Virat Kohli: ಆ ಒಂದು ಕ್ಷಣ ಪಂದ್ಯದ ಸ್ಥಿತಿಯೇ ಬದಲಾಯಿಸಿತು: ಮ್ಯಾಚ್ ಬಳಿಕ ವಿರಾಟ್ ಕೊಹ್ಲಿ ಏನಂದ್ರು ಕೇಳಿ
ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯ ಮುಗಿದ ಬಳಿಕ ಮಾತನಾಡಿದ ಆರ್ಸಿಬಿ ನಾಯಕ ವಿರಾಟ್ ಕೊಹ್ಲಿ ಗೇಮ್ ಚೇಂಜಿಂಗ್ ಮೂಮೆಂಟ್ ಯಾವುದು ಎಂಬುದನ್ನು ತಿಳಿಸಿದ್ದಾರೆ.
ವಿರಾಟ್ ಕೊಹ್ಲಿ (Virat Kohli) ಕೊನೇಯ ಬಾರಿ ನಾಯಕನಾಗಿ ಮುನ್ನಡೆಸುತ್ತಿರುವ ರಾಯಲ್ ಚಾಜೆಂಜರ್ಸ್ ಬೆಂಗಳೂರು (Royal Challengers Bangalore) ತಂಡ ಐಪಿಎಲ್ 2021ರ (IPL 2021) ಪ್ಲೇ ಆಫ್ ಪ್ರವೇಶಿಸುವುದು ಬಹುತೇಕ ಖಚಿತವಾಗಿದೆ. ಬುಧವಾರ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಆರ್ಸಿಬಿ (RR vs RCB) 7 ವಿಕೆಟ್ಗಳ ಭರ್ಜರಿ ಜಯ ಸಾಧಿಸುವ ಮೂಲಕ ಪಾಯಿಂಟ್ ಟೇಬಲ್ನಲ್ಲಿ (IPL 2021 Point Table) ಮೂರನೇ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. 10 ಓವರ್ ಬಳಿಕ ಆರ್ಸಿಬಿ ಬೌಲರ್ಗಳ ಬೊಂಬಾಟ್ ಕಮ್ಬ್ಯಾಕ್ ಮತ್ತು ಗ್ಲೆನ್ ಮ್ಯಾಕ್ಸ್ವೆಲ್ (Glenn Maxwell) ಅವರ ಸ್ಫೋಟಕ ಅರ್ಧಶತಕದ ನೆರವಿನಿಂದ ಕೊಹ್ಲಿ ಪಡೆ ಯುಎಇನಲ್ಲಿ ಸತತ ಎರಡನೇ ಜಯ ತನ್ನದಾಗಿಸಿತು. ಪಂದ್ಯ ಮುಗಿದ ಬಳಿಕ ಮಾತನಾಡಿದ ಆರ್ಸಿಬಿ ನಾಯಕ (RCB Captain) ವಿರಾಟ್ ಕೊಹ್ಲಿ ತಂಡದ ಬೌಲಿಂಗ್ ವಿಭಾಗದ ಪ್ರದರ್ಶನವನ್ನು ಕೊಂಡಾಡಿದ್ದು, ಗೇಮ್ ಚೇಂಜಿಂಗ್ ಮೂಮೆಂಟ್ ಅನ್ನು ತಿಳಿಸಿದ್ದಾರೆ.
“ಮುಂಬೈ ಇಂಡಿಯನ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಕಳೆದ ಎರಡೂ ಪಂದ್ಯಗಳಲ್ಲಿ ನಾವು ಬೌಲಿಂಗ್ ವಿಭಾಗದ ಮೂಲಕ ಬಲಿಷ್ಠವಾಗಿ ಕಮ್ಬ್ಯಾಕ್ ಮಾಡಿದ್ದೇವೆ. ಇದು ನಮ್ಮ ತಂಡಕ್ಕೆ ಪಾಸಿಟಿವ್ ಸೂಚನೆಯಾಗಿದೆ. ಬೌಲಿಂಗ್‌ನಲ್ಲಿ ನಾವು ಅಂದುಕೊಂಡಿದ್ದು ಕಾರ್ಯರೂಪಕ್ಕೆ ಬಂದರೆ ನಮ್ಮ ಯೋಜನೆಯಂತೆಯೇ ಮುಂದುವರಿಯಲು ಸಾಧ್ಯವಾಗುತ್ತದೆ” ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.
“ಹಿಂದಿನ ಎರಡು ಪಂದ್ಯಗಳಲ್ಲಿಯೂ ಎದುರಾಳಿ ತಂಡ ಪವರ್ ಪ್ಲೇ ಓವರ್ನಲ್ಲಿ ಅತ್ಯುತ್ತಮ ರನ್ ಗಳಿಸಿ ವಿಕೆಟ್ ಕಳೆದುಕೊಳ್ಳದೇ ಇತ್ತು. ಆದರೆ ಎರಡು ಪಂದ್ಯಗಳಲ್ಲಯೂ ನಾವು ನಂತರ ಕಮ್ಬ್ಯಾಕ್ ಮಾಡಿದೆವು. 10 ಓವರ್ಗಳ ಬಳಿಕ ಹೆಚ್ಚು ವಿಕೆಟ್ ಪಡೆಯುವಲ್ಲಿ ಸಫಲವಾದೆವು. ಅಷ್ಟು ಉತ್ತಮವಾದ ಬೌಲಿಂಗ್ ಪಡೆಯನ್ನು ನಾವು ಹೊಂದಿದ್ದೇವೆ ಎಂದು ನಮಗೆ ತಿಳಿದಿತ್ತು. ಎವಿನ್ ಲೆವಿಸ್ ಅದ್ಭುತವಾಗಿ ಬ್ಯಾಟಿಂಗ್ ನಡೆಸುತ್ತಿದರು. ಅವರನ್ನು ಔಟ್ ಮಾಡುವುದು ದೊಡ್ಡ ಚಾಲೆಂಜ್ ಆಗಿತ್ತು. ಅವರ ವಿಕೆಟ್ ನಮಗೆ ಗೇಮ್ ಚೇಂಜಿಂಗ್ ಕ್ಷಣ ಆಯಿತು” ಎಂದು ಕೊಹ್ಲಿ ಪಂದ್ಯದ ಬಳಿಕ ಹೇಳಿದರು.
ಇನ್ನೂ 4 ಓವರ್ ಬೌಲಿಂಗ್ ಮಾಡಿ ಕೇವಲ 18 ರನ್ ನೀಡಿ 2 ವಿಕೆಟ್ ಕಿತ್ತು ಪಂದ್ಯಶ್ರೇಷ್ಠ ಪ್ರಶಸ್ತಿ ಬಾಜಿಕೊಂಡ ಯುಜ್ವೇಂದ್ರ ಚಹಾಲ್ ಕೂಡ ತಾವು ಮಾಡಿದ ಗೇಮ್ ಪ್ಲಾನ್ ಬಗ್ಗೆ ವಿವರಿಸಿದ್ದಾರೆ. “ರಾಜಸ್ಥಾನ್ ತಂಡದ ಓಪನರ್ಗಳಿಬ್ಬರೂ ಎಡಗೈ ಬ್ಯಾಟರ್ಗಳಾಗಿದ್ದರು. ಹೀಗಾಗಿ ವಿರಾಟ್ ಮೀಡಿಯಂ ಫೇಸರ್ಗಳನ್ನು ಬಳಕೆಗೆ ತಂದರು. ಲುಮ್ರೊರ್ ಬ್ಯಾಟಿಂಗ್ಗೆ ಇಳಿದ ತಕ್ಷಣ ನನಗೆ ಬೌಲಿಂಗ್ ನೀಡಿದರು. ಲುಮ್ರೊರ್ ಬ್ಯಾಟಿಂಗ್ ಕೌಶಲ್ಯವನ್ನು ನಾನು ಚೆನ್ನಾಗಿ ಅರಿತಿದ್ದೆ. ಅವರು ಲೆಗ್ಸೈಡ್ ಚೆನ್ನಾಗಿ ಆಡುತ್ತಾರೆ. ಮುಂದೆ ಬಂದು ಹೊಡೆಯಲು ಯತ್ನಿಸಿದರೆ ವೈಡ್ ಬಾಲ್ ಹಾಕಲು ನಿರ್ಧರಿಸಿದ್ದೆ. ಅದರಂತೆ ಅವರನ್ನು ಔಟ್ ಮಾಡಿದೆ” ಎಂದು ತಮ್ಮ ರಣತಂತ್ರವನ್ನು ಬಹಿರಂಗ ಪಡಿಸಿದರು.
ರಾಜಸ್ಥಾನ್ ವಿರುದ್ಧದ ಪಂದ್ಯದಲ್ಲಿ ಆರ್ಸಿಬಿ 7 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿತು. ಮೊದಲು ಬ್ಯಾಟ್ ಮಾಡಿದ ಆರ್ಆರ್ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 149 ರನ್ ಬಾರಿಸಿತು. ಟಾರ್ಗೆಟ್ ಬೆನ್ನಟ್ಟಿದ ಆರ್ಸಿಬಿ ಗ್ಲೆನ್ ಮ್ಯಾಕ್ಸ್ವೆಲ್ ಅವರ ಅಜೇಯ ಅರ್ಧಶತಕದ ನೆರವಿನಿಂದ 17.1 ಓವರ್ನಲ್ಲೇ 3 ವಿಕೆಟ್ ನಷ್ಟಕ್ಕೆ 153 ರನ್ ಸಿಡಿಸಿ ಗೆಲುವು ಕಂಡಿತು. ಆರ್ಸಿಬಿ ತನ್ನ ಮುಂದಿನ ಪಂದ್ಯವನ್ನು ಅಕ್ಟೋಬರ್ 3 ರಂದು ಪಂಜಾಬ್ ಕಿಂಗ್ಸ್ ವಿರುದ್ಧ ಆಡಲಿದೆ.
Harshal Patel, IPL 2021: ಐಪಿಎಲ್ ಇತಿಹಾಸದ ಅತಿದೊಡ್ಡ ದಾಖಲೆ ಉಡೀಸ್ ಮಾಡಿದ ಆರ್ಸಿಬಿ ವೇಗಿ ಹರ್ಷಲ್ ಪಟೇಲ್
RCB playoffs: ನೆಟ್ ರನ್ ರೇಟ್ ಮೈನಸ್ನಲ್ಲಿರುವ ಆರ್ಸಿಬಿಗೆ ಪ್ಲೇ ಆಫ್ಗೇರಲು ಇನ್ನೆಷ್ಟು ಪಂದ್ಯ ಗೆಲ್ಲಬೇಕು?
(After RR vs RCB IPl 2021 Match Captain Virat Kohli said Evin Lewis wicket was the game-changing moment)