Virat Kohli: ಕೊಹ್ಲಿಯ ಮಿಂಚಿನ ವೇಗಕ್ಕೆ ಕಡಿವಾಣ: 5 ವರ್ಷಗಳ ಭಿನ್ನವಾಗಿ ಔಟ್ ಆದ ವಿರಾಟ್
IPL 2021: ಆರ್ಸಿಬಿಗೆ ಉತ್ತಮ ಆರಂಭ ಒದಗಿಸುವಲ್ಲಿ ನಾಯಕ ವಿರಾಟ್ ಕೊಹ್ಲಿ ಹಾಗೂ ದೇವದತ್ ಪಡಿಕ್ಕಲ್ ಯಶಸ್ವಿಯಾಗಿದ್ದರು. ಮೊದಲ ವಿಕೆಟ್ಗೆ 48 ರನ್ ಪೇರಿಸುವ ಮೂಲಕ ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟಿದ್ದರು.
ಐಪಿಎಲ್ನ 43ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ರಾಜಸ್ಥಾನ್ ರಾಯಲ್ಸ್ ತಂಡವನ್ನು 17 ಎಸೆತಗಳು ಬಾಕಿ ಇರುವಂತೆ 7 ವಿಕೆಟ್ ಗಳಿಂದ ಸೋಲಿಸಿತು. ಆರ್ಆರ್ ತಂಡ ನೀಡಿದ 150 ರನ್ಗಳ ಟಾರ್ಗೆಟ್ ಅನ್ನು ಆರ್ಸಿಬಿ ಗ್ಲೆನ್ ಮ್ಯಾಕ್ಸ್ವೆಲ್ ಅವರ ಅಬ್ಬರ ಅರ್ಧಶತಕದ ನೆರವಿನಿಂದ ಸುಲಭವಾಗಿ ಚೇಸ್ ಮಾಡಿತು. ಇದಕ್ಕೂ ಮುನ್ನ ಆರ್ಸಿಬಿಗೆ ಉತ್ತಮ ಆರಂಭ ಒದಗಿಸುವಲ್ಲಿ ನಾಯಕ ವಿರಾಟ್ ಕೊಹ್ಲಿ ಹಾಗೂ ದೇವದತ್ ಪಡಿಕ್ಕಲ್ ಯಶಸ್ವಿಯಾಗಿದ್ದರು. ಮೊದಲ ವಿಕೆಟ್ಗೆ 48 ರನ್ ಪೇರಿಸುವ ಮೂಲಕ ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟಿದ್ದರು. ಇದಾದ ಬಳಿಕ ಪಡಿಕ್ಕಲ್ ಬೌಲ್ಡ್ ಆಗಿ ಹೊರ ನಡೆದಿದ್ದರು. ಆ ಬಳಿಕ ಭರತ್ ಜೊತೆಗೂಡಿದ ಕೊಹ್ಲಿ ತಂಡದ ಮೊತ್ತಕ್ಕೆ ರನ್ ಸೇರಿಸುವಷ್ಟರಲ್ಲಿ ಔಟ್ ಆಗಿ ನಿರ್ಗಮಿಸಿದ್ದರು. ಆದರೆ ಈ ಬಾರಿ ಕೊಹ್ಲಿ ಔಟ್ ಆಗಿದ್ದು ರನೌಟ್ ಮೂಲಕ ಎಂಬುದು ವಿಶೇಷ.
ಹೌದು, ವಿಶ್ವದ ಶ್ರೇಷ್ಠ ಬ್ಯಾಟ್ಸ್ಮನ್ ಎನಿಸಿಕೊಂಡಿರುವ ವಿರಾಟ್ ಕೊಹ್ಲಿ ರನೌಟ್ ಆಗಿ ನಿರ್ಗಮಿಸಿದ್ದು ಅಪರೂಪ. ಅದರಲ್ಲೂ ಐಪಿಎಲ್ನಲ್ಲಿ ರನೌಟ್ ಮೂಲಕ ವಿಕೆಟ್ ಒಪ್ಪಿಸಿದ್ದು ತೀರಾ ವಿರಳ. ಆದರೆ ರಾಜಸ್ಥಾನ್ ರಾಯಲ್ಸ್ ವಿರುದ್ದದ ಪಂದ್ಯದಲ್ಲಿ 25 ರನ್ಗಳಿಸಿದ್ದ ಕೊಹ್ಲಿಯನ್ನು ಯುವ ಫೀಲ್ಡರ್ ರಿಯಾನ್ ಪರಾಗ್ ರನೌಟ್ ಮಾಡಿದ್ದರು. ಇದರೊಂದಿಗೆ ಕೊಹ್ಲಿ 5 ವರ್ಷಗಳ ಕಾಲ ಉಳಿಸಿಕೊಂಡಿದ್ದ ದೀರ್ಘ ದಾಖಲೆಯು ಪತನವಾಯಿತು. ಏಕೆಂದರೆ ವಿರಾಟ್ ಕೊಹ್ಲಿ ಐಪಿಎಲ್ನಲ್ಲಿ ಕೊನೆಯ ಬಾರಿ ರನೌಟ್ ಆಗಿದ್ದು 2015 ರಲ್ಲಿ. ಆ ಬಳಿಕ ಮತ್ತೆ ಎಂದಿಗೂ ಕೊಹ್ಲಿಯನ್ನು ಫೀಲ್ಡರ್ ಥ್ರೋ ಮೂಲಕ ಔಟ್ ಮಾಡಲು ಸಾಧ್ಯವಾಗಿರಲಿಲ್ಲ. ಇದೀಗ ರಿಯಾನ್ ಪರಾಗ್ ಅವರ ಅಧ್ಭುತ ಫೀಲ್ಡಿಂಗ್ಗೆ ಕೊಹ್ಲಿ ವಿಕೆಟ್ ಒಪ್ಪಿಸಿದ್ದಾರೆ.
ವಿರಾಟ್ ಕೊಹ್ಲಿ ಸ್ಕ್ವೇರ್ನತ್ತ ಬಾರಿಸಿದ್ದ ಚೆಂಡನ್ನು ಅದ್ಭುತ ಡೈವಿಂಗ್ ಮೂಲಕ ಹಿಡಿದ ರಿಯಾನ್ ಪರಾಗ್, ಅಷ್ಟೇ ವೇಗದಲ್ಲಿ ನಾನ್ ಸ್ಟ್ರೈಕ್ ವಿಕೆಟ್ನತ್ತ ಎಸೆದರು. ಅತ್ತ ವೇಗವಾಗಿ ಕೊಹ್ಲಿ ಕ್ರೀಸ್ ತಲುಪಿದರೂ, ರಿಯಾನ್ ಡೈರೆಕ್ಟ್ ಥ್ರೋ ಮಿಂಚಿನ ವೇಗದಲ್ಲಿ ವಿಕೆಟ್ಗೆ ಬಡಿಯಿತು. ಅದರಂತೆ ಕೊಹ್ಲಿ ಮೈಕ್ರೋ ಸೆಕೆಂಡುಗಳ ಅಂತರದಲ್ಲಿ ತಮ್ಮ ವಿಕೆಟ್ ಕಳೆದುಕೊಂಡಿದ್ದರು. ಅಲ್ಲಿಗೆ 20 ಎಸೆತಗಳಲ್ಲಿ 4 ಬೌಂಡರಿಗಳೊಂದಿಗಿನ 25 ರನ್ಗಳ ಕೊಹ್ಲಿ ಇನಿಂಗ್ಸ್ ಅಂತ್ಯಗೊಂಡಿತು.
ಇದನ್ನೂ ಓದಿ: IPL 2021: ಇದು ಅಂತಿಂಥ ಗೆಲುವಲ್ಲ…ಮುಂಬೈ ದಾಖಲೆಯನ್ನು ಅಳಿಸಿ ಹಾಕಿದ RCB
ಇದನ್ನೂ ಓದಿ: IPL 2021: RCB ಪರ ಹ್ಯಾಟ್ರಿಕ್ ವಿಕೆಟ್ ಪಡೆದ ಮೂವರು ಬೌಲರುಗಳು ಇವರೇ..!
ಇದನ್ನೂ ಓದಿ: Crime News: ತಾಯಿಗೆ ಅನೈತಿಕ ಸಂಬಂಧ: ಅದನ್ನೇ ಬಂಡವಾಳ ಮಾಡಿಕೊಂಡ ಮಗಳು
ಇದನ್ನೂ ಓದಿ: Mumbai Indians: ಸಾಲು ಸಾಲು ಪಂದ್ಯ ಸೋತು ಮುಂಬೈ ಪ್ಲೇ ಆಫ್ ಪ್ರವೇಶಿಸಿತ್ತು..!
(After 2015, Virat Kohli got Run out)