ ಕ್ರಿಕೆಟ್ ವೇಳಾಪಟ್ಟಿ ಪ್ರಕಟವಾಗಿದೆ. ಈ ಕ್ರೀಡಾಕೂಟದಲ್ಲಿ ಭಾರತ ಪುರುಷ ಮತ್ತು ಮಹಿಳಾ ತಂಡಗಳು ಭಾಗವಹಿಸುತ್ತಿರುವುದು ವಿಶೇಷ. ಆದರೆ ಮುಂಬರುವ ಏಕದಿನ ವಿಶ್ವಕಪ್ ಅನ್ನು ಗಮನದಲ್ಲಿಟ್ಟುಕೊಂಡು ಬಿಸಿಸಿಐ ತನ್ನ ಎಲ್ಲ ಪ್ರಮುಖ ಆಟಗಾರರನ್ನು ಈ ಕ್ರೀಡಾಕೂಟದಿಂದ ಕೈ ಬಿಟ್ಟಿದೆ. ಬದಲಾಗಿ ರುತುರಾಜ್ ಗಾಯಕ್ವಾಡ್ ನಾಯಕತ್ವದಲ್ಲಿ ಹೊಸ ಟೀಮ್ ಇಂಡಿಯಾ ಆಯ್ಕೆ ಮಾಡಲಾಗಿದೆ.

ಕಣಕ್ಕಿಳಿಯುವ​ ತಂಡಗಳು:

ಭಾರತ ಪುರುಷರ ತಂಡ ತನ್ನ ಮೊದಲ ಪಂದ್ಯವನ್ನು ಅಕ್ಟೋಬರ್ 3 ರಂದು ಆಡಲಿದೆ. ಟಿ20 ಮಾದರಿಯಲ್ಲಿ ನಡೆಯಲಿರುವ ಈ ಟೂರ್ನಿಯಲ್ಲಿ ಐಸಿಸಿ ಶ್ರೇಯಾಂಕದಲ್ಲಿ ಅಗ್ರಸ್ಥಾನಗಳಲ್ಲಿರುವ ಭಾರತ, ಪಾಕಿಸ್ತಾನ್, ಶ್ರೀಲಂಕಾ ಮತ್ತು ಬಾಂಗ್ಲಾದೇಶ್​ ತಂಡಗಳು ನೇರವಾಗಿ ಕ್ವಾರ್ಟರ್ ಫೈನಲ್ ತಲುಪಿವೆ.

ಇದಕ್ಕೂ ಮುನ್ನ 9 ತಂಡಗಳ ನಡುವಣ ಅರ್ಹತಾ ಸುತ್ತಿನ ಪಂದ್ಯಗಳು ನಡೆಯಲಿದೆ. ಇಲ್ಲಿ ಒಂಭತ್ತು ತಂಡಗಳನ್ನು ಮೂರು ಗುಂಪುಗಳಾಗಿ ವಿಂಗಡಿಸಲಾಗಿದ್ದು, ಅದರಂತೆ ಗುಂಪು ಎ ನಲ್ಲಿ ನೇಪಾಳ, ಮಂಗೋಲಿಯಾ ಮತ್ತು ಮಾಲ್ಡೀವ್ಸ್ ತಂಡಗಳಿವೆ. ಬಿ ಗುಂಪಿನಲ್ಲಿ ಜಪಾನ್, ಕಾಂಬೋಡಿಯಾ ಮತ್ತು ಹಾಂಗ್ ಕಾಂಗ್ ತಂಡಗಳು ಕಾಣಿಸಿಕೊಂಡಿದೆ. ಹಾಗೆಯೇ ಗ್ರೂಪ್-ಸಿ ನಲ್ಲಿ ಮಲೇಷ್ಯಾ, ಸಿಂಗಾಪುರ್ ಮತ್ತು ಥೈಲ್ಯಾಂಡ್ ತಂಡಗಳನ್ನು ಒಳಗೊಂಡಿದೆ.

ಪುರುಷರ ತಂಡಗಳ ವೇಳಾಪಟ್ಟಿ:

  1. ನೇಪಾಳ vs ಮಂಗೋಲಿಯಾ, 27 ಸೆಪ್ಟೆಂಬರ್, ಪಿಂಗ್‌ಫೆಂಗ್ ಕ್ರಿಕೆಟ್ ಕ್ಲಬ್
  2. ಜಪಾನ್ vs ಕಾಂಬೋಡಿಯಾ, ಸೆಪ್ಟೆಂಬರ್ 28, ಪಿಂಗ್‌ಫೆಂಗ್ ಕ್ರಿಕೆಟ್ ಕ್ಲಬ್
  3. ಮಲೇಷ್ಯಾ vs ಸಿಂಗಾಪುರ, 28 ಸೆಪ್ಟೆಂಬರ್, ಪಿಂಗ್‌ಫೆಂಗ್ ಕ್ರಿಕೆಟ್ ಕ್ಲಬ್
  4. ಮಂಗೋಲಿಯಾ vs ಮಾಲ್ಡೀವ್ಸ್, 28 ಸೆಪ್ಟೆಂಬರ್, ಪಿಂಗ್‌ಫೆಂಗ್ ಕ್ರಿಕೆಟ್ ಕ್ಲಬ್
  5. ಕಾಂಬೋಡಿಯಾ vs ಹಾಂಗ್ ಕಾಂಗ್, ಸೆಪ್ಟೆಂಬರ್ 29, ಪಿಂಗ್‌ಫೆಂಗ್ ಕ್ರಿಕೆಟ್ ಕ್ಲಬ್
  6. ಸಿಂಗಾಪುರ vs ಥಾಯ್ಲೆಂಡ್, 29 ಸೆಪ್ಟೆಂಬರ್, ಪಿಂಗ್‌ಫೆಂಗ್ ಕ್ರಿಕೆಟ್ ಕ್ಲಬ್
  7. ಮಾಲ್ಡೀವ್ಸ್ vs ನೇಪಾಳ, ಅಕ್ಟೋಬರ್ 1, ಪಿಂಗ್‌ಫೆಂಗ್ ಕ್ರಿಕೆಟ್ ಕ್ಲಬ್
  8. ಹಾಂಗ್ ಕಾಂಗ್ vs ಜಪಾನ್, ಅಕ್ಟೋಬರ್ 1, ಪಿಂಗ್‌ಫೆಂಗ್ ಕ್ರಿಕೆಟ್ ಕ್ಲಬ್
  9. ಥಾಯ್ಲೆಂಡ್ vs ಮಲೇಷ್ಯಾ, ಅಕ್ಟೋಬರ್ 2, ಪಿಂಗ್‌ಫೆಂಗ್ ಕ್ರಿಕೆಟ್ ಕ್ಲಬ್
  10. ಭಾರತ vs TBC ಕ್ವಾರ್ಟರ್ ಫೈನಲ್-1, ಅಕ್ಟೋಬರ್ 3, ಪಿಂಗ್‌ಫೆಂಗ್ ಕ್ರಿಕೆಟ್ ಕ್ಲಬ್
  11. ಪಾಕಿಸ್ತಾನ vs TBC ಕ್ವಾರ್ಟರ್ ಫೈನಲ್-2, ಅಕ್ಟೋಬರ್ 3, ಪಿಂಗ್‌ಫೆಂಗ್ ಕ್ರಿಕೆಟ್ ಕ್ಲಬ್
  12. ಶ್ರೀಲಂಕಾ vs TBC ಕ್ವಾರ್ಟರ್ ಫೈನಲ್-3, ಅಕ್ಟೋಬರ್ 4, ಪಿಂಗ್‌ಫೆಂಗ್ ಕ್ರಿಕೆಟ್ ಕ್ಲಬ್
  13. ಬಾಂಗ್ಲಾದೇಶ vs TBC ಕ್ವಾರ್ಟರ್-ಫೈನಲ್-4, ಅಕ್ಟೋಬರ್ 4, ಪಿಂಗ್‌ಫೆಂಗ್ ಕ್ರಿಕೆಟ್ ಕ್ಲಬ್
  14. ಮೊದಲ ಸೆಮಿಫೈನಲ್- 6 ಅಕ್ಟೋಬರ್, ಪಿಂಗ್‌ಫೆಂಗ್ ಕ್ರಿಕೆಟ್ ಕ್ಲಬ್
  15. ಎರಡನೇ ಸೆಮಿಫೈನಲ್, 6 ಅಕ್ಟೋಬರ್, ಪಿಂಗ್‌ಫೆಂಗ್ ಕ್ರಿಕೆಟ್ ಕ್ಲಬ್
  16. ಮೂರನೇ ಸ್ಥಾನಕ್ಕಾಗಿ ಪಂದ್ಯ- ಅಕ್ಟೋಬರ್ 7, ಪಿಂಗ್‌ಫೆಂಗ್ ಕ್ರಿಕೆಟ್ ಕ್ಲಬ್
  17. ಫೈನಲ್, ಅಕ್ಟೋಬರ್ 7, ಪಿಂಗ್‌ಫೆಂಗ್ ಕ್ರಿಕೆಟ್ ಕ್ಲಬ್

ಮಹಿಳಾ ತಂಡಗಳ ವೇಳಾಪಟ್ಟಿ:

  1. ಇಂಡೋನೇಷ್ಯಾ vs ಮಂಗೋಲಿಯಾ, ಸೆಪ್ಟೆಂಬರ್ 19, ಪಿಂಗ್‌ಫೆಂಗ್ ಕ್ರಿಕೆಟ್ ಕ್ಲಬ್
  2. ಹಾಂಗ್ ಕಾಂಗ್ ವಿರುದ್ಧ ಮಲೇಷ್ಯಾ, ಸೆಪ್ಟೆಂಬರ್ 19, ಪಿಂಗ್‌ಫೆಂಗ್ ಕ್ರಿಕೆಟ್ ಕ್ಲಬ್
  3. 1ನೇ ಪಂದ್ಯ ಸೋತವರು vs 2ನೇ ಪಂದ್ಯ ಸೋತವರು (ಕ್ವಾಲಿಫೈಯರ್), 20 ಸೆಪ್ಟೆಂಬರ್, ಪಿಂಗ್‌ಫೆಂಗ್ ಕ್ರಿಕೆಟ್ ಕ್ಲಬ್
  4. ಭಾರತ vs TBC ಕ್ವಾರ್ಟರ್ ಫೈನಲ್-1, ಸೆಪ್ಟೆಂಬರ್ 21, ಪಿಂಗ್‌ಫೆಂಗ್ ಕ್ರಿಕೆಟ್ ಕ್ಲಬ್
  5. ಪಾಕಿಸ್ತಾನ vs TBC ಕ್ವಾರ್ಟರ್ ಫೈನಲ್-2, ಸೆಪ್ಟೆಂಬರ್ 21, ಪಿಂಗ್‌ಫೆಂಗ್ ಕ್ರಿಕೆಟ್ ಕ್ಲಬ್
  6. ಶ್ರೀಲಂಕಾ vs TBC ಕ್ವಾರ್ಟರ್ ಫೈನಲ್-2, ಸೆಪ್ಟೆಂಬರ್ 22, ಪಿಂಗ್‌ಫೆಂಗ್ ಕ್ರಿಕೆಟ್ ಕ್ಲಬ್
  7. ಬಾಂಗ್ಲಾದೇಶ vs TBC ಕ್ವಾರ್ಟರ್-ಫೈನಲ್-4, ಸೆಪ್ಟೆಂಬರ್ 22, ಪಿಂಗ್‌ಫೆಂಗ್ ಕ್ರಿಕೆಟ್ ಫೀಲ್ಡ್
  8. ಮೊದಲ ಸೆಮಿಫೈನಲ್- ಸೆಪ್ಟೆಂಬರ್ 24, ಪಿಂಗ್‌ಫೆಂಗ್ ಕ್ರಿಕೆಟ್ ಕ್ಲಬ್
  9. ಎರಡನೇ ಸೆಮಿಫೈನಲ್- ಸೆಪ್ಟೆಂಬರ್ 24, ಪಿಂಗ್‌ಫೆಂಗ್ ಕ್ರಿಕೆಟ್ ಕ್ಲಬ್
  10. ಮೂರನೇ ಸ್ಥಾನಕ್ಕಾಗಿ ಪಂದ್ಯ- ಸೆಪ್ಟೆಂಬರ್ 25, ಪಿಂಗ್‌ಫೆಂಗ್ ಕ್ರಿಕೆಟ್ ಕ್ಲಬ್
  11. ಫೈನಲ್, ಸೆಪ್ಟೆಂಬರ್ 25, ಪಿಂಗ್‌ಫೆಂಗ್ ಕ್ರಿಕೆಟ್ ಕ್ಲಬ್.