Glenn Maxwell: ಅರ್ಧಶತಕ ಸಿಡಿಸಿದ ವೇಳೆ ಗ್ಲೆನ್ ಮ್ಯಾಕ್ಸ್​ವೆಲ್ ಆರ್​ಸಿಬಿ ಜೆರ್ಸಿ ತೋರಿಸಿ ಮಾಡಿದ್ದೇನೆ ನೋಡಿ

RR vs RCB, IPL 2021: ಬುಧವಾರದ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಆರ್​ಸಿಬಿಯ ಗ್ಲೆನ್ ಮ್ಯಾಕ್ಸ್​ವೆಲ್ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿದರು. ಇದೇವೇಳೇ ಮ್ಯಾಕ್ಸ್​ವೆಲ್ ವಿಶೇಷ ಸಂಭ್ರಮಾಚರಣೆಯನ್ನೂ ಮಾಡಿದರು.

Glenn Maxwell: ಅರ್ಧಶತಕ ಸಿಡಿಸಿದ ವೇಳೆ ಗ್ಲೆನ್ ಮ್ಯಾಕ್ಸ್​ವೆಲ್ ಆರ್​ಸಿಬಿ ಜೆರ್ಸಿ ತೋರಿಸಿ ಮಾಡಿದ್ದೇನೆ ನೋಡಿ
Glenn Maxwell RCB
Follow us
TV9 Web
| Updated By: Vinay Bhat

Updated on:Sep 30, 2021 | 2:19 PM

ಕಳೆದ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ (Indian Premier League) ಅತ್ಯಂತ ಕಳಪೆ ಪ್ರದರ್ಶನ ತೋರಿದ ಗ್ಲೆನ್ ಮ್ಯಾಕ್ಸ್​ವೆಲ್ (Glenn Maxwell) ಅವರನ್ನು ಐಪಿಎಲ್ 2021ರ (IPL 2021) ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡ ದೊಡ್ಡ ಮೊತ್ತ ಕೊಟ್ಟು ಖರೀದಿ ಮಾಡಿತು. ಇದಕ್ಕಾಗಿ ಕೆಲವರು ಆರ್​ಸಿಬಿ (RCB) ಫ್ರಾಂಚೈಸಿಯನ್ನು ಹೀಯಾಳಿಸಿದ್ದೂ ಇದೆ. ಇದನ್ನೇ ಚಾಲೆಂಜ್ ಆಗಿ ಸ್ವೀಕರಿಸಿರುವ ಗ್ಲೆನ್ ಮ್ಯಾಕ್ಸ್​ವೆಲ್, ಆರ್​ಸಿಬಿ ತಮ್ಮ ಮೇಲಿಟ್ಟಿರುವ ನಂಬಿಕೆಯನ್ನು ಹುಸಿ ಮಾಡದೆ ಈ ಬಾರಿ ಅಬ್ಬರಿಸುತ್ತಿದ್ದಾರೆ. ಬೆಂಗಳೂರು (Bengaluru) ತಂಡಕ್ಕೆ ಜಯ ತಂದು ಕೊಡುವಲ್ಲಿ ಇವರು ಪ್ರಮುಖ ಪಾತ್ರವಹಿಸುತ್ತಿದ್ದಾರೆ. ಅಲ್ಲದೆ ಈ ಬಾರಿ ಆರ್​ಸಿಬಿಗೆ ಚೊಚ್ಚಲ ಕಪ್ ಗೆಲ್ಲಿಸಿಕೊಡುವ ವಿಶ್ವಾಸವನ್ನೂ ಹೊಂದಿದ್ದಾರೆ. 11 ಪಂದ್ಯಗಳಲ್ಲಿ 4 ಅರ್ಧಶತಕ ಬಾರಿಸಿ 350 ರನ್ ಸಿಡಿಸಿರುವ ಮ್ಯಾಕ್ಸ್​ವೆಲ್ ಐಪಿಎಲ್ 2021 ರಲ್ಲಿ ಅತಿ ಹೆಚ್ಚು ರನ್ ಗಳಿಸಿರುವ ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದ್ದಾರೆ.

ಬುಧವಾರದ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲೂ ಮ್ಯಾಕ್ಸ್​ವೆಲ್ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿದರು. ಅನಗತ್ಯ ಹೊಡೆತಕ್ಕೆ ಕೈ ಹಾಕದೆ ಎಚ್ಚರಿಕೆಯಿಂದ ಬ್ಯಾಟ್ ಬೀಸಿ 30 ಎಸೆತಗಳಲ್ಲಿ 6 ಬೌಂಡರಿ, 1 ಸಿಕ್ಸರ್ ಮೂಲಕ ಅಜೇಯ 50 ರನ್ ಚಚ್ಚಿದರು. ಇದೇವೇಳೆ ಮ್ಯಾಕ್ಸ್​ವೆಲ್ ವಿಶೇಷ ಸಂಭ್ರಮಾಚರಣೆಯನ್ನೂ ಮಾಡಿದರು.

ಹೌದು, ಅರ್ಧಶತಕ ಸಿಡಿಸಿದ ವೇಳೆ ಮ್ಯಾಕ್ಸ್​ವೆಲ್ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ಜೆರ್ಸಿಯಲ್ಲಿರುವ ಲೋಗೋವನ್ನು ಮುಟ್ಟಿ ಡಗೌಟ್​ನಲ್ಲಿದ್ದ ತಮ್ಮ ತಂಡದ ಕಡೆ ಕೈ ತೋರಿಸಿದರು. ನನ್ನ ಪಾತ್ರವನ್ನು ನಿಭಾಹಿಸಿದ್ದೇನೆ, ಈ ಅರ್ಧಶತಕ ತಂಡದ ಗೆಲುವಿಗಾಗಿ ಎಂದು ಬ್ಯಾಟ್ ಎತ್ತಿ ಜೆರ್ಸಿಯಲ್ಲಿರುವ ಆರ್​ಸಿಬಿ ಲೋಗೋವನ್ನು ಮುಟ್ಟಿ ಮನ ಗೆದ್ದರು.

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ತಂಡ ಸ್ಪೋಟಕ ಆರಂಭ ಪಡೆದುಕೊಂಡಿತು. ಎವಿನ್ ಲೆವಿಸ್ ಹಾಗೂ ಯಶಸ್ವಿ ಜೈಸ್ವಾಲ್ ಆರ್​ಸಿಬಿ ಬೌಲರ್​ಗಳ ಬೆಂಡೆತ್ತಿದರು. 7 ಓವರ್ ಆಗುವ ಹೊತ್ತಿಗೆನೇ ತಂಡದ ಮೊತ್ತವನ್ನು 70ರ ಅಂಚಿಗೆ ತಂದಿಟ್ಟಿದ್ದರು. ಈ ಮೂಲಕ 200ರ ಗಡಿ ದಾಟಿಸುವ ಸೂಚನೆ ನೀಡಿದರು. ಆದರೆ, ಜೈಸ್ವಾಲ್ 22 ಎಸೆತಗಳಲ್ಲಿ 31 ಮತ್ತು ಲೆವಿಸ್ 37 ಎಸೆತಗಳಲ್ಲಿ 58 ರನ್ ಬಾರಿಸಿ ಔಟ್ ಆಗಿದ್ದೇ ತಡ ಪಂದ್ಯ ಆರ್​ಸಿಬಿ ಪರ ವಾಲಿತು.

ಯುಜ್ವೇಂದ್ರ ಚಹಾಲ್ ಹಾಗೂ ಶಹ್ಬಾಜ್ ಅಹ್ಮದ್ ಸ್ಪಿನ್ ಮೋಡಿಗೆ ಆರ್​ಆರ್​ ಬ್ಯಾಟರ್​ಗಳು ಪೆವಿಲಿಯನ್ ಕಡೆ ಹೆಜ್ಜೆ ಹಾಕತೊಡಗಿದರು. ಅಂತಿಮವಾಗಿ ರಾಜಸ್ಥಾನ್ 20 ಓವರ್​ನಲ್ಲಿ 9 ವಿಕೆಟ್ ನಷ್ಟಕ್ಕೆ 149 ರನ್ ಬಾರಿಸಿತು. ಆರ್​ಸಿಬಿ ಪರ ಹರ್ಷಲ್ ಪಟೇಲ್ 3 ಹಾಗೂ ಚಹಾಲ್ ಮತ್ತು ಶಹ್ಬಾಜ್ ತಲಾ 2 ವಿಕಟ್ ಕಿತ್ತರು.

ಸಾಧಾರಣ ಟಾರ್ಗೆಟ್ ಬೆನ್ನಟ್ಟಿದ ಆರ್​ಸಿಬಿ ಕೂಡ ಭರ್ಜರಿ ಆರಂಭ ಪಡೆದುಕೊಂಡಿತು. ಜೊತೆಗೆ ದೇವದತ್ ಪಡಿಕ್ಕಲ್ (22) ಮತ್ತು ನಾಯಕ ವಿರಾಟ್ ಕೊಹ್ಲಿ (25) ವಿಕೆಟ್ ಕೂಡ ಕಳೆದುಕೊಂಡಿತು. ಆದರೆ, ಮಧ್ಯಮ ಕ್ರಮಾಂಕದಲ್ಲಿ ಶ್ರೀಕರ್ ಭರತ್ ಮತ್ತು ಗ್ಲೆನ್ ಮ್ಯಾಕ್ಸ್​ವೆಲ್ ಎಚ್ಚರಿಕೆಯಿಂದ ಬ್ಯಾಟ್ ಬೀಸಿ ತಂಡದ ಗೆಲುವಿಗೆ ಕಾರಣರಾದರು.

ಭರತ್ 35 ಎಸೆತಗಳಲ್ಲಿ 44 ರನ್ ಮತ್ತು ಮ್ಯಾಕ್ಸ್​ವೆಲ್ ಅಜೇಯ 50 ರನ್ ಬಾರಿಸಿ 17.1 ಓವರ್​ನಲ್ಲಿ 3 ವಿಕೆಟ್ ನಷ್ಟಕ್ಕೆ 153 ರನ್ ಗಳಿಸುವ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟರು. 7 ವಿಕೆಟ್​ಗಳ ಭರ್ಜರಿ ಗೆಲುವಿನೊಂದಿಗೆ ಆರ್​ಸಿಬಿ ಟೂರ್ನಿಯಲ್ಲಿ ಏಳನೇ ಜಯ ಸಾಧಿಸಿದ್ದು ಪ್ಲೇ ಆಫ್ ಹಂತಕ್ಕೆ ತಲುಪಲು ಬಾಕಿ ಉಳಿದಿರುವ ಮೂರು ಪಂದ್ಯಗಳಲ್ಲಿ ಒಂದರಲ್ಲಿ ಗೆಲ್ಲಬೇಕಿದೆ.

AUSW vs INDW Pink Ball Test: ಆಸ್ಟ್ರೇಲಿಯಾ ವಿರುದ್ಧ ಐತಿಹಾಸಿಕ ಪಿಂಕ್ ಬಾಲ್ ಟೆಸ್ಟ್: ಭಾರತೀಯ ವನಿತೆಯರಿಂದ ಉತ್ತಮ ಆರಂಭ

Virat Kohli: ಆ ಒಂದು ಕ್ಷಣ ಪಂದ್ಯದ ಸ್ಥಿತಿಯೇ ಬದಲಾಯಿಸಿತು: ಮ್ಯಾಚ್ ಬಳಿಕ ವಿರಾಟ್ ಕೊಹ್ಲಿ ಏನಂದ್ರು ಕೇಳಿ

(Glenn Maxwell shows RCB Jersey during he score half century against Rajasthan Royals Match IPL 2021)

Published On - 11:24 am, Thu, 30 September 21

ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ
ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ