AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೂಪರ್ 8 ಹಂತಕ್ಕೆ ಕಾಲಿಟ್ಟ ಅಫ್ಘಾನ್; ಟೂರ್ನಿಯಿಂದಲೇ ಎಲಿಮಿನೇಟ್ ಆದ ನ್ಯೂಜಿಲೆಂಡ್

ಕೇನ್ ವಿಲಿಯಮ್ಸ್ ನೇತೃತ್ವದ ನ್ಯೂಜಿಲೆಂಡ್ ತಂಡ ಅಫ್ಘಾನಿಸ್ತಾನ ಹಾಗೂ ವೆಸ್ಟ್ ಇಂಡೀಸ್ ವಿರುದ್ಧ ಸೋತಿವೆ. ಉಳಿದಿರುವ ಎರಡು ಪಂದ್ಯಗಳಲ್ಲಿ ಗೆಲುವು ಕಂಡರೂ ಯಾವುದೇ ಪ್ರಯೋಜನ ಇಲ್ಲ. ಹೀಗಾಗಿ, ನ್ಯೂಜಿಲೆಂಡ್ ತಂಡ ಟೂರ್ನಿಯಿಂದಲೇ ಔಟ್ ಆಗಿದೆ.

ಸೂಪರ್ 8 ಹಂತಕ್ಕೆ ಕಾಲಿಟ್ಟ ಅಫ್ಘಾನ್; ಟೂರ್ನಿಯಿಂದಲೇ ಎಲಿಮಿನೇಟ್ ಆದ ನ್ಯೂಜಿಲೆಂಡ್
ಸೂಪರ್ 8 ಹಂತಕ್ಕೆ ಕಾಲಿಟ್ಟ ಅಫ್ಘಾನ್; ಟೂರ್ನಿಯಿಂದಲೇ ಎಲಿಮಿನೇಟ್ ಆದ ನ್ಯೂಜಿಲೆಂಡ್
ರಾಜೇಶ್ ದುಗ್ಗುಮನೆ
|

Updated on: Jun 14, 2024 | 12:17 PM

Share

ಇಂದು (ಜೂನ್ 14) ನಡೆದ ಪಪುವಾ ನ್ಯೂಗಿನಿ (Papua New Guinea) ವಿರುದ್ಧದ ಪಂದ್ಯದಲ್ಲಿ ಗೆಲುವು ಕಾಣುವ ಮೂಲಕ ಅಪ್ಘಾನಿಸ್ತಾನ ತಂಡ ಟಿ20 ವಿಶ್ವಕಪ್​ನಲ್ಲಿ ‘ಸೂಪರ್ 8’ ಹಂತಕ್ಕೆ ಕಾಲಿಟ್ಟಿದೆ. ಇದೇ ವೇಳೆ ಟೂರ್ನಿಯಲ್ಲಿ ಎರಡು ಪಂದ್ಯ ಸೋತಿರುವ ನ್ಯೂಜಿಲೆಂಡ್​ ಎಲಿಮಿನೇಟ್ ಆಗಿದೆ. ಈ ಮೂಲಕ ಬಲಿಷ್ಠ ಎನಿಸಿಕೊಂಡ ತಂಡಗಳು ಟೂರ್ನಿಯಿಂದ ಔಟ್ ಆದರೆ, ಸಾಧಾರಾಣ ಎನಿಸಿಕೊಂಡಿದ್ದ ತಂಡಗಳು ಒಳ್ಳೆಯ ಪ್ರದರ್ಶನ ನೀಡುತ್ತಿವೆ.

ಪಪುವಾ ನ್ಯೂಗಿನಿ ತಂಡವು 95 ರನ್​ ಗಳಿಸಿತು. ಈ ಟಾರ್ಗೆಟ್ ಬೆನ್ನು ಹತ್ತಿದ ಅಫ್ಘಾನ್ ತಂಡ ಕೇವಲ 15.1 ಓವರ್​ಗೆ ರನ್​ ಚೇಸ್ ಮಾಡಿತು. ಈ ಮೂಲಕ +4.230 ರನ್​ರೇಟ್​ನೊಂದಿಗೆ ಈ ಟೀಂ ಸಿ ಗ್ರೂಪ್​ನಲ್ಲಿ ಟಾಪ್​ನಲ್ಲಿದೆ. ಈಗಾಗಲೇ ಕೇನ್ ವಿಲಿಯಮ್ಸ್ ನೇತೃತ್ವದ ನ್ಯೂಜಿಲೆಂಡ್ ತಂಡ ಅಫ್ಘಾನಿಸ್ತಾನ ಹಾಗೂ ವೆಸ್ಟ್ ಇಂಡೀಸ್ ವಿರುದ್ಧ ಸೋತಿವೆ. ಉಳಿದಿರುವ ಎರಡು ಪಂದ್ಯಗಳಲ್ಲಿ ಗೆಲುವು ಕಂಡರೂ ಯಾವುದೇ ಪ್ರಯೋಜನ ಇಲ್ಲ. ಹೀಗಾಗಿ, ನ್ಯೂಜಿಲೆಂಡ್ ತಂಡ ಟೂರ್ನಿಯಿಂದಲೇ ಔಟ್ ಆಗಿದೆ.

2014ರಲ್ಲಿ ನ್ಯೂಜಿಲೆಂಡ್ ತಂಡ ಇದೇ ರೀತಿ ಟೂರ್ನಿಯಿಂದ ಹೊರ ಹೋಗಿತ್ತು. 10 ವರ್ಷಗಳ ಬಳಿಕ ಈಗ ಇತಿಹಾಸ ಮತ್ತೆ ಮರುಕಳಿಸಿದೆ. ಅಪ್ಘಾನಿಸ್ತಾನ ಸೂಪರ್​ 8ಗೆ ಕ್ವಾಲಿಫೈ ಆಗಿದೆ. ಈ ಮೂಲಕ ಸೂಪರ್ 8ನಲ್ಲಿ ಭಾರತ ತಂಡವನ್ನೂ ಎದುರಿಸಲಿದೆ. ಜೂನ್ 20ರಂದು ಅಪ್ಘಾನಿಸ್ತಾನ ಹಾಗೂ ಭಾರತ ಮುಖಾಮುಖಿ ಆಗಲಿವೆ.

ಇದನ್ನೂ ಓದಿ: ಸೂಪರ್ 8 ಸುತ್ತಿಗೆ ಅರ್ಹತೆ ಪಡೆಯುತ್ತಾ ನ್ಯೂಜಿಲೆಂಡ್?

ಸದ್ಯ ಟೀಂ ಇಂಡಿಯಾ ಉತ್ತಮ ಪ್ರದರ್ಶನ ನೀಡುತ್ತಿದೆ. ಆಡಿದ ಮೂರು ಪಂದ್ಯಗಳಲ್ಲಿ ಭಾರತ ಗೆದ್ದು ಬೀಗಿದೆ. ಸೂಪರ್ 8 ಭಾರತದ ಪಾಲಿಗೆ ಪ್ರಮುಖ ಎನಿಸಿಕೊಂಡಿದೆ. ಸೂಪರ್ 8ನಲ್ಲಿ ಗೆದ್ದವರು ಸೆಮಿಫೈನಲ್​ಗೆ ಅರ್ಹತೆ ಪಡೆಯಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.